Video: ಇದು ಅಪಘಾತ ವಲಯ; ಬೋರ್ಡ್​ ನೋಡಬೇಕಿಲ್ಲ, ಕಾರ್​ ನೋಡಿದ್ರೇ ಗೊತ್ತಾಗುತ್ತೆ

ಮೆರಾ. ಜಬಲ್​ಪುರ್​​ ಎಂಬ ಇನ್​​ಸ್ಟಾಗ್ರಾಂ ಖಾತೆ ಈ ವಿಡಿಯೋವನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಈಗಾಗಲೇ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋ ನೋಡಿ ಲೈಕ್​ ಮಾಡಿದ್ದಾರೆ. ಜೊತೆಗೆ ಅನೇಕರು ಕಾಮೆಂಟ್​ ಬರೆಯುವ ಬರೆದಿದ್ದಾರೆ.

ನಜ್ಜುಗುಜ್ಜಾದ ಕಾರು

ನಜ್ಜುಗುಜ್ಜಾದ ಕಾರು

 • Share this:
  ರಸ್ತೆ ಅಪಘಾತಗಳು (Road Accidents) ನಡೆಯದಂತೆ ರಸ್ತೆ ಮೇಲೆ ಎಚ್ಚರಿಕೆ ಫಲಕಗಳನ್ನು (Board) ಹಾಕುತ್ತಾರೆ. ಆದರೆ ಜಬಲ್​ಪುರ್​​ದ (Jabalpur) ರಸ್ತೆಯೊಂದರಲ್ಲಿ ಎಚ್ಚರಿಕೆಯ ಬೋರ್ಡ್​ ಬದಲಾಗಿ ಏನು ಹಾಕಿದ್ದಾರೆ ಗೊತ್ತಾ?. ಈ ವಿಡಿಯೋ ನೋಡಿದ್ರೆ ಅಪಘಾತ ವಲಯ ಎಂಬುದು ಚೆನ್ನಾಗಿ ಗೊತ್ತಾಗುತ್ತದೆ. ಯಾಕಂದ್ರೆ ರಸ್ತೆಯ ಬದಿಯಲ್ಲಿ ಅಪಘಾತವಾದ ಕಾರನ್ನು ಡಿಸ್​ಪ್ಲೇ (Display) ಇಡುವ ಮೂಲಕ ಇದು ಅಪಘಾತ ವಲಯ ಎಂಬುದನ್ನು ಇದು ತೋರಿಸಿದ್ದಾರೆ. ಸವಾರರು ಈ ಕಾರನ್ನು ನೋಡಿಯೇ ಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದಾರೆ.

  ಸಾಮಾನ್ಯವಾಗಿ ಭಾರತದ ರಸ್ತೆಯಲ್ಲಿ ನಾಮಫಲಕ ಹಾಕಿದರೂ ಕೆಲವರಿಗೆ ಅದನ್ನು ಓದಲು ಅಥವಾ ಅದರ ಕಡೆಗೆ ಹೆಚ್ಚು ಗಮನಕೊಡಲು ಮುಂದಾಗುವುದಿಲ್ಲ. ಕೆಲವರಂತೂ ಅಪಘಾತ ವಲಯವಿದ್ದರು ಎಚ್ಚರಿಕೆಯ ಬೋರ್ಡ್​ ನೋಡಿ ಕ್ಯಾರೆ ಎನ್ನದೆ ವಾಹನ ಚಲಾಯಿಸುತ್ತಾರೆ. ಆದರೆ ವಾಹನ ಸವಾರರಿಗೆ ಸರಿಯಾಗಿ ಅರ್ಥವಾಗಲಿ ಎಂಬ ಕಾರಣಕ್ಕೆ ಮಧ್ಯ ಪ್ರದೇಶದ ಜಬಲ್​ಪುರ್​​ದ ಲೆಮ್ಹೆಟಾ ಘಾಟ್​ ರಸ್ತೆಯಲ್ಲಿ ಆಕ್ಸಿಡೆಂಟ್​ ಆದ ಕಾರನ್ನು ಎಚ್ಚರಿಕೆ ಫಲಕವಾಗಿ ಡಿಸ್​ಪ್ಲೇಗೆ ಮಾಡಿದ್ದಾರೆ. ಇದನ್ನು ನೋಡಿದವಿಗೆ ಇದೊಂದು ಅಪಘಾತ ವಲಯ ಎಂಬುದು ಮನವರಿಕೆಯಾಗುತ್ತದೆ. ಜೊತೆಗೆ ವಾಹನ ಸವಾರರು ಈ ಕಾರನ್ನು ನೋಡಿದ ತಕ್ಷಣ ನಿಧಾನವಾಗಿ ಚಲಿಸಲು ಮುಂದಾಗುತ್ತಾರೆ.

  ಮೆರಾ. ಜಬಲ್​ಪುರ್​​ ಎಂಬ ಇನ್​​ಸ್ಟಾಗ್ರಾಂ ಖಾತೆ ಈ ವಿಡಿಯೋವನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಈಗಾಗಲೇ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋ ನೋಡಿ ಲೈಕ್​ ಮಾಡಿದ್ದಾರೆ. ಜೊತೆಗೆ ಅನೇಕರು ಕಾಮೆಂಟ್​ ಬರೆದಿದ್ದಾರೆ.

  ಇದನ್ನೂ ಓದಿ: Tamil Nadu: ತಮಿಳುನಾಡಿನಿಂದ ನಾಪತ್ತೆಯಾದ ನಟರಾಜನ ಮೂರ್ತಿ ನ್ಯೂಯಾರ್ಕ್​​ನಲ್ಲಿ ಪತ್ತೆ!

  ವಿಡಿಯೋದಲ್ಲಿ ಲೆಮ್ಹೇಟಾ ಘಾಟ್​ ರಸ್ತೆಯಲ್ಲಿ ಈ ದೃಶ್ಯ ಕಾಣಬಹುದಾಗಿದೆ. ಸಿಲ್ವರ್​ ಬಣ್ಣದ ನಜ್ಜುಗುಜ್ಜಾದ ಸ್ವಿಫ್ಟ್​ ಕಾರನ್ನು ಈ ಪ್ರದೇಶದಲ್ಲಿ ಎಚ್ಚರಿಕೆಯ ಸಂದೇಶ ಸಾರಲು ಬಳಸಿದ್ದಾರೆ. ಅಪಘಾತದ ವಲಯ ಎಚ್ಚರಿಕೆಯಿಂದ ವಾಹನ ಚಲಯಾಯಿಸಿ ಎಂಬುದು ಈ ಡಿಸ್​ಪ್ಲೇಯ ಮುಖ್ಯ ಉದ್ದೇಶವಾಗಿದೆ.

  ಇದನ್ನೂ ಓದಿ: Eggs: ಅಗತ್ಯಕ್ಕಿಂತ ಹೆಚ್ಚು ಮೊಟ್ಟೆ ತಿನ್ನಬೇಡಿ! ಯಾಕಂದ್ರೆ ಈ ಸಮಸ್ಯೆ ಎದುರಾಗಬಹುದು

  ಭಾರತದಲ್ಲಿ ಸುರಕ್ಷಿತವಾಗಿ ರಸ್ತೆ ನಿಯಮ ಜಾರಿಗೆ ತಂದರೂ ಅದನ್ನು ಗಾಳಿಗೆ ತೂರಿ ವಾಹನ ಚಲಾಯಿಸುವವರ ಸಂಖ್ಯೆಯೇ ಹೆಚ್ಚು. ಅದರಲ್ಲೂ ಸಿಂಗಲ್​ ಬಿಡುವುದಕ್ಕೂ ಮೊದಲೇ ಗೇರ್​​ ಎಳೆದು ರಭಸವಾಗಿ ವಾಹನ ಓಡಿಸುವವರನ್ನು ನೋಡಬಹುದಾಗಿದೆ. ರಸ್ತೆ ನಿಯಮ ಪಾಲಿಸದೇ ಸಾವಿಗೀಡಾಗುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ನಿಯಮ ಮೀರಿ ಚಲಾಯಿಸಿ ತೊಂದರೆಯಲ್ಲಿ ಸಿಲುಕುವವರೇನೂ ಕಡಿಮೆಯಿಲ್ಲ.

  ವಾಹನ ಚಲಾಯಿಸುವಾಗ ಸೀಟ್​ ಬೆಲ್ಟ್​​ ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮವಿದ್ದರೂ ಅದನ್ನು ಧರಿಸುವವರೇ ಹೆಚ್ಚು. ಹೀಗಾಗಿ ಅಪಘಾತದ ಸಮಯದಲ್ಲಿ ಡ್ರೈವರ್​ ಅಥವಾ ಮುಂಬಾಗದ ಸವಾರ ಬದುಕುಳಿಯುವುದು ತೀರಾ ಅಪರೂಪ.


  ರಸ್ತೆ ಬದಿಯಲ್ಲಿ ಬೋರ್ಡ್​ ಹಾಕಿದ್ದರೂ ಅದನ್ನು ನೋಡದೆ ಮತ್ತು ಅದರ ಸರಿಯಾದ ಅರ್ಥ ತಿಳಿಯದೇ ವಾಹನ ಓಡಿಸಿ ಅಪಘಾತವಾಗುವ ಸನ್ನಿವೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ. ಅದರಂತೆಯೇ ಜಬಲ್​ಪುರದಲ್ಲಿ ಅಪಘಾತ ವಲಯ ಎಂಬ ಎಚಚರಿಕೆ ಸಾರಲು ನಜ್ಜುಗುಜ್ಜಾದ ಕಾರನ್ನು ರಸ್ತೆ ಬದಿಯಲ್ಲಿ ಇಟ್ಟಿದ್ದಾರೆ. ಈ ದೃಶ್ಯದಿಂದ ಅನೇಕರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಾರೆ.

  ಸುರಕ್ಷತೆಗೆ ಗಮನ ಕೊಡಿ: ರಸ್ತೆ ಪ್ರಯಾಣದ ವೇಳೆ ಸರಿಯಾದ ಸುರಕ್ಷತೆಯ ಕ್ರಮ ತೆಗೆದುಕೊಂಡು ವಾಹನ ಚಲಾಯಿಸಬೇಕಿದೆ. ಬಹುತೇಕರು ವಾಹನ ಹತ್ತಿ ಹೊರಟು ಹೋಗುತ್ತಾರೆ. ಆದರೆ ವಾಹನ ಸ್ಟಾರ್ಟ್​​ ಮಾಡುವ ಮುನ್ನ ವಾಹನದಲ್ಲಿ ಯಾವ ಬಿಡಿ ಭಾಗಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪರೀಕ್ಷಿಸಿ ನಂತರ ಚಲಾಯಿಸುವುದು ಒಳಿತು.
  Published by:Harshith AS
  First published: