• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಬಲ್ಗೇರಿಯಾದಲ್ಲಿ 'ಬೆಸ್ಟ್‌ ನ್ಯಾಷನಲ್‌ ಕಾಸ್ಟ್ಯೂಮ್‌' ಪ್ರಶಸ್ತಿ ಗೆದ್ದ ಭಾರತದ ಬೆಡಗಿ!

Viral News: ಬಲ್ಗೇರಿಯಾದಲ್ಲಿ 'ಬೆಸ್ಟ್‌ ನ್ಯಾಷನಲ್‌ ಕಾಸ್ಟ್ಯೂಮ್‌' ಪ್ರಶಸ್ತಿ ಗೆದ್ದ ಭಾರತದ ಬೆಡಗಿ!

ಭಾರತೀಯಳು

ಭಾರತೀಯಳು

ಬಲ್ಗೇರಿಯಾದಲ್ಲಿ ನಡೆದ ಮಿಸೆಸ್ ಯೂನಿವರ್ಸ್ 2022-23 ರಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿರುವ ಲೀನಾ ಗುಪ್ತಾ, ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

  • Share this:
  • published by :

ಸೌಂದರ್ಯ ಜಗತ್ತಿನಲ್ಲಿ ಭಾರತಕ್ಕೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ಮಿಸೆಸ್ ಯೂನಿವರ್ಸ್ 2022-23ರ ಸ್ಪರ್ಧೆಯಲ್ಲಿ ಟಾಪ್ 10ನಲ್ಲಿ ಸ್ಥಾನ ಪಡೆದಿದ್ದಲ್ಲದೇ  ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ (Best National Costume‌) ಪ್ರಶಸ್ತಿಯನ್ನು ಭಾರತದ ಡಾ. ಲೀನಾ ಗುಪ್ತಾ ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಹೌದು, ಬಲ್ಗೇರಿಯಾದಲ್ಲಿ ನಡೆದ ಮಿಸೆಸ್ ಯೂನಿವರ್ಸ್ 2022-23 ರಲ್ಲಿ ದೇಶವನ್ನು ಪ್ರತಿನಿಧಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿರುವ ಲೀನಾ ಗುಪ್ತಾ, ಟಾಪ್ 10 (Top 10)ರಲ್ಲಿ ಸ್ಥಾನ ಪಡೆದಿದ್ದಾರೆ. ಮಾತ್ರವಲ್ಲದೆ ಜಗತ್ತಿನ ವಿವಿಧೆಡೆಯಿಂದ ಬಂದ ಪ್ರತಿಭೆಗಳೊಂದಿಗೆ ಸ್ಪರ್ಧಿಸಿ 'ಅತ್ಯುತ್ತಮ ರಾಷ್ಟ್ರೀಯ ಕಾಸ್ಟ್ಯೂಮ್‌ ' ಪ್ರಶಸ್ತಿಯನ್ನು ಗೆದ್ದಿದ್ದಾರೆ.


ಅಂದಹಾಗೆ ಡಾ. ಲೀನಾ ಗುಪ್ತಾ ಅವರ ಮಿಸೆಸ್ ಯೂನಿವರ್ಸ್ ಪ್ರಯಾಣವು ಆರಂಭವಾಗಿದ್ದು ಪುಣೆಯಲ್ಲಿ ನಡೆದ ‘ಮಿಸೆಸ್ ಇಂಡಿಯಾ ಎಂಪ್ರೆಸ್ ಆಫ್ ದಿ ನೇಷನ್ 2021 ನಿಂದ.


ಕಠಿಣ ಪರಿಶ್ರಮ ಕೈ ಬಿಡಲಿಲ್ಲ!


ಅಂದಹಾಗೆ ಅಂಜನಾ ಮತ್ತು ಕಾರ್ಲ್ ಮಸ್ಕರೇನ್ಹಸ್ ಸ್ಥಾಪಿಸಿದ ದಿವಾ ಪೇಜೆಂಟ್ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಒದಗಿಸುತ್ತದೆ.


ಡಾ.ಲೀನಾಗುಪ್ತಾ ಅವರ ಸ್ವಯಂ-ನಂಬಿಕೆ, ಕಠಿಣ ಪರಿಶ್ರಮ ಮತ್ತು ಸಮರ್ಪಣೆ ರಾಷ್ಟ್ರೀಯ ಸ್ಪರ್ಧೆಯನ್ನು ಗೆಲ್ಲಲು ಸಹಾಯ ಮಾಡಿದೆ. ಇದರಿಂದಾಗಿಯೇ ಇಂದು ಮಿಸೆಸ್ ಯೂನಿವರ್ಸ್ 2022-23 ರಲ್ಲಿ ಭಾರತದ ಪ್ರತಿನಿಧಿಸುವ ಅವಕಾಶ ಬಂದೊದಗಿತ್ತು.


ಮಿಸೆಸ್ ಯೂನಿವರ್ಸ್‌ನ ರಾಷ್ಟ್ರೀಯ ನಿರ್ದೇಶಕರಾದ ಮಸ್ಕರೇನ್ಹಸ್ ಅವರ ಮಾರ್ಗದರ್ಶನದಲ್ಲಿ, ಡಾ.ಲೀನಾ ಗುಪ್ತಾ ಅವರು ಜಾಗತಿಕ ಹಂತಕ್ಕೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗಿದೆ.


ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ ಭೋಜ್​​ಪುರಿ ಹಾಡಿಗೆ ಡ್ಯಾನ್ಸ್ ಮಾಡಿದ ಹುಡುಗಿ; ಸೋಶಿಯಲ್ ಮೀಡಿಯಾದಲ್ಲಿ ವೈರಲ್


ಸ್ಪರ್ಧೆಯಲ್ಲಿ ಅವರು ಟಾಪ್ 10ರಲ್ಲಿ ಸ್ಥಾನ ಗಳಿಸಿದ್ದಲ್ಲದೆ 'ಅತ್ಯುತ್ತಮ ರಾಷ್ಟ್ರೀಯ ಕಾಸ್ಟ್ಯೂಮ್‌ ' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರಿಂದ ಅವರ ಹೆಸರು ಮತ್ತಷ್ಟು ಎತ್ತರಕ್ಕೇರಿದೆ.


ತಮಸೋಮಾ ಜ್ಯೋತಿರ್ಗಮಯ ಪರಿಕಲ್ಪನೆಯ ಕಾಸ್ಟ್ಯೂಮ್!


ಅಂದಹಾಗೆ ಲೀನಾ ಗುಪ್ತಾ ಅವರ ಕಾಸ್ಟ್ಯೂಮ್‌ ಅನ್ನು ಭಾರತದ ಹೆಸರಾಂತ ಕಲಾವಿದರಾದ ಯಾಸೀನ್ ರೆಹಮಾನ್ ಷರೀಫ್, ಭಿವರ ಸಿಂಗ್ ಮತ್ತು ನರೇಂದ್ರ ಸಿಂಗ್ ಸಾಳುಂಕೆ ವಿನ್ಯಾಸಗೊಳಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಇದನ್ನು 1500 ಕ್ಕೂ ಹೆಚ್ಚು ರೈನ್ಸ್ಟೋನ್‌ಗಳಿಂದ ಹೊದಿಸಲಾಗಿತ್ತು.




ಡಾ.ಲೀನಾ ಗುಪ್ತಾ ಅವರ ಪ್ರಶಸ್ತಿ ವಿಜೇತ ಕಾಸ್ಟ್ಯೂಮ್‌ನ ಹಿಂದಿನ ಪರಿಕಲ್ಪನೆಯು 'ತಮಸೋಮಾ ಜ್ಯೋತಿರ್ಗಮಯʼ ಎಂಬುದಾಗಿದೆ. ಈ ವೇಷಭೂಷಣವು ಕತ್ತಲೆಯನ್ನು ಬೆಳಕಿಗೆ ಪರಿವರ್ತಿಸುವುದನ್ನು ಚಿತ್ರಿಸುತ್ತದೆ.


ಇದನ್ನೂ ಓದಿ: ಆರು ಹೆಂಡತಿಯರ ಮುದ್ದಿನ ಗಂಡನಿಗೆ ಮಗು ಪಡೆಯುವ ಬಯಕೆ, ಯಾರಿಂದ ಮೊದಲು ಅನ್ನೋದೇ ದೊಡ್ಡ ಚಿಂತೆ!


ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಇದು ಪ್ರತಿನಿಧಿಸುತ್ತದೆ. ವೇಷಭೂಷಣದ ಮೇಲಿನ ಸಂಕೀರ್ಣವಾದ ಹ್ಯಾಂಡ್‌ ವರ್ಕ್‌ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ತೋರಿಸುತ್ತದೆ. ಇದು ಜಾಗತಿಕ ವೇದಿಕೆಯಲ್ಲಿ ದೇಶದ ಪರಿಪೂರ್ಣ ಪ್ರಾತಿನಿಧ್ಯವಾಗಿತ್ತು.

ಇನ್ನು, ಮಿಸೆಸ್ ಯೂನಿವರ್ಸ್ 2022 ರಲ್ಲಿ ಡಾ. ಗುಪ್ತಾ ಅವರ ಸಾಧನೆಯು ಅವರ ಬೌದ್ಧಿಕ ಮನಸ್ಥಿತಿ ಮತ್ತು ಮನಸ್ಸಿನ ಪ್ರಬುದ್ಧತೆನ್ನು ತೋರಿಸಿದೆ. ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತವನ್ನು ಘನತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.


ಅವರ ಯಶಸ್ಸು ರಾಷ್ಟ್ರದಾದ್ಯಂತದ ಮಹಿಳೆಯರಿಗೆ ದೊಡ್ಡ ಕನಸು ಕಾಣಲು ಮತ್ತು ಅವರ ಗುರಿಗಳನ್ನು ಸಾಧಿಸಲು ಶ್ರಮಿಸಲು ಪ್ರೇರೇಪಿಸಿದೆ ಎಂದರೆ ಸುಳ್ಳಾಗುವುದಿಲ್ಲ.


ಅಂದಹಾಗೆ ಡಾ. ಲೀನಾ ಗುಪ್ತಾ ಮಾಡೆಲ್‌ ಮಾತ್ರವಲ್ಲ. ಮೂಲತಃ ಅವರು ವೃತ್ತಿಯಲ್ಲಿ ವೈದ್ಯರು ಮತ್ತು ಮಧುಮೇಹ ತಜ್ಞರಾಗಿದ್ದಾರೆ. ಅವರು ತಮ್ಮದೇ ಆದ ಮೀಶಾ ಡಯಾಗ್ನೋಸ್ಟಿಕ್ಸ್ ಮತ್ತು ಪಾಲಿಕ್ಲಿನಿಕ್ ಸೆಂಟರ್‌ಅನ್ನು ಹೊಂದಿದ್ದಾರೆ.




ಒಟ್ಟಾರೆ ತಮಗೆ ಇಷ್ಟ ಇರುವಂಥ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಸಂತೋಷವೇ ಬೇರೆ. ತಮ್ಮ ಕನಸಿನ ಬೆನ್ನೇರಿ ಗುರಿ ಸಾಧಿಸುವುದಿದೆಯಲ್ಲ ಅದರಿಂದ ಜೀವನ ಪರಿಪೂರ್ಣ ಎನಿಸುತ್ತದೆ.

top videos


    ಆದ್ದರಿಂದ ಡಾ. ಲೀನಾ ಗುಪ್ತಾ ಅವರ ಈ ಸಾಧನೆ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಜೊತೆಗೇ ಸಾಧನೆ ಮಾಡಲು ಬಯಸುವ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

    First published: