Viral Video: ವೈರಲ್ ಜಗತ್ತು ಪ್ರತಿನಿತ್ಯ ಅದ್ಭುತಗಳನ್ನೇ ತೆರೆದಿಡುತ್ತಿದೆ. ಪ್ರಪಂಚದ ಯಾವುದೋ ಮೂಲೆಯಲ್ಲಿ ಸೃಜಿಸುವ ಕಲೆಯನ್ನು ಎಲ್ಲಾ ಕಡೆಗೂ ಮುಟ್ಟಿಸುತ್ತಿದೆ. ಇನ್ನೂ ಬಹುತೇಕರು ಇಂದು ತಮ್ಮ ವೃತ್ತಿಯಲ್ಲಿ ಪ್ರಯೋಗಗಳನ್ನು ಮಾಡುತ್ತಲೇ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿರುತ್ತಾರೆ. ಅದಕ್ಕೆ ಸಾಕ್ಷಿಯಾಗಿದೆ ಈ ಆಪ್ಟಿಕಲ್ ಇಲ್ಯೂಷನ್ ಮೇಕಪ್. ನಾವು ಮಕ್ಕಳಾಗಿದ್ದಾಗಿನಿಂದ, ಆಪ್ಟಿಕಲ್ ಭ್ರಮೆಗಳು ಮತ್ತು ಪಜಲ್ಗಳು ನಮ್ಮ ನೆಚ್ಚಿನ ಆಟಗಳಾಗಿದ್ದವು. ಈ ಕಲೆಯನ್ನು ಈಗ ಕಲೆ, ಬಣ್ಣ, ನೃತ್ಯ, ಮತ್ತು ಮೇಕಪ್ಗಳೊಂದಿಗೆ ಸಂಯೋಜಿಸಲಾಗಿದೆ. ಮೇಕಪ್ ಆರ್ಟಿಸ್ಟ್ ಮಿಮಿ ಚೋಯ್ ಅವರು ಆಪ್ಟಿಕಲ್ ಭ್ರಮೆ ಮತ್ತು ಮೇಕಪ್ ಮಿಶ್ರಣದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಕೆನಡಾದ ವ್ಯಾಂಕೋವರ್ ಮೂಲದ ಚೋಯ್ ತನ್ನ ಕಾಲ್ಪನಿಕ ಆಪ್ಟಿಕಲ್ ಇಲ್ಯೂಷನ್ ಮೇಕಪ್ ಪ್ರತಿಭೆಗಳಿಗೆ ಹೆಸರುವಾಸಿಯಾಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದ್ದಾರೆ.
ಈಗ ಈ ಕಲಾವಿದೆಯ ಅದ್ಭುತ ಸಾಮರ್ಥ್ಯಗಳ ಒಂದು ವಿಡಿಯೋ ವೈರಲ್ ಆಗಿದೆ. ಆಕೆಯ ಮುಖದ ತುಂಬಾ ಒಂದಕ್ಕಿಂತಲೂ ಹೆಚ್ಚಿನ ಮೂಗು, ತುಟಿ, ಹಲವಾರು ಕಣ್ಣುಗಳು ಮೂಡಿವೆ. ಇದೆಲ್ಲವನ್ನೂ ಆಪ್ಟಿಕಲ್ ಇಲ್ಯೂಷನ್ ಮೂಲಕ ಅನಾವರಣಗೊಳಿಸಿದ ಚತುರೆ ಈ ಕಲಾವಿದೆ. ಸಣ್ಣ ವಿಡಿಯೋ ತುಣುಕಿನಲ್ಲಿ ಆಕೆಯ ಮುಖ ಒಂದು ಚಿತ್ರದ ಕ್ಯಾನ್ವಾಸ್ ರೀತಿ ಸಿದ್ಧಗೊಂಡಿದ್ದು, ತುಟಿ ಚಿತ್ರಕ್ಕೆ ಬಣ್ಣ ತುಂಬುವುದು ಕಂಡು ಬಂದಿದೆ. ಆದರೆ ಮಜಾ ಇರೋದೇ ಅಲ್ಲಿ. ಇಷ್ಟಕ್ಕೂ ಆಕೆ ತನ್ನ ಕಣ್ಣಿನ ಮೇಲೆಯೇ ತುಟಿಯ ಚಿತ್ರವನ್ನು ಬರೆದು ಅದಕ್ಕೆ ರಂಗು ತುಂಬಿಸಿ ನೋಡುಗರಲ್ಲಿ ಬೆರಗು ಮೂಡಿಸಿದ್ದಾಳೆ. ಇದೇ ರೀತಿ ಮುಖದ ತುಂಬಾ ಕಣ್ಣು, ತುಟಿಯ ಚಿತ್ತಾರದ ಆಪ್ಟಿಕಲ್ ಇಲ್ಯೂಷನ್ ಆಶ್ಚರ್ಯ ಮೂಡಿಸುತ್ತದೆ.
ಮೇಕಪ್ನ ಈ ಚಾಕಚಕ್ಯತೆಗೆ ಹಲವಾರು ಜನ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಯಾವ ಆ್ಯಂಗಲ್ನಿಂದ ನೋಡಿದರು ಒಂದು ಹೊಸ ಮುಖ ಕಾಣುತ್ತದೆ. ಯಾವುದು ಕೂಡ ಮೇಕಪ್ ಎಂದು ಗುರುತಿಸಲು ಸಾಧ್ಯವಾಗುವುದಿಲ್ಲ ಅಷ್ಟು ನೈಜತೆಯನ್ನು ಹೊಂದಿವೆ. ಇನ್ನೂ ಚೋಯ್ ತನ್ನ ಹಣೆಯ ಮೇಲೆ ಕಿವಿಗಳನ್ನು ರಚಿಸಿದ್ದು ಅವುಗಳ ಮೇಲೆ ಸೇಫ್ಟೀ ಪಿನ್ ಕಿವಿಯೋಲೆಗಳನ್ನು ಚಿತ್ರಿಸಿರುವುದು ಮನೋಹರವಾಗಿದೆ. ಪ್ರೆಟಿ ಲಿಟಲ್ ಲಾಯರ್ಸ್ ನಟಿ ಶೇ ಮಿಚೆಲ್ ಸಹ ಕಲಾವಿದೆಯ ಕೌಶಲ್ಯವನ್ನು ಅಭಿನಂದಿಸಿದ್ದಾರೆ. ಹಲವಾರು ಜನರು ನೋಟವನ್ನು ಸೈಕೆಡೆಲಿಕ್ ಎಂದು ಹೋಲಿಸಿದ್ದಾರೆ.
ಈ ಮೇಕಪ್ನ ಸ್ಫೂರ್ತಿಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಲಾಗಿದೆ. ಜನರು ತಮ್ಮ ಅಂತಃಪ್ರಜ್ಞೆಯನ್ನು ನಂಬಬೇಕು ಎಂದಿದ್ದಾರೆ ಅಲ್ಲದೇ ಅಂತಹ ಮೇಕಪ್ ಇದು ಎಂದಿದ್ದಾರೆ. ಆಕೆ ಈ ಚಿತ್ರವನ್ನು ಬಹಳ ರಿಸ್ಕ್ ತೆಗೆದುಕೊಂಡು ಚಿತ್ರಿಸಿದ್ದು, ಖಾಲಿ ತಲೆಯ ಬದಿಯಲ್ಲಿ ಚಿತ್ರಿಸಿರುವುದು ಬಹಳ ತ್ರಾಸದಾಯಕವಾಗಿದ್ದು, ಹಾಗೇ ಮಲಗಬೇಕು, ಅನಾರೋಗ್ಯವನ್ನುಂಟು ಮಾಡಿದೆ ಎಂದಿದ್ದಾರೆ.
View this post on Instagram
ಎನ್ಬಿಎ ತಾರೆ ರೆಕ್ಸ್ ಚಾಪ್ಮನ್ ಅದನ್ನು ಟ್ವಿಟರ್ನಲ್ಲಿ ಟ್ವೀಟ್ ಮಾಡುವ ಹಂತಕ್ಕೆ ಈ ವೀಡಿಯೊ ವೈರಲ್ ಆಗಿದೆ. ಅಲ್ಲದೇ ಈ ಲುಕ್ ಸೃಷ್ಟಿಸಲು ಮಿಮಿ 8 ಗಂಟೆಗಳ ಸಮಯ ತೆಗೆದುಕೊಂಡರು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ