14ನೇ ವಯಸ್ಸಿಗೆ ಗರ್ಭಿಣಿಯಾಗಿ 11 ಮಕ್ಕಳ ಹೆತ್ತ ತಾಯಿಗೆ ಇನ್ನೂ 6 ಕಂದಮ್ಮಗಳ ಹೆರುವ ಆಸೆಯಂತೆ..!

ನ್ಯೂಯಾರ್ಕ್​ ಮೂಲದ ಸಿರಾಕ್ಯೂಸ್​ ಮೂಲದ ವೆರೋನಿಕಾ ಮೆರಿಟ್​​ 14 ನೇ ವರ್ಷಕ್ಕೆ ತಾಯಿಯಾದಳು. ಸದ್ಯ ಈಕೆಗೆ 11 ಮಕ್ಕಳಿದ್ದಾರೆ. ಇದರ ನಡುವೆ ಆಕೆ ಇನ್ನು 6 ಮಕ್ಕಳು ಹೆರುವ ಆಸೆಯನ್ನಿಟ್ಟುಕೊಂಡಿದ್ದಾಳೆ. 36 ವರ್ಷದ ಮೆರಿಟ್ ಒಟ್ಟು 17 ಮಕ್ಕಳನ್ನು ಗಳಿಸಿದ ನಂತರ ಜೀವನ ಸಾರ್ಥಕ ಎನ್ನುತ್ತಾಳೆ.

ವೆರೋನಿಕಾ ಮೆರಿಟ್ ಅವರ ಮಕ್ಕಳು

ವೆರೋನಿಕಾ ಮೆರಿಟ್ ಅವರ ಮಕ್ಕಳು

 • Share this:
  ನಾವಿಬ್ಬರು ನಮಗಿಬ್ಬರು ಎಂಬ ಮಾತನ್ನು ಅನೇಕ ದಂಪತಿಗಳು ರೂಢಿಸಿಕೊಂಡವರಿದ್ದಾರೆ. ಏಕೆಂದರೆ ಮಕ್ಕಳನ್ನು ನಿಭಾಯಿಸುವುದು ಕಷ್ಟವೇ ಸರಿ. ಒಂದು ಅಥವಾ ಎರಡು ಮಗುವಿದ್ದರೆ ಸಂಭಾಳಿಸುವುದು ಬಲು ಕಷ್ಟ. ಇನ್ನು7-8 ಮಕ್ಕಳಿದ್ದರೆ ಪೋಷಕರ ಕಥೆ ಹೇಳತೀರದು. ಆದರೆ ಇಲ್ಲೊಬ್ಬಳು ಮಹಿಳೆಗೆ 11 ಮಕ್ಕಳಿದ್ದಾರೆ. ಅಚ್ಚರಿಯ ವಿಚಾರವೆಂದರೆ ಇನ್ನು 6 ಮಕ್ಕಳು ಬೇಕು ಎಂಬ ಆಸೆ ಆಕೆಯದ್ದು!.

  ನ್ಯೂಯಾರ್ಕ್​ ಮೂಲದ ಸಿರಾಕ್ಯೂಸ್​ ಮೂಲದ ವೆರೋನಿಕಾ ಮೆರಿಟ್​​ 14 ನೇ ವರ್ಷಕ್ಕೆ ತಾಯಿಯಾದಳು. ಸದ್ಯ ಈಕೆಗೆ 11 ಮಕ್ಕಳಿದ್ದಾರೆ. ಇದರ ನಡುವೆ ಆಕೆ ಇನ್ನು 6 ಮಕ್ಕಳು ಹೆರುವ ಆಸೆಯನ್ನಿಟ್ಟುಕೊಂಡಿದ್ದಾಳೆ. 36 ವರ್ಷದ ಮೆರಿಟ್ ಒಟ್ಟು 17 ಮಕ್ಕಳನ್ನು ಗಳಿಸಿದ ನಂತರ ಜೀವನ ಸಾರ್ಥಕ ಎನ್ನುತ್ತಾಳೆ.

  ಮತ್ತೊಂದು ಅಚ್ಚರಿ ವಿಚಾರವೆಂದರೆ ವೆರೋನಿಕಾ ಮೆರಿಟ್​ ಆಸೆಯನ್ನಿಟ್ಟುಕೊಂಡಿರುವುದೇನೋ ನಿಜ. ಆದರೆ ಆಕೆಗೆ 21 ವರ್ಷದ ಮಗಳಿದ್ದಾಳೆ. ಹಾಗಿದ್ದರು ಮಕ್ಕಳಿಗೆ ಜನ್ಮ ಕೊಡುವ ಬಯಕೆ ಆಕೆಯದ್ದು.

  ವೆರೋನಿಕಾ ಮೆರಿಟ್​ ಶಾಲೆಗೆ ಹೋಗುವ ಸಮಯಲ್ಲಿ ಗರ್ಭೀಣಿಯಾಗುತ್ತಾಳೆ. ನಂತರ ಪ್ರೀತಿಸಿದ ಯುವಕನನ್ನು ವಿವಾಹವಾಗುತ್ತಾಳೆ.  ಆ ಪ್ರೇಮಿಯಿಂದ 2 ಮಕ್ಕಳನ್ನು ಪಡೆದು ನಂತರ ಆತನಿಗೆ ವಿಚ್ಛೇದನ ನೀಡುತ್ತಾಳೆ.

  ವೆರೋನಿಕಾ ಮೆರಿಟ್


  ಸದ್ಯ ಬೇರೆಯೊಬ್ಬನನ್ನು ವಿವಾಹವಾಗಿ ಆಕೆ ಸುಖಿ ಜೀವನ ನಡೆಸುತ್ತಿದ್ದಾಳೆ. ಕಳೆದ ಜುಲೈನಲ್ಲಿ ಆಕೆಯ ಗಂಡ ಹಳೆಯ ಮನೆಯೊಂದನ್ನು ಖರೀದಿಸಿದ್ದು, ಅದರಲ್ಲೇ ವಾಸ ಮಾಡುತ್ತಿದ್ದಾರೆ. ಇನ್ನು ಆಕೆಯ ಗಂಡ ಮನೆಯ ಬೇಸ್ಮೆಂಟ್​ನಲ್ಲಿ ಮಲಗುತ್ತಾರಂತೆ. 6 ಕೋಣೆಯ ಮನೆಯ ಇದಾಗಿದೆ.

  ವೆರೋನಿಕಾ ಮೆರಿಟ್ ಆಸೆಯನ್ನು ಕೇಳಿದ ಅನೇಕರು ಆಕೆಗೆ ಪ್ರಶ್ನೆ ಮಾಡುತ್ತಿದ್ದಾರೆ. ಎಲ್ಲಾ ಮಕ್ಕಳಿಗೂ ಒಬ್ಬರೇ ತಂದೆಯಾ ಎಂದು ಕೇಳುತ್ತಿದ್ದಾರೆ. ವೃತ್ತಿಯಲ್ಲಿ ಕಲಾವಿದೆಯಾಗಿರುವ ವೆರೋನಿಕಾ ಮಕ್ಕಳು ಮತ್ತು ಗಂಡನೊಂದಿಗೆ ಆರಾಮವಾಗಿದ್ದಾರೆ.
  Published by:Harshith AS
  First published: