Trending| 1 ರೂ. ಕುಲ್ಫಿ ಐಸ್‌ಕ್ರೀಮ್ ವ್ಯಾಪಾರವನ್ನು 6 ಕೋಟಿ ವ್ಯವಹಾರವನ್ನಾಗಿ ಮಾರ್ಪಡಿಸಿದ ಬಿಸ್‌ನೆಸ್ ಯಶೋಗಾಥೆ

ಉದ್ಯೋಗಕ್ಕಾಗಿ ಸಾಕಷ್ಟು ಸುತ್ತಾಡಿ ಚಿತ್ರ ವಿಚಿತ್ರ ಉದ್ಯೋಗಗಳಲ್ಲಿ ತೊಡಗಿಕೊಂಡು ಹಾಗೂ ಹೀಗೂ ಕಾಲ ತಳ್ಳಿದ ರಾಮ್ ಬಾಬು ತಮ್ಮದೇ ಆದ ಬಿಸ್‌ನೆಸ್ ಮಾಡಬೇಕೆಂದು ನಿರ್ಧರಿಸಿದರು.

ಐಸ್​ಕ್ರೀಂ ಫ್ಯಾಕ್ಟರಿ

ಐಸ್​ಕ್ರೀಂ ಫ್ಯಾಕ್ಟರಿ

  • Share this:
    1978 ರಲ್ಲಿ 18 ರ ಹರೆಯದ ರಾಜಸ್ಥಾನ ನಿವಾಸಿ ರಾಮ್‌ಬಾಬು ಸೇನೆ ನೇಮಕಾತಿ ಸಂದರ್ಶನದಲ್ಲಿ ಹಾಜರಾಗಲು ಬೆಳಗಾಂಗೆ (Belagavi) ಬಂದಿಳಿದರು. ನೇಮಕಾತಿ ಸಂದರ್ಶನಲ್ಲಿ ಎಲ್ಲಾ ಸುತ್ತುಗಳನ್ನು ರಾಮ್ ಬಾಬು ಯಶಸ್ವಿಯಾಗಿ ನಿರ್ವಹಿಸಿದರೂ ಸೇನೆಗೆ (Indian Army) ಸೇರಲು ಅವರಿಗೆ ತಮ್ಮ ತಂದೆಯಿಂದ ಅನುಮತಿ ದೊರೆಯಲಿಲ್ಲ ಅಂತೆಯೇ ಬೇರೆ ಉದ್ಯೋಗವನ್ನು ಹುಡುಕುವಂತೆ ತಂದೆ ರಾಮ್ ಬಾಬುವಿಗೆ ಹೇಳಿದರು. ಇದರಿಂದ ತುಂಬಾ ನಿರಾಶೆಗೊಂಡ ರಾಮ್‌ಬಾಬು ಊರಿಗೆ ಮರಳಿ ಹೋಗಬಾರದೆಂದು ನಿರ್ಧರಿಸಿದರು. ಉದ್ಯೋಗಕ್ಕಾಗಿ ಸಾಕಷ್ಟು ಸುತ್ತಾಡಿ ಚಿತ್ರ ವಿಚಿತ್ರ ಉದ್ಯೋಗಗಳಲ್ಲಿ ತೊಡಗಿಕೊಂಡು ಹಾಗೂ ಹೀಗೂ ಕಾಲ ತಳ್ಳಿದ ರಾಮ್ ಬಾಬು ತಮ್ಮದೇ ಆದ ಬಿಸ್‌ನೆಸ್ (Business) ಮಾಡಬೇಕೆಂದು ನಿರ್ಧರಿಸಿದರು ಹಾಗೇ ಅತ್ಯಂತ ಪ್ರಿಯವಾದ ಸಿಹಿತಿಂಡಿಗಳಲ್ಲಿ ಒಂದಾದ ಐಸ್‌ಕ್ರೀಂ ಉದ್ಯಮಕ್ಕೆ ಕೈಹಾಕಬೇಕೆಂಬ ಆಶಯದೊಂದಿಗೆ ವ್ಯಾಪಾರ ನಡೆಸಲು ಮುಂದಾದರು.

    ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕದ ಮೂರು ರಾಜ್ಯಗಳಲ್ಲಿ ಇಂದು ಐಕಾನ್ ಬ್ರ್ಯಾಂಡ್ ಆಗಿರುವ ಹಳೆಯ ಮುಂಬೈ ಐಸ್ ಕ್ರೀಮ್ ಕಂಪನಿಯ ಆರಂಭವಾಗಿತ್ತು. ವರ್ಷದಿಂದ ವರ್ಷಕ್ಕೆ ರೂ 6 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ಈ ಐಸ್ ಕ್ರೀಮ್ ಬ್ರ್ಯಾಂಡ್ ಪ್ರತಿ ದಿನ 5 ಟನ್‌ಗಿಂತ ಹೆಚ್ಚು ಐಸ್ ಕ್ರೀಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿತ್ತು.

    ಪ್ರಸ್ತುತ ವ್ಯಾಪಾರ ನಡೆಸುತ್ತಿರುವ ರಾಮ್‌ಬಾಬು ಅವರ ಪುತ್ರ ನೇತ್ರಪಾಲ್ ರಾಮ್ ಬಾಬು ಶರ್ಮಾ (37) ಹೇಳುತ್ತಾರೆ, “ಹಳ್ಳಿಗರೆಲ್ಲರಿಗೂ ನನ್ನ ತಂದೆ ಸೈನ್ಯಕ್ಕೆ ಸೇರುವುದಾಗಿ ಹೇಳಿಕೊಂಡಿದ್ದರು. ಆದರೆ ನನ್ನ ತಾತ ಅವರಿಗೆ ಸೇನೆಗೆ ಸೇರಲು ಒಪ್ಪಿಗೆ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ತಂದೆಯವರು ಜೀವನದಲ್ಲಿ ಏನನ್ನಾದರೂ ಸಾಧಿಸುವವರೆಗೂ ಹಳ್ಳಿಗೆ ಮರಳುವುದಿಲ್ಲವೆಂದು ಪಣ ತೊಟ್ಟರು ಎಂದು ಹೇಳುತ್ತಾರೆ.

    ಅವರ ಕಾಲಘಟ್ಟದ ಸುಮಾರು ಜನರಂತೆಯೇ ರಾಮ್‌ಬಾಬು ಕೂಡ ಕನಸುಗಳ ಮೂಟೆ ಹೊತ್ತು ಕನಸಿನ ನಾಡು ಮುಂಬೈಗೆ ಪ್ರಯಾಣಿಸಿದರು. ಜೀವನ ನಾವಂದುಕೊಂಡಷ್ಟು ಸುಲಭವಲ್ಲ ಎಂದು ನೇತ್ರಪಾಲ್ ಹೇಳುತ್ತಾರೆ. ತಂದೆಯವರು ನಗರದಲ್ಲಿ ಜೀವನ ನಡೆಸುವುದಕ್ಕಾಗಿ ಬೇರೆ ಬೇರೆ ಉದ್ಯೋಗಗಳನ್ನು ಮಾಡಿದರು. ಮುಂದೊಂದು ದಿನ ತಾನು ಯಶಸ್ವಿ ಉದ್ಯೋಗಿಯಾಗಬೇಕೆಂಬ ಹಂಬಲದಿಂದ ಪ್ರಯಾಸಪಟ್ಟರು ಎಂದು ನೇತ್ರಪಾಲ್ ಹೇಳುತ್ತಾರೆ.

    ಐಸ್‌ಕ್ರೀಮ್ ಉದ್ಯಮದಲ್ಲಿ ಯಶಸ್ಸು;

    ಮುಂಬೈನಲ್ಲಿ ಕಾಲಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ಐಸ್ ಕ್ರೀಮ್ ಮಾರಾಟಗಾರರು ತಮ್ಮ ತಲೆಯ ಮೇಲೆ ದೊಡ್ಡ ಪಾತ್ರೆಗಳನ್ನು ಹೊತ್ತುಕೊಂಡು ಹೋಗುವುದನ್ನು ನೋಡಿದರು. ಇದು ರಾಮ್‌ಬಾಬುವಲ್ಲಿ ಕುತೂಹಲವ್ನುಂಟು ಮಾಡಿತು ಹಾಗೂ ಸ್ವತಃ ರಾಮ್‌ಬಾಬು ಅವರೇ ಗೇಟ್‌ವೇ ಆಫ್ ಇಂಡಿಯಾದಲ್ಲಿ ಐಸ್ ಕ್ರೀಮ್‌ಗಳನ್ನು ಮಾರಾಟ ಮಾಡುವ ಕೆಲಸವನ್ನು ಕೈಗೊಂಡರು. ನೇತ್ರಪಾಲ್ ಹೇಳುತ್ತಾರೆ, ತಂದೆಯವರು ಮಾಡಿದ ಐಸ್‌ಕ್ರೀಮ್ ಉದ್ಯಮದಲ್ಲಿ ಹೆಚ್ಚಿನವು ಸ್ಟಿಕ್ ಐಸ್‌ಕ್ರೀಮ್‌ಗಳಾಗಿದ್ದವು. ಅವರು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಈ ಉದ್ಯಮವನ್ನು ನಡೆಸಿದರು. ಆದರೆ ಇದರಿಂದ ಹೆಚ್ಚು ಹಣ ಸಂಪಾದಿಸಲು ಸಾಧ್ಯವಿಲ್ಲ ಎಂಬುದನ್ನು ತಂದೆ ಕಂಡುಕೊಂಡರು. ಹಾಗಾಗಿ 1980 ರಲ್ಲಿ ಅವರು ಇಚಲಕರಂಜಿ [ಮಹಾರಾಷ್ಟ್ರ] ಕ್ಕೆ ತೆರಳಿದರು, ಅಲ್ಲಿ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

    ಸ್ಟುಡಿಯೋದಲ್ಲಿನ ಕೆಲಸದೊಂದಿಗೆ ಸಂಜೆಯವರೆಗೆ ದುಡಿಯುವುದರ ಜೊತೆಗೆ ಹೆಚ್ಚಿನ ಹಣವನ್ನು ಗಳಿಸಲು ಅವರು ಇನ್ನೊಂದು ಕೆಲಸವನ್ನು ಮಾಡುತ್ತಿದ್ದರು. ಆದರೆ ಈ ಎರಡೂ ಉದ್ಯೋಗವು ಅವರು ಬಯಸಿದ್ದ ಖುಷಿಯನ್ನು ಅವರಿಗೆ ನೀಡಲಿಲ್ಲ ಎಂದು ನೇತ್ರಪಾಲ್ ಹೇಳುತ್ತಾರೆ. ಇದೇ ಸಮಯದಲ್ಲಿ ಜಂಬಾ ಚೌಕ್ ಎಂಬ ಜಂಕ್ಷನ್‌ನಲ್ಲಿ ರಾಮ್‌ಬಾಬು ಜನಸಂದಣಿಯನ್ನು ವೀಕ್ಷಿಸುತ್ತಿರುವಾಗ ಐಸ್ ಕ್ರೀಮ್‌ಗಳನ್ನು ಮಾರಾಟ ಮಾಡುವ ಆಲೋಚನೆ ಮರುಕಳಿಸಿತು.

    ಸಂಜೆ ಐದರವರೆಗೆ ಸ್ಟುಡಿಯೋದಲ್ಲಿ ಕೆಲಸ ಮಾಡಿದರು ನಂತರ ಒಂದು ಸಣ್ಣ ಮಿನಿ ವ್ಯಾನ್ ಅನ್ನು ಬಾಡಿಗೆಗೆ ತೆಗೆದುಕೊಂಡು ಪ್ರತೀದಿನ ಸಂಜೆ 6 ರಿಂದ ಮಧ್ಯರಾತ್ರಿಯವರೆಗೆ ವ್ಯಾನ್ ಅನ್ನು ಜನತಾ ಚೌಕ್‌ನಲ್ಲಿ ನಿಲ್ಲಿಸಿದರು. ಬೆಳಗ್ಗೆ ತಾವೇ ತಯಾರಿಸುತ್ತಿದ್ದ ಕುಲ್ಫಿಯನ್ನು ಅವರು ಮಾರಲು ಆರಂಭಿಸಿದರು. ಅವರು ಮಾರುತ್ತಿದ್ದ ಕುಲ್ಫಿ ಗುಣಮಟ್ಟದ್ದಾಗಿತ್ತು ಎಂದು ನೇತ್ರಪಾಲ್ ನೆನಪಿಸಿಕೊಳ್ಳುತ್ತಾರೆ.

    ರಾಮ್‌ಬಾಬು ಬಳಸಿದ್ದ ಕಡಾಯಿ ಹಾಗೂ ಕರಾಚಿಯನ್ನು ಇಚಲಕರಂಜಿಯ ಓಲ್ಡ್ ಮುಂಬೈ ಐಸ್ ಕ್ರೀಮ್ ಪ್ರಧಾನ ಕಚೇರಿಯಲ್ಲಿ ಸಂರಕ್ಷಿಸಿಡಲಾಗಿದೆ ಎಂದು ನೇತ್ರಪಾಲ್ ಹೇಳುತ್ತಾರೆ.

    ಮಧ್ಯಮ ವರ್ಗವನ್ನು ತಲುಪುವುದು;

    ರಾಮ್‌ಬಾಬು ಪ್ರತೀದಿನ 6 ಗಂಟೆಗೆ ಐಸ್‌ಕ್ರೀಮ್ ಕಾರ್ಯವನ್ನು ಆರಂಭಿಸುತ್ತಿದ್ದರು. ಎರಡು ಗಂಟೆ ಸಮಯವನ್ನು ತಯಾರಿಗೆ ವ್ಯಯಿಸಿ ಐಸ್‌ಕ್ರೀಮ್ ತಣ್ಣಗಾಲು ಬಿಟ್ಟು ಅವರು ಕೆಲಸಕ್ಕೆ ತೆರಳುತ್ತಿದ್ದರು. ಕೆಲಸದಿಂದ ಮರಳಿದ ನಂತರ ಈ ಐಸ್‌ಕ್ರೀಮ್‌ಗಳನ್ನು ಅವರು ಜನತಾ ಚೌಕ್‌ಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಈ ಸಮಯದಲ್ಲಿಯೇ ಈ ಕುಲ್ಫಿ ಶರ್ಮಾ ಜಿ ಕುಲ್ಫಿ ಎಂಬ ಹೆಸರನ್ನು ಪಡೆದುಕೊಂಡಿತು. ದಿನಕ್ಕೆ 50 ಕುಲ್ಫಿ ಮಾರಾಟ ಮಾಡುವುದರೊಂದಿಗೆ ಆರಂಭಿಸಿ ನಿಧಾನವಾಗಿ ಈ ಸಂಖ್ಯೆಯನ್ನು 300 ಕ್ಕೆ ತಂದರು. ಈ ಸಮಯದಲ್ಲಿ ಸ್ಟುಡಿಯೋ ಕೆಲಸವನ್ನು ತೊರೆಯಲು ತಂದೆ ನಿರ್ಧರಿಸಿದ್ದರು ಎಂದು ನೇತ್ರಪಾಲ್ ಹೇಳುತ್ತಾರೆ.

    1981 ರಲ್ಲಿ ಅವರು ಸಂಪೂರ್ಣ ಬಿಸ್‌ನೆಸ್ ಅನ್ನು ಔಪಚಾರಿಕಗೊಳಿಸಿದರು ಹಾಗೂ ಓಲ್ಟ್ ಮುಂಬೈ ಐಸ್‌ಕ್ರೀಮ್ ಎಂದು ಕರೆದರು. "ಹಳೆಯ ಬಾಂಬೆ ಪ್ರದೇಶದಲ್ಲಿ ಈ ಐಸ್ ಕ್ರೀಮ್‌ಗಳನ್ನು ಹೇಗೆ ತಯಾರಿಸಬೇಕೆಂದು ಅವರು ಕಲಿತಿದ್ದರಿಂದ, ಅವರು ಅದೇ ಹೆಸರನ್ನಿಡಲು ನಿರ್ಧರಿಸಿದರು" ಎಂದು ನೇತ್ರಪಾಲ್ ಹೇಳುತ್ತಾರೆ, "ಇದು ಕೇವಲ 2,000 ರೂ.ಗಳ ಹೂಡಿಕೆಯೊಂದಿಗೆ ಪ್ರಾರಂಭವಾಯಿತು, ಇಲ್ಲಿ ಕಡಾಯಿಗೆ ಹೆಚ್ಚಿನ ಖರ್ಚು ಮಾಡಲಾಯಿತು ಎಂದು ನೇತ್ರಪಾಲ್ ಹೇಳುತ್ತಾರೆ. ತನ್ನ ತಂದೆ ಜಾರಿಗೆ ತಂದ ಏಕೈಕ ನಿಜವಾದ ಪರಂಪರೆ "ಪ್ರಾಮಾಣಿಕತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವ ತತ್ವ" ಎಂದು ಅವರು ಹೇಳುತ್ತಾರೆ.

    ಸಾರ್ವಜನಿಕ ಬೇಡಿಕೆಯ ಮೇರೆಗೆ ಕೇವಲ ಕುಲ್ಫಿಯೊಂದಿಗೆ ಐಸ್‌ಕ್ರೀಮ್ ವ್ಯಾಪಾರ ಪ್ರಾರಂಭಿಸಿದ ರಾಮ್‌ಬಾಬು ಮಿಶ್ರ ಐಸ್ ಕ್ರೀಮ್ ಅನ್ನು ನೀಡಲು ಆರಂಭಿಸಿದರು, ಇದು ಗುಲ್ಕಂದ್ (ಗುಲಾಬಿ ದಳಗಳನ್ನು ಸಂರಕ್ಷಿಸಿ ತಯಾರಿಸಿದ ಸಿಹಿ), ಪಿಸ್ತಾ (ಪಿಸ್ತಾ), ಕಾಜು (ಗೋಡಂಬಿ) ಮತ್ತು ಮಾವಾ (ಖೋಯಾ) ಮಿಶ್ರಣವಾಗಿದೆ. "ಇದರೊಂದಿಗೆ ಅವರು ಕುಲ್ಫಿ ಮತ್ತು ಮಿಶ್ರಿತ ಐಸ್ ಕ್ರೀಮ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಿದರು, ಇವೆರಡೂ ದೊಡ್ಡ ಯಶಸ್ಸನ್ನೇ ತಂದುಕೊಟ್ಟಿತು" ಎಂದು ನೇತ್ರಪಾಲ್ ತಿಳಿಸಿದ್ದಾರೆ.

    ರಾಮ್‌ಬಾಬು ಐಸ್‌ಕ್ರೀಮ್ ಉದ್ಯಮಕ್ಕೆ ತೊಡಗಿಸಿಕೊಂಡ ಸಮಯದಲ್ಲಿ, ಐಸ್ ಕ್ರೀಂ ಅನ್ನು ಕೇವಲ ದೊಡ್ಡ ಮದುವೆಗಳಲ್ಲಿ ಮತ್ತು ಶ್ರೀಮಂತರ ಮನೆಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ರಾಮ್‌ಬಾಬುವಿನ ಐಸ್ ಕ್ರೀಮ್‌ಗಳ ಪರಿಚಯದೊಂದಿಗೆ, ಆ ಐಸ್‌ಕ್ರೀಮ್ ಟ್ರೆಂಡ್‌ನಲ್ಲಿ ಸ್ವಲ್ಪ ಬದಲಾವಣೆಯಾಯಿತು. "ನಾವು ಐಸ್‌ಕ್ರೀಮ್ ಅನ್ನು ಮಾರಾಟ ಮಾಡುತ್ತಿದ್ದ ಬೆಲೆಯು ನಮಗೆ ಧನಾತ್ಮಕ ಯಶಸ್ಸನ್ನು ತಂದುಕೊಟ್ಟಿತು. ಒಬ್ಬರು ನಮ್ಮಿಂದ 1 ರೂ.ಗೆ ಕುಲ್ಫಿಯನ್ನು ಖರೀದಿಸಬಹುದು ಹೀಗಾಗಿ ಮಧ್ಯಮ ವರ್ಗದ ಜನರಿಗೂ ಐಸ್‌ಕ್ರೀಮ್ ದೊರೆಯಲು ಲಭ್ಯವಾಯಿತು.

    ಒಂದು ದಿನವೂ ರಜೆ ತೆಗೆದುಕೊಳ್ಳದೆ ಪಟ್ಟುಬಿಡದೆ ಮಾಡಿದ ಐಸ್‌ಕ್ರೀಮ್ ಉದ್ಯೋಗಕ್ಕೆ ದೊಡ್ಡೆ ಹೊಡೆತ ಬಂದೆರಗಿತು. 1995 ರಲ್ಲಿ, ಇಚಲಕರಂಜಿಯಲ್ಲಿ ಅನಧಿಕೃತ ನಿಯಮ ಜಾರಿಗೆ ಬಂದಿತು ಹಾಗೂ ಈ ನಿಯಮದ ಪ್ರಕಾರ ಬೀದಿ ಬದಿ ವ್ಯಾಪಾರಿಗಳು ಅಂಗಡಿ ಸ್ಥಾಪಿಸಲು ಅನುಮತಿ ಇರಲಿಲ್ಲ. ಇದು ವ್ಯಾಪಾರಕ್ಕೆ ದೊಡ್ಡ ಹೊಡೆತವನ್ನು ನೀಡಿತು. ರಾಮ್‌ಬಾಬು ಮಿನಿವ್ಯಾನ್ ಅನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದರು ಹಾಗಾಗಿ ಅವರಿಗೆ ಐಸ್‌ಕ್ರೀಮ್ ಮಾರಾಟ ಮಾಡುವುದಕ್ಕೆ ಅಡ್ಡಿಪಡಿಸಲಾಯಿತು.

    ಇಷ್ಟಕ್ಕೆ ಸುಮ್ಮನಾಗದ ರಾಮ್‌ಬಾಬು ಐಸ್‌ಕ್ರೀಮ್ ಮಾರಾಟಕ್ಕಾಗಿ ಪರ್ಯಾಯ ವಿಧಾನಗಳನ್ನು ಹುಡುಕಲು ಆರಂಭಿಸಿದರು. ಈ ಸಮಯದಲ್ಲಿ 20 ದಿನಗಳ ಕಾಲ ನಾವು ವ್ಯಾಪಾರ ನಡೆಸಲಿಲ್ಲ. ಹಾಗೂ ಇದು ನಮ್ಮ ಆದಾಯದ ಏಕೈಕ ಮೂಲವಾಗಿತ್ತು. ಇದು ನಮಗೆ ದೊಡ್ಡ ಹೊಡೆತವನ್ನುಂಟು ಮಾಡಿತು ಎಂದು ನೇತ್ರಪಾಲ್ ಆ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ. ಈ ಯೋಜನೆಯೇ ರಾಮ್‌ಬಾಬು ಇಚಲಕರಂಜಿಯಲ್ಲಿ ಒಂದು ಸಣ್ಣ ಅಂಗಡಿಯನ್ನು ಗುತ್ತಿಗೆಗೆ ಪಡೆಯಲು ಪ್ರೇರೇಪಿಸಿತು.

    ಇದನ್ನೂ ಓದಿ: Forbes List| ಫೋರ್ಬ್ಸ್ ವಿಶ್ವದ ಅತ್ಯುತ್ತಮ ಉದ್ಯೋಗದಾತ ರ‍್ಯಾಂಕಿಂಗ್‌ ಪಟ್ಟಿ 2021ರಲ್ಲಿ ಅಗ್ರಸ್ಥಾನ ಪಡೆದ ರಿಲಯನ್ಸ್ ಇಂಡಸ್ಟ್ರೀಸ್!

    ಎರಡನೇ ತಲೆಮಾರಿನ ಬಿಸ್‌ನೆಸ್ ಮಾಲೀಕ;

    ಗುತ್ತಿಗೆ ಪಡೆದ ಅಂಗಡಿಯು 150 sq ft ನದ್ದಾಗಿತ್ತು ಹಾಗೂ ಅಂಗಡಿಯಲ್ಲಿ ಸತತವಾಗಿ ಗ್ರಾಹಕರ ಅಪಾರ ಸಂಖ್ಯೆ ನೆರೆದಿರುವುದನ್ನು ಕಂಡು ರಾಮ್‌ಬಾಬು 2007 ರಲ್ಲಿ 100 sq ftನ ಅಂಗಡಿಯನ್ನೇ ಕೊಂಡುಕೊಳ್ಳಲು ನಿರ್ಧರಿಸಿದರು. ವ್ಯಾಪಾರಕ್ಕೆ ನಾನು ಸೇರುವುದನ್ನು ತಂದೆ ಬಯಸಿರಲಿಲ್ಲ. ನಾನು ಶಿಕ್ಷಣವನ್ನು ಪೂರ್ಣಗೊಳಿಸಬೇಕು ಎಂಬುದು ತಂದೆಯ ಬಯಕೆಯಾಗಿತ್ತು. ಹೀಗಾಗಿ ಇಕಲಕರಂಜಿಯ ಹೊರಗೆ ಉದ್ಯೋಗ ಹುಡುಕಲು ಸಲಹೆ ನೀಡಿದರು ಎಂದು ನೇತ್ರಪಾಲ್ ಹೇಳುತ್ತಾರೆ.

    ಹೀಗೆ ಇಕಲಕರಂಜಿಯ ಹೊರಗೆ ನೇತ್ರಪಾಲ್ ಉದ್ಯೋಗಕ್ಕೆ ಸೇರಿದರೂ 2010 ರಲ್ಲಿ ತಂದೆಯ ಅನಾರೋಗ್ಯದಿಂದ ಉದ್ಯೋಗ ತೊರೆದು ಊರಿಗೆ ಮರಳಿದರು. ಹತ್ತಿರದ ಪಟ್ಟಣಗಳಾದ ಸಾಂಗ್ಲಿ ಮತ್ತು ಕೊಲ್ಹಾಪುರದ ಜನರು ತಮ್ಮ ಪಟ್ಟಣಗಳಲ್ಲಿ ಐಸ್ ಕ್ರೀಮ್ ಅಂಗಡಿಯನ್ನು ಆರಂಭಿಸಲು ವಿಚಾರಣೆಯನ್ನು ಆರಂಭಿಸತೊಡಗಿದರು. ಹೀಗಾಗಿ 2011-12 ರಲ್ಲಿ ನಾವು ಸಾಂಗ್ಲಿಯಲ್ಲಿ ಅಂಗಡಿಯೊಂದನ್ನು ಆರಂಭಿಸಿದೆವು ಎಂದು ಅವರು ಹೇಳುತ್ತಾರೆ. ಎಲ್ಲಾ ಐಸ್ ಕ್ರೀಂಗಳನ್ನು ಇಚಲಕರಂಜಿಯ ಕೇಂದ್ರೀಕೃತ ಅಡುಗೆಮನೆಯಲ್ಲಿ ತಯಾರಿಸಲಾಗುತ್ತದೆ ಮತ್ತು ಅಲ್ಲಿಂದ ವಿವಿಧ ಕೇಂದ್ರಗಳಿಗೆ ರವಾನಿಸಲಾಗುತ್ತದೆ ಇದರಿಂದ ಐಸ್‌ಕ್ರೀಮ್ ಗುಣಮಟ್ಟವನ್ನು ಅತ್ಯಂತ ಕಟ್ಟುನಿಟ್ಟಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನೇತ್ರಪಾಲ್ ತಿಳಿಸುತ್ತಾರೆ.

    ಇದನ್ನೂ ಓದಿ: Cooking Oil Price: ಗ್ರಾಹಕರಿಗೆ ಗುಡ್​ ನ್ಯೂಸ್ ನೀಡಿದ ಸರ್ಕಾರ; ಈಗ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಅಗ್ಗ..!

    ನನ್ನ ಜೀವಿತಾವಧಿಯಲ್ಲಿ ನಾನು ಸಾಧಿಸಲು ಬಯಸಿದಂತೆ ಅಲ್ಲ ಹಾಗೂ ನನ್ನ ಮಕ್ಕಳು ಅಧಿಕಾರ ವಹಿಸಿಕೊಂಡರೆ ನನಗೆ ಇನ್ನೂ ಸಂತಸವಾಗುತ್ತದೆ ಎಂದು ನೇತ್ರಪಾಲ್ ಹೇಳುತ್ತಾರೆ. ಇಂದು ಅವರ ಪುತ್ರರು ಐಸ್‌ಕ್ರೀಮ್ ಉದ್ಯಮಕ್ಕೆ ಕೈಜೋಡಿಸಲು ಉತ್ಸುಕರಾಗಿದ್ದಾರೆ. ಅವರು ಹೊಸ ರುಚಿಗಳನ್ನು ಪ್ರಯೋಗಿಸಲು ಇಷ್ಟಪಡುತ್ತಾರೆ ಹೀಗಾಗಿ ಇನ್ನಷ್ಟು ರುಚಿಕರವಾದ ಐಸ್‌ಕ್ರೀಮ್ ತಯಾರಿಸಲು ಸಾಧ್ಯವಾಯಿತು ಎಂದು ನೇತ್ರಪಾಲ್ ತಿಳಿಸುತ್ತಾರೆ. ಈಗಲೂ ನನ್ನ ತಂದೆ ಹೇಳುವ ಮಾತು ನನಗೆ ನೆನಪಿದೆ. ಭಗವಂತನು ನನಗೆ ಅರ್ಹತೆಗಿಂತಲೂ ಹೆಚ್ಚಿನದನ್ನು ನೀಡಿದ್ದಾರೆ. ಇದೇ ಮಾತನ್ನು ನಾನು ಅನ್ವಯಿಸಿಕೊಂಡಿದ್ದೇನೆ ಎಂದು ನೇತ್ರಪಾಲ್ ಹೇಳುತ್ತಾರೆ.
    Published by:MAshok Kumar
    First published: