ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹಣ (Money Making) ಸಂಪಾದಿಸಲು ಹಲವಾರು ಮೋಸದ ದಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅಸಲಿಯನ್ನು ನಕಲಿಯನ್ನಾಗಿಸುವ ಈ ವಂಚಕರ ಜಾಲ ಸುಲಭವಾಗಿ ಜನರನ್ನು ಯಾಮಾರಿಸಿ ಹಣ ಲಪಟಾಯಿಸುತ್ತಿದ್ದು ಅವರನ್ನು ಬಲಿಪಶುಗಳನ್ನಾಗಿಸುತ್ತಿದ್ದಾರೆ. ಇದೀಗ ಜೂನಿಯರ್ ಡಾಕ್ಟರ್‌ನಂತೆ ಸೋಗು ಹಾಕಿ AIIMS (ಏಮ್ಸ್) ನಲ್ಲಿ ರೋಗಿಗಳಿಂದ ಹಣ ಲಪಟಾಯಿಸುತ್ತಿದ್ದ 27 ರ ಹರೆಯದ ಶುಭಿ ತ್ರಿವೇದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಮ್ಸ್‌ನಲ್ಲಿ ಶೀಘ್ರ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿ ರೋಗಿಗಳಿಂದ ಅವರ ಕುಟುಂಬದಿಂದ ಹಣ ಲೂಟುತ್ತಿದ್ದ ಶುಭಿ ತನ್ನ ಹೆಸರಿದ್ದ ಬಿಳಿ ವೈದ್ಯಕೀಯ ಕೋಟು ಸ್ಕೆತಸ್ಕೋಪ್ (Stereoscope) ಬಳಸಿಕೊಂಡು ಆಸ್ಪತ್ರೆಯಲ್ಲಿ ಅಡ್ಡಾಡುತ್ತಿದ್ದಳು ಎಂಬುದು ತಿಳಿದು ಬಂದಿದೆ.
ಮೈಕ್ರೋಬಯಾಲಜಿಯಲ್ಲಿ ಬಿಎಸ್‌ಸಿ ಪದವೀಧರಳಾಗಿರುವ ಶುಭಿ ಉತ್ತರ ಪ್ರದೇಶದ ಬುದಾನ್ ನಿವಾಸಿ. ಆಸ್ಪತ್ರೆಗೆ ಒಮ್ಮೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಳಿ ಕೋಟು ಧರಿಸಿದ್ದ ಯಾರನ್ನೇ ಆದರೂ ಜನರು ವೈದ್ಯರಂತೆ ನಂಬುತ್ತಿದ್ದರು ಎಂಬ ಅಂಶವನ್ನು ಶುಭಿ ಅರಿತುಕೊಂಡಿದ್ದಾಳೆ. ಹಾಗಾಗಿಯೇ ತಾನು ಕೂಡ ವೈದ್ಯಳಂತೆಯೇ ಸೋಗು ಹಾಕಿ ಆದಷ್ಟು ದುಡ್ಡು ಸಂಪಾದಿಸುವ ಮೋಸದ ಹಾದಿಗೆ ಮುಂದಾಗಿದ್ದಾಳೆ.
ವಂಚನೆಗೊಳಗಾದವರಿಂದಲೇ ವಂಚಕಿಯ ಅಸಲಿಯತ್ತು ಬಯಲು
ಶುಭಿ ತ್ರಿವೇದಿಯ ಮೋಸದ ಬಲೆಗೆ ಬಿದ್ದ ಹರಿದ್ವಾರದ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ ನಂತರ ಜೂನಿಯರ್ ವೈದ್ಯೆಯ ಅಸಲಿಯತ್ತ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಓಡಿ ಬಂದು ನೀರಿನೊಳಗೆ ನುಸುಳುತ್ತಿರುವ ಆಮೆಯನ್ನೇ ಬೇಟೆಯಾಡಿದ ಹುಲಿ!
ಈತ ತನ್ನ ಮಗಳ ಹೃದಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಸಮಯದಲ್ಲಿ ವೈದ್ಯರ ಭೇಟಿಗಾಗಿ ಕಾದು ಕಾದು ಸುಸ್ತಾಗಿದ್ದರು ಈ ಸಮಯದಲ್ಲಿ ಶುಭಿಯನ್ನು ಭೇಟಿ ಮಾಡಿದ ಆತ ಆಕೆಗೆ ರೂ 96,000 ವನ್ನು ನೀಡಿದ್ದಾಗಿ ಹೇಳಿದ್ದಾರೆ. ಮಗಳ ಚಿಕಿತ್ಸೆಯನ್ನು ಶೀಘ್ರವೇ ಮಾಡುವುದಾಗಿ ಭರವಸೆ ನೀಡಿದ್ದ ಶುಭಿ ಆತನಿಂದ ಹಣ ವಸೂಲು ಮಾಡುವಲ್ಲಿ ಸಫಲಳಾಗಿದ್ದಳು.
ಶುಭಿ ತಿಳಿಸಿದಂತೆ ಹತ್ತು ದಿನಗಳ ನಂತರ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದ ವ್ಯಕ್ತಿಗೆ ನಿಜಕ್ಕೂ ಆಘಾತವಾಗಿತ್ತು ಏಕೆಂದರೆ ಶುಭಿ ಆಸ್ಪತ್ರೆಯಲ್ಲಿ ಕಂಡುಬಂದಿರಲಿಲ್ಲ ಹಾಗೂ ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಆತ ಪೊಲೀಸ್ ಠಾಣೆಗೆ ನೇರವಾಗಿ ಬಂದು ತನಗಾದ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ.
ಜನರನ್ನು ಸುಲಭವಾಗಿ ಮೋಸಗೊಳಿಸುವ ತಂತ್ರ ಕಂಡುಕೊಂಡ ಶುಭಿ
ಡಿಸಿಪಿ ಚಂದನ್ ಚೌಧರಿ ತಿಳಿಸಿರುವಂತೆ ಇದೀಗ ಶುಭಿಯ ಮೇಲೆ ಸೆಕ್ಷನ್ 419, 420 ಮೋಸ ಹಾಗೂ 406 (ವಿಶ್ವಾಸಾರ್ಹತೆಯ ಉಲ್ಲಂಘನೆ) ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದು ಹೌಜ್ ಕಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಸ್ಪತ್ರೆಯ ಹೆಚ್ಚಿನ ರೋಗಿಗಳಲ್ಲಿ ಹಣ ಲಪಟಾಯಿಸಿರುವ ಶುಭಿ, ತಮ್ಮ ಮೋಸದ ಜಾಲಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ಬೀಳಿಸುವ ಸಮಯದಲ್ಲಿ ಆಕೆಯನ್ನು ಪತ್ತೆಹಚ್ಚಲಾಯಿತು ಎಂದು ತಿಳಿಸಿದ್ದಾರೆ.
ಕಣ್ಣಿನ ಆಪರೇಶನ್ ಸಲುವಾಗಿ ಏಮ್ಸ್‌ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಶುಭಿ, ಬಿಳಿ ಕೋಟ್ ಧರಿಸಿದ ಯಾರನ್ನೇ ಆದರೂ ಅಲ್ಲಿಗೆ ಬರುತ್ತಿದ್ದ ರೋಗಿಗಳು ಅವರ ಕುಟುಂಬಸ್ಥರು ನಂಬುತ್ತಿದ್ದುದನ್ನು ನೋಡಿ ತಾನು ಹೀಗೆ ಮಾಡಿ ಜನರನ್ನು ಹಣ ಲಪಟಾಯಿಸಬಹುದು ಎಂಬುದನ್ನು ಅರಿತುಕೊಂಡರು.
ಇದನ್ನೂ ಓದಿ: ತನ್ನನ್ನೇ ಮದ್ವೆಯಾಗಿ ಕಾರಣ ಬಿಚ್ಚಿಟ್ಟ 77ರ ವೃದ್ಧೆ
ತಮ್ಮ ಹೆಸರಿರುವ ಬಿಳಿ ಕೋಟ್ ಅನ್ನು ಆಕೆ ಗಿಟ್ಟಿಸಿಕೊಂಡ ನಂತರ ಆಸ್ಪತ್ರೆಯಲ್ಲಿ ವಿಧಿವಿಜ್ಞಾನ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಜೂನಿಯರ್ ವೈದ್ಯೆ ಎಂಬುದಾಗಿ ತಿಳಿಸಿದ್ದು ಆಸ್ಪತ್ರೆಯಲ್ಲಿ ಕೂಡ ಯಾವುದೇ ಪರಿಶೀಲನೆ ನಡೆದಿಲ್ಲವಾದ್ದರಿಂದ ರೂ 650 ಶುಲ್ಕ ನೀಡಿ ಆಸ್ಪತ್ರೆಗೆ ಪ್ರವೇಶಿಸಿದರು.
ಏಮ್ಸ್ ಇಂಟರ್ನ್ ಎಂದು ಮನೆಯಲ್ಲಿ ತಿಳಿಸಿದ್ದ ವಂಚಕಿ
ಹರಿದ್ವಾರ ನಿವಾಸಿ ಆಕೆಯ ಮೋಸದ ಜಾಲಕ್ಕೆ ಬಿದ್ದ ಮೊದ ವ್ಯಕ್ತಿಯಾಗಿದ್ದು ಯಾರು ಯಾರು ಈಕೆಯ ಜಾಲಕ್ಕೆ ಬಿದ್ದಿದ್ದಾರೆ ಎಂಬುದನ್ನು ಪರಿಶೀಲಿಸಲು ಆಕೆಯ ಫೋನ್ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
ಆಕೆಯ ಬ್ಯಾಂಕ್ ಖಾತೆಯನ್ನು ಪರಿಶೀಲಿಸುತ್ತಿದ್ದು ಎಷ್ಟು ಹಣವನ್ನು ಇವರು ಲಪಟಾಯಿಸಿದ್ದಾರೆ ಎಂಬುದಕ್ಕೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ತನ್ನ ಕುಟುಂಬಕ್ಕೆ ಆಕೆ ಏಮ್ಸ್‌ನಲ್ಲಿ ಇಂಟರ್ನ್ ಆಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾಗಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ