ಪತಿ–ಪತ್ನಿ ಚೆನ್ನಾಗಿದ್ದರೆ ಮಾತ್ರ ನನೆಮ್ಮದಿಯಿಂದ ಬದುಕಲು ಸಾಧ್ಯ. ಆದರೆ ಕೆಲವು ದಂಪತಿಗಳು ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆ ಮಾಡುತ್ತಾರೆ. ಇನ್ನು ಕೆಲವರು ಸಣ್ಣ ವಿಚಾರದಿಂದ ಗಲಾಟೆ ಪ್ರಾರಂಭವಾಗಿ ಡೈವರ್ಸ್ (Divorce) ಮೂಲಕ ಕೊನೆಗೊಳ್ಳುವುದು ಇದೆ. ಆದರೆ ಇಲ್ಲೊಂದು ಘಟನೆ ಬೆಚ್ಚಿ ಬೀಳಿಸುವಂತಿದೆ. ಅದೇನೆಂದರೆ ಹೆಂಡತಿ (Wife) ಮತ್ತು ಗಂಡನ (Husband) ನಡುವೆ ಗಲಾಟೆಯಾಗಿ(Uproar). ಕೊನೆಗೆ ಬೇಸತ್ತ ಹೆಂಡತಿ ಗಂಡನನ್ನೇ ಕೊಳ್ಳುತ್ತಾಳೆ. ಅಷ್ಟೇ ಏಕೆ ಗಂಡನ ದೇಹವನ್ನು ತುಂಡರಿಸಿ, ಬಾಣಲೆಗೆ (Skillet) ಹಾಕಿ ಕುದಿಸುತ್ತಾಳೆ. ಈ ಘಟನೆ ನಡೆದಿರವುದು ವಿದೇಶದಲ್ಲಾದರು. ಗಂಡ- ಹೆಂಡತಿ ನಡುವೆ ಯಾವ ವಿಚಾರಕ್ಕೆ ಗಲಾಟೆ ಪ್ರಾರಂಭವಾಗಿದೆ ಎಂದು ತಿಳಿದರೆ ನೀವು ಅಚ್ಚರಿ ಪಡೋದರಲ್ಲಿ ಅನುಮಾನವೇ ಇಲ್ಲ.
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಆದರೆ ಇಲ್ಲಿ ಗಂಡ ಹೆಂತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿಗೆ ಹೇಗೆ ಮನಸ್ಸು ಬಂದಿದೆಯೋ ಏನೋ ತನ್ನ ಗಂಡನನ್ನು ಕೊಂದಿದ್ದಾಳೆ. ಗಂಡನ ಮೇಲೆ ವಿಪರೀತ ಕೋಪ ಇದ್ದ ಆಕೆ ಕೊಂದಿರುವುದು ಮಾತ್ರವಲ್ಲದೆ, ಆ ದೇಹವನ್ನು ಬೇಯಿಸಿದ್ದಾಳೆ ಎಂದರೆ ನಂಬಲು ಅಸಾಧ್ಯ.
ಗಂಡ- ಹೆಂಡತಿ ನಡುವೆ ಜಗಳ ಬಂದಾಗ ಇಬ್ಬರಲ್ಲಿ ಒಬ್ಬರು ಸುಮ್ಮನಾಗಿ ಬಿಡಬೇಕು. ಆದರೆ ಇಲ್ಲಿ ಜಗಳಕ್ಕೆ ಮತ್ತು ಹೆಂಡತಿಯ ಕೋಪಕ್ಕೆ ಕಾರಣವಾಗಿರುವುದು ಸೋಮಾರಿ ಗಂಡ. ಆತ ಯಾವುದೇ ಕೆಲಸ ಮಾಡದೇ ಎಲ್ಲಾ ಕೆಲಸವನ್ನು ಪತ್ನಿ ಮಾಡಲು ಹೇಳುತ್ತಿದ್ದ. ಇದರಿಂದ ಆಕೆ ಬೇಸತ್ತು ಕೊಲೆ ಮಾಡಿದ್ದಾಳೆ.
ಕೊಲೆ ಆರೋಪಿ ತೆರೇಸಾ ತನ್ನ ಸೋಮಾರಿ ಪತಿಯಿಂದ ಬೇಸತ್ತು ಕೊಲೆ ಮಾಡಿದ್ದಾಳೆ. ಮೊದಲು ಪತಿಗೆ ಡ್ರಗ್ಸ್ ನೀಡಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾಳೆ. ಆ ಬಳಿಕ ಆತನನ್ನು ಕೊಲೆ ಮಾಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಪತ್ನಿ ಆತ ಗಂಡ ಎಂದು ಅಂದುಕೊಳ್ಳದೆ ಆತನ ದೇಹವನ್ನು ತುಂಡರಿಸಿ, ದೊಡ್ಡ ಬಾಣಲೆಯಲ್ಲಿ ಕುದಿಸಿದ್ದಾಳೆ.
ಇದನ್ನೂ ಓದಿ: Elon Musk Twitter: ಸದ್ಯ ಟ್ವಿಟರ್ ಖರೀದಿಸಲ್ಲ ಎಂದ ಎಲಾನ್ ಮಸ್ಕ್! ಶಾಕಿಂಗ್ ಹೇಳಿಕೆಗೆ ಏನು ಕಾರಣ?
ಅಂದಹಾಗೆಯೇ ಈ ಘಟನೆ ನಡೆದಿರಿವುದು ಸರ್ಬಿಯಾದಲ್ಲಿ. ಜರಾಂಜನಿನ್ ಎಂಬಾತ ಪತ್ನಿಯಿಂದ ಸಾವನ್ನಪ್ಪಿದ್ದಾನೆ. ಮೇ 10 ರಂದು ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ಸಿಟ್ಟಿಗೆದ್ದ ಮಹಿಳೆ ಒಂಟಿಯಾಗಿ ಊಟ ಮಾಡುತ್ತಿದ್ದ ಪತಿಯನ್ನು ಕೊಂದಿದ್ದಾಳೆ.
ಮಗಳು ಸಾಕ್ಷಿ ಹೇಳಿದಳು
ತೆರೇಸಾ ಈ ಕೊಲೆ ನಡೆಸಿದಾಗ ಆಕೆಯ ಮಗಳು ಡಿ'ಎಲ್ಜೆ ಕೂಡ ಅಲ್ಲಿದ್ದಳು. ಮಗಳು ತನ್ನ ತಾಯಿಯ ವಿರುದ್ಧ ದೂರು ಹೇಳಿದ್ದಾಳೆ. ನಡೆದ ಘಟನೆಯನ್ನು ವಿವರವಾಗಿ ಹೇಳಿದ್ದಾಳೆ. ತಾಯಿ ತನ್ನ ತಂದೆಯನ್ನು ಹೇಗೆ ಕೊಂದಳು ಎಂದು ಕಣ್ಣಾರೆ ಕಂಡ ಮಗಳು. ವಿಚಾರಣೆ ವೇಳೆ ಸತ್ಯವನ್ನು ಹೇಳಿದ್ದಾಳೆ.
ಇದನ್ನೂ ಓದಿ: Online Scam: 100 ರೂ. ಲಿಪ್ಸ್ಟಿಕ್ ಕೊಳ್ಳುವ ಭರದಲ್ಲಿ ಕಳೆದುಕೊಂಡಿದ್ದು ಲಕ್ಷ ಲಕ್ಷ!
ಅಂದಹಾಗೆಯೇ ತೆರೇಸಾ ಅವರ ಮೊದಲ ಗಂಡನ ಮಗಳು ಡಿ'ಎಲ್ಜೆ. ಆಕೆ ತನ್ನ ಮಲತಂದೆಯ ಕೊಲೆಯನ್ನು ತನ್ನ ಕಣ್ಣುಗಳಿಂದ ನೋಡಿದ್ದಾಳೆ. ಕೊಲೆಯಾದ ಸಂದರ್ಭದಲ್ಲಿ ಮಲತಂದೆ ಕುಡಿದ ಅಮಲಿನಲ್ಲಿದ್ದರು ಎಂದು ಹೇಳಿದ್ದಾಳೆ. ತಂದೆ ಮಾತ್ರ ತಾನು ಅಪಾಯದಲ್ಲಿರುವುದು ಗೊತ್ತಾಗಿ ಅರಚುತ್ತಾ ಓದುತ್ತಿದ್ದರು. ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದ ತಂದೆಯನ್ನು ಚಿಕ್ಕಮ್ಮ ಚಾಕುವಿನಿಂದ ನಿರಂತರವಾಗಿ ಇರಿದಿದ್ದಾಳೆ.
ಹೆಂಡತಿ ಸೋಮಾರಿ ಗಂಡನನ್ನು ಕೊಂದೇ ಬಿಟ್ಟ ಹೆಂಡತಿ
ಪತಿಯ ಸೋಮಾರಿತನದಿಂದ ಬೇಸತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಅವಳ ಪತಿ ಅವಳಿಗೆ ಮನೆಯ ಕೆಲಸಗಳಲ್ಲಿ ಸ್ವಲ್ಪವೂ ಸಹಾಯ ಮಾಡುತ್ತಿರಲಿಲ್ಲ. ಇದರಿಂದಾಗಿ ಇಬ್ಬರೂ ಜಗಳವಾಡುತ್ತಿದ್ದರು. ದಂಪತಿಗಳ ಜಗಳ ಅಕ್ಕಪಕ್ಕದ ಮನೆಯವರಿಗೂ ಕೇಳಿಸಿತ್ತು. ಇತ್ತೀಚೆಗಷ್ಟೇ ತೆರೇಸಾ ಮಲಗಿದ್ದ ಪತಿಯ ಹಾಸಿಗೆಗೆ ಬೆಂಕಿ ಹಚ್ಚಿದ್ದಳು. ಈ ಘಟನೆಯಲ್ಲಿ ಗಂಡನ ಪ್ರಾಣ ಉಳಿಯಿತು. ಆದರೆ ಈ ಬಾರಿ ಪತಿ ಬದುಕಲು ಸಾಧ್ಯವಾಗಲಿಲ್ಲ. ಸದ್ಯ ತೆರೆಸಾ ಪೊಲೀಸರ ವಶದಲ್ಲಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ