LGBT+ ಮದುವೆಗೂ ಇನ್ಮೇಲೆ Shaadi.com ನಲ್ಲಿ ಅವಕಾಶ, ಸಂಗಾತಿ ಹುಡುಕೋಕೆ ಅವ್ರಿಗೂ ಸಹಕಾರ ನೀಡಲು ಸಜ್ಜು

ಭಾರತದ ಸರ್ವೋಚ್ಛ ನ್ಯಾಯಾಲಯವು ಒಂದೇ ಲಿಂಗದವರ ಮಧ್ಯದ ಸಂಬಂಧವನ್ನು ಅಪರಾಧ ಎಂದು ಹೇಳಿಲ್ಲವಾದರೂ ಅಂತಹ ಮದುವೆಗಳಿಗೆ ಇನ್ನೂ ಮನ್ನಣೆ ನೀಡಬೇಕಾಗಿದೆ ಎಂದು ನೆಟ್ಟಿಗರು ಹೇಳುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಂದೆ ಮನೆಯ ಹಿರಿಯರು ತಮ್ಮ ಬಂಧುಗಳು, (Relatives) ನಂಟರು, ಸ್ನೇಹಿತರು ಹೀಗೆ ಹಲವಾರು ಕಡೆಗಳಲ್ಲಿ ವಿಚಾರಣೆ ನಡೆಸಿ ತಮ್ಮ ಪುತ್ರ ಅಥವಾ ಪುತ್ರಿಗೆ ಬಾಳ ಸಂಗಾತಿಯನ್ನು ಹುಡುಕುತ್ತಿದ್ದರು. ಈ ಕಾರ್ಯವು ಮನೆ ಕಟ್ಟುವುದಕ್ಕಿಂತ ಏನೂ ಕಡಿಮೆಯಿರಲಿಲ್ಲ. ಹಾಗಾಗಿಯೇ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ನಾಣ್ಣುಡಿ ಬಳಸಲಾಗುತ್ತಿತ್ತು. ಆದರೆ, ಇಂದಿನ ಕಾಲದಲ್ಲಿ ಈ ನಾಣ್ಣುಡಿ ತನ್ನ ಮನ್ನಣೆ ಕಳೆದುಕೊಳ್ಳುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ, ಇಂದೇನಿದ್ದರೂ ಡಿಜಿಟಲ್ (Digital) ಯುಗ. ಎಲ್ಲವೂ ಫಾಸ್ಟ್. ಅಂಗೈನಲ್ಲೇ ಪ್ರಪಂಚದ ಸುತ್ತಾಟ ಮಾಡಬಹುದಾದ ಈ ಕಾಲದಲ್ಲಿ ಮದುವೆಗಾಗಿ ಸಂಗಾತಿ (Partner for marriage) ಹುಡುಕುವುದು ಅಂತಹ ಕಷ್ಟದ ಕೆಲಸವಂತೂ ಅಲ್ಲವೇ ಅಲ್ಲ. ಅದಕ್ಕಾಗಿಯೇ ಮ್ಯಾಚ್ ಮೇಕಿಂಗ್ ಮಾಡುವ ಹಲವಾರು ಆನ್ಲೈನ್ ವೆಬ್ ತಾಣಗಳಿವೆ. ಅವುಗಳ ಪೈಕಿ ಒಂದಾಗಿದೆ ಶಾದಿ.ಕಾಂ.(Shaadi.com) ಇದು ಭಾರತದಲ್ಲಿ ತಕ್ಕ ಮಟ್ಟಿಗೆ ಯಶಸ್ಸನ್ನೂ ಗಳಿಸಿದೆ. ಇದೀಗ ತನ್ನ ಸೇವಾ ಸೌಲಭ್ಯಗಳನ್ನು ವಿಸ್ತರಿಸುವ ಉದ್ದೇಶ ಹೊಂದಿರುವ ಈ ಸಂಸ್ಥೆ ಇನ್ನು ಮುಂದೆ ಎಲ್‌ಜಿಬಿಟಿ ಪ್ಲಸ್(LGBT Plus community) ಸಮುದಾಯದವರಿಗೂ ತಮ್ಮ ಬಾಳ ಸಂಗಾತಿ ಕಂಡುಕೊಳ್ಳಲು ಅನುಕೂಲವಾಗುವಂತೆ ತನ್ನ ಸೌಲಭ್ಯ ನೀಡಲು ಮುಂದಾಗುತ್ತಿದೆ. ಅಷ್ಟೇ ಅಲ್ಲ ವಿದೇಶದಲ್ಲಿದ್ದವರಿಗೂ (Abroad) ಈ ಸೇವೆ ಒದಗಲಿದೆ ಎಂದು ಸಂಸ್ಥೆ ಹೇಳುತ್ತಿದೆ.

ಸೇವೆ ವಿಸ್ತರಿಸಲು ಅನುಪಮ್ ಮಿತ್ತಲ್ ಹೇಳಿಕೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಮುಖ್ಯ ಅಧಿಕಾರಿಯಾದ ಅನುಪಮ್ ಮಿತ್ತಲ್, "ನಮ್ಮನ್ನು ನಾವು ಮ್ಯಾಚ್ ಮೇಕಿಂಗ್ ಹಾಗೂ ಬಾಳಸಂಗಾತಿ ಒದಗಿಸುವ ವೇದಿಕೆ ಎಂದು ಪರಿಗಣಿಸಿದ್ದೇವೆ. ಇದು ಯಾವುದೇ ಪ್ರದೇಶ, ಸಮುದಾಯ, ಯಾವುದೇ ಧರ್ಮ ಅಥವಾ ಯಾವುದೇ ಲಿಂಗಗಳಿಗಿರಬಹುದು.

ಇದನ್ನೂ ಓದಿ: Saurabh Kirpal| ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ LGBT Activist ಸೌರಭ್‌ ಕಿರ್ಪಾಲ್ ಹೆಸರು ಶಿಫಾರಸು; ಕೊಲಿಜಿಯಂ ಮಹತ್ವದ ನಿರ್ಧಾರ!

ಹಾಗಾಗಿ ನಮ್ಮ ಸೇವೆ ವಿಸ್ತರಿಸುವುದಕ್ಕೆ ನಾವು ಮುಂದಾಗಿದ್ದೇವೆ" ಎಂದು ಹೇಳಿದ್ದಾರೆಂದು ಬ್ಯುಸಿನೆಸ್ ಇನ್ಸೈಡರ್ ಪತ್ರಿಕೆಯು ವರದಿ ಮಾಡಿದೆ. ಇದಕ್ಕೂ ಮುಂಚೆ ಇಂದು ಜನಪ್ರಿಯವಾಗುತ್ತಿರುವ ಡೇಟಿಂಗ್ ತಾಣಗಳ ಕುರಿತು ಕೇಳಿದಾಗ, "ನಮ್ಮ ಎಲ್ಲ ಸೇವೆಗಳು ಗಂಭೀರಮಯವಾದ ಡೇಟಿಂಗ್‌ನಿಂದ ಹಿಡಿದು ಅಂತಿಮವಾಗಿ ಬಾಳಸಂಗಾತಿ ಕಂಡುಕೊಳ್ಳುವವರೆಗೆ ನಡೆಯುತ್ತದೆ" ಎಂದು ಅನುಪಮ್‌ ಸ್ಪಷ್ಟವಾಗಿ ನುಡಿಯುತ್ತಾರೆ.

ವಿರೋಧದ ಅಭಿಪ್ರಾಯ
ಈ ಕುರಿತಂತೆ ಶಾದಿ.ಕಾಮ್ ತನ್ನ ವಿಸ್ತರಣೆ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರಕಟಿಸುತ್ತಿದ್ದಂತೆಯೇ ಹಲವು ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದಾಗ್ಯೂ ಕೆಲವರು ಸಂಸ್ಥೆಯ ಈ ನಡೆಯನ್ನು ಶ್ಲಾಘಿಸಿದರೆ ಹಲವರು ಇದರಿಂದಾಗಬಹುದಾದ ವಿಪರೀತ ಪರಿಣಾಮಗಳ ಕುರಿತು ತಮ್ಮದೇ ಆದ ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರು, ಈ ರೀತಿ ಮ್ಯಾಚ್ ಮೇಕಿಂಗ್ ಹೆಸರಿನಲ್ಲಿ ವಿಲಕ್ಷಣವಾದ ಸ್ಥಳಗಳಲ್ಲಿ ನುಗ್ಗುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಜಾತಿ, ವರ್ಗ, ಹೊಮೋಫೊಬಿಯಾ (Homophobia) ಎಂಬುದು ಪರಸ್ಪರ ವೈಶಿಷ್ಠ್ಯವಾಗಿದ್ದು ಇದರ ಅನುಪಸ್ಥಿತಿ ಇನ್ನೊಬ್ಬರಲ್ಲೂ ಉಪಸ್ಥಿತವಿಲ್ಲ ಎಂಬುದನ್ನು ಇಲ್ಲಿ ಖಾತ್ರಿಪಡಿಸಲಾಗುವುದಿಲ್ಲ.

ನೆಟ್ಟಿಗರು ತರವೇರಿ ಕಮೆಂಟ್
ಒಬ್ಬರು ಟ್ವೀಟ್‌ ಮಾಡಿರುವಂತೆ ಈ ರೀತಿಯ ಸೇವೆಯಲ್ಲಿ "ಒಬ್ಬ ಬ್ರಾಹ್ಮಣ ವರ ಎನ್ ಸಂಖ್ಯೆಗಳಷ್ಟು ಶೂನ್ಯಗಳನ್ನು ತನ್ನ ವೇತನವನ್ನಾಗಿ ಪಡೆಯುವ ಇನ್ನೊಬ್ಬ ಬ್ರಾಹ್ಮಣ ಹುಡುಗನನ್ನು ಹುಡುಕುತ್ತಾನೆ" ಎಂದು.

ಆದರೆ, ಮತ್ತೊಬ್ಬ ಟ್ವಿಟ್ಟರ್‌ ಬಳಕೆದಾರ , "ಜನರ ಇಷ್ಟಗಳನ್ನು ಗೌರವಿಸೋಣ, ಅವರು ತಮ್ಮ ಮುಂಡಗಳನ್ನೇ ತೋರಿಸಲಿ ಅಥವಾ ಇನ್ನೇನಾದರೂ ತೋರಿಸಲಿ ಇಲ್ಲವೆ ತಮಗೆ ಅನುಕೂಲವಾದ ರೀತಿಯಲ್ಲಿ ಮದುವೆಯಾಗಲಿ" ಎಂದು.

ಈ ಮಧ್ಯೆ ಮಗದೊಬ್ಬ ಟ್ವಿಟ್ಟರ್‌ ಬಳಕೆದಾರರು "ಭಾರತದ ಸರ್ವೋಚ್ಛ ನ್ಯಾಯಾಲಯವು ಒಂದೇ ಲಿಂಗದವರ ಮಧ್ಯದ ಸಂಬಂಧವನ್ನು ಅಪರಾಧ ಎಂದು ಹೇಳಿಲ್ಲವಾದರೂ ಅಂತಹ ಮದುವೆಗಳಿಗೆ ಇನ್ನೂ ಮನ್ನಣೆ ನೀಡಬೇಕಾಗಿದೆ" ಎಂದು ಗಮನಕ್ಕೆ ತರುತ್ತಾರೆ. ಹೀಗೆ ಸಾಕಷ್ಟು ಜನರು ತಮಗೆ ತಿಳಿದ ರೀತಿಯಲ್ಲಿ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾದಿ.ಕಾಂ ಬೆಳವಣಿಗೆ ಬಗ್ಗೆ ಕುತುಹಲ
ಈ ಮಧ್ಯೆ ಶನಿವಾರದಂದು ಹೈದರಾಬಾದ್‌ನಲ್ಲಿ ಇಬ್ಬರು ಸಲಿಂಗಿಗಳು ಅಧಿಕೃತವಾಗಿ ತಮ್ಮ ಬಂಧನವನ್ನು ಸ್ನೇಹಿತರು ಹಾಗೂ ಕುಟುಂಬದವರ ಮುಂದೆ ಪ್ರಮಾಣಿಕರಿಸಿಕೊಂಡ ಘಟನೆ ವರದಿಯಾಗಿದೆ. ಸುಪ್ರಿಯೋ ಚಕ್ರವರ್ತಿ (31) ಹಾಗೂ ಅಭಯ್ ದಾಂಗ್ (34) ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ತಮ್ಮ ಬೇಸುಗೆಯನ್ನು ಶಾಶ್ವತ ಮಾಡಿಕೊಂಡರು.

ಇದನ್ನೂ ಓದಿ: LGBTQ| ಸಲಿಂಗ ವಿವಾಹ ನಡೆಸಿಕೊಡುವ ಮಹಿಳಾ ಪುರೋಹಿತೆ..!

ಯಾವುದೇ ರೀತಿಯ ಮದುವೆಯ ವಿಧಿ-ವಿಧಾನಗಳು ನಡೆದಿಲ್ಲವಾದರೂ ಇಬ್ಬರೂ ಟಕ್ಸಿಡೋಗಳನ್ನು ಧರಿಸಿ ಬಂಗಾಳ ಹಾಗೂ ಪಂಜಾಬಿ ಸಂಪ್ರದಾಯಗಳು ವಿಜೃಂಭಿಸುವಂತೆ ಮಾಡಿದ್ದರು. ಇನ್ನು ಶಾದಿ.ಕಾಂ ತನ್ನ ಈ ಸೇವೆಯ ಮೂಲಕ ಭಾರತದಲ್ಲಿ ಈ ರೀತಿಯ ಮದುವೆಗೆ ಅನುಮೋದನೆ ದೊರಕುವಂತೆ ಮಾಡಲು ಶಕ್ತವಾಗುವುದೇ ಎಂಬುದನ್ನು ಕಾದು ನೋಡಬೇಕಷ್ಟೆ.
Published by:vanithasanjevani vanithasanjevani
First published: