Great Shock- ಯುವತಿಯರ ಗುಂಪು ಟೌನ್ ಹಾಲ್ ಮುಂದೆ ಬಟ್ಟೆ ಬಿಚ್ಚಿದ್ರು; ಕಾರಣ ಸುಮ್ನೆ ಅಲ್ಲ

ಇಟಲಿ ರಾಜಧಾನಿ ರೋಮ್​ನಲ್ಲಿ 50 ಗಗನಸಖಿಯರು ರಸ್ತೆ ಮಧ್ಯೆಯೇ ಉಡುಪು ಕಳಚುತ್ತಿರುವುದು (Photo: Twitter)

ಇಟಲಿ ರಾಜಧಾನಿ ರೋಮ್​ನಲ್ಲಿ 50 ಗಗನಸಖಿಯರು ರಸ್ತೆ ಮಧ್ಯೆಯೇ ಉಡುಪು ಕಳಚುತ್ತಿರುವುದು (Photo: Twitter)

Air Hostesses strips off publicly- ಐವತ್ತು ಮಂದಿ ವಿಮಾನ ಪರಿಚಾರಿಕೆಯರು ಟೌನ್ ಹಾಲ್ ಬಳಿ ಬಂದು ಸಾರ್ವಜನಿಕವಾಗಿ ತಮ್ಮ ಉಡುಪುಗಳನ್ನ ಕಳಚಿ ಕೆಲ ಹೊತ್ತು ಮೌನವಾಗಿದ್ದು ನಂತರ ಘೋಷಣೆಗಳನ್ನ ಕೂಗಿದ್ಧಾರೆ. ಅದಕ್ಕೆ ಕಾರಣ ಏನು?

  • News18
  • 5-MIN READ
  • Last Updated :
  • Share this:

    ಮೊನ್ನೆ ಇಟಲಿ ದೇಶದ ರಾಜಧಾನಿ ರೋಮ್ ನಗರಿಯಲ್ಲಿ (Rome city of Italy) ಸಾರ್ವಜನಿಕರಿಗೆ ಶಾಕ್ ಕಾದಿತ್ತು. 50 ಮಂದಿ ಯುವತಿಯರು ಸದ್ದುಗದ್ದಲ ಇಲ್ಲದೆ ರಸ್ತೆಯಲ್ಲಿ ನಡೆದು ಬಂದು ಟೌನ್ ಹಾಲ್ (Town Hall) ಬಳಿ ನಿಂತವರೇ ಇದ್ದಕ್ಕಿದ್ದಂತೆ ಬಟ್ಟೆ ಕಳಚಲು ಆರಂಭಿಸಿದರು. ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಈ ದೃಶ್ಯ ಕಂಡು ಅಚ್ಚರಿ ಆಗಿತ್ತು. ಸಾರ್ವಜನಿಕವಾಗಿ ವಿವಸ್ತ್ರಗೊಂಡ ಈ ಮಹಿಳೆಯರು ಗಗನಸಖಿಯರು (Air Hostesses Strip off publicly). ವಿಮಾನದಲ್ಲಿ ಆಕರ್ಷಕ ಯೂನಿಫಾರ್ಮ್ ತೊಟ್ಟು ಪ್ರಯಾಣಿಕರ ಪರಿಚಾರಿಕೆಯ ಕೆಲಸ ಮಾಡುವ ಈ ಏರ್ ಹೋಸ್ಟೆಸ್​ಗಳು ಸುಮ್ಮಸುಮ್ನೆ ಬಂದು ಸಾರ್ವಜನಿಕವಾಗಿ ಬಟ್ಟೆ ಬಿಚ್ಚುವುದು ಅಂದರೆ ಏನು? ಏನಾದರೂ ಬಲವಾದ ಕಾರಣ ಇರಲೇಬೇಕು. ಇವರು ಇಟಲಿಯಲ್ಲಿ ಹೊಸ ಐಟಿಎ ಏರ್​ಲೈನ್ ಸ್ಥಾಪನೆ ಹಾಗೂ ಉದ್ಯೋಗ ಸ್ಥಳದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ವಿರೋಧಿಸಿ ಇಂಥ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.


    ಅಂದಹಾಗೆ, ಇವರು ಬಟ್ಟೆ ಕಳಚಿದರು ಎಂದರೆ ಸಂಪೂರ್ಣ ಬೆತ್ತಲಾದರು ಎಂದಲ್ಲ. ತಮ್ಮ ಏರ್​ಹೋಸ್ಟೆಸ್​ನ ಯೂನಿಫಾರ್ಮ್ ಅನ್ನು ಮಾತ್ರ ಕಳಚಿದರು. ಒಳ ಉಡುಪಿನಲ್ಲಿ ನಿಂತ ಇವರು ಕೆಲ ಹೊತ್ತು ಮೌನವಾಗಿ ನಿಂತರು. ಬಳಿಕ ತಾವು ಕಳಚಿದ ಉಡುಪು ಹಾಗು ಶೂಗಳನ್ನ ಎತ್ತಿಕೊಳ್ಳುತ್ತಾ ಇವರು “ನಾವು ಆಲಿಟಾಲಿಯಾ” (We are Alitalia) ಎಂದು ಘೋಷಣೆ ಕೂಗತೊಡಗಿದರು.


    ಏನಿದು ಐಟಿಎ ಮತ್ತು ಆಲಿಟಾಲಿಯಾ?


    ಆಲಿಟಾಲಿಯಾ (Alitalia) ಇಟಲಿಯಲ್ಲಿ ದಶಕಗಳಿಂದ ಸೇವೆಯಲ್ಲಿದ್ದ ವಿಮಾನಯಾನ ಸಂಸ್ಥೆ. ಅಕ್ಟೋಬರ್ 14ರಂದು ಇದರ ಸೇವೆ ನಿಂತಿತು. ಕಾರಣ, ಐಟಿಎ ಏರ್​ವೇಸ್ ಸಂಸ್ಥೆ ಇದನ್ನ ಖರೀದಿಸಿತ್ತು. ಬಹಳ ನಷ್ಟದಲ್ಲಿ ನಡೆಯುತ್ತಿದ್ದ ಆಲಿಟಾಲಿಯಾ ಏರ್​ಲೈನ್ ಸಂಸ್ಥೆ ಈ ಹಿಂದೆ ತನ್ನ ಸಂಕಷ್ಟದಿಂದ ಹೊರಬರಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಕೊನೆಗೆ ಐಟಿಎ ಏರ್​ವೇಸ್ ಸಂಸ್ಥೆಗೆ ಮಾರಾಟವಾಗದೇ ಬೇರೆ ವಿಧಿ ಇರಲಿಲ್ಲ.


    ಇದನ್ನೂ ಓದಿ: Viral News: 'ಪ್ಲೀಸ್.. ನನ್ನ ಜೈಲಿಗೆ ಹಾಕಿ.. ಮನೆಯಲ್ಲಿ ಹೆಂಡ್ತಿ ಕಾಟ ತಡೆಯಕ್ಕಾಗಲ್ಲ': ಗಂಡನ ಮನವಿ ಕೇಳಿ ಪೊಲೀಸ್ ಶಾಕ್!


    ಇಷ್ಟೇ ಆಗಿದ್ದರೆ ಆಲಿಟಾಲಿಯಾ ಸಂಸ್ಥೆಯ ನೌಕರರು ತಮ್ಮ ಕೆಲಸ ಉಳಿಯಿತೆಂದು ನೆಮ್ಮದಿಯಾಗಿಯೇ ಇರಬಹುದಿತ್ತು. ಆದರೆ, ಖರೀದಿ ಬಳಿಕ ಆದ ಬೆಳವಣಿಗೆಯೇ ಬೇರೆ. ಹಿಂದಿನ ಅಲಿಟಾಲಿಯಾ ಸಂಸ್ಥೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಬಹುತೇಕ ಮಂದಿ ಕೆಲಸ ಕಳೆದುಕೊಂಡರು. ಐಟಿಎ ಏರ್​ವೇಸ್​ನಲ್ಲಿ ಕೆಲಸ ಪಡೆದ ಕೆಲ ಉದ್ಯೋಗಿಗಳಿಗೆ ವಿಪರೀತ ತಾರತಮ್ಯ ಮಾಡಲಾಗುತ್ತಿದೆ. ಅವರ ಸಂಬಳ ಕಡಿತ, ಪ್ರೊಮೋಷನ್​ನಿಂದ ವಂಚನೆ ಇತ್ಯಾದಿ ದೌರ್ಜನ್ಯ ನಡೆಯುತ್ತಿದೆ ಎಂದು ಈ ವಿಮಾನ ಪರಿಚಾರಿಕೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮಿಂದ ನಿಂತಿರುವ ಐಟಿಎ ಏರ್​ವೇಸ್ ಈಗ ನಮಗೇ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ಧಾರೆ.


    ಪುಟ್ಟ ಹಾವು ದೊಡ್ಡ ಹಾವನ್ನ ನುಂಗಿದ ಕಥೆ:


    ಅಲಿಟಾಲಿಯಾ ಸಂಸ್ಥೆ 110 ವಿಮಾನಗಳನ್ನ ಚಾಲನೆಯಲ್ಲಿರಿಸಿದ್ದ ಕಂಪನಿಯಾಗಿತ್ತು. 10 ಸಾವಿರ ನೌಕರರು ಇದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇದನ್ನ ಖರೀದಿಸಿದ ಐಟಿಎ ಏರ್​ವೇಸ್ ಸಂಸ್ಥೆ ಹೊಂದಿರುವುದು ಕೇವಲ 52 ವಿಮಾನ ಮಾತ್ರ. ಉದ್ಯೋಗಿಗಳ ಸಂಖ್ಯೆ 2,800 ಮಾತ್ರ.


    ಇದನ್ನೂ ಓದಿ: Facebook‌ ಸಹಾಯದಿಂದ 40 ವರ್ಷಗಳ ಬಳಿಕ ಮತ್ತೆ ಒಂದಾದ ಪ್ರೇಮಿಗಳು..!


    ಹಳೆಯ ಕಂಪನಿಯ ಅನಗತ್ಯ ಹೊರೆ ಹೊರಲು ಆಗಲ್ಲ ಎನ್ನುತ್ತದೆ ಹೊಸ ಕಂಪನಿ:


    ಹಳೆಯದನ್ನ ಸ್ಥಗಿತಗೊಳಿಸುತ್ತಿದ್ದೇವೆ ಎಂದರೆ ಹಿಂದಿನದ್ದನ್ನು ನಿರಾಕರಿಸುತ್ತೇವೆ ಎಂದರ್ಥವಲ್ಲ. ಹೊಸ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಾಗುತ್ತದೆ. ಐಟಿಎ ಏರ್​ವೇಸ್ ಸಂಸ್ಥೆ ಸರಿಯಾದ ಗಾತ್ರದಲ್ಲಿ ಹುಟ್ಟಿ ಬೆಳೆದಿದೆ. ಅದರ ವಿಮಾನ ಸಂಖ್ಯೆ ಮತ್ತು ಪ್ರಯಾಣ ಸ್ಥಳಗಳನ್ನ ಬಹಳ ಯೋಜಿಸಿ ಇರಿಸಲಾಗಿದೆ. ಆರ್ಥಿಕವಾಗಿ ಅನುಕೂಲವಾಗದ ದೊಡ್ಡ ಹೊರೆಯನ್ನು ನಾವು ಹೊತ್ತುಕೊಂಡು ಸಾಗುವುದಿಲ್ಲ ಎಂದು ಐಟಿಎ ಏರ್​ವೇಸ್ ಸಂಸ್ಥೆಯ ಅಧ್ಯಕ್ಷ ಆಲ್ಫ್ರೆಡೋ ಅಲ್ಟಾವಿಲಾ ಹೇಳುತ್ತಾರೆ.


    ಅದೇನೇ ಇದ್ದರೂ ಹಿಂದಿನ ಕಂಪನಿಯ ಉದ್ಯೋಗಿಗಳನ್ನ ನೇಮಕ ಮಾಡಿಕೊಂಡು ಅವರಿಗೆ ಕಡಿಮೆ ಸಂಬಳ ಕೊಡುತ್ತಿರುವ ವಿಚಾರಕ್ಕೆ ಐಟಿಎ ಏರ್​ವೇಸ್ ಸಂಸ್ಥೆಯರು ಉತ್ತರ ಕೊಟ್ಟಿಲ್ಲವೆನ್ನಲಾಗಿದೆ. ಈ ಬೆಳವಣಿಗೆಯಲ್ಲಿ ಕೆಲಸ ಕಳೆದುಕೊಂಡ ಸಾವಿರಾರು ಮಂದಿಗೆ ಇಟಲಿ ಸರ್ಕಾರವೇ ನಿರುದ್ಯೋಗ ಸವಲತ್ತುಗಳನ್ನ ಐದು ವರ್ಷದವರೆಗೆ ಒದಗಿಸಬೇಕು ಎಂದು ಕಾರ್ಮಿಕ ಒಕ್ಕೂಟಗಳು ಒತ್ತಾಯಿಸಿವೆ.

    Published by:Vijayasarthy SN
    First published: