HOME » NEWS » Trend » SHOCKING NEWS UNITED STATES FISHERMAN CATCHES 100 YEAR OLD FISH IN RIVER WEIGHING OVER 108 KGS SCT STG

ನದಿಯಲ್ಲಿ 100 ವರ್ಷ ಹಿಂದಿನ ದೈತ್ಯ ಮೀನು ಪತ್ತೆ; ಮೀನಿನ ಗಾತ್ರ ನೋಡಿ ಮೀನುಗಾರರು ಶಾಕ್!

Viral Photo: ಅಮೆರಿಕದ ಫಿಶ್ ಆ್ಯಂಡ್ ವೈಲ್ಡ್ ಲೈಫ್ ಸರ್ವಿಸ್ ಡೆಟ್ರಾಯಿಟ್ ನದಿಯಲ್ಲಿ 100 ವರ್ಷಕ್ಕಿಂತಲೂ ಹಳೆಯದಾದ 240-ಪೌಂಡ್ (108.8 ಕಿಲೋಗ್ರಾಂಗಳಷ್ಟು) ಸ್ಟರ್ಜನ್ ಅನ್ನು ಕಳೆದ ವಾರ ಸೆರೆಹಿಡಿದರು. ಇದು ಸುಮಾರು 7 ಅಡಿ (2.1 ಮೀಟರ್) ಉದ್ದವಿತ್ತು.

news18-kannada
Updated:May 4, 2021, 2:06 PM IST
ನದಿಯಲ್ಲಿ 100 ವರ್ಷ ಹಿಂದಿನ ದೈತ್ಯ ಮೀನು ಪತ್ತೆ; ಮೀನಿನ ಗಾತ್ರ ನೋಡಿ ಮೀನುಗಾರರು ಶಾಕ್!
ಮೀನುಗಾರರಿಗೆ ಸಿಕ್ಕ ಬೃಹತ್ ಗಾತ್ರದ ಮೀನು
  • Share this:
ಜಗತ್ತಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅನೇಕ ವಿಷಯಗಳು ನಮ್ಮ ಗಮನಕ್ಕೆ ಬಾರದೇ ಮರೆಯಾಗುತ್ತವೆ. ಆದರೆ ಕೆಲವು ಸಂಗತಿಗಳು ನಮ್ಮ ಸಂಪರ್ಕಕ್ಕೆ ಬಂದಾಗ ಮಾತ್ರ ತಿಳಿದುಬರುತ್ತವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಇದೇ ರೀತಿಯ ವಿದ್ಯಮಾನವು ಇತ್ತೀಚೆಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಮೆರಿಕದ ಫಿಶ್ ಆ್ಯಂಡ್ ವೈಲ್ಡ್ ಲೈಫ್ ಸರ್ವಿಸ್' ಡೆಟ್ರಾಯಿಟ್ ನದಿಯಲ್ಲಿ 100 ವರ್ಷಕ್ಕಿಂತಲೂ ಹಳೆಯದಾದ 240-ಪೌಂಡ್ (108.8 ಕಿಲೋಗ್ರಾಂಗಳಷ್ಟು) ಸ್ಟರ್ಜನ್ ಅನ್ನು ಕಳೆದ ವಾರ ಸೆರೆಹಿಡಿದರು. ಇದು ಸುಮಾರು 7 ಅಡಿ (2.1 ಮೀಟರ್) ಉದ್ದವಿತ್ತು ಎಂದು ಏಜೆನ್ಸಿ ಶುಕ್ರವಾರ ಫೇಸ್‌ಬುಕ್‌ನಲ್ಲಿ ತಿಳಿಸಿದೆ. ಪೊಸ್ಟ್ ಮಾಡಿದ ಮಧ್ಯಾಹ್ನದ ಹೊತ್ತಿಗೆ 24,000 ಕ್ಕೂ ಹೆಚ್ಚು ಬಾರಿ ಫೋಟೋವನ್ನು ಶೇರ್ ಮಾಡಲಾಗಿದೆ.

ಮೀನಿನ ಸುತ್ತಳತೆ ಮತ್ತು ಗಾತ್ರವನ್ನು ಆಧಾರದ ಮೇಲೆ, ಹೆಣ್ಣು ಮೀನು ಎಂದು ಊಹಿಸಲಾಗಿದೆ ಮತ್ತು ಆ ಮೀನು 100 ವರ್ಷಗಳಿಂದ ಡೆಟ್ರಾಯಿಟ್ ನದಿಯಲ್ಲಿ ವಾಸಿಸುತ್ತಿತ್ತು ಎಂದು ಹೇಳಲಾಗಿದೆ. ಸೆರೆಹಿಡಿದ ಮೀನನ್ನು ತೂಕ ಮತ್ತು ಅಳತೆ ಮಾಡಿದ ನಂತರ ಪುನಃ ನೀರಿಗೆ ಬಿಡಲಾಗಿದೆ.

ಮಿಚಿಗನ್ ನೈಸರ್ಗಿಕ ಸಂಪನ್ಮೂಲ ಇಲಾಖೆಯ ಪ್ರಕಾರ, ಸಾಮಾನ್ಯವಾಗಿ ಸ್ಟರ್ಜನ್‌ ಮೀನಿನ ಜೀವಿತಾವಧಿಯು ಗಂಡು ಮೀನು 55 ವರ್ಷಗಳು ಮತ್ತು ಹೆಣ್ಣು ಮೀನುಗಳು 70 ರಿಂದ 100 ವರ್ಷಗಳು ಹೊಂದಿವೆ.

ಸ್ಟರ್ಜನ್‌ ಮೀನು ಏಪ್ರಿಲ್ 22 ರಂದು ಡೆಟ್ರಾಯಿಟ್‌ನ ದಕ್ಷಿಣದ ಗ್ರಾಸ್ ಇಲ್‌ನಲ್ಲಿ ಪತ್ತೆಯಾಗಿದೆ. ಸ್ಟರ್ಜನ್ ಅವರ ವಾರ್ಷಿಕ ಅಧ್ಯಯನದ ಸಮಯದಲ್ಲಿ ಮೂವರು ಜನರಿರುವ ತಂಡವು ಮೀನನ್ನು ಸೆರೆಹಿಡಿದಿದೆ. ನದಿಯ ಆಳ ಪ್ರದೇಶದಲ್ಲಿ ವಾಸಿಸುವ ಈ ಮೀನು ತನ್ನ ನೆಚ್ಚಿನ ಹೆಪ್ಪುಗಟ್ಟಿದ ರೌಂಡ್ ಗೋಬಿ ಮೀನನ್ನು ಇಳಿ ಬಿಟ್ಟಾಗ, ಮೀನು ಗೋಬಿ ಫಿಶ್‌ ಅನ್ನು ಹಿಡಿದ ಪರಿಣಾಮ, ಪೆಗ್ ವಿಗ್ಗ್ರೆನ್ ಮತ್ತು ಜೆನ್ನಿಫರ್ ಜಾನ್ಸನ್ ಅವರೊಂದಿಗಿನ ಜೀವಶಾಸ್ತ್ರಜ್ಞ ಜೇಸನ್ ಫಿಶರ್ ರವರು ಸತತ 6 ನಿಮಿಷಗಳ ಸತತ ಪ್ರಯತ್ನದ ಬಳಿಕ ಸೆರೆ ಸಿಕ್ಕಿತು. ಸ್ಟರ್ಜನ್‌ ಮೀನನ್ನು ಮೇಲಕ್ಕೆ ಎಳೆಯುತ್ತಿದ್ದಂತೆ, ಅವನ ದೊಡ್ಡ ಗಾತ್ರವನ್ನು ನೋಡಿದ ಜೀವಶಾಸ್ತ್ರಜ್ಞರು ಅಚ್ಚರಿಗೊಂಡರು.

Shocking News: United States Fisherman Catches 100-Year-Old Fish in River Weighing Over 108 Kgs.
ಮೀನುಗಾರರಿಗೆ ಸಿಕ್ಕ ಬೃಹತ್ ಗಾತ್ರದ ಮೀನು


ಸ್ಟರ್ಜನ್‌ ಮೀನು ತುಂಬಾನೇ ದಣಿದಿತ್ತು ಮತ್ತು ನಮ್ಮೊಂದಿಗೆ ಹೆಚ್ಚು ಪ್ರತಿರೋಧ ಮಾಡಲಿಲ್ಲ" ಎಂದು ವಿಗ್ರೆನ್ ಹೇಳಿದರು.

ಮಿಚಿಗನ್‌ನ ಸರೋವರಗಳಲ್ಲಿ ಕಂಡುಬರುವ ಸ್ಟರ್ಜನ್ ಮೀನುಗಳನ್ನು ಅಪರೂಪದ ಜಾತಿ ಎಂದು ಪರಿಗಣಿಸಲಾಗುತ್ತದೆ. ಮೀನುಗಾರರು ವರ್ಷಕ್ಕೆ ಒಂದು ಸ್ಟರ್ಜನ್ ಅನ್ನು ಮನೆಗೆ ತೆಗೆದುಕೊಳ್ಳಬಹುದು. ಆದರೆ ಗಾತ್ರವನ್ನು ಸರ್ಕಾರವು ನಿಗದಿಪಡಿಸಿದೆ. ಡೆಟ್ರಾಯಿಟ್ ನದಿಯಲ್ಲಿ ಸಿಕ್ಕಿಬಿದ್ದ ಎಲ್ಲಾ ಸ್ಟರ್ಜನ್‌ಗಳನ್ನು ನೀರಿಗೆ ಬಿಡಬೇಕು ಎಂಬ ಕಾನೂನು ಕೂಡ ಇದೆ.ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸ್ಟರ್ಜನ್‌ ಮೀನಿನ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಸ್ಟರ್ಜನ್‌ ಅಪರೂಪದ ಮೀನಿನ ತಳಿಯಾಗಿದ್ದು, ನಿರಂತರ ಮೀನುಗಾರಿಕೆಯಿಂದ ಇವುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ನಿಟ್ಟಿನಲ್ಲಿ ಹೆಣ್ಣು ಸ್ಟರ್ಜನ್‌ ಮೀನುಗಳನ್ನು ಸೆರೆಹಿಡಿಯುವುದನ್ನು ಕೆಲವಡೆ ನಿರ್ಬಂಧಿಸಲಾಗಿದೆ.
First published: May 4, 2021, 2:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories