• Home
 • »
 • News
 • »
 • trend
 • »
 • Trending Story: ವರನ ಕುಟುಂಬದಿಂದ ವಧುವಿಗೆ ಬಂದ ಉಡುಗೊರೆ ನೋಡಿ ಮದುವೆ ರದ್ದು! ಅಂತದ್ದೇನಿದೆ ಆ ಗಿಫ್ಟ್​ನಲ್ಲಿ?

Trending Story: ವರನ ಕುಟುಂಬದಿಂದ ವಧುವಿಗೆ ಬಂದ ಉಡುಗೊರೆ ನೋಡಿ ಮದುವೆ ರದ್ದು! ಅಂತದ್ದೇನಿದೆ ಆ ಗಿಫ್ಟ್​ನಲ್ಲಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ವರ್ಷ ಜೂನ್‌ನಲ್ಲಿ ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಅವರ ಮದುವೆಯ ದಿನಾಂಕವನ್ನು ನವೆಂಬರ್ 5 ಕ್ಕೆ ನಿಗದಿಪಡಿಸಲಾಯಿತು. ಆದ್ದರಿಂದ ಮದುವೆಗೆ ಮುಂಚಿತವಅಗಿ ವರನ ಕುಟುಂಬದವರು ಸೊಸೆಯ ಪ್ರೀತಿಯಿಂದ ಲೆಹಂಗವನ್ನು ಕಳಿಸಿದ್ದರು.

 • Share this:

  ಸಾಮಾನ್ಯವಾಗಿ ಭಾರತೀಯ ಮದುವೆಗಳೆಲ್ಲವೂ (Indian Marriage) ಅದ್ಧೂರಿಯಾಗಿ ನಡೆಯುತ್ತವೆ. ಆಹಾರದಿಂದ ಹಿಡಿದು ಆಚರಣೆಗಳೆಲ್ಲವೂ ಸಂಭ್ರಮದಲ್ಲೇ ಮಾಡುತ್ತಾರೆ. ಮದುವೆ ಅಂದರೆ ಸಾಕು ಮನೆಯವರಿಗೆ, ಕುಟುಂಬದವರಿಗೆ ಎಲ್ಲಿಲ್ಲದ ಖುಷಿ. ಕೆಲವೊಂದು ಬಾರಿ ಕೆಲವೊಂದು ಅಡಚಣೆಗಳಿಂದ ಮದುವೆಯನ್ನೇ ಕ್ಯಾನ್ಸಲ್ (Cancel) ಮಾಡುತ್ತಾರೆ. ಇಲ್ಲೊಂದು ಮದುವೆಯನ್ನು ರದ್ದುಗೊಳಿಸಿದ್ದಾರೆ. ಕಾರಣ ಕೇಳಿದ್ರೆ ನಿಮ್ಗೂ ವಿಶೇಷ ಅಂತೆನಿಸುತ್ತದೆ. ಏನಪ್ಪಾ ಅಂದ್ರೆ ಉತ್ತರಾಖಂಡದ ಹಲ್ದ್ವಾನಿಯ ವಧುಗೆ ವರನ ಕುಟುಂಬವು ಆಕೆಗೆ ಅಗ್ಗದ ಲೆಹೆಂಗಾವನ್ನು (Lehenga) ಕಳುಹಿಸಿದ ನಂತರ ತನ್ನ ಮದುವೆಯನ್ನೇ ರದ್ದುಗೊಳಿಸಿದೆ. ಎಂದು ಟೈಮ್ಸ್​​ ಆಫ್ ಇಂಡಿಯಾ ವರದಿ ಮಾಡಿದೆ. ಏನೇನೋ ಕಾರಣಕ್ಕೆಲ್ಲಾ ಮದುವೆ ರದ್ದು ಮಾಡುವುದನ್ನು ನೋಡಿದ್ದೇವೆ. ಇಲ್ಲೊಂದು ಇದೇ ವರನ ಕುಟುಂಬದವರಿಗೆ ಅಚ್ಛರಿಯನ್ನು ಮೂಡಿಸಿದೆ.


  ಈ ವರ್ಷ ಜೂನ್‌ನಲ್ಲಿ ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಅವರ ಮದುವೆಯ ದಿನಾಂಕವನ್ನು ನವೆಂಬರ್ 5 ಕ್ಕೆ ನಿಗದಿಪಡಿಸಲಾಯಿತು. ಆದ್ದರಿಂದ ಮದುವೆಗೆ ಮುಂಚಿತವಾಗಿ ವರನ ಕುಟುಂಬದವರು ಸೊಸೆಯ ಪ್ರೀತಿಯಿಂದ ಲೆಹಂಗವನ್ನು ಕಳಿಸಿದ್ದರು.


  ಎಷ್ಟು ರೂಪಾಯಿಯ ಲೆಹಂಗಾ?


  ಮದುವೆಗೆ ಕೆಲವೇ ದಿನಗಳ ಮೊದಲು, ವರನ ತಂದೆ ತನ್ನ ಭಾವಿ ಸೊಸೆಗೆ ₹ 10,000 ಬೆಲೆಯ ಲೆಹೆಂಗಾವನ್ನು ಕಳುಹಿಸಿದ್ದರಿಂದ ಅಲ್ಮೋರಾಕ್ಕೆ ಸೇರಿದ ತನ್ನ ನಿಶ್ಚಿತ ವರನೊಂದಿಗೆ ಬೇರ್ಪಟ್ಟಳು ಎಂದು ಹೇಳಲಾಗಿದೆ. ಕಡಿಮೆ ಬೆಲೆ ಮತ್ತು ಕಳಪೆ ಗುಣಮಟ್ಟದಿಂದಾಗಿ ಅವರು ಉಡುಪನ್ನು ಮೆಚ್ಚಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.


  ಇದನ್ನೂ ಓದಿ: RIP ಅಂತ ಟ್ವೀಟ್ ಮಾಡಿದ ಎಲಾನ್ ಮಸ್ಕ್! ಮುಗಿದೇ ಹೋಯ್ತಾ ಟ್ವಿಟರ್ ಕಥೆ?


  ಪೊಲೀಸ್ ಸ್ಠೇಷನ್ ಮೆಟ್ಟಿಲು ಹತ್ತಿದ ಕುಟುಂಬ:


  ಇದರ ಬಗ್ಗೆ ಚರ್ಚೆಗಳು ಆರಂಭ ವಾಗುತ್ತಿದ್ದಂತೆ ಎರಡೂ ಕುಟುಂಬಗಳು ಪೊಲೀಸರನ್ನು ಸಂಪರ್ಕಿಸಿದರು ಎಂದು ಒಂದು ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಅವರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಆದರೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಮುದ್ರಿಸಿದ್ದೇವೆ ಎಂದು ವರನ ಮನೆಯವರು ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿದ್ದಾರೆ.


  ಸಾಂದರ್ಭಿಕ ಚಿತ್ರ


  ರಾಜಿ ಸಂಧಾನ ಮಾಡಿ ಮದುವೆ ರದ್ದುಗೊಳಿಸಿದರು:


  ಇದಾದ ಬಳಿಕ ಮತ್ತೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ಮಾಡಿ ಮದುವೆಯನ್ನು ರದ್ದುಗೊಳಿಸಲಾಯಿತು.


  ಇದೇ ರೀತಿಯ ಮದುವೆಯಲ್ಲಿ ಪಾಕಿಸ್ತಾನಿ ವರನ ಒಂದು ಕಥೆ ವೈರಲ್ ಆಗಿತ್ತು:


  ಮದುವೆಗಳು ಮತ್ತು ವಿಚಿತ್ರ ಘಟನೆಗಳ ಬಗ್ಗೆ ಮಾತನಾಡುತ್ತಾ ಹೋದರೆ ಹಲವಾರು ಕಥೆಗಳಿವೆ. ಕೆಲವು ತಿಂಗಳ ಹಿಂದೆ, ಪಾಕಿಸ್ತಾನಿ ವರನೊಬ್ಬ ಕರೆನ್ಸಿ ನೋಟುಗಳಿಂದ ಮಾಡಿದ ಹಾರವನ್ನು ಧರಿಸಿದ್ದನು. ಈ ಹಾರವು ಬಹಳ ದೈತ್ಯಾಕಾರದದ್ದಾಗಿತ್ತು, ಆದ್ದರಿಂದ ಮದುವೆಯ ವೇದಿಕೆಯಲ್ಲಿ ಅದನ್ನು ಒಟ್ಟಿಗೆ ಹಿಡಿದಿಡಲು ವರನು ತನ್ನ ಸ್ನೇಹಿತರ ಸಹಾಯವನ್ನು ತೆಗೆದುಕೊಳ್ಳಬೇಕಾಯಿತು. ವರ ಸೇರಿದಂತೆ ಕನಿಷ್ಠ ಆರು ಜನರು ಬೃಹತ್ ಮಾಲೆಯ ಹಿಂದೆ ಅಡಗಿಕೊಂಡಿರುವುದು ಕಂಡುಬಂದಿದೆ.


  ಬ್ಯಾಂಕ್​ಗಳಿಂದ ಈ ಆಚರಣೆಗೆ ಎಚ್ಚರಿಕೆ:


  ಈ ಪದ್ಧತಿಯು ಪಾಕಿಸ್ತಾನದಲ್ಲಿ ಮಾತ್ರ ಆಚರಣೆಯಲ್ಲಿಲ್ಲ, ಇದು ಉತ್ತರ ಭಾರತದ ರಾಜ್ಯಗಳಲ್ಲಿಯೂ ಬಹಳ ಸಾಮಾನ್ಯವಾದ ಆಚರಣೆಯಾಗಿದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ ಜನರಿಗೆ ಎಚ್ಚರಿಕೆ ನೀಡಿದ್ದು, ಬ್ಯಾಂಕ್ ನೋಟುಗಳು ಸಾರ್ವಭೌಮತ್ವದ ಸಂಕೇತವಾಗಿರುವುದರಿಂದ ಅವುಗಳನ್ನು ಗೌರವಿಸಬೇಕು ಮತ್ತು ಜನರು ಅವುಗಳನ್ನು ದುರುಪಯೋಗಪಡಿಸಬಾರದು ಎಂದು ಹೇಳಿಕೆ ನೀಡಿತ್ತು.


  ಈ ರೀತಿಯ ಘಟನೆಗಳು ಹಲವಾರು ಇವೆ. ಆದರೆ ಕೆಲವೊಂದು ಬಾರಿ ಎರಡು ಕುಟುಂಬದವರ ಜಗಳದಿಂದ ಮದುವೆಗಳು ರದ್ದಾಗುತ್ತದೆ. ಕೆಲವೊಮ್ಮೆ ಎನಾದರು ದೋಷಗಳಿಂದ ಮದುವೆಗಳು ರದ್ದಾಗುತ್ತದೆ. ಆದರೆ ಇದು ವಿಶೇಷ ಎಂದು ಹೇಳ್ಬಹುದು. ಏಕೆಂದರೆ ಪ್ರತಿಯೊಂದು ಕುಟುಂಬವೂ ತನ್ನ ಮನೆಗೆ ಬರುವಂತಹ ಸೊಸೆಗೆ  ಪ್ರೀತಿಯಿಂದ ಏನಾದರು ಉಡುಗೊರೆಯನ್ನು ನೀಡುತ್ತಾರೆ. ಆದರೆ ಈ ರೀತಿ ಅವರು ವರ್ತಿಸಬಹುದೆಂದು ವರನ ಕುಟುಂಬದವರು ಕನಸಲ್ಲೂ ಅಂದುಕೊಡಿರಲಿಕ್ಕಿಲ್ಲ. ಇದೀಗ ಈ ಸುದ್ದಿ ಬಹಳಷ್ಟು ಟ್ರೆಂಡಿಗ್​​ನಲ್ಲಿದೆ.


  Published by:Prajwal B
  First published: