ಈಗಂತೂ ನಮ್ಮಲ್ಲಿ ಹೊಸ ಹೊಸ ಮಾದರಿಯ ಎಸ್ಯುವಿಗಳನ್ನು (SUV) ಈ ಎಸ್ಯುವಿ ತಯಾರಕ ಕಂಪನಿಗಳು (Company) ತಯಾರಿಸುತ್ತಿವೆ ಅಂತ ಹೇಳಬಹುದು. ಅದರಲ್ಲೂ ಮಹೀಂದ್ರಾ ದೇಶದ ಜನಪ್ರಿಯ ಎಸ್ಯುವಿ ತಯಾರಕರಲ್ಲಿ ಒಂದಾಗಿದೆ. ಅವರು ಈಗಾಗಲೇ ಥಾರ್, ಸ್ಕಾರ್ಪಿಯೋ ಮತ್ತು ಬೊಲೆರೊದಂತಹ ಮಾದರಿಗಳನ್ನು ಹೊರ ತಂದಿದ್ದು ನಮಗೆಲ್ಲಾ ಗೊತ್ತೇ ಇದೆ. ಮಹೀಂದ್ರಾ ಕಂಪನಿಯು ಮಾರುಕಟ್ಟೆಯಲ್ಲಿ (Market) ಬಿಡುಗಡೆ ಮಾಡಿದ ಇತ್ತೀಚಿನ ಎಸ್ಯುವಿಗಳಲ್ಲಿ ಎಕ್ಸ್ಯುವಿ 700 ಕೂಡ ಒಂದು ಅಂತ ಹೇಳಬಹುದು. ಇದು ಕಳೆದ ವರ್ಷವಷ್ಟೆ ಬಿಡುಗಡೆಯಾದ ಹೊಸ ಎಸ್ಯುವಿ ಆಗಿದೆ. ಎಕ್ಸ್ಯುವಿ 700 ಮಹೀಂದ್ರಾ ಕಂಪನಿಯಿಂದ (Mahindra Company) ತಯಾರಾದ ವೈಶಿಷ್ಟ್ಯಭರಿತ ಮತ್ತು ತಾಂತ್ರಿಕವಾಗಿ ಸುಧಾರಿತ ಎಸ್ಯುವಿ ಆಗಿದೆ. ಇದು ಎಷ್ಟು ಜನಪ್ರಿಯವಾಗಿದೆಯೆಂದರೆ, ಈಗ ಈ ಎಸ್ಯುವಿಯನ್ನು ಬುಕ್ ಮಾಡಿದರೆ 6 ತಿಂಗಳುಗಳ ನಂತರ ಇದು ನಮ್ಮ ಕೈಗೆ ಸಿಗುತ್ತದೆ ಅಂತ ಹೇಳಲಾಗುತ್ತಿದೆ.
ಮಹೀಂದ್ರಾ ಎಕ್ಸ್ಯುವಿ 700 ಹೇಗೆ ಜಂಪ್ ಮಾಡಿದೆ ನೋಡಿ
ಎಕ್ಸ್ಯುವಿ 700 ನ ಹಲವಾರು ಮಾರ್ಪಾಡು ವೀಡಿಯೋಗಳನ್ನು ನಾವು ಈಗಾಗಲೇ ಅಂತರ್ಜಾಲದಲ್ಲಿ ನೋಡಿದ್ದೇವೆ. ಆದರೆ ಈಗ ಈ ಎಕ್ಸ್ಯುವಿ 700 ರಸ್ತೆಯಲ್ಲಿ ಜಿಗಿದಿರುವ ವೀಡಿಯೋವನ್ನು ನಾವು ಇಲ್ಲಿ ನೋಡಬಹುದು.
ಈ ವೀಡಿಯೋವನ್ನು ಹಲ್ಕ್ ವ್ಲಾಗ್ಸ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ವಾಸ್ತವವಾಗಿ ಬಹಳ ಚಿಕ್ಕ ವೀಡಿಯೋವಾಗಿದ್ದು, ಈ ಕ್ಲಿಪ್ ನಲ್ಲಿ ಮಹೀಂದ್ರಾ ಎಕ್ಸ್ಯುವಿ 700 ಎಸ್ಯುವಿ ಖಾಲಿ ರಸ್ತೆಯಲ್ಲಿ ವೇಗದಿಂದ ಬರುತ್ತಿರುವುದನ್ನು ನಾವು ನೋಡಬಹುದು.
ಇದನ್ನೂ ಓದಿ: ವಿಶ್ವದಲ್ಲೇ ಅತ್ಯುತ್ತಮ ಅಡುಗೆ ಮಾಡೋದ್ಯಾರು? ಭಾರತ ಟಾಪ್ನಲ್ಲಿ ಇಲ್ಲ!
ನಿರ್ಮಾಣಕ್ಕಾಗಿ ರಸ್ತೆಯನ್ನು ಮುಚ್ಚಲಾಗಿದೆ ಮತ್ತು ಸುತ್ತಲೂ ಬೇರೆ ಯಾವುದೇ ವಾಹನಗಳು ಇಲ್ಲಿ ಓಡಾಡುತ್ತಿಲ್ಲ ಎಂದು ತೋರುತ್ತದೆ. ಈ ರಸ್ತೆಯು ನಾಲ್ಕು ರಸ್ತೆಗಳ ಸಂಧಿಸುವ ಒಂದು ತಗ್ಗನ್ನು ಹೊಂದಿದೆ. ಕಾರು ತುಂಬಾ ವೇಗದಲ್ಲಿ ಬಂದು ಹಾಗೆಯೇ ಒಂದು ಜಂಪ್ ಹೊಡೆದು ಮುಂದಿನ ರಸ್ತೆಗೆ ಹೋಗಿ ಇಳಿದಿದೆ.
ಸಾಮಾನ್ಯವಾಗಿ ಜನರು ಇಂತಹ ಜಂಕ್ಷನ್ ಅನ್ನು ಪ್ರವೇಶಿಸುವ ಮೊದಲು ತಮ್ಮ ವಾಹನವನ್ನು ನಿಧಾನಗೊಳಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಚಾಲಕನ ಉದ್ದೇಶವು ಕಾರನ್ನು ಜಂಪ್ ಮಾಡಿಸುವುದೇ ಆಗಿತ್ತು ಅಂತ ಅನ್ನಿಸುತ್ತಿದೆ.
ಅದಕ್ಕೆ ಕಾರಿನ ವೇಗವನ್ನು ಸ್ವಲ್ಪವೂ ಕಡಿಮೆ ಮಾಡಿಲ್ಲ. ಎಸ್ಯುವಿಯನ್ನು ಒಳ್ಳೆಯ ವೇಗದಲ್ಲಿ ಓಡಿಸಿಕೊಂಡು ಬಂದು ಕೆಲವೇ ಸೆಕೆಂಡುಗಳ ಕಾಲ ಜಂಪ್ ಹೊಡಿಸಿ, ಮುಂದೆ ಇರುವ ರಸ್ತೆಗೆ ಹಾಗೆ ಇಳಿಸುತ್ತಾರೆ ಮತ್ತು ನಿಲ್ಲದೆ ಅದು ಮುಂದಕ್ಕೆ ಹಾಗೆ ಹೋಗುವುದನ್ನು ಸಹ ನಾವು ಈ ವೀಡಿಯೋದಲ್ಲಿ ನೋಡಬಹುದು.
ಚಾಲಕ ಮಾಡಿದ ಈ ಸ್ಟಂಟ್ ತುಂಬಾನೇ ಅಪಾಯಕಾರಿ..
ಚಾಲಕ ಈ ಸ್ಟಂಟ್ ಅನ್ನು ಯಶಸ್ವಿಯಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ವೀಡಿಯೋದಲ್ಲಿ, ಇದು ತುಂಬಾ ಸುಲಭವಾಗಿ ಕಾಣುತ್ತದೆ ಆದರೆ ಇದರಲ್ಲಿ ಸಾಕಷ್ಟು ಅಪಾಯವಿದೆ. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾವುದೇ ಅಪಘಾತಗಳು ಸಂಭವಿಸಲಿಲ್ಲ.
ಎಸ್ಯುವಿಯ ಎಲ್ಲಾ ಚಕ್ರಗಳು ನೆಲಕ್ಕೆ ಸರಿಯಾಗಿ ಇಳಿಸಲ್ಪಟ್ಟಿವೆ ಮತ್ತು ಎಕ್ಸ್ಯುವಿ 700 ಒಂದು ದೊಡ್ಡ ಎಸ್ಯುವಿಯಾಗಿದ್ದು, ವಾಹನದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕಾರು ಗಾಳಿಯಲ್ಲಿದ್ದಾಗ ಚಾಲಕನಿಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತದೆ ಎಂಬ ಬಗ್ಗೆ ಯಾವುದೇ ಖಚಿತತೆ ಇಲ್ಲ. ಎಂಜಿನ್ ಮುಂಭಾಗದಲ್ಲಿ ಇರಿಸಲಾಗಿದ್ದು, ಕೆಲವೊಮ್ಮೆ ಇದು ನಾವು ನಿರೀಕ್ಷಿಸುವುದಕ್ಕಿಂತ ವೇಗವಾಗಿ ರಸ್ತೆಗೆ ಇಳಿಯಬಹುದು. ಅಂತಹ ಸಂದರ್ಭಗಳಲ್ಲಿ, ಚಾಲಕ ಏನನ್ನೂ ಮಾಡಲು ಸಾಧ್ಯವಿಲ್ಲ, ಏಕೆಂದರೆ ಇದು ತುಂಬಾ ವೇಗವಾಗಿರುತ್ತದೆ.
ಈ ರೀತಿಯ ಜಿಗಿತಗಳ ಸಂದರ್ಭದಲ್ಲಿ, ಎಸ್ಯುವಿಯ ಸಸ್ಪೆನ್ಷನ್ ಮುರಿದು ಹೋಗುವ ಸಾಧ್ಯತೆಗಳು ಸಹ ಒಳಗೊಂಡಿರುತ್ತವೆ. ಈ ಎಸ್ಯುವಿಯ ಸಸ್ಪೆನ್ಷನ್ ಅನ್ನು ಅಂತಹ ವಿಪರೀತ ಸ್ಟಂಟ್ ಗಳಿಗಾಗಿ ಮಾಡಲಾಗುವುದಿಲ್ಲ.
ನೀವು ನಿಯಮಿತವಾಗಿ ಇಂತಹ ಸ್ಟಂಟ್ ಗಳನ್ನು ಮಾಡಿದರೆ, ಅದರಿಂದ ಖಂಡಿತವಾಗಿಯೂ ನಿಮ್ಮ ಕಾರ್ ಸಸ್ಪೆನ್ಷನ್ ಹಾಳಾಗುತ್ತದೆ ಎಂದು ಹೇಳಬಹುದು. ಮಹೀಂದ್ರಾ ಎಕ್ಸ್ಯುವಿ 700 ಪ್ರೀಮಿಯಂ ಎಸ್ಯುವಿಯಾಗಿದ್ದು, ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಪೆಟ್ರೋಲ್ ಆವೃತ್ತಿಯು 2.0 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ನಿಂದ ಚಾಲಿತವಾಗಿದೆ ಮತ್ತು ಡೀಸೆಲ್ ಆವೃತ್ತಿಯು 2.2 ಲೀಟರ್ ಟರ್ಬೋಚಾರ್ಜ್ಡ್ ಯುನಿಟ್ ಅನ್ನು ಬಳಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ