ವಿಶ್ವದ ಅಪಾಯಕಾರಿ ಮೀನುಗಳಲ್ಲಿ ಒಂದು ಎಂದು ಕುಖ್ಯಾತಿ ಪಡೆದಿರುವ ಪಿರಾನ್ಹಾ(Piranha fish) ಮೀನು ದಾಳಿಯಿಂದ 13 ವರ್ಷದ ಬಾಲಕಿಯೊಬ್ಬಳು(13 year old girl) ಕಾಲ್ಬೆರಳು (Fingers)ಕಳೆದುಕೊಂಡ ಘಟನೆ ದಕ್ಷಿಣ ಅಮೆರಿಕಾದಲ್ಲಿ(South America )ನಡೆದಿದೆ.ಅರ್ಜೆಂಟೀನಾದ (Argentina)ಸಾಂಟಾ ಫೆಯ ಪರಾನಾ ನದಿಯ ದಡದ ಬಳಿ ಕುಳಿತಿದ್ದ 13 ವರ್ಷದ ಬಾಲಕಿ ಮೇಲೆ ಏಕಾಏಕಿ ಪಿರಾನ್ಹಾ ಗಳು ದಾಳಿ ಮಾಡಿವೆ. ಈ ದಾಳಿಯಲ್ಲಿ ಬಾಲಕಿಯ ಕಾಲ್ಬೆರಳುಗಳನ್ನು ಮೀನುಗಳು ಕಚ್ಚಿ ಗಾಯಗೊಳಿಸಿದರಿಂದ ಬಾಲಕಿ ತನ್ನ ಕಾಲ್ಬೆರಳುಗಳನ್ನು ಕಳೆದುಕೊಂಡಿದ್ದಾಳೆ..
30ಕ್ಕೂ ಹೆಚ್ಚು ಜನರ ಮೇಲೆ ಪಿರಾನ್ಹಾ ಮೀನಿನ ದಾಳಿ
ಇನ್ನು ಬಾಲಕಿ ಮಾತ್ರವಲ್ಲದೇ 20ಕ್ಕೂ ಹೆಚ್ಚು ಮಕ್ಕಳು ಮೀನುಗಾರರು ಸೇರಿ ಸುಮಾರು 30 ಜನರು ಪಿರಾನ್ಹಾ ಮೀನುಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಿರಾನ್ಹಾ ಮೀನುಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಬಾಲಕಿ ಯನ್ನು ತುರ್ತು ಚರ್ಮ ಕಸಿ ಶಸ್ತ್ರಚಿಕಿತ್ಸೆಗೆ ದಾಖಲು ಮಾಡಿದ್ರೆ, ಉಳಿದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ನೀಡಲಾಗುತ್ತಿದೆ..
ಇದನ್ನೂ ಓದಿ :ಮೀನುಗಳಿಗೂ ಇಲ್ಲಿ ನಿರ್ಮಾಣಗೊಂಡಿದೆ ಸ್ಮಾರಕ; ಮೀನುಗಳ ಮೇಲಾದ ದೌರ್ಜನ್ಯದ ದ್ಯೋತಕ
ಹೆಚ್ಚಿನ ತಾಪಮಾನ ಮತ್ತು ಕಡಿಮೆ ನೀರಿನ ಮಟ್ಟದಿಂದಾಗಿ ಈ ಪ್ರದೇಶದಲ್ಲಿ ಮೀನುಗಳು ಆಗಾಗ್ಗೆ ಪ್ರವಾಸಿಗರ ಮೇಲೆ ದಾಳಿ ಮಾಡುತ್ತವೆ ಎಂದು ಸ್ಥಳೀಯ ಲೈಫ್ಗಾರ್ಡ್ಗಳ ಒಕ್ಕೂಟದ ಪ್ರತಿನಿಧಿ ಸೆರ್ಗಿಯೊ ಬೆರಾರ್ಡಿ ವಿವರಿಸಿದ್ದಾರೆ.ಇನ್ನು ಪಿರಾನ್ಹಾ ಮೀನು ದಾಳಿ ನಡೆಸಿದ ವೇಳೆ ಜನರನ್ನು ಹೊರಬರಲು ಮನವಿ ಮಾಡಿಕೊಂಡರೂ ಸಮಯ ಮೀರಿದ ಕಾರಣ, ಹೆಚ್ಚು ಜನರು ಗಾಯಳಾಗಬೇಕಾಯಿತು.. ಆದರೆ ಅಲ್ಲಿಯೇ ಇದ್ದ ಲೈಫ್ಗಾರ್ಡ್ಗಳು ಮಕ್ಕಳು ಹಾಗೂ ಪೋಷಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಇದರಿಂದಾಗಿ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿತು. ಅಲ್ಲದೆ ಘಟನೆಯಲ್ಲಿ ಕೆಲವು ಗಾರ್ಡ್ಗಳು ಕೂಡ ಗಾಯಗೊಂಡಿದ್ದಾರೆ ಎಂದು
ಲೈಫ್ಗಾರ್ಡ್ಗಳ ಒಕ್ಕೂಟದ ಪ್ರತಿನಿಧಿ ಸೆರ್ಗಿಯೊ ಬೆರಾರ್ಡಿ ಮಾಹಿತಿ ನೀಡಿದ್ದಾರೆ..
2008ರಲ್ಲಿ 40 ಜನರಿಗೆ ಗಾಯ
ಇನ್ನು ಸಾಂಟಾ ಫೆಯ ಪರಾನಾ ನದಿಯ ತೀರದಲ್ಲಿ ಆಗಾಗ ಪ್ಹಿರಾನಾ ಮೀನಿನ ದಾಳಿ ನಡೆಯುತ್ತಲೇ ಇರುತ್ತದೆ.. ಹೀಗಾಗಿ 2008ರಿಂದ 2008 ರಿಂದ ನಗರದಲ್ಲಿ ಈ ದಾಳಿಯನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. 2008ರಲ್ಲಿ ಪ್ಹಿರಾನಾ ಮೀನುಗಳು ನಡೆಸಿದ್ದ ದಾಳಿಯಲ್ಲಿ 40 ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ : ಮನುಷ್ಯರಂತೆ ಹಲ್ಲುಗಳಿರುವ ಭಯಾನಕ ಮೀನು ಪತ್ತೆ.. ಇದರ ಹಿಂದಿನ ರಹಸ್ಯವೇನು?
ವಿಶ್ವದ ಅತಿ ಅಪಾಯಕಾರಿ ಮೀನು ಪ್ಹಿರಾನಾ
ವಿಶ್ವದ ದೊಡ್ಡ ನದಿಗಳಲ್ಲಿ ಒಂದಾಗಿರುವ ದಕ್ಷಿಣ ಅಮೆರಿಕದ ಅಮೆಜಾನ್ ನದಿ, ದೈತ್ಯ ಮೊಸಳೆಗಳು, ಅನಕೊಂಡಾದಂತಹ ದೈತ್ಯ ಹಾವುಗಳು ಸೇರಿದಂತೆ ಹಲವು ವಿಶಿಷ್ಟ ಪ್ರಭೇದದ ಜೀವಿಗಳಿಗೆ ವಾಸಸ್ಥಾನವಾಗಿದೆ. ಈ ನದಿಯಲ್ಲಿ ಕಾಣಸಿಗುವ ಅಪರೂಪದ ಮತ್ತು ಅಪಾಯಕಾರಿ ಮತ್ಸ್ಯ ಪ್ಹಿರಾನಾ ಮೀನು..ಇವುಗಳು ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸಲು ಇಷ್ಟಪಡುತ್ತದೆ. ರಕ್ತದ ವಾಸನೆಯನ್ನು ದೂರದಿಂದಲೇ ಗ್ರಹಿಸುವ ಸಾಮರ್ಥ್ಯವಿದ್ದು, ನೀರಿನ ಕಂಪನಗಳನ್ನು ಗ್ರಹಿಸುವ ಅದ್ಭುತವಾದ ಶ್ರವಣ ಶಕ್ತಿ ಹೊಂದಿದೆ. ಅಲ್ಲದೆ ಇತರೆ ಜಲಚರಗಳ ಮೇಲೆ ಘೋರ ದಾಳಿ ಮಾಡುತ್ತದೆ. ಆಕ್ರಮಣ ವೇಗವಂತೂ ಊಹಿಸಲಸಾಧ್ಯ. ಕಡಿಮೆ ಆಳದ ನೀರಿನಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿಯಾಗಿ ವರ್ತಿಸುತ್ತದೆ. ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ, ಕಣ್ಣಿಗೆ ಯಾವ ಜಲಚರ ಕಂಡರೂ ದಾಳಿ ಮಾಡುತ್ತದೆ.
ಇನ್ನು ದಕ್ಷಿಣ ಅಮೆರಿಕದ ಸಿಹಿ ನೀರಿನ ನದಿಗಳು, ಸರೋವರಗಳಲ್ಲಿ ಪ್ಹಿರಾನಾ ಸಂತತಿ ಹೆಚ್ಚಾಗಿ ವಿಸ್ತರಿಸಿದೆ. ಅಮೆಜಾನ್ ನದಿಯಲ್ಲೇ ಸುಮಾರು 20 ವಿಧದ ತಳಿಗಳನ್ನು ಗುರುತಿಸಲಾಗಿದೆ. ಅಮೆರಿಕದ ಓರಿನಾಕೋ ನದಿ, ಬ್ರೆಜಿಲ್, ಹವಾಯಿ ಹಾಗೂ ಉತ್ತರ ಅಮೆರಿಕದ ಹಲವು ನದಿ ಮತ್ತು ಸರೋವರಗಳಲ್ಲಿ ಇವು ಕಂಡುಬರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ