Sex in Video Conference: ವಿಡಿಯೋ ಕಾನ್ಫರೆನ್ಸ್​ನಲ್ಲಿ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ಜೋಡಿ: ವಿಡಿಯೋ ವೈರಲ್​

10 ಗಂಟೆಗೆ ಮೀಟಿಂಗ್​ ಆರಂಭವಾಗಿತ್ತು. ಮೀಟಿಂಗ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಬೆಡ್​ ಮೇಲೆ ಮಲಗಿ ಹುಡುಗಿ ಜೊತೆ ಸೆಕ್ಸ್​ ಮಾಡಲು ಆರಂಭಿಸಿದ್ದ. ಈ ವೇಳೆ ಅನೇಕ ಹಿರಿಯ ನಾಯಕರು ವಿಡಿಯೋ ಕಾಲ್​​ನಲ್ಲಿ ಇದ್ದರು.

news18-kannada
Updated:August 21, 2020, 12:02 PM IST
Sex in Video Conference: ವಿಡಿಯೋ ಕಾನ್ಫರೆನ್ಸ್​ನಲ್ಲಿ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ಜೋಡಿ: ವಿಡಿಯೋ ವೈರಲ್​
ಸಾಂದರಭಿಕ ಚಿತ್ರ
  • Share this:
ಕೊರೋನಾ ವೈರಸ್​ ಇರುವುದರಿಂದ ಅನೇಕರು ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಮೀಟಿಂಗ್​ ಮಾಡುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್​ನಲ್ಲಿ ಕೆಲವೊಮ್ಮೆ ಮಕ್ಕಳು, ಹೆಂಡತಿ ಕಾಣಿಸಿಕೊಳ್ಳುವುದು ಹೊಸ ವಿಚಾರ ಏನಲ್ಲ. ಈ ರೀತಿಯ ಸಾಕಷ್ಟು ವಿಡಿಯೋಗಳು ಈ ಮೊದಲು ವೈರಲ್​​ ಆಗಿದೆ.  ಆದರೆ, ಇಲ್ಲೋರ್ವ ವ್ಯಕ್ತಿ ವಿಡಿಯೋ ಕಾನ್ಫರೆನ್ಸ್​ ಮಾಡುವಾಗಲೇ ಸೆಕ್ಸ್​ ಮಾಡಿದ್ದಾನೆ! ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಬ್ರೆಜಿಲ್​ನ ಸೋಷಿಯಲಿಸಂ ಆಂಡ್​ ಲಿಬರ್ಟಿ ಪಕ್ಷ ವಿಡಿಯೋ ಮೀಟಿಂಗ್​ ಕರೆದಿತ್ತು. ಮೀಟಿಂಗ್​ ವೇಳೆ ವ್ಯಕ್ತಿಯೋರ್ವ ಕ್ಯಾಮೆರಾವನ್ನು ಆಫ್​ ಮಾಡಲು ಮರೆತು ಸೆಕ್ಸ್​ ಮಾಡಿದ್ದಾನೆ. ವಿಡಿಯೋದಲ್ಲಿ ಸೆಕ್ಸ್​ ಮಾಡುತ್ತಿರುವ ದೃಶ್ಯ ಕಂಡ ಹೊರತಾಗಿಯೂ ಮೀಟಿಂಗ್​ ಮುಂದುವರಿಸಲಾಗಿದೆ.

10 ಗಂಟೆಗೆ ಮೀಟಿಂಗ್​ ಆರಂಭವಾಗಿತ್ತು. ಮೀಟಿಂಗ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಬೆಡ್​ ಮೇಲೆ ಮಲಗಿ ಹುಡುಗಿ ಜೊತೆ ಸೆಕ್ಸ್​ ಮಾಡಲು ಆರಂಭಿಸಿದ್ದ. ಈ ವೇಳೆ ಅನೇಕ ಹಿರಿಯ ನಾಯಕರು ವಿಡಿಯೋ ಕಾಲ್​​ನಲ್ಲಿ ಇದ್ದರು. ನಗರದ ಕೌನ್ಸಿಲರ್​ಗಳಿಗಾಗಿ ಈ ಸಭೆ ಕರೆಯಲಾಗಿತ್ತು. ಆದರೆ, ಮೀಟಿಂಗ್ ವೇಳೆ ಸೆಕ್ಸ್​ ಮಾಡಿರುವುದು ಕೌನ್ಸಿಲರ್ ಅಲ್ಲ ಎಂದು ತಿಳಿದು ಬಂದಿದೆ.



ಸಭೆಯ ಮಧ್ಯೆ ಈ ರೀತಿ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ತಕ್ಷಣವೇ ನಾವು ಅದನ್ನು ನಿರ್ಲಕ್ಷ್ಯ ಮಾಡುವಂತೆ ಸೂಚನೆ ನೀಡಿದ್ದೇವೆ. ದುರದ್ದೇಶ ಇಟ್ಟುಕೊಂಡು ಯಾರೋ ಈ ರೀತಿ ಮಾಡಿದ್ದಾರೆ ಎಂದು ಸೋಷಿಯಲಿಸಂ ಆಂಡ್​ ಲಿಬರ್ಟಿ ಪಕ್ಷದ ನಾಯಕರು ಹೇಳಿದ್ದಾರೆ. ಕೆಲವರು ಈ ದೃಶ್ಯವನ್ನು ರೆಕಾರ್ಡ್​ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Published by: Rajesh Duggumane
First published: August 20, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading