(VIDEO): ವೈರಲ್ ಆಗಿದೆ ವೀರೂ ಶೇರ್ ಮಾಡಿದ ಕಾಲ್ಚೆಳಕದ ವಿಡಿಯೋ

news18
Updated:July 13, 2018, 4:33 PM IST
(VIDEO): ವೈರಲ್ ಆಗಿದೆ ವೀರೂ ಶೇರ್ ಮಾಡಿದ ಕಾಲ್ಚೆಳಕದ ವಿಡಿಯೋ
news18
Updated: July 13, 2018, 4:33 PM IST
ನ್ಯೂಸ್ 18 ಕನ್ನಡ

ಭಾರತ ತಂಡದ ಮಾಜಿ ಸ್ಪೋಟಕ ಬ್ಯಾಟ್ಸ್​ಮನ್​​ ವಿರೇಂದ್ರ ಸೆಹ್ವಾಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರೀಯರಾಗಿರುವ ವ್ಯಕ್ತಿ. ಇವರು ತಮ್ಮ ಇನ್ಸ್​​ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವಂತಹ ಕೆಲ ಸಂಗತಿಗಳು ಕುತೂಹಲಕಾರಿ ಹಾಗೂ ವಿಭಿನ್ನವಾಗಿರುತ್ತದೆ. ಅಂತೆಯೆ ಸೆಹ್ವಾಗ್ ಶೇರ್ ಮಾಡಿರುವ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಸದ್ಯ ಕ್ರಿಕೆಟ್​​ಗಿಂತ ಫುಟ್ಬಾಲ್ ಫೀವರ್​​​ ಜೋರಾಗೆ ಇದೆ. ಹೀಗಾಗಿ ಸೆಹ್ವಾಗ್ ಅವರು ಫುಟ್ಬಾಲ್​ಗೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಿರಿಯ ವ್ಯಕ್ತಿಯೊಬ್ಬರು ಫುಟ್ಬಾಲ್ ಅನ್ನು ಚಿಕ್ಕ ಕಿಟಕಿಯ ಒಳಗೆ ತಮ್ಮ ಕಾಲ್ಚಳಕದಿಂದ ಅಟ್ಟುತ್ತಿರುವ ವಿಡಿಯೋ ನೋಡುಗರನ್ನು ಅಚ್ಚರಿಗೊಳಿಸಿದೆ. 'ಫ್ರಾನ್ಸ್, ಇಂಗ್ಲೆಂಡ್, ಕ್ರೋವೇಶಿಯಾ ತಂಡವನ್ನು ಮರೆತು ಬಿಡಿ. ಇಲ್ಲಿದ್ದಾರೆ ನಿಜವಾದ ಹೀರೋ' ಎಂದು ಅಡಿಬರಹ ನೀಡಿ ವೀರೂ ಶೇರ್ ಮಾಡಿದ್ದಾರೆ.

 


Loading...ಈಗಾಗಲೇ ಈ ಪೋಸ್ಟ್​​ಗೆ ಅನೇಕ ಲೈಕ್ಸ್ ಹಾಗೂ ಕಾಮೆಂಟ್​​ಗಳು ಬಂದಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಸೆಹ್ವಾಗ್ ಅವರು ಇತ್ತೀಚೆಗೆ ಧೋನಿಯ ಹುಟ್ಟುಹಬ್ಬಕ್ಕೂ 'ಓಂ ಫಿನಿಶಾಯ ನಮಃ' ಎಂದು ಬರೆದು ವಿಭಿನ್ನವಾಗಿ ಶುಭಕೋರಿದ್ದರು. ಅಲ್ಲದೆ ಸೌರವ್ ಗಂಗೂಲಿ ಅವರ ಬರ್ತ್​​ಡೇಗೂ ದಾದಾ ಅವರು ಮೈದಾನದಲ್ಲಿ ಯಾವರೀತಿ ಇರುತ್ತಿದ್ದರೆಂದು 4 ಹಂತದಲ್ಲಿ ವಿರಿಸಿದ್ದು ಸಾಕಷ್ಟು ಸುದ್ದಿಯಾಗಿದ್ದವು.
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...