• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಬಿಗ್​ಬಾಸ್​-15 ಹಿಂದಿ ಅವತರಣಿಕೆ: ಮತ್ತೆ ಬಂದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕಾಲೆಳೆದ ಟ್ರೋಲ್​ ಪಡೆ

ಬಿಗ್​ಬಾಸ್​-15 ಹಿಂದಿ ಅವತರಣಿಕೆ: ಮತ್ತೆ ಬಂದ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕಾಲೆಳೆದ ಟ್ರೋಲ್​ ಪಡೆ

ಶಮಿತಾ ಶೆಟ್ಟಿ

ಶಮಿತಾ ಶೆಟ್ಟಿ

ಶಮಿತಾ ಶೆಟ್ಟಿ ತನ್ನ ಅಕ್ಕನ ಗಂಡ ರಾಜ್ ಕುಂದ್ರಾ ಅವರ ಬಂಧನದ ನಂತರ ಮತ್ತೆ ಸುದ್ದಿಯಲ್ಲಿದ್ದರು. ಮತ್ತೆ ಬಿಗ್ ಬಾಸ್ ಭಾಗವಹಿಸುವಿಕೆಯು ಆಕೆಯನ್ನು ಟ್ರೋಲ್‌ಗಳಿಗೆ ಗುರಿಯಾಗುವಂತೆ ಮಾಡಿದೆ. "ನೀವು ಅದೇ ಸ್ಪರ್ಧಿಗಳನ್ನು ಏಕೆ ಪದೇ ಪದೇ ಪ್ರದರ್ಶನಕ್ಕೆ ಕರೆತರುತ್ತೀರಿ. ಹಾಗಿದ್ದಲ್ಲಿ, ಕೆಆರ್‌ಕೆ ಅನ್ನು ಮತ್ತೆ ತನ್ನಿ, ”ಎಂದು ಒಬ್ಬ ಬಳಕೆದಾರರು ಬರೆದರೆ ಇನ್ನೊಂದು ಪೋಸ್ಟ್‌ನಲ್ಲಿ,“ ಅವಳು ಇಲ್ಲಿ ಮತ್ತೆ ಏನು ಮಾಡುತ್ತಿದ್ದಾಳೆ? ” ಎಂದು ಗೇಲಿ ಮಾಡಲಾಗಿದೆ.

ಮುಂದೆ ಓದಿ ...
  • Share this:

ಶಮಿತಾ ಶೆಟ್ಟಿ ಮತ್ತು ಬಿಗ್ ಬಾಸ್ ಮತ್ತೆ ಸುದ್ದಿಯಾಗಿದ್ದಾರೆ, ಒಳ್ಳೆಯ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ ಎಂದು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ. ಮತ್ತೆ ಒಳ್ಳೆ ಕಾರಣಕ್ಕಾಗಿಯಂತೂ ಸುದ್ದಿಯಾಗಿಲ್ಲ.


ಏಕೆಂದರೆ  2009 ರ ಮೂರನೇ ಸೀಸನ್ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಶಮಿತಾ, 15 ನೇ ಆವೃತ್ತಿಯಲ್ಲಿ ಮತ್ತೆ ಕಿರುತೆರೆ ಮೇಲೆ ಮಿಂಚಲು ಬಂದಿದ್ದಾರೆ. ಇವರು ತಿರುಗಿ ಬಂದಿರುವುದನ್ನು ನೆಟಿಜನ್ ಗಳಿಗೆ ಅಂದರೆ ನೆಟ್​ಜೀವಿಗಳಿಗೆ ಖುಷಿಕೊಟ್ಟಿಲ್ಲ. ಮೊಹಬ್ಬತೀನ್ ಚಿತ್ರದ ನಾಯಕ ನಟಿ ಒಂದು ದಶಕದ ಹಿಂದೆ ಬಿಗ್ ಬಾಸ್ 3 ನಲ್ಲಿ ಭಾಗವಹಿಸಿದ್ದರು,  ರಾಜ್ ಕುಂದ್ರಾ ಮತ್ತು ತನ್ನ ಅಕ್ಕ ಶಿಲ್ಪಾ ಶೆಟ್ಟಿ ಅವರ ವಿವಾಹದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಧ್ಯದಲ್ಲಿಯೇ ಶೋ ಕೈ ಬಿಟ್ಟರು.


ಈಗ ಅಶ್ಲೀಲ ಚಲನಚಿತ್ರಗಳನ್ನು ನಿರ್ಮಿಸಿದ ಆರೋಪದ ಮೇಲೆ ರಾಜ್ ಕುಂದ್ರಾ ಬಂಧನಕ್ಕೊಳಗಾಗಿದ್ದಾರೆ ಮತ್ತು ಶಿಲ್ಪಾ ಶೆಟ್ಟಿ ತಮ್ಮ ಕಿರುತೆರೆಯ ವೃತ್ತಿಜೀವನದಿಂದ ವಿರಾಮ ತೆಗೆದುಕೊಂಡಿದ್ದಾರೆ, ಶಮಿತಾ ಬಿಗ್ ಬಾಸ್‌ಗೆ ಮರಳಿ ಪ್ರವೇಶ ಮಾಡಿದ್ದಾರೆ. ಈ ತಾಳ- ಮೇಳಗಳು ಏಕೋ ಸರಿ ಹೊಂದುತ್ತಿಲ್ಲ ಎಂದು ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ ಎಂದು ನೆಟಿಜನ್​ಗಳು ಗದ್ದಲ ಎಬ್ಬಿಸಿವೆ.


ಸಾಮಾಜಿಕ ಜಾಲತಾಣದಲ್ಲಿ, ಬಿಗ್ ಬಾಸ್ ನಿರ್ಮಾಣ ಜವಾಬ್ದಾರಿ ಹೊತ್ತಿರುವವರನ್ನು ಶಮಿತಾ ಅವರ  ಭಾಗವಹಿಸುವಿಕೆ ಕುರಿತಾಗಿ ನಿರಂತರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅತ್ಯಂತ ವಿವಾದಾತ್ಮಕ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಅನ್ನು ಈ ವರ್ಷ ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ - ಸಲ್ಮಾನ್ ಖಾನ್  ಇಷ್ಟು ದಿನ ಇದನ್ನು ನಡೆಸಿಕೊಡುತ್ತಿದ್ದರು. ಬಿಗ್ ಬಾಸ್‌ನ ಈ ಸೀಸನ್ ಅನ್ನು ಮೊದಲು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನೇಹಾ ಭಾಸಿನ್, ಜೀಶನ್ ಖಾನ್, ಅಕ್ಷರ ಸಿಂಗ್ ಮತ್ತು ದಿವ್ಯಾ ಅಗರ್ವಾಲ್ ಹಾಗೂ ಇನ್ನು ಮುಂತಾದ ಸ್ಪರ್ಥಿಗಳು ಬಿಗ್​ಬಾಸ್​ ಮನೆ ಪ್ರವೇಶಿಸಿದ್ದಾರೆ.


ಟಿಆರ್‌ಪಿ ಹೆಚ್ಚಿಸುವ ಸಲುವಾಗಿ ಶಮಿತಾ ಅವರನ್ನು ಬಿಗ್​ಬಾಸ್​ ನಿರ್ಮಾಪಕರು ಕರೆತಂದಿದ್ದಾರೆ ಹೊರತು ಬೇರೆ ಯಾವುದೇ ಕಾರಣಕ್ಕೆ ಅಲ್ಲ ಎಂದು ನೆಟಿಜನ್‌ಗಳು ಆರೋಪಿಸಿದ್ದಾರೆ. 2009 ರಲ್ಲಿ ಬಿಗ್ ಬಾಸ್ 3 ನಲ್ಲಿ ಭಾಗವಹಿಸಿದ್ದ ಮತ್ತು ನಟಿಯನ್ನು ಟ್ರೋಲ್ ಮಾಡುತ್ತಿದ್ದ ಕಮಲ್ ಆರ್ ಖಾನ್ ಗೆ ಕೆಲವರು ಶಮಿತಾ ಅವರನ್ನು ಹೋಲಿಕೆ ಮಾಡಿ ಟ್ರೋಲ್​ ಮಾಡುತ್ತಿದ್ದಾರೆ.

ಶಮಿತಾ ಶೆಟ್ಟಿ ತನ್ನ ಅಕ್ಕನ ಗಂಡ ರಾಜ್ ಕುಂದ್ರಾ ಅವರ ಬಂಧನದ ನಂತರ ಮತ್ತೆ ಸುದ್ದಿಯಲ್ಲಿದ್ದರು. ಮತ್ತೆ ಬಿಗ್ ಬಾಸ್ ಭಾಗವಹಿಸುವಿಕೆಯು ಆಕೆಯನ್ನು ಟ್ರೋಲ್‌ಗಳಿಗೆ ಗುರಿಯಾಗುವಂತೆ ಮಾಡಿದೆ. "ನೀವು ಅದೇ ಸ್ಪರ್ಧಿಗಳನ್ನು ಏಕೆ ಪದೇ ಪದೇ ಪ್ರದರ್ಶನಕ್ಕೆ ಕರೆತರುತ್ತೀರಿ. ಹಾಗಿದ್ದಲ್ಲಿ, ಕೆಆರ್‌ಕೆ ಅನ್ನು ಮತ್ತೆ ತನ್ನಿ, ”ಎಂದು ಒಬ್ಬ ಬಳಕೆದಾರರು ಬರೆದರೆ ಇನ್ನೊಂದು ಪೋಸ್ಟ್‌ನಲ್ಲಿ,“ ಅವಳು ಇಲ್ಲಿ ಮತ್ತೆ ಏನು ಮಾಡುತ್ತಿದ್ದಾಳೆ? ” ಎಂದು ಗೇಲಿ ಮಾಡಲಾಗಿದೆ.


ಇದನ್ನೂ ಓದಿ:  ಸಿನಿಮಾಗೆ ಹೋದಾಗ ಪಾಪ್​ಕಾರ್ನ್​ ಕೊಂಡು ಮೋಸ ಹೋಗಿದ್ದೀರಾ? ಟಿಕ್​ಟಾಕ್​ ಮೂಲಕ ಬಣ್ಣ ಬಯಲು ಮಾಡಿರುವ ಕತೆ ಇಲ್ಲಿದೆ

ಬಿಗ್ ಬಾಸ್‌ಗೆ ಶಮಿತಾ ಪ್ರವೇಶವು ಟಿಆರ್‌ಪಿ ಹೆಚ್ಚಳ ಮಾಡುತ್ತದೆಯೋ ಇಲ್ಲವೋ ಎಂಬುದನ್ನು  ಸಮಯ ಮಾತ್ರ ಹೇಳುತ್ತದೆ. ಈ ಬಾರಿಯ ಶೋನಲ್ಲಿ 42 ವರ್ಷದ ನಟಿಯಲ್ಲದೆ, ಮಿಲಿಂದ್ ಗಬಾ, ರಿಧಿಮಾ ಪಂಡಿತ್, ರಾಕೇಶ್ ಬಾಪಟ್, ಪ್ರತೀಕ್ ಸೆಹಜ್ಪಾಲ್, ಕರಣ್ ನಾಥ್, ಉರ್ವಿ ಜಾವೇದ್ ಮತ್ತು ಮುಸ್ಕಾನ್ ಜಟ್ಟನಾ ಮುಂತಾದವರು ಕಾಣಿಸಿಕೊಂಡಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: