ಕಳೆದ ಒಂದು ವರ್ಷದಲ್ಲಿ ಮೂವರಲ್ಲಿ ಒಬ್ಬರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ!

ಕಡಿಮೆ ಸಂಬಳ ಹಾಗೂ ನಿರುದ್ಯೋಗದಲ್ಲಿರುವವರಲ್ಲೇ ಸೆಕ್ಸ್​ ಮಾಡದೇ ಇರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅವರಲ್ಲಿ ಉಳಿದ ಬೇಸರ ಜೊತೆಗೆ ಇದು ಕೂಡ ಸೇರಿಕೊಂಡಿದೆ.

news18-kannada
Updated:June 24, 2020, 10:15 AM IST
ಕಳೆದ ಒಂದು ವರ್ಷದಲ್ಲಿ ಮೂವರಲ್ಲಿ ಒಬ್ಬರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ!
ಸಾಂದರ್ಭಿಕ ಚಿತ್ರ
  • Share this:
ಲೈಂಗಿಕ ಕ್ರಿಯೆ ಅನ್ನೋದು ತುಂಬಾನೆ ಪ್ರಮುಖವಾದುದು. ಕೆಲವರು ಮದುವೆ ನಂತರ ಸೆಕ್ಸ್​ ಮಾಡಿದರೆ ಇನ್ನೂ ಕೆಲವರು ಮದುವೆಗೂ ಮೊದಲೇ ಸೆಕ್ಸ್​ ಮಾಡುತ್ತಾರೆ. ಅಚ್ಚರಿ ವಿಚಾರ ಎಂದರೆ ಅಮೆರಿಕದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂವರಲ್ಲಿ ಒಬ್ಬರು ಸೆಕ್ಸ್​ಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲವಂತೆ.

25-34 ವರ್ಷದ ವಯಸ್ಸಿನವರು ಹೆಚ್ಚಾಗಿ ಸೆಕ್ಸ್​ ಮಾಡುತ್ತಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ. ಮತ್ತೊಂದು ಅಚ್ಚರಿ ವಿಚಾರ ಎಂದರೆ, ಕಡಿಮೆ ಸಂಬಳ ಹಾಗೂ ನಿರುದ್ಯೋಗದ ಸಮಸ್ಯೆ ಇರುವವರೇ ಸೆಕ್ಸ್​ನಲ್ಲಿ ಪಾಲ್ಗೊಳ್ಳದಿರುವುದೇ ಹೆಚ್ಚು ಎಂದು ಅಧ್ಯಯನ ಹೇಳಿದೆ.

4,291 ಪುರುಷರು ಹಾಗೂ 5213 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ವೇಳೆ ಅವರು ಎಷ್ಟು ದಿನಗಳ ಹಿಂದೆ ಸೆಕ್ಸ್​ ಮಾಡಿದ್ದರು ಹಾಗೂ ಅವರಿಗೆ ಎಷ್ಟು ಜನ ಸೆಕ್ಸ್​ ಪಾರ್ಟನರ್​ ಇದ್ದರು ಎನ್ನುವ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು.

ಸೆಕ್ಸ್ ಅನ್ನೋದು ತುಂಬಾನೇ ಪ್ರಮುಖವಾದುದು. ಇದು ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ಹೀಗಾಗಿ, ಸೆಕ್ಸ್​ ಮಾಡುವುದರಿಂದ ದೇಹದ ಆರೋಗ್ಯ ತುಂಬಾನೇ ಉತ್ತಮವಾಗಿರುತ್ತದೆ ಅನ್ನೋದು ವೈದ್ಯರ ಸೂಚನೆ.

ಕಡಿಮೆ ಸಂಬಳ ಹಾಗೂ ನಿರುದ್ಯೋಗದಲ್ಲಿರುವವರಲ್ಲೇ ಸೆಕ್ಸ್​ ಮಾಡದೇ ಇರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅವರಲ್ಲಿ ಉಳಿದ ಬೇಸರ ಜೊತೆಗೆ ಇದು ಕೂಡ ಸೇರಿಕೊಂಡಿದೆ. ಹೀಗಾಗಿ, ಅಂಥವರು ಕೆಲವೊಮ್ಮೆ ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ವೈದ್ಯರು.
First published:June 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading