Shah Rukh Khan: ಶಾರೂಖ್​ ಖಾನ್ ಅವರ ತದ್ರೂಪಿ ಈತ : ಸಾಮಾಜಿಕ ಜಾಲತಾಣದಲ್ಲಿ ಈಗ ಇವರದ್ದೇ ಹವಾ..!

ಶಾರೂಖ್ ಖಾನ್ ಅವರ ಅಭಿಮಾನಿಗಳು ಇಬ್ರಾಹಿಂ ಅವರನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ

ಶಾರೂಖ್​ ಖಾನ್ ಅವರ ತದ್ರೂಪಿ

ಶಾರೂಖ್​ ಖಾನ್ ಅವರ ತದ್ರೂಪಿ

  • Share this:

ಒಬ್ಬ ವ್ಯಕ್ತಿಯಂತೆ 7 ಜನರಿರುತ್ತಾರೆ ಎನ್ನುವ ಮಾತನ್ನು ಸಾಮಾನ್ಯವಾಗಿ ನಾವು ಕೇಳುತ್ತಿರುತ್ತೇವೆ. ಆ ಮಾತನ್ನು ಈಗ ನಟ ಶಾರೂಖ್​​​ ಖಾನ್​ ಅವರ ತದ್ರೂಪಿಯೊಬ್ಬರು ನಿಜವಾಗಿಸಿದ್ದಾರೆ. ಇಬ್ರಾಹಿಂ ಖಾದ್ರಿ ಎನ್ನುವವರು ತಮ್ಮ ಲುಕ್​ನಿಂದಲೇ ಮೊದಲ ನೋಟದಲ್ಲೇ ಕಿಂಗ್​ ಖಾನ್​  ಶಾರೂಖ್​ ಖಾನ್​ ಅವರನ್ನು ನೆನಪಿಸುತ್ತಾರೆ. ಒಂದು ಕ್ಷಣಕ್ಕೆ ಕಿಂಗ್​ ಖಾನ್​ ಅವರ ನ್ಯೂ ಲುಕ್ ಇರಬಹುದೇನೋ ಎನ್ನುವಂತಹ ಭ್ರಮೆಯನ್ನು ಹುಟ್ಟು ಹಾಕುತ್ತಾರೆ. ಅಭಿಮಾನಿಗಳು ಕೂಡ ಶಾರೂಖ್ ಅವರ ಹೊಸ ಸಿನಿಮಾ ಲುಕ್ ಇರಬೇಕು ಎಂದು ಭಾವಿಸಿ ನಂತರದಲ್ಲಿ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.


ಈ ದಿಢೀರ್ ಬೆಳವಣಿಗೆ ಕಾರಣಕ್ಕೆ ಇಬ್ರಾಹಿಂ ಕೂಡ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿ ಬಳಗವನ್ನು ಗಳಿಸುತ್ತಿದ್ದಾರೆ. ಅಲ್ಲದೇ ಶಾರೂಖ್ ಖಾನ್ ಅವರ ಅಭಿಮಾನಿಗಳು ಇಬ್ರಾಹಿಂ ಅವರನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ತದ್ರೂಪಿ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಎನ್ನುವುದನ್ನು ಅವರ ಸಾಮಾಜಿಕ ಮಾಧ್ಯಮದ ಖಾತೆ ಬಹಿರಂಗಪಡಿಸುತ್ತದೆ. ಈ ನಿಟ್ಟಿನಲ್ಲಿ ಕಿಂಗ್ ಖಾನ್ ಅಭಿನಯದ ಹಲವಾರು ಸಿನಿಮಾಗಳ ಝಲಕ್​ ಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಶಾರುಖ್ ಖಾನ್ ಚಿತ್ರಗಳಾದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ', 'ರಯೀಸ್' ಸಿನಿಮಾಗಳ ಹಲವಾರು ಪಾತ್ರಗಳನ್ನು ಅನುಸರಿಸಿದ್ದಾರೆ.


ಅಷ್ಟೇ ಅಲ್ಲದೇ ಶಾರುಖ್ ಖಾನ್ ಅವರ ಫೇಮಸ್​ ಪೋಸ್​ಗಳನ್ನು ಕೂಡ ಅನುಕರಿಸಲು ಪ್ರಯತ್ನಿಸಿದ್ದಾರೆ. ಅವರ ವಿಡಿಯೋಗಳಲ್ಲಿನ ಕಾಮೆಂಟ್‌ಗಳಲ್ಲಿ, "ನೀವು ಡಿಟ್ಟೊ ಶಾರುಖ್ ಖಾನ್‌ ರೀತಿಯೇ ಕಾಣುತ್ತೀರಿ," "ನೀವು ಎಂದಾದರೂ ಅವರನ್ನು ಭೇಟಿ ಮಾಡಿದ್ದೀರಾ.. ನನಗಂತೂ ನೀವು ಅವರನ್ನು ಬೆಚ್ಚಿ ಬೀಳಿಸುತ್ತಿದ್ದಿರಿ ಎನ್ನುವ ಖಾತ್ರಿ ಇದೆ" ಎಂದಿದ್ದಾರೆ. "ನೀವು ಖಂಡಿತವಾಗಿಯೂ ಅವರಂತೆ ಕಾಣುತ್ತೀರಿ ಮತ್ತು ನಡೆದುಕೊಳ್ಳುತ್ತೀರಿ" ಮತ್ತು "ನಿಮ್ಮ ಎಲ್ಲ ಮುಖಭಾವಗಳನ್ನು ನಾನು ನಿಜವಾಗಿಯೂ ಪ್ರೀತಿಸುತ್ತೇನೆ" ಎಂದು ಶಾರೂಖ್ ಖಾನ್ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.


ಇನ್ನು ಕಿಂಗ್​ಖಾನ್​ ಅವರ ಕೆಲವು ಅಭಿಮಾನಿಗಳು ಅವರು ಶಾರುಖ್ ಖಾನ್ ಅಲ್ಲ.. ಬದಲಿಗೆ ಅವರ ತದ್ರೂಪಿ ಎಂದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಈ ನಿಟ್ಟಿನಲ್ಲಿ ಇಬ್ರಾಹಿಂ ಅವರ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಬೆರಗುಗೊಳಿಸಿವೆ.


ಇದನ್ನು ಓದಿ: ಜಾರ್ಖಂಡ್​ನಲ್ಲಿ ಪತ್ತೆಯಾದ ಏಲಿಯನ್​ಗಳು: ಅಸಲಿ ವಿಷಯ ಬಹಿರಂಗ

ಇಬ್ರಾಹಿಂ ಶಾರುಖ್ ಖಾನ್ ಅವರೊಂದಿಗೆ ಬಹಳ ಹೋಲಿಕೆಯನ್ನು ಹೊಂದಿದ್ದರೂ, ವಾಸ್ತವದಲ್ಲಿ ಕಿಂಗ್ ಖಾನ್ ಒಬ್ಬರು ಮಾತ್ರವೇ ಇರಲು ಸಾಧ್ಯ. ಅವರನ್ನು ಬದಲಿಸಲು ಅಥವಾ ಅವರ ಎತ್ತರಕ್ಕೆ ಅದೇ ಮಟ್ಟದ ಪ್ರಸಿದ್ಧಿಯನ್ನು ಪಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಅಭಿಮಾನಿಗಳು ಹೇಳುವ ಮೂಲಕ ಶಾರೂಖ್​ ಖಾನ್​ ಅವರನ್ನೂ ಬಿಟ್ಟುಕೊಟ್ಟಿಲ್ಲ.


ಶಾರುಖ್ ಖಾನ್ ಅವರು ಸದ್ಯ 'ಪಠಾಣ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. 'ಝೀರೋ' ಬಳಿಕ ಸ್ವಲ್ಪ ಸಮಯ ತೆಗೆದುಕೊಂಡು ಶಾರೂಖ್​ ಖಾನ್​ ವೈಆರ್​ಎಫ್​ ಅವರ ಸೆಟ್​ಗೆ ಮರಳಿದ್ದಾರೆ.ಮತ್ತೊಂದೆಡೆ, ಕೊರೊನಾ ವೈರಸ್‌ನಿಂದ ಚಿತ್ರೀಕರಣದ ವಿಳಂಬಕ್ಕೆ ಕಾರಣವಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
Published by:Seema R
First published: