ಹೆತ್ತ ಮಗಳನ್ನೇ ತನ್ನ ಮಗನಿಗೆ ಮದುವೆ ಮಾಡಿದ ತಾಯಿ!; ಅಷ್ಟಕ್ಕೂ ನಡೆದಿದ್ದೇನು?

Viral News: ತಮ್ಮ ಮಗ ಇಷ್ಟಪಟ್ಟಿದ್ದ ಯುವತಿಯ ಕೈಯಲ್ಲಿ ಮಚ್ಚೆ ಇರುವುದನ್ನು ಗಮನಿಸಿದ ಚೀನಾದ ಮಹಿಳೆ ಈ ಬಗ್ಗೆ ವಿಚಾರಿಸಿದಾಗ 20 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮ ಮಗಳೇ ಆಕೆ ಎಂಬುದು ಗೊತ್ತಾಯಿತು. ತನ್ನ ಅಣ್ಣನನ್ನೇ ತಾನು ಮದುವೆಯಾಗಲು ಮುಂದಾಗಿದ್ದೆ ಎಂದು ತಿಳಿದ ಬಳಿಕ ಯುವತಿ ಕೂಡ ಶಾಕ್ ಆದಳು. ಆದರೂ ಅವರಿಬ್ಬರ ಮದುವೆ ನೆರವೇರಿಯೇ ಬಿಟ್ಟಿತು. ಯಾಕೆ ಅಂತೀರಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾಯಿಯೊಬ್ಬಳು ತನ್ನ ಮಗಳನ್ನು, ತನಗೇ ಅರಿವಿಲ್ಲದೆ ತನ್ನ ಮಗನಿಗೆ ಮದುವೆ ಮಾಡಲು ಹೊರಟಿದ್ದಳು. ಚೀನಾ ದೇಶದಲ್ಲಿ ನಡೆದ ಈ ಪ್ರಸಂಗದಿಂದ ತಾಯಿ ಈಗ ಶಾಕ್‌ಗೆ ಒಳಗಾಗಿದ್ದಾಳೆ. ಮಾರ್ಚ್ 31ರಂದು ನಡೆದ ವಿವಾಹ ಸಮಾರಂಭದಲ್ಲಿ ಚೀನಾದ ಜಿಯಾಂಗ್ಸುನಲ್ಲಿ ಒಂದು ವಿಲಕ್ಷಣ ಮತ್ತು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ವಧು-ವರರು ಮದುವೆಯಾಗಲು ಕೆಲವೇ ಗಂಟೆಗಳ ಮುಂಚೆ, ದಂಪತಿ ತಾವು ನಿಜವಾಗಿಯೂ ಅಣ್ಣ-ತಂಗಿ ಎಂಬ ನಿಜಾಂಶ ತಿಳಿದು ಬೆರಗಾದರು. ಹುಡುಗನ ತಾಯಿ ತನ್ನ ಭಾವಿ ಸೊಸೆಯ ಬಗ್ಗೆ ತಿಳಿದಾಗ ನಿಜಾಂಶ ತೆರೆದುಕೊಂಡಿತು. ತಮ್ಮ ಮಗನನ್ನು ಮದುವೆಯಾಗಬೇಕಾಗಿದ್ದ ಹುಡುಗಿ ವಾಸ್ತವವಾಗಿ ತನ್ನ ಸ್ವಂತ ಮಗಳು ಎಂದು ತಾಯಿಗೆ ತಿಳಿದಾಗ ಆಘಾತಕ್ಕೆ ಒಳಗಾದಳು. 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗಳು ತನ್ನ ಮಗನ ಮದುವೆಯಲ್ಲಿ ವಧುವಿನ ಸ್ಥಾನದಲ್ಲಿ ಇರುವುದನ್ನು ಕಂಡು ತಾಯಿಯು ದುಃಖಿತಳಾಗಿ ಕಣ್ಣೀರು ಸುರಿಸಿದಳು.

ತನ್ನ ಸೊಸೆಯಾಗುವ ಯುವತಿಯ ಎಡಗೈಯಲ್ಲಿ ಮಚ್ಚೆ ಇರುವುದನ್ನು ನೋಡಿದ ವರನ ತಾಯಿಗೆ ಶಾಕ್ ಆಯಿತು. ಚಿಕ್ಕಂದಿನಲ್ಲೇ ತಮ್ಮಿಂದ ತಪ್ಪಿಸಿಕೊಂಡಿದ್ದ ತಮ್ಮ ಮಗಳ ಕೈಯಲ್ಲೂ ಅದೇ ರೀತಿಯ ಹುಟ್ಟು ಮಚ್ಚೆ ಇರುವುದನ್ನು ನೆನಪಿಸಿಕೊಂಡ ಆಕೆ ಈ ಬಗ್ಗೆ ಆ ಯುವತಿಯ ಪೋಷಕರನ್ನು ವಿಚಾರಿಸಿದಳು. ವಧುವಿನ ಹೆತ್ತವರನ್ನು ವಿಚಾರಿಸಿದಾಗ, ವಧುವಿನ ಪೋಷಕರು ಆ ಹುಡುಗಿಯನ್ನು ದತ್ತು ಪಡೆದಿದ್ದಾರೆ ಎಂದು ದೃಢಪಡಿಸಿದರು.

ಅವರು ಹುಡುಗಿಯನ್ನು ರಸ್ತೆಬದಿಯಲ್ಲಿ ಕಂಡಿದ್ದರು ಮತ್ತು ಆ ಮಗುವನ್ನು ತಮ್ಮ ಮಗಳಾಗಿ ದತ್ತು ಪಡೆದುಕೊಂಡು ಸಾಕುತ್ತಿರುವುದಾಗಿ ಅವರು ಹೇಳಿದರು. ಈ ವಿಚಾರ ಬಹಿರಂಗಪಡಿಸಿದ ನಂತರ, ಹುಡುಗಿಯು ಮದುವೆಯಾಗಬೇಕಾಗಿದ್ದ ವರನ ತಾಯಿಗೆ ಸ್ವಂತ ಮಗಳಾಗಬೇಕಾಗಿದ್ದು ಎಂದು ತಿಳಿದೊಡನೆ ವರನ ತಾಯಿಯು ಅಳಲು ಪ್ರಾರಂಭಿಸಿದಳು. ತನ್ನ ನಿಜವಾದ ಹೆತ್ತವರನ್ನು ಕಂಡುಕೊಳ್ಳಲು ಅವಳು ತುಂಬಾ ಉತ್ಸುಕಳಾಗಿದ್ದಳು ಮತ್ತು ಈ ಪುನರ್ ಮಿಲನವು ಮದುವೆಗಿಂತಲೂ ಹೆಚ್ಚು ಸಂತೋಷವನ್ನುಂಟುಮಾಡಿದೆ ಎಂದು ಹೇಳಿದಳು.

ಇದನ್ನೂ ಓದಿ: ಅಪಾರ್ಟ್‍ಮೆಂಟ್‍ನ ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತ ಮಹಿಳೆಯರ ಬಂಧನ!

ಇಂತಹ ಆಘಾತಕಾರಿ ಸುದ್ದಿ ಬಹಿರಂಗವಾದ ನಂತರದ ಹೊರತಾಗಿಯೂ, ಮದುವೆಯನ್ನು ನಿಲ್ಲಿಸಲಾಗಿಲ್ಲ..! ಏಕೆಂದರೆ ಕಥೆಯಲ್ಲಿ ಮತ್ತೊಂದು ದೊಡ್ಡ ತಿರುವು ಕಂಡು ಬಂದಿದೆ. ಇಲ್ಲಿ ವರನನ್ನು ಸಹ ದತ್ತು ತೆಗೆದುಕೊಳ್ಳಲಾಗಿದೆ ಎಂಬ ನಿಜಾಂಶ ತಿಳಿದು ಬಂದಿದೆ. ಮತ್ತು ವಧುವಿನ ನಿಜವಾದ ತಾಯಿಗೆ ಈ ಮದುವೆಗೆ ಯಾವುದೇ ರೀತಿಯ ಆಕ್ಷೇಪವಿರಲಿಲ್ಲ. ವಿಶೇಷವೆಂದರೆ, 20 ವರ್ಷಗಳ ಹಿಂದೆ ತನ್ನ ಮಗಳು ಕಾಣೆಯಾದ ನಂತರ ತೀವ್ರ ಹುಡುಕಾಟದ ನಂತರ, ಮಹಿಳೆ ಗಂಡು ಮಗುವನ್ನು ದತ್ತು ಪಡೆದಿದ್ದಳು. ಈಗ ಆ ಗಂಡು ಮಗುವೇ ತನ್ನ ನಿಜವಾದ ಮಗಳನ್ನು ಮದುವೆಯಾಗಲು ಹೊರಟಿದ್ದ ತನ್ನದೇ ದತ್ತು ಪುತ್ರನಾಗಿದ್ದನು.

ಎಲ್ಲಾ ತಿರುವುಗಳು ಮತ್ತು ನಾಟಕೀಯ ಬೆಳವಣಿಗೆಗಳು ತಿಳಿಯಾದ ನಂತರ, ಮಹಿಳೆಯ ದತ್ತು ಪುತ್ರ ಮತ್ತು ಅವಳ ನಿಜವಾದ ಮಗಳು ವಿವಾಹವಾದರು..! ಮದುವೆಗೆ ಹಾಜರಿದ್ದ ಅತಿಥಿಗಳು ಕೂಡ ಕಥೆಯನ್ನು ಕೇಳಿ ತುಂಬಾ ಭಾವುಕರಾದರು ಮತ್ತು ತಾಯಿ-ಮಗಳನ್ನು ಅಭಿನಂದಿಸಿದರು ಮತ್ತು ವಧು-ವರರನ್ನು ಆಶೀರ್ವದಿಸಿದರು.

ಈ ಅನಿರೀಕ್ಷಿತ ಘಟನೆಯು ಚೀನಾ ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಸಿನಿಮಾದಲ್ಲೂ ಈ ರೀತಿಯ ತಿರುವು ನೀಡುವಂತಹ ಸನ್ನಿವೇಶ ಇದುವರೆಗೂ ಬಂದಿರಲಿಲ್ಲ. ಆದರೆ ಚೀನಾದ ಜಿಯಾಂಗ್ಸುನಲ್ಲಿ ನಡೆದ ಈ ಘಟನೆಯು ತಿರುವುವಿನಲ್ಲಿ ಮತ್ತೊಂದು ತಿರುವು ಸನ್ನಿವೇಶಗಳ ಬೆಳವಣಿಗೆಗಳು ಒಳಗೊಂಡಿದ್ದು ಯಾರು ಕೂಡ ನಿರೀಕ್ಷಿಸಲಿಲ್ಲ. ಒಟ್ಟಿನಲ್ಲಿ ಈ ಘಟನೆಯು ಸುಖಾಂತ್ಯ ಕಂಡಿದ್ದು ತಾಯಿ ಮತ್ತು ಮಗಳು ಖುಷಿಯಾಗಿದ್ದಾರೆ.
Published by:Sushma Chakre
First published: