SET FOR LIFE: ಕೆಲಸ ಮಾಡದೆ ಈತನಿಗೆ ಪ್ರತಿ ತಿಂಗಳು ಸಿಗಲಿದೆ 8 ಲಕ್ಷ ರೂ..!

ಬ್ರಿಟನನ್ ಸರ್ಕಾರ ಕೆಲದಿನಗಳ ಹಿಂದೆಯಷ್ಟೇ ಹೊಸ ಮಾದರಿಯ ಲಾಟರಿ ಸ್ಕೀಂ ಪ್ರಾರಂಭಿಸಿತ್ತು. ಇದಕ್ಕೆ ನ್ಯಾಷನಲ್​ ಲಾಟರಿ ಸೆಟ್​ ಫರ್ ಲೈಫ್ ಎಂದು ಹೆಸರಿಡಲಾಗಿತ್ತು. ಇದೀಗ ಇದೇ ಅವಕಾಶದ ಮೂಲಕ ವ್ಯಕ್ತಿಯೊಬ್ಬರು ತನ್ನ ಲೈಫ್ ಸೆಟ್ ಮಾಡಿಕೊಂಡಿದ್ದಾರೆ.

zahir | news18-kannada
Updated:August 7, 2019, 5:57 PM IST
SET FOR LIFE: ಕೆಲಸ ಮಾಡದೆ ಈತನಿಗೆ ಪ್ರತಿ ತಿಂಗಳು ಸಿಗಲಿದೆ 8 ಲಕ್ಷ ರೂ..!
ಡೀನ್ ವೇಮ್ಸ್
  • Share this:
ಅದೃಷ್ಟ ಒಂದಿದ್ದರೆ ಅದೇನು ಬೇಕಾದರೂ ನಡೆಯಬಹುದು. ಅದು ಲಾಟರಿ ವಿಷಯದಲ್ಲೂ ಅನ್ವಯ. ಆದರೆ ಲಾಟರಿ ಟಿಕೆಟ್​ ಕೊಂಡವರನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದೃಷ್ಟ ಖುಲಾಯಿಸಿದವರಿಗಿಂತ ಅಲ್ಲಿ ನತದೃಷ್ಟರೇ ಹೆಚ್ಚು. ಇಲ್ಲಿ ಒಂದೇ ಒಂದು ಟಿಕೆಟ್​ನಿಂದ ಕೋಟ್ಯಾಧಿಪತಿ ಆದವರೂ ಇರುತ್ತಾರೆ, ಲಾಟರಿಯನ್ನೇ ನಂಬಿ ಜೀವನವನ್ನೇ ಹಾಳು ಮಾಡಿಕೊಂಡವರು ಕಾಣ ಸಿಗುತ್ತಾರೆ. ಆದರೆ ಒಂದು ಟಿಕೆಟ್​ ಜೀವನ ಪರ್ಯಂತ ಅದೃಷ್ಟ ತಂದುಕೊಟ್ಟರೆ..? ಅಚ್ಚರಿ ಎನಿಸಿದರೂ ಇದು ನಿಜವಾಗಿದೆ.

ಬ್ರಿಟನನ್ ಸರ್ಕಾರ ಕೆಲದಿನಗಳ ಹಿಂದೆಯಷ್ಟೇ ಹೊಸ ಮಾದರಿಯ ಲಾಟರಿ ಸ್ಕೀಂ ಪ್ರಾರಂಭಿಸಿತ್ತು. ಇದಕ್ಕೆ ನ್ಯಾಷನಲ್ ಲಾಟರಿ ಸೆಟ್​ ಫರ್ ಲೈಫ್ ಎಂದು ಹೆಸರಿಡಲಾಗಿತ್ತು. ಇದೀಗ ಇದೇ ಅವಕಾಶದ ಮೂಲಕ ವ್ಯಕ್ತಿಯೊಬ್ಬರು ತನ್ನ ಲೈಫ್ ಸೆಟ್ ಮಾಡಿಕೊಂಡಿದ್ದಾರೆ.

ಅಮೆಜಾನ್​ನಲ್ಲಿ ಕೆಲಸ ಮಾಡುತ್ತಿರುವ ಡೀನ್ ವೇಮ್ಸ್ ಎಂಬ ವ್ಯಕ್ತಿ ಇಂತಹದೊಂದು ಅದೃಷ್ಟಕ್ಕೆ ಪಾತ್ರರಾದವರು. 24ರ ಹರೆಯದ ವೇಮ್ಸ್​ ಕೆಲ ದಿನಗಳ ಹಿಂದೆಯಷ್ಟೇ 3.6 ಮಿಲಿಯನ್ ಪೌಂಡ್​ ಬಹುಮಾನದ ಲಾಟರಿಯನ್ನು ಖರೀದಿಸಿದ್ದರು. ಇದೇ ನಂಬರ್​ಗೆ ಈಗ ಜಾಕ್​ಪಾಟ್ ಹೊಡೆದಿದೆ. ಈ ಲಾಟರಿ ಟಿಕೆಟ್​ ಬಹುಮಾನವನ್ನು ಪ್ರತಿ ತಿಂಗಳು ಸ್ಕೀಂನಂತೆ ನೀಡಲಾಗುತ್ತದೆ.

ಅದರಂತೆ ಮುಂದಿನ 30 ವರ್ಷಗಳ ಕಾಲ ಸರ್ಕಾರ ಡೀನ್ ವೇಮ್ಸ್ ​ಗೆ ಪ್ರತಿ ತಿಂಗಳು 10 ಸಾವಿರ ಪೌಂಡ್ ನೀಡಲಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ ತಿಂಗಳಿಗೆ 8.60 ಲಕ್ಷ ರೂ. ಹೀಗಾಗಿ ಡೀನ್ ಮುಂದಿನ 30 ವರ್ಷಗಳ ಕಾಲ ಕೆಲಸ ಮಾಡದಿದ್ದರೂ ಚಿಂತೆಯಿಲ್ಲ.

ಆದರೆ ಇಷ್ಟೊಂದು ದೊಡ್ಡ ಬಹುಮಾನ ಬಂದಿರುವ ಖುಷಿಯಲ್ಲಿರುವ ಡೀನ್ ವೇಮ್ಸ್ , ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಸಹೋದರನಿಗೆ ನೆರವಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ದುಡ್ಡಿನಿಂದ ಒಂದಷ್ಟು ಕ್ರಿಯೇಟಿವ್ ಕೆಲಸಗಳಿಗೂ ಕೈ ಹಾಕಲಿದ್ದಾರಂತೆ.

ಏಕೆಂದರೆ ವೇಮ್ಸ್ ಅಮೆಜಾನ್​ನಲ್ಲಿ ಎಂಟರ್ಟೈನ್ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದು, ಸಿನಿಮಾ, ವೆಬ್ ಸಿರೀಸ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಆರ್ಥಿಕವಾಗಿ ಬಲಿಷ್ಠನಾಗಿರುವುದರಿಂದ ಜೀವನದ ಕೆಲ ಇಚ್ಛೆಗಳನ್ನು ಪೂರೈಸಲು ಕಾತುರನಾಗಿರುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಒಂದು ಲಾಟರಿ ಟಿಕೆಟ್ ಕೆಲವರ ಜೀವನ ಬದಲಿಸಿದರೆ, ಡೀನ್ ವೇಮ್ಸ್ ಅವರ ಭವಿಷ್ಯದ ಚಿಂತೆಯನ್ನೇ ದೂರ ಮಾಡಿದೆ ಎನ್ನಬಹುದು.

ಇದನ್ನೂ ಓದಿ: ಕೆ.ಜಿ.ಎಫ್​  ತಂಡದ ಹೊಸ ಚಿತ್ರಕ್ಕೆ ವಿನಯ್ ರಾಜ್​ಕುಮಾರ್ ನಾಯಕ
Loading...


First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...