• Home
  • »
  • News
  • »
  • trend
  • »
  • Viral Video: ಗಣಿತದ ಸೂತ್ರಗಳನ್ನು ಎಷ್ಟು ಸುಲಭವಾಗಿ ಕಲಿಸಿದ್ದಾರೆ ನೋಡಿ ಈ ಶಿಕ್ಷಕ!

Viral Video: ಗಣಿತದ ಸೂತ್ರಗಳನ್ನು ಎಷ್ಟು ಸುಲಭವಾಗಿ ಕಲಿಸಿದ್ದಾರೆ ನೋಡಿ ಈ ಶಿಕ್ಷಕ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತೀಯ ಶಿಕ್ಷಕ ಬಾಲ ರೆಡ್ಡಿ ಅವರು ಸಂಕೀರ್ಣ ಗಣಿತ ಸೂತ್ರಗಳು ಮತ್ತು ಪ್ರಮೇಯಗಳನ್ನು ಸಂಕ್ಷಿಪ್ತವಾಗಿ ಮತ್ತು ಹಾಡುಗಳ ರೂಪಕ್ಕೆ ಪರಿವರ್ತಿಸಿದ್ದಾರೆ.

  • Share this:

ಶಾಲೆಯಲ್ಲಿ ಈ ಗಣಿತ (Mathematics) ವಿಷಯದ ಪಿರಿಯಡ್ ಶುರುವಾಯಿತು ಎಂದರೆ ಬಹುತೇಕರಿಗೆ ಒಂದು ರೀತಿಯ ತಲೆನೋವು ಶುರುವಾಗುತ್ತಿತ್ತು. ಗಣಿತ ವಿಷಯ ಅನೇಕರಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಈ ಗಣಿತ ವಿಷಯವನ್ನು ಮಕ್ಕಳಿಗೆ ಹೇಳಿಕೊಡುವ ಶಿಕ್ಷಕರು (Teachers) ಸಹ ಬೇರೆ ಭಾಷೆಯ ವಿಷಯಗಳ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಗಂಭೀರವಾಗಿಯೇ ಇರುತ್ತಾರೆ. 


ಆದರೂ ಸಹ ಎಷ್ಟೋ ಮಂದಿ ಶಿಕ್ಷಕರು ಮಕ್ಕಳಿಗೆ  ಈ ಜಟಿಲವಾದ ವಿಷಯ ಅರ್ಥವಾಗಲಿ ಅಂತ ಅನೇಕ ರೀತಿಯ ಉದಾಹರಣೆಗಳನ್ನು ನೀಡುವುದರ ಮೂಲಕ ಮತ್ತು ಸಾಮಾನ್ಯ ಜೀವನಕ್ಕೆ ಹತ್ತಿರವಾಗುವಂತಹ ವಿಷಯಗಳಿಗೆ ಸಂಬಂಧ ಕಲ್ಪಿಸಿ ವಿಷಯವನ್ನು ಮಕ್ಕಳಿಗೆ ಮನದಟ್ಟು ಮಾಡಿಸಲು ಪ್ರಯತ್ನಿಸುವುದನ್ನು ನಾವು ನಾನಾ ಶಾಲೆಗಳ ತರಗತಿಗಳಲ್ಲಿ ನೋಡಿರುತ್ತೇವೆ.


ಗಣಿತ ವಿಷಯ ಜಟಿಲವಾದ ವಿಷಯವೇ?
ಅನೇಕ ಶಿಕ್ಷಕರು ಇಂತಹ ಜಟಿಲವಾದ ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡುವಾಗ ವಿಭಿನ್ನವಾದ ರೀತಿಯಲ್ಲಿ ಸಹ ಪಾಠ ಮಾಡಲು ಪ್ರಯತ್ನಿಸುವುದನ್ನು ಸಹ ನಾವು ನೋಡಿರುತ್ತೇವೆ. ಹೀಗಾದಾಗ ಮಾತ್ರ ಮಕ್ಕಳಿಗೆ ಇಂತಹ ಜಟಿಲವಾದ ವಿಷಯಗಳು ಬೇಗನೆ ಅರ್ಥವಾಗಲು ಸಾಧ್ಯವಾಗುತ್ತದೆ.


ಅನೇಕರಿಗೆ ಈ ಗಣಿತ ವಿಷಯ ಅಂತ ಬಂದಾಗ ಅದರಲ್ಲಿರುವ ಲೆಕ್ಕಗಳನ್ನು ಬಿಡಿಸುವುದಕ್ಕಿಂತಲೂ ಕಷ್ಟಕರವಾದ ಕೆಲಸ ಎಂದರೆ ಆ ಲೆಕ್ಕವನ್ನು ಬಿಡಿಸಲು ಬಳಸುವ ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು ಆಗಿರುತ್ತದೆ. ನಮಗೆಲ್ಲಾ ನಮ್ಮ ಶಿಕ್ಷಕರು ಶಾಲೆಯಲ್ಲಿ ಜೋರಾಗಿ ಹೇಳಿಸಿ ಆ ಸೂತ್ರಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡುತ್ತಿದ್ದದ್ದನ್ನು ಇನ್ನೂ ನೆನಪಿಸಿಕೊಳ್ಳಬಹುದು.


ಹಾಡಿನ ರೂಪದಲ್ಲಿ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟ ಮೇಷ್ಟ್ರು
ಇಂತಹ ಸಮಸ್ಯೆ ವಿದ್ಯಾರ್ಥಿಗಳಿಗೆ ಕಾಡಬಾರದು ಅಂತ ವಿದ್ಯಾರ್ಥಿಗಳಿಗೆ ಸೂತ್ರಗಳನ್ನು ನೆನಪಿಟ್ಟುಕೊಳ್ಳಲು ಮತ್ತು ವಿಷಯವನ್ನು ಇನ್ನಷ್ಟು ಸುಲಭ ಮತ್ತು ರೋಮಾಂಚಕವಾಗಿಸಲು ಇಲ್ಲೊಬ್ಬ ಶಿಕ್ಷಕ ಅನುಸರಿಸಿದ ಹೊಸ ಮಾದರಿಯನ್ನು ಒಮ್ಮೆ ನೀವು ನೋಡಲೇಬೇಕು.


ಇದನ್ನೂ ಓದಿ:  Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ


ಭಾರತೀಯ ಶಿಕ್ಷಕ ಬಾಲ ರೆಡ್ಡಿ ಅವರು ಸಂಕೀರ್ಣ ಗಣಿತ ಸೂತ್ರಗಳು ಮತ್ತು ಪ್ರಮೇಯಗಳನ್ನು ಸಂಕ್ಷಿಪ್ತವಾಗಿ ಮತ್ತು ಹಾಡುಗಳ ರೂಪಕ್ಕೆ ಪರಿವರ್ತಿಸಿದ್ದಾರೆ. ಈಗ, ಅವರು ಯುಎಸ್ ನಲ್ಲಿ ವಿದ್ಯಾರ್ಥಿಗಳಿಗೆ ಗಣಿತದಲ್ಲಿನ ಸೂತ್ರಗಳನ್ನು ಕಲಿಸುವುದರ ಒಂದು ಹಳೆಯ ವಿಡಿಯೋ ಆನ್ಲೈನ್ ನಲ್ಲಿ ಮತ್ತೊಮ್ಮೆ ಹರಿದಾಡಲು ಶುರು ಮಾಡಿದೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ. "ಗಣಿತವೂ ಸಹ ವಿನೋದಮಯವಾಗಿರಬಹುದು... ಭಾರತೀಯ ಶಿಕ್ಷಕರು ಅಮೆರಿಕದಲ್ಲಿ ಟ್ರಿಗ್ನೋಮೆಟ್ರಿಯನ್ನು ಕಲಿಸುತ್ತಿದ್ದಾರೆ" ಎಂದು 'ಎಕೆ ಇನ್ಸ್ಫೈರ್' ಎಂಬ ಹೆಸರಿನ ಟ್ವಿಟರ್ ಖಾತೆಯ ಪುಟದಲ್ಲಿ ಹಂಚಿಕೊಂಡ ವಿಡಿಯೋದ ಜೊತೆಗೆ ಶೀರ್ಷಿಕೆಯನ್ನು ಬರೆದಿದ್ದಾರೆ.


ಈ ವಿಡಿಯೋದಲ್ಲಿ, ಬಾಲಾ ರೆಡ್ಡಿ ಅವರು ಗಣಿತದ ಸೂತ್ರಗಳನ್ನು ಹಾಡಿನ ರೂಪದಲ್ಲಿ ಜೋರಾಗಿ ಹಾಡುವುದರ ಮೂಲಕ ಅವರಿಗೆ ತಿಳಿಸುತ್ತಿರುವುದನ್ನು ನಾವು ಇಲ್ಲಿ ನೋಡಬಹುದು. ಈ ವಿಡಿಯೋ ನೋಡಿದರೆ ಸೂತ್ರಗಳನ್ನು ಹೇಗೆ ನೆನಪಿಟ್ಟುಕೊಳ್ಳಬಹುದು ಅಂತ ಒಂದು ಐಡಿಯಾ ಸಿಗುವುದರ ಜೊತೆಗೆ ನಿಮ್ಮ ಗಣಿತದ ಭಯವನ್ನು ತೊಡೆದುಹಾಕಲು ಸಹಾಯ ಮಾಡುವುದಂತೂ ಗ್ಯಾರೆಂಟಿ ಎಂದು ಹೇಳಬಹುದು.


ಈ ವಿಡಿಯೋವನ್ನು ಸಿಕ್ಕಾಪಟ್ಟೆ ಜನ ನೋಡಿದ್ದಾರೆ
ಒಂದು ದಿನದ ಹಿಂದೆ ಅಷ್ಟೇ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದುವರೆಗೆ ಈ ವಿಡಿಯೋ 8.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಆ ಸಂಖ್ಯೆಗಳು ಇನ್ನೂ ಹೆಚ್ಚುತ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್ ಗಳನ್ನು ಸಹ ಹಾಕಿದ್ದಾರೆ.


ಇದನ್ನೂ ಓದಿ:  Viral News: ಸತ್ತ ಕೀಟ ಮತ್ತೆ ಜೀವಂತ! ಈ ವಿಚಿತ್ರ ಸಂಗತಿಯ ಹಿಂದಿನ ಸತ್ಯ ಇಲ್ಲಿದೆ


ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಗಣಿತದಲ್ಲಿ ಬರುವಂತಹ ಸೂತ್ರಗಳನ್ನು ಹೇಗೆ ನೆನಪಿಟ್ಟುಕೊಳ್ಳುವುದು ಅನ್ನೋದರ ಬಗ್ಗೆ ಅನೇಕ ಸಲಹೆಗಳು ಮತ್ತು ತಂತ್ರಗಳನ್ನು ಸಹ ಕಾಮೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.

Published by:Ashwini Prabhu
First published: