• Home
 • »
 • News
 • »
 • trend
 • »
 • Trending Story: 12 ದಿನಗಳಿಂದ ವೃತ್ತಾಕಾರದಲ್ಲಿ ಚಲಿಸುತ್ತಿರುವ ಕುರಿಗಳು! ಏನಾಗಿದೆ ಈ ಪ್ರಾಣಿಗಳಿಗೆ?

Trending Story: 12 ದಿನಗಳಿಂದ ವೃತ್ತಾಕಾರದಲ್ಲಿ ಚಲಿಸುತ್ತಿರುವ ಕುರಿಗಳು! ಏನಾಗಿದೆ ಈ ಪ್ರಾಣಿಗಳಿಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದು ಉತ್ತರಚೀನಾದಲ್ಲಿ ಆಗಿರುವಂತಹ ಘಟನೆ. ಇಲ್ಲೊಂದು ಕುರಿಗಳ ಹಿಂಡು ವೃತ್ತಾಕಾರದಲ್ಲಿ ಸುತ್ತುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್​​ ಆಗುತ್ತಿದ್ದು. ವೀಕ್ಷಕರು ಈ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಮಾಡಿದ್ದಾರೆ.

 • Share this:

  ಈ ಪ್ರಪಂಚನೇ ಒಂಥರಾ ವಿಚಿತ್ರ. ಯಾಕಂದ್ರೆ ಇಲ್ಲಿ ಪ್ರಾಣಿಗಳು (Animals) ಕೂಡ ಕೆಲವೊಮ್ಮೆ ಮನುಷ್ಯರಂತೆಯೇ ವರ್ತಿಸುತ್ತದೆ. ಕೆಲವೊಮ್ಮೆ ಪ್ರಾಣಿಗಳು ಮಾಡುವಂತಹ ಕೆಲಸಗಳನ್ನ ನೋಡಿದರೆ ನೋಡುಗರಿಗೂ ಒಮ್ಮೆ ಕನ್​​ಫ್ಯೂಸ್ (Confuse)​ ಮಾಡಿಬಿಡುತ್ತೆ. ಇಲ್ಲಿ ನಾವು ಭೂಮಿಯ ಸುತ್ತ ಸೂರ್ಯ ಸುತ್ತುತ್ತಾನೆ ಎಂಬ ಮಾತು, ಮನುಷ್ಯರು ಸುತ್ತುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ವಿಡಿಯೋವನ್ನು (Video) ನೋಡಿದ್ರೆ ನಿಮ್ಗೇ ಶಾಕ್ (Shock) ಆಗ್ಬಹುದು. ಇಲ್ಲೊಂದು ಕುರಿಗಳ ಹಿಂಡು ಒಂದು ವೃತ್ತದಲ್ಲಿ ಸುತ್ತುತ್ತಾ ಇದೆ. ಈ ವಿಡಿಯೋ ನೋಡುಗರನ್ನೇ ಒಮ್ಮೆ ಬೆಚ್ಚಿಬೀಳಿಸುತ್ತದೆ. ಈ ಕುರಿಗಳು (Sheep) ಯಾಕೆ ಈ ರೀತಿ ಸುತ್ತು (Circle) ಹಾಕುತ್ತಿವೆ. ಏನಾಗಿದೆ ಈ ಕುರಿಗಳಿಗೆ ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು. ಇದಕ್ಕೆಲ್ಲಾ ಉತ್ತರ ಇಲ್ಲಿದೆ ಓದಿ.


  ಹೌದು ಇದು ಉತ್ತರಚೀನಾದಲ್ಲಿ ಆಗಿರುವಂತಹ ಘಟನೆ. ಇಲ್ಲೊಂದು ಕುರಿಗಳ ಹಿಂಡು ವೃತ್ತಾಕಾರದಲ್ಲಿ ಸುತ್ತುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್​​ ಆಗುತ್ತಿದ್ದು. ವೀಕ್ಷಕರು ಈ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಮಾಡಿದ್ದಾರೆ.


  12 ದಿನಗಳ ಕಾಲ ವೃತ್ತಾಕಾರದಲ್ಲಿ ಕುರಿಗಳ ಚಲನೆ:


  ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಪ್ರದೇಶದ ವೃತ್ತದಲ್ಲಿ ಹನ್ನೆರಡು ದಿನಗಳ ಕಾಲ ಕುರಿಗಳ ದೊಡ್ಡ ಹಿಂಡು ವೃತ್ತಾಕಾರವಾಗಿ ಚಲಿಸುತ್ತಿರುವುದು ಕಂಡುಬಂದಿದೆ ಎಂದು ನ್ಯೂಯಾರ್ಕ್ ವರದಿ ಮಾಡಿದೆ.  ಈ ದೃಶ್ಯಾವಳಿಯು ಒಂದು ದೊಡ್ಡ ಕುರಿಗಳ ಹಿಂಡು ಪ್ರದಕ್ಷಿಣಾಕಾರವಾಗಿ ಗುಂಪಿನಂತೆ ಮತ್ತು ದಿಕ್ಕಿಲ್ಲದೆ ಚಲಿಸುತ್ತಿರುವುದನ್ನು ತೋರಿಸುತ್ತದೆ ಮತ್ತು ಮಧ್ಯದಲ್ಲಿ ಈ ಮೂಲಕ ಮಧ್ಯದಲ್ಲಿ ಒಂದು ದೊಡ್ಡ ವೃತ್ತವನ್ನೂ ಗಮನಿಸಬಹುದಾಗಿದೆ.


  ಇದನ್ನೂ ಓದಿ: ರಾಜ್ಮಾ ಚಾವಲ್ ಮಾರಾಟ ಮಾಡಿ ತಿಂಗಳಿಗೆ 60 ಸಾವಿರ ಗಳಿಸುತ್ತಿರುವ ದಂಪತಿಗಳು!


  ಕುರಿಗಳ ಈ ರೀತಿಯ ಚಲನೆಗೆ ಇನ್ನು ಕಾರಣಗಳು ದೊರೆತಿಲ್ಲ:


  ವಿಚಿತ್ರ ದೃಶ್ಯದ ವೀಡಿಯೊವನ್ನು ಚೀನಾದ ಪೀಪಲ್ಸ್ ಡೈಲಿ ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಬುಧವಾರ ಟ್ವೀಟ್ ಮಾಡಿದ್ದು, ಕುರಿಗಳು ಸಂಪೂರ್ಣವಾಗಿ ಆರೋಗ್ಯವಾಗಿವೆ ಮತ್ತು ನಡವಳಿಕೆಯ ಕಾರಣವಗಳು ಇನ್ನೂ ನಿಗೂಢವಾಗಿಯೇ ಉಳಿದಿದೆ ಎಂದು ವರದಿ ಮಾಡಿದೆ. "ಚೀನಾದ ಒಳ ಮಂಗೋಲಿಯಾದಲ್ಲಿ ನೂರಾರು ಕುರಿಗಳು 10 ದಿನಗಳ ಕಾಲ ವೃತ್ತದಲ್ಲಿ ನಡೆಯುತ್ತವೆ. ಕುರಿಗಳು ಆರೋಗ್ಯವಾಗಿವೆ ಮತ್ತು ಈ ರೀತಿಯ ಕುರಿಗಳ ವರ್ತನೆಗೆ ಕಾರಣ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ" ಎಂದು ಈ ಟ್ವೀಟ್​​ಗೆ ಕ್ಯಾಪ್ಷನ್​ ಅನ್ನು ನೀಡಿದ್ದಾರೆ.  ಇಡೀ ಹಿಂಡು ಸೇರುವ ಮೊದಲು ಇದು ಕಡಿಮೆ ಸಂಖ್ಯೆಯ ಕುರಿಗಳೊಂದಿಗೆ ಪ್ರಾರಂಭವಾಯಿತು. 34 ಕುರಿಗಳಿಂದ ಆರಂಬವಾದ ಈ ವರ್ತನೆ ಇದೀಗ ನೂರಕ್ಕೂ ಹೆಚ್ಚು ಕುರಿಗಳನ್ನು ಹೊಂದಿದೆ ಎಂದು ಕುರಿ ಮಾಲೀಕರು ಒಂದು ಮಾಧ್ಯಮದ ವರದಿಯಲ್ಲಿ ತಿಳಿಸಿದ್ದಾರೆ.


  ಕೆಲವೊಂದು ವರದಿಗಳ ಪ್ರಕಾರ:


  ವರದಿಯ ಪ್ರಕಾರ, ಈ ಕುರಿಗಳು ನವೆಂಬರ್ 4 ರಿಂದ ತನ್ನ ವೃತ್ತಾಕಾರದಲ್ಲಿ ಚಲಿಸಲು ಆರಂಬಿಸಿದೆ. ಇನ್ನು ಈ ಕುರಿಗಳು ತಿನ್ನಲು ಅಥವಾ ಕುಡಿಯಲು ಏನಾದರು ವಿರಾಮ ತೆಗೆದುಕೊಳ್ಳುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲ. ಕುರಿಗಳ ನಡವಳಿಕೆಯು ಲಿಸ್ಟರಿಯೊಸಿಸ್ ಎಂಬ ಬ್ಯಾಕ್ಟೀರಿಯಾದ ಕಾಯಿಲೆಯಿಂದ ಉಂಟಾಗಬಹುದು ಎಂದು ಕೆಲವರು ಊಹಿಸಿದ್ದಾರೆ. ಇದನ್ನು ಇನ್ನೊಂದು ಹೆಸರಿನಲ್ಲಿ "ಸುತ್ತುವ ರೋಗ" ಎಂದೂ ಕರೆಯುತ್ತಾರೆ.


  ಇದು ಉತ್ತರಚೀನಾದಲ್ಲಾಗುತ್ತಿರುವಂತಹ ವಿಶೇಷ ಕಥೆ ಅಂತಾನೂ ಹೇಳಬಹುದು. ಯಾಕೆಂದರೆ 12 ದಿನಗಳಿಂದ ಯಾವುದೇ ಮನುಷ್ಯರು, ಪ್ರಾಣಿಗಳು, ವೃತಾಕಾರದಲ್ಲಿ ಚಲಿಸಲು ಸಾಧ್ಯವಿಲ್ಲ. ಏಕೆಂದರೆ ಒಂದೇ ದಿಕ್ಕಿನಲ್ಲಿ ಚಲಿಸಿದರೆ ತಲೆತಿರುಗುವಂತಹ ಸಂದರ್ಭಗಳು ಬರುತ್ತವೆ. ಆದರೆ ಇಲ್ಲಿ ಕುರಿಗಳು ಮದಿಕ್ಕು ದೆಸೆ ಇಲ್ಲದೆ ಸುತ್ತುತ್ತಿದೆಯೆಂದರೆ ಇದಕ್ಕೆ ಏನೋ ಕಾರಣಗಳಿರಬಹುದು ಎಂದು ಸ್ಥಳೀಯರ ಪ್ರತಿಕ್ರಿಯಿಸಿದ್ದಾರೆ.

  Published by:Prajwal B
  First published: