Russia Ukraine War: ಉಕ್ರೇನ್ ಕೃಷಿ ಭೂಮಿ ಸುಟ್ಟುಹಾಕಿದ ರಷ್ಯಾ! ಬೆಂಕಿ ನಂದಿಸಲು ರೈತರ ಪರದಾಟ

ರಷ್ಯಾ ಉಕ್ರೇನ್ ದಾಳಿಯು ನಿರಂತರವಾಗಿ ನಡೆಯುತ್ತಿದೆ. ಇದೀಗ ಉಕ್ರೇನಿನ ಆಹಾರ ಉತ್ಪನ್ನಗಳನ್ನು ರಷ್ಯಾ ಶೆಲ್ ಸುಟ್ಟುಹಾಕಿದೆ. ಉಕ್ರೇನಿನ ರೈತರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಯತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಷ್ಯಾ ಸುಟ್ಟು ಹಾಕಿದ ಬೆಳೆಯ ಮೇಲಿನ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವ ಉಕ್ರೇನ್ ರೈತರು

ರಷ್ಯಾ ಸುಟ್ಟು ಹಾಕಿದ ಬೆಳೆಯ ಮೇಲಿನ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವ ಉಕ್ರೇನ್ ರೈತರು

  • Share this:
ಕಳೆದ ಪೆಬ್ರವರಿ ತಿಂಗಳಿನಲ್ಲಿ ಆರಂಭವಾದ ಉಕ್ರೇನ್ (Ukraine) ರಷ್ಯಾ (Russia) ನಡುವಿನ ಯುದ್ಧವು (War) ಇನ್ನೂ ನಿರಂತರವಾಗಿ ನಡೆಯುತ್ತಲೇ ಇದೆ. ಇಡೀ ಪ್ರಪಂಚದಲ್ಲಿ ನಡುಕ ಹುಟ್ಟಿಸಿದ ಈ ಎರಡು ರಾಷ್ಟ್ರಗಳ ನಡುವಿನ ಯುದ್ಧವು ಎಂದಿಗೆ ಕೊನೆಯಾಗುತ್ತದೆ ಎಂಬುದು ಇಡೀ ವಿಶ್ವದ (World) ಜನರ ಪ್ರಶ್ನೆಯಾಗಿದೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಉಕ್ರೇನ್ ಅನ್ನು ರಷ್ಯಾ ಹಿಂಸಿಸುತ್ತಲೇ ಇದೆ. ರಷ್ಯಾದ ದಾಳಿಯಿಂದಾಗಿ (Attack) ಅಪಾರವಾದ ಸಾವು ನೋವುಗಳನ್ನು ಅನುಭವಿಸಿದ ಉಕ್ರೇನ್ ಪರಿಸ್ಥಿತಿ ಇದೀಗ ವಿಷಾದನೀಯವಾಗಿದೆ. ದಾಳಿಯಿಂದಾಗಿ ಎಲ್ಲವನ್ನೂ ಕಳೆದುಕೊಂಡ ಉಕ್ರೇನ್ ಜನರ ಹೊಟ್ಟೆಯ ಮೇಲೂ ರಷ್ಯಾ ದಾಳಿ ಮಾಡುತ್ತಿದೆ. ಇದೀಗ ಉಕ್ರೇನ್ ರೈತರು (Framers) ರಷ್ಯಾದ ಶೆಲ್ (Russian Shell) ದಾಳಿಯಿಂದ ಬೆಳೆಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ.

ನಿರಂತರವಾಗಿ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧ
ಅನೇಕ ವರ್ಷಗಳಿಂದ ಈ ಎರಡೂ ದೇಶಗಳ ನಡುವೆ ವೈಮನಸ್ಸು ಇದಿದ್ದು ಕಳೆದ ಪೆಬ್ರವರಿ ತಿಂಗಳಿನಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದೆ. ಮತ್ತು ಉಕ್ರೇನ್ ಜನ ಜೀವನವನ್ನೆ ಅಸ್ತವ್ಯಸ್ತಗೊಳಿಸಿದೆ. ಅಲ್ಲದೆ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಲು ದ್ವೇಷದ ದಾರಿ ಹಿಡಿದಿರುವ ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ.

ಇದನ್ನೂ ಓದಿ: Laser Weapon: ಉಕ್ರೇನ್ ಮಣಿಸಲು ರಷ್ಯಾದ ಲೇಸರ್‌ ಅಸ್ತ್ರ! ಎಷ್ಟು ಭಯಂಕರವಾಗಿರಲಿದೆ ಈ ಹೊಸ ಶಸ್ತ್ರ?

ಉಕ್ರೇನ್ ಕೃಷಿ ಭೂಮಿಯನ್ನು ಗುರಿಯಾಗಿಸಿದ ರಷ್ಯಾ
ಉಕ್ರೇನ್ನಲ್ಲಿ ಗೋಧಿ ಮತ್ತು ಜೋಳವನ್ನು ಅತಿಯಾಗಿ ಬೆಳೆಸುತ್ತಾರೆ. ಇಲ್ಲಿನ ಆಹಾರ ಉತ್ಪನ್ನಗಳ ಮೇಲೆ ಇದೀಗ ರಷ್ಯಾ ಗುರಿ ಇಟ್ಟಿದೆ ಮತ್ತು ಆಹಾರ ಉತ್ಪಾದನೆಗಳ ರಫ್ತಿನ ಪ್ರಮಾಣವನ್ನು ಕುಂಠಿತಗೊಳಿಸಲು ಕೃಷಿ ಭೂಮಿಯ ಮೇಲೆ ದಾಳಿ ಮಾಡಿದೆ.

ಬೆಳೆಗಳನ್ನು ಸುಟ್ಟು ಹಾಕಿದ ರಷ್ಯಾ
ಉಕ್ರೇನಿನ ಆಹಾರ ಉದ್ಯಮಗಳನ್ನು ಅಡ್ಡಿಪಡಿಸುವ ಪ್ರಯತ್ನದಲ್ಲಿರುವ ರಷ್ಯಾದ ಪಡೆಗಳು ಈಗ ಉಕ್ರೇನಿನ ಕೃಷಿ ಭೂಮಿಯನ್ನು ಗುರಿಯಾಗಿಸಿದೆ. ಅಲ್ಲದೆ ಬೆಳೆಗಳ ಮೇಲೆ ಬೆಂಕಿ ಹಾಕಿದೆ. ಸುಟ್ಟು ಹೋಗುತ್ತಿರುವ ಬೆಂಕಿಯನ್ನು ನಂದಿಸಲು ರೈತರು ಪರದಾಡುತ್ತಿದ್ದಾರೆ.





ಟ್ವಿಟ್ಟರ್ನಲ್ಲಿ ವೀಡಿಯೋ ಹಂಚಿಕೊಂಡ ರಾಜತಾಂತ್ರಿಕ ಶೆರ್ಬಾ
ಉಕ್ರೇನಿನ ರೈತರು ಸುಟ್ಟು ಹೋಗುತ್ತಿರುವ ಬೆಳೆಗಳನ್ನು ರಕ್ಷಿಸಲು ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವ ವೀಡಿಯೋ ಕ್ಲಿಪ್ ಅನ್ನು ಉಕ್ರೇನಿನ ರಾಜತಾಂತ್ರಿಕ ಒಲೆಕ್ಸಾಂಡರ್ ಶೆರ್ಬಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಮತ್ತು "ಮೈಕ್ರೋಲೈವ್ನಲ್ಲಿ ದೈನಂದಿನ ಶೆಲ್ ದಾಳಿಯಿಂದ ಉಕ್ರೇನಿಯನ್ ರೈತರು ಬೆಳೆಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ." ಎಂದು ಬರೆದುಕೊಂಡಿದ್ದಾರೆ.

58 ಸೆಕೆಂಡುಗಳ ವೀಡಿಯೋ
58 ಸೆಕೆಂಡುಗಳ ಅವಧಿಯ ವಿಡಿಯೋದಲ್ಲಿ ಕೊಯ್ಲಿಗೆ ಸಿದ್ಧವಾಗಿದ್ದ ಬೆಳೆಯ ಮೇಲೆ ರಷ್ಯಾ ಬೆಂಕಿ ಹಾಕಿದ್ದು, ಹೊಲದಲ್ಲಿ ಹರಡುತ್ತಿರುವ ಬೆಂಕಿಯನ್ನು ನಂದಿಸಲು ರೈತರು ಗುಂಪು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ರೈತನೊಬ್ಬನು ಟ್ರಾಕ್ಟರ್ ಮೇಲೆ ಮೇಲೆ ಕುಳಿತು ನೀರಿನ ಪೈಪ್ ಬಳಸಿ ಬೆಂಕಿಯನ್ನು ನಂದಿಸುತ್ತಿದ್ದಾನೆ. ಕೃಷಿ ಭೂಮಿಯಲ್ಲಿ ಭಾರಿ ಹೊಗೆ ಬರುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದೆ.

ಜಾಗತಿಕ ಮಟ್ಟದಲ್ಲಿ ಆಹಾರ ಬೆಳೆಗಳ ಬೆಲೆಯ ಹೆಚ್ಚಳಕ್ಕೆ ಕಾರಣ
ವೀಡಿಯೊವನ್ನು ಹಂಚಿದಾಗಿನಿಂದ 68K ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಮತ್ತು 600 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ. ಈ ವಿಷಾದನೀಯ ಘಟನೆಯ ಬಗ್ಗೆ ಜನರು ದುಖವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ಉಕ್ರೇನಿನಲ್ಲಿ ಬೆಳೆಗಳ ನಾಶವು ಜಾಗತಿಕ ಮಟ್ಟದಲ್ಲಿ ಆಹಾರ ಬೆಳೆಗಳ ಬೆಲೆ ಗಗನಕ್ಕೇರಲು ಕಾರಣವಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

ಉಕ್ರೇನ್ ಯುರೋಪಿನ "ಬ್ರೆಡ್ ಬಾಸ್ಕೇಟ್"
ಉಕ್ರೇನ್ ಅನ್ನು ಯುರೋಪಿನ ಬ್ರೆಡ್ ಬಾಸ್ಕೆಟ್ ಎಂದು ಕರೆಯಲಾಗುತ್ತದೆ. ಫೈನಾನ್ಶಿಯಲ್ ಟೈಮ್ಸ್ ಪ್ರಕಾರ, ಉಕ್ರೇನ್ ಕಳೆದ ವರ್ಷ ದಾಖಲೆಯ ಪ್ರಕಾರ 33 ಮಿಲಿಯನ್ ಟನ್ ಧಾನ್ಯಗಳನ್ನು ಉತ್ಪಾದಿಸಿದೆ ಮತ್ತು ಯುಎಸ್ ಕೃಷಿ ಇಲಾಖೆ ಮುನ್ಸೂಚನೆಯ ಪ್ರಕಾರ, ಈ ವರ್ಷ 24 ಮಿಲಿಯನ್ ಟನ್ ಧಾನ್ಯಗಳನ್ನು ರಫ್ತು ಮಾಡುವ ನಿರೀಕ್ಷೆಯಿದೆ. ಯುಎನ್ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಾರ, ದೇಶವು ವಿಶ್ವದ ಐದನೇ ಅತಿದೊಡ್ಡ ಗೋಧಿ ರಫ್ತುದಾರನಾಗಿದೆ.

ಇದನ್ನೂ ಓದಿ: Ukraine Crisis: ಉಕ್ರೇನ್​ನಿಂದ ಓಡಿಹೋದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದಲ್ಲಿ ಸ್ವಾಗತ

ಆದರೆ ಪ್ರಸ್ತುತದ ಪರಿಸ್ಥಿತಿಯನ್ನು ಗಮನಿಸಿದರೆ, ಉಕ್ರೇನಿನ ಆಹಾರ ಬೆಳೆಗಳ ಮೇಲೆ ರಷ್ಯಾದ ದಾಳಿಯಿಂದಾಗಿ ಉಕ್ರೇನಿನ ಜನತೆಯೇ ಈ ವರ್ಷ ಆಹಾರ ಉತ್ಪನ್ನಗಳಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಬಹುದು.
Published by:Nalini Suvarna
First published: