ಆನ್​ಲೈನ್​ನಲ್ಲಿ ಮೋಡಿ ಮಾಡುತ್ತಿದ್ದಾನೆ ಜೂನಿಯರ್ ಶೇನ್ ವಾರ್ನ್: ಸೀನಿಯರ್ ವಾರ್ನ್ ಇವನಿಗೆ ಫ್ಯಾನ್

news18
Updated:July 3, 2018, 3:50 PM IST
ಆನ್​ಲೈನ್​ನಲ್ಲಿ ಮೋಡಿ ಮಾಡುತ್ತಿದ್ದಾನೆ ಜೂನಿಯರ್ ಶೇನ್ ವಾರ್ನ್: ಸೀನಿಯರ್ ವಾರ್ನ್ ಇವನಿಗೆ ಫ್ಯಾನ್
news18
Updated: July 3, 2018, 3:50 PM IST
- ನ್ಯೂಸ್ 18 ಕನ್ನಡ

ಶೇನ್ ವಾರ್ನ್ ವಿಶ್ವ ಕಂಡ ಖ್ಯಾತ ಲೆಗ್ ಸ್ಪಿನ್ನರ್.. ಇದೀಗ, ವಾರ್ನ್ ಅವರನ್ನೇ ಹೋಲುವ ಮರಿ ಶೇನ್ ವಾರ್ನ್ ಒಬ್ಬರು ಆನ್​ಲೈನ್​ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಅದೇ ಸ್ಟೈಲ್.. ಅದೇ ಮ್ಯಾನರಿಸಂ, ಅದೇ ಬೌಲಿಂಗ್ ಕೌಶಲ್ಯ.. ಥೇಟ್ ಶೇನ್ ವಾರ್ನ್..

ಅವರೆ ಪಾಕಿಸ್ತಾನ ಮೂಲದ ಏಲಿ ಮಿಕಲ್ ಖಾನ್. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈತನ ವಿಡಿಯೋದ್ದೆ ಮಾತು. 7 ವರ್ಷ ಪ್ರಾಯದ ಈತ ಬೌಲಿಂಗ್ ಮಾಡುವ ಶೈಲಿಗೆ ಕ್ರಿಕೆಟ್ ಪ್ರೇಮಿಗಳು ಮನಸೋತಿದ್ದಾರೆ. ಅಲ್ಲದೆ, ಖಾನ್ ಅವರ ಫೆವರಿಟ್ ಕ್ರಿಕೆಟ್ ಆಟಗಾರ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್. ಸ್ವತಃ ಶೇನ್ ವಾರ್ನ್ ಅವರೆ ತಮ್ಮ ಅಭಿಮಾನಿ ಖಾನ್ ಜೊತೆ ವಿಡಿಯೋ ಕಾಲ್​ನಲ್ಲಿ ಮಾತಾನಾಡಿದ್ದು, ನಾನು ಕೂಡ ನಿನ್ನ ಲೆಗ್ ಸ್ಪಿನ್​ಗೆ ಅಭಿಮಾನಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಮಿಕಲ್ ಖಾನ್ ಅವರ ಜೊತೆ ಮಾತಾಡಿರುವ ವಿಡಿಯೋವನ್ನು ತನ್ನ ಟ್ಟಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಾರ್ನ್ ಅವರು, ಯುವ ಆಟಗಾರ ಏಲಿ ಅವರಿಗೆ ಹಾಗೂ ನನಗೆ ಇದೊಂದು ಅದ್ಭುತ ಕ್ಷಣ. ಏಲಿ ಒಬ್ಬ ಪ್ರತಿಭಾವಂತ ಯುವ ಆಟಗಾರ. ಮೊದಲಿಗೆ ಸಾಮಾಜಿಕ ತಾಣದಲ್ಲಿ ಖಾನ್ ಅವರ ಬೌಲಿಂಗ್ ಶೈಲಿಯ ವಿಡಿಯೋವನ್ನು ನೋಡಿ ಅಚ್ಚರಿಗೊಂಡೆ. ಈ ಪ್ರತಿಭೆಯನ್ನು ಬೆಳೆಸಿ ಪ್ರೋತ್ಸಾಹಿಸಿ ಎಂದು ವಾರ್ನ್ ಅವರು ಟ್ವೀಟ್ ಮಾಡಿದ್ದಾರೆ.

ಇನ್ನು ವಾರ್ನ್ ಜೊತೆ ಮಾತಾಡಿದ ಅನುಭವವನ್ನು ಅತ್ಯಂತ ಸಂತಸದಿಂದ ಹಂಚಿಕೊಂಡಿರುವ ಖಾನ್,  ವಾರ್ನ್ ಅವರು ನನ್ನ ಜೊತೆ ಮಾತನಾಡಿದರೆಂದು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.  ಜನರು ನನ್ನನ್ನು ಲಿಟಲ್ ಶೇನ್ ವಾರ್ನ್ ಎಂದು ಕರೆಯುವುದು ತುಂಬಾನೇ ಸಂತೋಷ ನೀಡುತ್ತದೆ. ನಾನು ಮುಂದೆ ವಾರ್ನ್ ಅವರ ರೀತಿಯೇ ಆಗಬೇಕೆಂದಿದ್ದೇನೆ. ಹಸಿರು ಬಣ್ಣದ ಜರ್ಸಿ  ತೊಟ್ಟು ಪಾಕಿಸ್ತಾನ ತಂಡವನ್ನು ಮುನ್ನಡೆಸಬೇಕು ಎಂದು ತನ್ನ ಕನಸನ್ನು ಹಂಚಿಕೊಂಡಿದ್ದಾರೆ.

 

First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ