• Home
  • »
  • News
  • »
  • trend
  • »
  • Mom and Son: ತಾಯಿ ತನ್ನ ಮಗುವಿಗೆ ಈ ವಿಷಯಗಳನ್ನು ಕಲಿಸಲು ಏನು ಮಾಡಿದ್ದಾರೆ ನೋಡಿ

Mom and Son: ತಾಯಿ ತನ್ನ ಮಗುವಿಗೆ ಈ ವಿಷಯಗಳನ್ನು ಕಲಿಸಲು ಏನು ಮಾಡಿದ್ದಾರೆ ನೋಡಿ

ಅನೀಕಾ ಮತ್ತು ಆಕೆಯ ಮಗ

ಅನೀಕಾ ಮತ್ತು ಆಕೆಯ ಮಗ

ಮಕ್ಕಳು ಪಠ್ಯ ಪುಸ್ತಕಗಳನ್ನು ಮೀರಿದ ವಿಷಯಗಳನ್ನು ನಮ್ಮ ಮಕ್ಕಳು ಕಲಿಯಲಿ ಮತ್ತು ತಿಳಿದುಕೊಳ್ಳಲಿ ಅಂತ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ಅವರಿಗೆ ನೀಡುತ್ತಿರುತ್ತಾರೆ. ಇಲ್ಲೊಬ್ಬ ತಾಯಿ ತನ್ನ ಮಗ ಪಠ್ಯ ಪುಸ್ತಕಗಳನ್ನು ಮೀರಿದ ವಿಷಯಗಳನ್ನು ತಿಳಿದುಕೊಳ್ಳಲಿ ಅಂತ ತನ್ನ ಕೆಲಸವನ್ನೆ ಬಿಟ್ಟು ತನ್ನ ಮಗನನ್ನು ಕರೆದುಕೊಂಡು ಪ್ರವಾಸಕ್ಕೆ ಹೋಗಿದ್ದಾರೆ.

ಮುಂದೆ ಓದಿ ...
  • Share this:

ಸಾಮಾನ್ಯವಾಗಿ ಕೆಲವು ಪೋಷಕರು (Parents) ತಮ್ಮ ಮಕ್ಕಳು (Children) ಶಾಲೆಗೆ ಹೋಗಿ ಚೆನ್ನಾಗಿ ಓದಿ, ಒಳ್ಳೆಯ ಅಂಕಗಳನ್ನು ಗಳಿಸಿದರೆ ಸಾಕು ಅಂತ ಅಂದು ಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಮಕ್ಕಳು ಪಠ್ಯ ಪುಸ್ತಕಗಳನ್ನು ಮೀರಿದ ವಿಷಯಗಳನ್ನು ನಮ್ಮ ಮಕ್ಕಳು ಕಲಿಯಲಿ (Learning) ಮತ್ತು ತಿಳಿದುಕೊಳ್ಳಲಿ ಅಂತ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ಅವರಿಗೆ ನೀಡುತ್ತಿರುತ್ತಾರೆ. ಇಲ್ಲೊಬ್ಬ ತಾಯಿ ತನ್ನ ಮಗ ಪಠ್ಯ ಪುಸ್ತಕಗಳನ್ನು (Text Book) ಮೀರಿದ ವಿಷಯಗಳನ್ನು ತಿಳಿದುಕೊಳ್ಳಲಿ ಅಂತ ತನ್ನ ಕೆಲಸವನ್ನೆ (Work) ಬಿಟ್ಟು ತನ್ನ ಮಗನನ್ನು ಕರೆದುಕೊಂಡು ಪ್ರವಾಸಕ್ಕೆ (Tour) ಹೋಗಿದ್ದಾರೆ.


ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಪ್ರಯಾಣ ಮಾಡಬೇಕು, ಪ್ರವಾಸಕ್ಕೆ ಹೋಗಬೇಕು ಅಂತ ಆಸೆ ಇದ್ದೇ ಇರುತ್ತದೆ. ಹೀಗೆ ಪ್ರವಾಸಕ್ಕೆ ಹೋದರೆ ನಮಗೆ ಆಯಾ ಪ್ರದೇಶಗಳ ಜನಜೀವನ ಮತ್ತು ಜನರ ರೂಢಿಗಳು, ಶೈಕ್ಷಣಿಕ ವ್ಯವಸ್ಥೆ ಎಲ್ಲವೂ ಒಂದು ರೀತಿಯಲ್ಲಿ ಹೊಸ ಅನುಭವವಾಗಬಹುದು.


ಚಿಕ್ಕಂದಿನಿಂದಲೂ ಅನೀಕಾ ಅವರಿಗೆ ಪ್ರವಾಸಕ್ಕೆ ಹೋಗುವುದು ಎಂದರೆ ತುಂಬಾ ಇಷ್ಟವಂತೆ!
ಅನೀಕಾ ಅವರಿಗೆ ಚಿಕ್ಕವಳಿದ್ದಾಗಿನಿಂದಲೂ ಪ್ರವಾಸಕ್ಕೆ ಹೋಗುವುದು ಎಂದರೆ ತುಂಬಾನೇ ಅಚ್ಚುಮೆಚ್ಚು ಅಂತೆ. "ನಾನು ಚಿಕ್ಕವಳಿದ್ದಾಗ ನನ್ನ ಶಾಲೆಯಿಂದ ಮೂರು ಪ್ರವಾಸಗಳಿಗೆ ಹೋಗಿದ್ದೆ, ನಾನು ಏಳನೇ ತರಗತಿಯಲ್ಲಿದ್ದಾಗ, ನಾನು ಆಗ್ರಾಕ್ಕೆ ನನ್ನ ಮೊದಲ ಪ್ರವಾಸವನ್ನು ಕೈಗೊಂಡೆ. ತಾಜ್ ಮಹಲ್ ನ ಸೌಂದರ್ಯವನ್ನು ನಾನು ಪುಸ್ತಕಗಳಲ್ಲಿ ಓದಿದ್ದಕ್ಕೂ ಮತ್ತು ನಾನು ನಿಜವಾಗಿಯೂ ನೋಡಿದ್ದಕ್ಕೂ ಇದ್ದ ವ್ಯತ್ಯಾಸವನ್ನು ನಾನು ಇನ್ನೂ ನೆನಪಿಸಿಕೊಳ್ಳುತ್ತೇನೆ. ಜಗತ್ತು ನಂಬಲಾಗದಷ್ಟು ದೊಡ್ಡದಾಗಿದೆ, ಆದರೆ ಪುಸ್ತಕವು ಅದರ ಸಂಕ್ಷಿಪ್ತ ನೋಟವನ್ನು ಮಾತ್ರ ನಮಗೆ ನೀಡುತ್ತದೆ" ಎಂದು ಹೇಳಿದರು.ಹರಿಯಾಣದ ರೋಹತಕ್ ಎಂಬ ಸಣ್ಣ ನಗರದ ಮಹಿಳೆಯಾದ ಅನೀಕಾ "ನಾನು ಕಾಲೇಜು ಪ್ರಾರಂಭಿಸಿದಾಗ, ನಾನು ಇನ್ನೂ ಟ್ರಾವೆಲ್ ಬಗ್ ಥರ ಆದೆ, ಯುವ ಭಾವೈಕ್ಯತೆಗಾಗಿ ವಿಶ್ವವಿದ್ಯಾಲಯ ನಡೆಸುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದೆ. ಅವರು ರಿವರ್ ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್ ಗಾಗಿ ಶಿಬಿರಗಳನ್ನು ಹೊಂದಿದ್ದರು, ಇದು ಹೊರ ಜಗತ್ತಿನ ಬಗ್ಗೆ ಕಲಿಯಲು ಮತ್ತು ಪ್ರಯಾಣಿಸಲು ನಾನು ಎಷ್ಟು ಉತ್ಸುಕಳಾಗಿದ್ದೇನೆ ಎಂದು ನನಗೆ ಮನವರಿಕೆ ಮಾಡಿಕೊಟ್ಟಿತು. ನನ್ನ ಹೆತ್ತವರು ನನಗೆ ಈ ಪ್ರವಾಸಗಳಲ್ಲಿ ಆಸಕ್ತಿ ಇರುವುದನ್ನು ನೋಡಿದರು ಮತ್ತು ಬೆಂಬಲ ನೀಡಿದರು. ನನಗೆ ಎನ್‌ಸಿ‌ಸಿ, ಎನ್ಎಸ್ಎಸ್ ಮತ್ತು ಯುವ ಶಿಬಿರಗಳಿಗೆ ಸೇರಿಕೊಂಡೆ. ನನ್ನ ಆರಾಮ ವಲಯದಿಂದ ಹೊರಗೆ ಬಂದು ಸಾಹಸ ಮಾಡುವ ಮತ್ತು ಅನ್ವೇಷಿಸುವ ಅವಕಾಶವನ್ನು ನಾನು ಆನಂದಿಸಿದೆ" ಎಂದು ಹೇಳಿದರು.


ಇದನ್ನೂ ಓದಿ: Bride Photoshoot: ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಕೇರಳ ವಧುವಿನ ಫೋಟೋಶೂಟ್! ವಿಡಿಯೋ ಇಲ್ಲಿದೆ


ತನ್ನ ಹೆತ್ತವರ ಬಗ್ಗೆ ಏನ್ ಹೇಳ್ತಾರೆ ಅನೀಕಾ?
ಇನ್ನೂ ತನ್ನ ಹೆತ್ತವರ ಬಗ್ಗೆ ಮಾತನಾಡುತ್ತಾ ಅನೀಕಾ ಅವರು "ನನ್ನ ತಾಯಿ ಗೃಹಿಣಿಯಾಗಿದ್ದರು ಮತ್ತು ನನ್ನ ತಂದೆ ಸಿವಿಲ್ ಎಂಜಿನಿಯರ್ ಆಗಿದ್ದರು. ನನ್ನ ತಾಯಿ ತುಂಬಾ ಬುದ್ಧಿವಂತರಾಗಿದ್ದರೂ ಮತ್ತು ಒಂದು ಹಂತದಲ್ಲಿ ಅವರಿಗೆ ಉದ್ಯೋಗ ಮಾಡುವ ಅವಕಾಶ ಬಂದರೂ ಸಹ ಅದನ್ನು ಅವಳು ನಿರಾಕರಿಸಿದಳು. ಅವಳು ಮನೆಕೆಲಸ ಮಾಡುವುದರಲ್ಲಿ ಮತ್ತು ಮಕ್ಕಳನ್ನು ಬೆಳೆಸುವಲ್ಲಿ ನಿರತಳಾಗಿದ್ದಳು, ಏಕೆಂದರೆ ಅವಳು ಮೂರು ಮಕ್ಕಳಿಗೆ ಜವಾಬ್ದಾರಳಾಗಿದ್ದಳು” ಎಂದು ಹೇಳಿಕೊಂಡಿದ್ದಾರೆ."ನಾನು ಚಿಕ್ಕವಳಾಗಿದ್ದಾಗ ಹುಡುಗರಂತೆ ಉಡುಪು ಧರಿಸುತ್ತಿದ್ದೆ ಎಂದು ನಮ್ಮ ಸಮುದಾಯದ ಅನೇಕ ಸದಸ್ಯರು ದೂರಿದರು, ಆದರೆ ನನ್ನ ತಂದೆ ಅದನ್ನು ಎಂದಿಗೂ ತಡೆಯಲಿಲ್ಲ. ಅವರು ಇಂದಿಗೂ ನನ್ನನ್ನು ಬೆಂಬಲಿಸುವುದರಿಂದ ಹಿಂದೆ ಸರಿದಿಲ್ಲ. ವಾಸ್ತವವಾಗಿ, ನನ್ನ ಮದುವೆ ಆಗುವಾಗ ಸಹ ಹುಡುಗನ ಬಳಿ ನಾನು ನನಗೆ ಏನು ಬೇಡ, ನಾನು ಸಾಕಷ್ಟು ಅಲ್ಲದಿದ್ದರೂ, ಸ್ವಲ್ಪವಾದರೂ ಪ್ರವಾಸ ಮಾಡಲು ಬಿಡಬೇಕು. ಕನಿಷ್ಠ ಆರು ತಿಂಗಳಿಗೊಮ್ಮೆ, ಒಂದು ಸುದೀರ್ಘ ಪ್ರವಾಸ ಒಳಗೊಂಡಿರುವ ವಿರಾಮ ತೆಗೆದುಕೊಳ್ಳಲು ನನಗೆ ಅವಕಾಶ ನೀಡುವಂತೆ ನಾನು ಅವರನ್ನು ಕೇಳಿದೆ" ಎಂದು ಹೇಳಿದರು.


ಮಗು ಆದಾಗ ಅವರ ಈ ಪ್ರವಾಸಗಳಿಗೆ ಬ್ರೆಕ್ ಬಿದ್ದಿತ್ತಂತೆ!
ಅನೀಕಾ ಅವರು ತಾಯಿಯಾದ ನಂತರ ಈ ರಜಾದಿನಗಳು, ಸುದೀರ್ಘ ಪ್ರವಾಸಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆದವು ಎಂದು ಹೇಳಬಹುದು. "ಮಗುವಿನ ಪೋಷಣೆಯ ಮೊದಲ ಎರಡು ಮೂರು ವರ್ಷಗಳಲ್ಲಿ ತಾಯಿಯಾಗಿ ನೀವು ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಅನುಭವಿಸುತ್ತೀರಿ" ಎಂದು ಅವರು ತಿಳಿಸಿದ್ದಾರೆ.


"ಇದು ಸ್ವಲ್ಪ ಸಮಯದವರೆಗೆ ಹೀಗೆಯೇ ಮುಂದುವರಿಯಿತು, ಆದರೆ ಇದು ನನ್ನ ಪ್ರವಾಸಗಳಿಂದ ಮತ್ತು ಪ್ರಯಾಣದಿಂದ ವಿರಾಮವಾಗಿರಲಿಲ್ಲ. ನಾವು ತೆಗೆದುಕೊಳ್ಳುತ್ತಿದ್ದ ಕುಟುಂಬದ ರಜಾದಿನಗಳು ಮಾನದಂಡದಿಂದ ಒಂದು ಸಣ್ಣ ವಿರಾಮದಂತೆ ಭಾಸವಾಯಿತು. ನಾನು ಇನ್ನೂ ಮಕ್ಕಳ ಜವಾಬ್ದಾರಿಗಳನ್ನು ಹೊಂದಿದ್ದೆ, ಹಾಗಾಗಿ ಅವುಗಳನ್ನು ನಾನು ಅಷ್ಟಾಗಿ ಆನಂದಿಸಲಿಲ್ಲ" ಎಂದು ಹೇಳಿದರು.


ತನ್ನೊಡನೆ ಪ್ರಯಾಣಿಸುತ್ತಿರುವ ಮಗನ ಬಗ್ಗೆ ಅನೀಕಾ ಹೇಳುವುದು ಹೀಗೆ
“ಅವನು ನಿಯಮಿತ ಶಾಲೆಗೆ ಹಾಜರಾಗದ ಕಾರಣ, ಅವನಿಗೆ ಸಾಮಾಜಿಕ ಕೌಶಲ್ಯಗಳ ಕೊರತೆಯಿದೆ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ನಾನು ಅದನ್ನು ಗಣನೆಗೆ ತೆಗೆದುಕೊಳ್ಳುತ್ತೇನೆ, ಏಕೆಂದರೆ ಅವನು ಕೆಲವೊಮ್ಮೆ ಅಗಾಧವಾದ ಭಾವನಾತ್ಮಕ ಪ್ರತಿಕ್ರಿಯೆಯನ್ನು ಪ್ರದರ್ಶಿಸುತ್ತಾನೆ ಅಥವಾ ಬಹುಶಃ ಅವನು ಪ್ರಯಾಣದಿಂದ ದಣಿದಿರಬಹುದು” ಎಂದು ಹೇಳುತ್ತಾರೆ.


ಇದನ್ನೂ ಓದಿ:  Teacher and Children: ಶಿಕ್ಷಕಿಯ ಚಿತ್ರ ಬಿಡಿಸಿದ ಪುಟಾಣಿಗಳು; ಮುಗ್ಧ ಮನಸ್ಸಿನ ಕ್ರಿಯಾತ್ಮಕತೆಗೆ ಭೇಷ್ ಎಂದ ನೆಟ್ಟಿಗರು


ಆದಾಗ್ಯೂ, ಅನೀಕಾ ತನ್ನ ಮಗ ತಾನು ನೋಡುವ ಸಾಕ್ಷ್ಯಚಿತ್ರಗಳಲ್ಲಿ ಅವನು ನೋಡುವ ಸ್ಥಳಗಳು ಮತ್ತು ಆವಿಷ್ಕಾರಗಳ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಾನೆ ಎಂದು ಹೇಳುತ್ತಾರೆ. ಪ್ರಯಾಣ ಮಾಡುವಾಗ ಬೇರೆ ಸಮುದಾಯದ ಸದಸ್ಯನೊಂದಿಗೆ ತನ್ನ ಮಗ ಆಕರ್ಷಕ ಸಂಭಾಷಣೆಯಲ್ಲಿ ತೊಡಗಿದ್ದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ."ನಾನು ಕೆಲವರನ್ನು ಭೇಟಿ ಮಾಡಿದಾಗ, ಹಿಂದಿ ಅಥವಾ ಇಂಗ್ಲಿಷ್ ಮಾತನಾಡದ ಸ್ಥಳೀಯ ಮಗುವನ್ನು ನಾವು ನೋಡಿದ್ದೇವೆ. ಮತ್ತೊಂದೆಡೆ, ನನ್ನ ಮಗನಿಗೆ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಅರ್ಥವಾಗುತ್ತಿತ್ತು. ಹೀಗಾಗಿ, ಸಂವಹನದ ಅಂತರವಿತ್ತು. ಆದರೆ ಸ್ವಲ್ಪ ಸಮಯದ ನಂತರ, ಮಕ್ಕಳು ಕೈಗಳನ್ನು ಹಿಡಿದುಕೊಂಡು ನನ್ನ ಮಗ ಪ್ರವಾಸಕ್ಕಾಗಿ ತಂದಿದ್ದ ಆಟಿಕೆಗಳೊಂದಿಗೆ ಆಟವಾಡುತ್ತಿದ್ದರು" ಎಂದು ಅನೀಕಾ ಹೇಳುತ್ತಾರೆ.


ಮಗನಿಗೆ ಬೇರೆ ಯಾವೆಲ್ಲಾ ವಿಷಯಗಳನ್ನು ಹೇಳಿಕೊಡುತ್ತಾರೆ 
ವಾಸ್ತವವಾಗಿ, ಅವರು ಸಂಜ್ಞಾ ಭಾಷೆಯನ್ನು ಬಳಸುತ್ತಿದ್ದರು. ಅದು ನನಗೆ ತುಂಬಾ ಸಂತೋಷವನ್ನುಂಟು ಮಾಡಿತು, ಏಕೆಂದರೆ, ಮಕ್ಕಳಂತೆ, ವಯಸ್ಕರು ಸಂಬಂಧವನ್ನು ಸ್ಥಾಪಿಸಲು ಸಮಯ ತೆಗೆದುಕೊಳ್ಳುತ್ತಾರೆ. ಭಾಷಾ ಅಡೆತಡೆ ಮತ್ತು ಪ್ರಾದೇಶಿಕ ಮತ್ತು ಭೌಗೋಳಿಕ ಮಿತಿಗಳ ಹೊರತಾಗಿಯೂ, ಮಕ್ಕಳು ಯಾವುದೇ ಗಡಿಗಳನ್ನು ಪರಿಗಣಿಸದೆ ಆಟವಾಡುತ್ತಿದ್ದರು ಮತ್ತು ಪರಸ್ಪರ ಸಂವಹನ ನಡೆಸುತ್ತಿದ್ದರು" ಎಂದು ಹೇಳಿದರು.


“ನಾನು ಅವನಿಗೆ ರಸ್ತೆಯ ಮೇಲಿರುವ ಚಿಹ್ನೆಗಳು, ಸೂಚನೆಗಳು ಮತ್ತು ಅಲ್ಲಿ ಇಲ್ಲಿ ಸಿಗುವ ಪುಸ್ತಕಗಳನ್ನು ಓದಲು ಹೇಳುತ್ತೇನೆ. ಅವನಿಗೆ ಕೇವಲ ಆರು ವರ್ಷ ವಯಸ್ಸಾಗಿರುವುದರಿಂದ, ಅವನಿಗೆ ಮಾತನಾಡಲು ಅಥವಾ ಬರೆಯಲು ಸಾಧ್ಯವಿರುವಷ್ಟು ಇಂಗ್ಲಿಷ್ ಅನ್ನು ಬಳಸಿಕೊಂಡು ಪ್ರವಾಸ ನಿಯತಕಾಲಿಕದ ಬರವಣಿಗೆಯ ಭಾಗವನ್ನು ಪೂರ್ಣಗೊಳಿಸಲು ನಾನು ಅವನಿಗೆ ಅವಕಾಶ ಮಾಡಿಕೊಟ್ಟೆ.ಪ್ರಯಾಣದ ಸಮಯದಲ್ಲಿ ಹಣವನ್ನು ನಿರ್ವಹಿಸುವಂತೆ ಹೇಳುವ ಮೂಲಕ ಅವನಿಗೆ ಗಣಿತವನ್ನು ಕಲಿಯಲು ನಾನು ಅವನನ್ನು ಪ್ರೇರೇಪಿಸುತ್ತೇನೆ. ನಾನು ಅವನಿಗೆ ಆಗಾಗ್ಗೆ ಹಣವನ್ನು ನೀಡುತ್ತೇನೆ, ಆದ್ದರಿಂದ ಅವನು ತಿಂಡಿಗಳು ಮತ್ತು ಇತರ ವಸ್ತುಗಳಿಗೆ ಖರ್ಚು ಮಾಡಿದ ನಂತರ ನಮ್ಮ ಬಳಿ ಎಷ್ಟು ದುಡ್ಡು ಉಳಿದಿದೆ ಅಂತ ಟ್ರ್ಯಾಕ್ ಮಾಡುತ್ತಾನೆ" ಎಂದು ಹೇಳಿದರು.


ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗುವಾಗ ಇರುವ ಸವಾಲುಗಳು 
"ಮಗುವಿನೊಂದಿಗೆ ಪ್ರಯಾಣಿಸುವುದು ಕೆಲವೊಮ್ಮೆ ಒತ್ತಡದಾಯಕವಾಗಿರುತ್ತದೆ. ನಾನು ಒಬ್ಬಂಟಿಯಾಗಿ ಪ್ರಯಾಣಿಸಬೇಕಾಗಿರುವುದರಿಂದ, ನಾನು ಪ್ಯಾಕಿಂಗ್ ನಿಂದ ಹಿಡಿದು ನಾನು ತಂಗುವ ಸ್ಥಳದವರೆಗೆ ಎಲ್ಲವನ್ನೂ ನೋಡಿಕೊಳ್ಳಬೇಕು, ಎಲ್ಲವೂ ಮಕ್ಕಳ ಸ್ನೇಹಿಯಾಗಿರಬೇಕು ಮತ್ತು ನಾನು ಯಾವುದಕ್ಕೂ ಸಿದ್ಧವಾಗಿರಬೇಕು.


ಇದನ್ನೂ ಓದಿ:  Girl's Campaign: ಶಾಲೆ ವಿರುದ್ಧವೇ ಸಿಡಿದೆದ್ದ ವಿದ್ಯಾರ್ಥಿನಿ! ಬಾಲಕಿಯರ ಮಾನ ಕಾಪಾಡಲು ಅಭಿಯಾನ


90 ಪ್ರತಿಶತದಷ್ಟು ಪ್ರಯಾಣವು ಶುದ್ಧ ವಿನೋದಮಯವಾಗಿದೆ, ಇನ್ನುಳಿದ 10 ಪ್ರತಿಶತದಷ್ಟು ನಿಮ್ಮ ಮಗುವಿನೊಂದಿಗೆ ಅನ್ವೇಷಣೆ ಮತ್ತು ಸವಿ ನೆನಪುಗಳನ್ನು ಮಾಡಿಕೊಳ್ಳಲು ವ್ಯಯಿಸಲಾಗುತ್ತದೆ" ಎಂದು ಅನೀಕಾ ಹೇಳುತ್ತಾರೆ.

Published by:Ashwini Prabhu
First published: