Sheep: ಮಹಿಳೆ ಪ್ರಾಣ ತೆಗೆದ ಕುರಿಗೆ 3 ವರ್ಷ ಜೈಲು ಶಿಕ್ಷೆ! ಹೊರಗೆ ಬಂದ್ಮೇಲೂ ಮೃತಳ ಮನೆಯಲ್ಲೇ ಗೃಹಬಂಧನ!

ಮಾನವನಷ್ಟು ತಪ್ಪು ಮಾಡಿದವರು ಈ ಜಗತ್ತಿನಲ್ಲಿ ಯಾರು ಇಲ್ಲ. ಕೊಲೆ (Murder), ಕಳ್ಳತನ (Thef), ರೇಪ್ (Rape)​ ಇಂತಹ ತಪ್ಪು ಮಾಡುವ ಮೂಲಕ ಶಿಕ್ಷೆ ಅನುಭವಿಸುತ್ತಿರುವ ಅನೇಕ ಮಂದಿ ಇದ್ದಾರೆ. ಆದರೆ ಈ ಸುದ್ದಿಯಲ್ಲಿ ಕೊಂಚ ಬದಲಾವಣೆ ಎಂಬಂತೆ ಮನುಷ್ಯನ ಬದಲು ಪ್ರಾಣಿ (Animal) ತಪ್ಪು ಮಾಡಿದೆ. ಪ್ರಾಣಿ ಎಂದರೆ ಕುರಿಯೊಂದು (Sheep) ಮಹಿಳೆಯನ್ನು ಕೊಲೆ ಮಾಡಿದೆ. ಮಾತ್ರವಲ್ಲದೆ, ಕುರಿ ಮಾಡಿದ ತಪ್ಪಿಗೆ ಕೋರ್ಟ್ ​ ಶಿಕ್ಷೆಯನ್ನು ವಿಧಿಸಿದೆ. ಅಷ್ಟೇ ಅಲ್ಲದೆ ಜೈಲು (Jail) ಸೇರಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ತಪ್ಪಿತಸ್ಥನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಪೊಲೀಸರು (Police), ಕೋರ್ಟ್​ (Court) ತಪ್ಪಿತಸ್ಥನಿಗೆ ಶಿಕ್ಷೆ (Punishment) ನೀಡುತ್ತಾರೆ. ಜಗತ್ತಿನಲ್ಲಿ ಅತಿ ಹೆಚ್ಚು ತಪ್ಪು ಮಾಡುವವರು ಯಾರು ಎಂದು ಕೇಳುವುದಾದರೆ? ಅದಕ್ಕೆ ಮೊದಲ ಮತ್ತು ಕೊನೆಯ ಉತ್ತರ ಮನುಷ್ಯ (Human). ಹೌದು. ಮಾನವನಷ್ಟು ತಪ್ಪು ಮಾಡಿದವರು ಈ ಜಗತ್ತಿನಲ್ಲಿ ಯಾರು ಇಲ್ಲ. ಕೊಲೆ (Murder), ಕಳ್ಳತನ (Thef), ರೇಪ್ (Rape)​ ಇಂತಹ ತಪ್ಪು ಮಾಡುವ ಮೂಲಕ ಶಿಕ್ಷೆ ಅನುಭವಿಸುತ್ತಿರುವ ಅನೇಕ ಮಂದಿ ಇದ್ದಾರೆ. ಆದರೆ ಈ ಸುದ್ದಿಯಲ್ಲಿ ಕೊಂಚ ಬದಲಾವಣೆ ಎಂಬಂತೆ ಮನುಷ್ಯನ ಬದಲು ಪ್ರಾಣಿ (Animal) ತಪ್ಪು ಮಾಡಿದೆ. ಪ್ರಾಣಿ ಎಂದರೆ ಕುರಿಯೊಂದು (Sheep) ಮಹಿಳೆಯನ್ನು ಕೊಲೆ ಮಾಡಿದೆ. ಮಾತ್ರವಲ್ಲದೆ, ಕುರಿ ಮಾಡಿದ ತಪ್ಪಿಗೆ ಕೋರ್ಟ್ ​ ಶಿಕ್ಷೆಯನ್ನು ವಿಧಿಸಿದೆ. ಅಷ್ಟೇ ಅಲ್ಲದೆ ಜೈಲು (Jail) ಸೇರಿದೆ.

    ಅಪರಾಧ ಮಾಡಿದವನಿಗೆ ಶಿಕ್ಷೆ ಸಿಗೋಉ ಖಚಿತ. ಅದರಂತೆ ಕುರಿಯೊಂದು ಅಪರಾಧಿ ಸ್ಥಾನದಲ್ಲಿ ನಿಂತಿದೆ. ಈ ಕಾರಣಕ್ಕೆ ಶಿಕ್ಷೆ ನೀಡಲಾಗಿದೆ. ಜೈಲು ಸೇರಿದೆ. ಕುರಿಯ ಮೇಲೆ ಮಹಿಳೆಯೊಬ್ಬರನ್ನು ಕೊಂದ ಆರೋಪವಿದೆ. ಇದೇ ಕಾರಣಕ್ಕೆ ಕುರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದರ ಮೇಲಿನ ಆರೋಪ ನಿಜವೆಂದು ಸಾಬೀತಾಗಿದೆ. ಈಗ ಕುರಿ 3 ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಿದೆ.

    ಅಂದಹಾಗೆಯೇ ಈ ಪ್ರಕರಣ ಆಫ್ರಿಕಾದ ದಕ್ಷಿಣ ಸುಡಾನ್‌ನಲ್ಲಿ ನಡೆದಿದೆ. ಇದು ಪ್ರಪಂಚದಾದ್ಯಂತ ಸುದ್ದಿ ಮಾಡುತ್ತಿದೆ. ಸುಡಾನ್‌ನ ಐ ರೇಡಿಯೊ ಪ್ರಕಾರ, ವಿಚಾರ ತಿಳಿದಂತೆಯೇ ಕುರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿಯು ಅಧಿಯು ಚಾಪಿಂಗ್ ಎಂಬ 45 ವರ್ಷದ ಮಹಿಳೆಯನ್ನು ಗಾಯಗೊಳಿಸಿತ್ತು. ನಂತರ ಅವಳು ಈ ಕುರಿಯಿಂದಾಗಿ ಪ್ರಾಣ ಕಳೆದುಕೊಂಡಳು.

    ಇದನ್ನೂ ಓದಿ- Golgappa: ಗೋಲ್​ಗಪ್ಪ ಇಂದು ನಿನ್ನೆಯದಲ್ಲ! ದ್ರೌಪದಿ ಪಾಂಡವರಿಗೆ ಮಾಡಿಕೊಟ್ಟ ಸ್ಪೆಷಲ್​ ಫುಡ್​ ಇದೇನಾ?

    ಮಹಿಳೆಯನ್ನು ಸಾವಿಗೆ ಈ ಕುರಿ ಕಾರಣ!

    ಕುರಿ ಮಹಿಳೆಯ ಮೇಲೆ ದಾಳಿ ಮಾಡಿದಾಗ, ಆಕೆಯ ಪಕ್ಕೆಲುಬುಗಳು ಮುರಿದವು. ಸತತ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಧಿಯು ಚಾಪಿಂಗ್ ಇದಾದ ನಂತರ ಬದುಕಲು ಸಾಧ್ಯವಾಗಲಿಲ್ಲ. ರುಂಬೆಕ್ ಪೂರ್ವದಲ್ಲಿ ಈ ಘಟನೆ ನಡೆದಿದೆ.

    ಜನರನ್ನು ರಕ್ಷಿಸುವುದು ಪೊಲೀಸರ ಕೆಲಸ. ಆದ್ದರಿಂದ ಮಲೆಂಗ್ ಆಗೋಕ್ ಪಾಯಂ ಪೊಲೀಸ್ ಠಾಣೆಯಲ್ಲಿ ಕುರಿಯನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ. ಈ ಇಡೀ ಘಟನೆಯಲ್ಲಿ ಮಾಲೀಕನ ತಪ್ಪೇನೂ ಇಲ್ಲ, ಮಹಿಳೆಯನ್ನು ಕೊಂದ ಅಪರಾಧವನ್ನು ಕುರಿ ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



    ಇದನ್ನೂ ಓದಿ- Blennies Fish: ನೀರ ಬಿಟ್ಟು ನೆಲದ ಮೇಲೆ ಮೀನು ಬದುಕದು! ಆದ್ರೆ ಈ ಮೀನು ನೆಲವ ಬಿಟ್ಟು ನೀರಲ್ಲಿ ಬದುಕಲ್ವಂತೆ!

    ಕುರಿಗಳಿಗೆ 3 ವರ್ಷ ಜೈಲು ಶಿಕ್ಷೆ

    ಪೊಲೀಸ್ ವಶದಲ್ಲಿರುವ ಕುರಿಗಳಿಗೆ ಕಾನೂನುಬದ್ಧವಾಗಿ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗ ಅವರು ಮುಂದಿನ 3 ವರ್ಷಗಳ ಕಾಲ ಸುಡಾನ್‌ನ ಲೆಕ್ಸ್ ಸ್ಟೇಟ್‌ನಲ್ಲಿರುವ ಅಡ್ಯುಯೆಲ್ ಕೌಂಟಿ ಮಿಲಿಟರಿ ಕ್ಯಾಂಪ್‌ನ ಪ್ರಧಾನ ಕಛೇರಿಯಲ್ಲಿ ವಾಸಿಸುತ್ತಾರೆ. ಇದಲ್ಲದೇ ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರವಾಗಿ 5 ಹಸುಗಳನ್ನು ನೀಡುವಂತೆ ಕುರಿಗಳ ಮಾಲೀಕರಿಗೆ ಆದೇಶ ನೀಡಲಾಗಿದೆ. ಎರಡೂ ಕುಟುಂಬಗಳು ನೆರೆಹೊರೆಯವರಾಗಿದ್ದು, ನ್ಯಾಯಾಲಯದ ಆದೇಶದ ಪ್ರಕಾರ 3 ವರ್ಷಗಳ ನಂತರ ಶಿಕ್ಷೆ ಅನುಭವಿಸಿದ ಕುರಿ ಹೊರಗೆ ಬಂದಾಗ ಸಂತ್ರಸ್ತ ಕುಟುಂಬಕ್ಕೆ ಅದನ್ನು ನೀಡಬೇಕಿದೆ.
    Published by:Harshith AS
    First published: