Viral video: ಕಣ್ಣುಗಳಲ್ಲಿನ ಮರಳನ್ನು ಹೇಗೆ ಒರೆಸಿಕೊಳ್ಳುತ್ತಿದೆ ನೋಡಿ ಈ ಪುಟ್ಟ ಏಡಿ, ಇಲ್ಲಿದೆ ವೈರಲ್ ವಿಡಿಯೋ

ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಪೋಸ್ಟ್ ಮಾಡಿದ ಕ್ಲಿಪ್‌ನಲ್ಲಿ, ಸಣ್ಣ ಏಡಿಯೊಂದು ತನ್ನ ಉಗುರುಗಳಿಂದ ತನ್ನ ಕಣ್ಣುಗಳನ್ನು ಒರೆಸಿಕೊಳ್ಳುವ ವಿಡಿಯೋ ಸಕತ್‌ ಸದ್ದು ಮಾಡುತ್ತಿದೆ. ಆ ಕುರಿತು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ವಿಡಿಯೋದಲ್ಲಿನ ಏಡಿಯು ಅಟ್ಲಾಂಟಿಕ್ ಏಡಿ ಎಂದು ತಿಳಿದು ಬಂದಿದೆ. ಇದರ ವೈಜ್ಞಾನಿಕ ಹೆಸರು ಒಕೋಪೊಡೆ ಕ್ವಾಡ್ರಾಟಾ ಎಂಬುದು ಆಗಿದೆ.

ಏಡಿ

ಏಡಿ

  • Share this:
ಭೂಮಿಯು ಅನೇಕ ಪ್ರಾಣಿ (Animal) ಮತ್ತು ಜೀವಿಗಳೊಂದಿಗೆ ಸಮೃದ್ಧವಾಗಿದೆ. ಕೆಲವು ಪ್ರಾಣಿಗಳ ಸಾಮರ್ಥ್ಯಗಳು ಮನುಷ್ಯರನ್ನು ವಿಸ್ಮಯಕ್ಕೆ ಕರೆದುಕೊಂಡು ಹೋಗುತ್ತವೆ. ಆ ರೀತಿಯ ವಿಸ್ಮಯ ಹೊಂದಿರುವ ಒಂದು ಪ್ರಾಣಿಯ ವಿಡಿಯೋ ಸಕತ್‌ ವೈರಲ್‌ ಆಗುತ್ತಿದೆ. ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಪೋಸ್ಟ್ ಮಾಡಿದ ಕ್ಲಿಪ್‌ನಲ್ಲಿ, ಸಣ್ಣ ಏಡಿಯೊಂದು (Crab) ತನ್ನ ಉಗುರುಗಳಿಂದ ತನ್ನ ಕಣ್ಣುಗಳನ್ನು ಒರೆಸಿಕೊಳ್ಳುವ ವಿಡಿಯೋ ಸಕತ್‌ ಸದ್ದು ಮಾಡುತ್ತಿದೆ. ಆ ಕುರಿತು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ವಿಡಿಯೋದಲ್ಲಿನ ಏಡಿಯು ಅಟ್ಲಾಂಟಿಕ್ ಏಡಿ (Atlantic crab) ಎಂದು ತಿಳಿದು ಬಂದಿದೆ. ಇದರ ವೈಜ್ಞಾನಿಕ ಹೆಸರು ಒಕೋಪೊಡೆ ಕ್ವಾಡ್ರಾಟಾ ಎಂಬುದು ಆಗಿದೆ.

ನಾಗರಿಕ ವಿಜ್ಞಾನಿ ವೇದಿಕೆಯಾದ ಐನ್ಯಾಚುರಲಿಸ್ಟ್‌ ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ವಿವರಿಸುತ್ತದೆ. ಇದನ್ನು ಹಿಂದೆ "ಸಮುದ್ರದ ಪ್ರಾಚೀನ ಮತ್ತು , ರಹಸ್ಯವಾದ ಅನ್ಯಲೋಕದ ಪ್ರಾಣಿ " ಎಂದು ಕರೆಯಲಾಗುತ್ತಿತ್ತು.

ಅಟ್ಲಾಂಟಿಕ್ ಏಡಿಗಳು ನೋಡಲು ಹೇಗಿರುತ್ತದೆ
ಅಟ್ಲಾಂಟಿಕ್ ಪ್ರೇತ ಏಡಿ ಯು.ಎಸ್.ನ ಪೂರ್ವ ಕರಾವಳಿಯಲ್ಲಿ ಸಾಮಾನ್ಯವಾಗಿದೆ. ರೋಡ್ ಐಲೆಂಡ್ ದಕ್ಷಿಣದಿಂದ ಬ್ರೆಜಿಲ್‌ಗೆ ವಿಸ್ತರಿಸುತ್ತದೆ. 3 ಇಂಚು ಅಗಲದ ಶೆಲ್ ಮತ್ತು ಸುಮಾರು ಮೂರು ವರ್ಷಗಳ ಸರಾಸರಿ ಜೀವಿತಾವಧಿಯೊಂದಿಗೆ, ಹಳದಿ ಬಣ್ಣದ ಕಠಿಣಚರ್ಮಿಗಳು ಬೇಸಿಗೆಯ ಸೂರ್ಯನಿಂದ ಆಶ್ರಯ ಪಡೆಯಲು ಮತ್ತು ಚಳಿಗಾಲದಲ್ಲಿ "ಹೈಬರ್‌ನೇಟ್‌" ಮಾಡಲು ಮರಳಿನ ಮೇಲೆ ಬಿಲಗಳನ್ನು ಅಗೆದು ತಮ್ಮ ಜೀವನವನ್ನು ಕಳೆಯುತ್ತವೆ.

ಟ್ವಿಟರ್ ಬಳಕೆದಾರ ಸೈನ್ಸ್ ಗರ್ಲ್ ಸೂಚಿಸಿದಂತೆ, ಅನೇಕ ಏಡಿಗಳ ಕಣ್ಣುಗಳು "ಕಾಂಡದ ಸಂಯುಕ್ತ ಕಣ್ಣುಗಳು" ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಹೆಚ್ಚು ವಿಕಸನಗೊಂಡ ಕಣ್ಣಿನ ಪ್ರಕಾರವು ಅನೇಕ ಜಾತಿಯ ಕಠಿಣಚರ್ಮಿಗಳಲ್ಲಿ ಕಂಡು ಬರುತ್ತದೆ. ಏಡಿಗಳ ಕಣ್ಣುಗಳು ಕಾಂಡಗಳ ಮೇಲೆ ಇರುತ್ತವೆ ಮತ್ತು ನೈಸರ್ಗಿಕ ಇತಿಹಾಸದ ವಸ್ತು ಸಂಗ್ರಹಾಲಯವಾದ ಏಡಿ ವಸ್ತು ಸಂಗ್ರಹಾಲಯದ ಪ್ರಕಾರ, ಎರಡೂ ಕಣ್ಣುಗಳು ಸುತ್ತಲೂ ತಿರುಗುವ ಸಾಮರ್ಥ್ಯವನ್ನು ಹೊಂದಿವೆ.

ಇದನ್ನೂ ಓದಿ:  Viral Video: ಮೊಸಳೆ ಜೊತೆ ಮನುಷ್ಯನ ಅನುಬಂಧ! ವೈರಲ್ ವಿಡಿಯೋ ನೋಡಿ ದಂಗಾದ ನೆಟ್ಟಿಗರು

ಈ ಏಡಿಗಳು ಕಣ್ಣುಗಳನ್ನು ಮತ್ತು "ದೊಡ್ಡಆಕಾರದ ಕಣ್ಣಿನ ಕಾಂಡಗಳನ್ನು" ರಕ್ಷಿಸಲು, ಅಟ್ಲಾಂಟಿಕ್ ಪ್ರೇತ ಏಡಿಗಳು ತಮ್ಮ ಕಣ್ಣುಗಳ ಮರಳನ್ನು ಒರೆಸಲು ತಮ್ಮ ಬಾಯಿಯ ಭಾಗಗಳನ್ನು ಅಥವಾ ಮ್ಯಾಕ್ಸಿಲಿಪೆಡ್‌ಗಳನ್ನು ಬಳಸುತ್ತವೆ ಎಂದು ಅಲಾಸ್ಕಾ ಮೂಲದ ಸಮುದ್ರ ಜೀವಶಾಸ್ತ್ರಜ್ಞ ಮೊಲ್ಲಿ ಜಲೆಸ್ಕಿ ಸ್ನೋಪ್ಸ್‌ಗೆ ತಿಳಿಸಿದರು.

ಮ್ಯಾಕ್ಸಿಲಿಪೆಡ್‌ಗಳು ಎಂದರೇನು?
ಮ್ಯಾಕ್ಸಿಲಿಪೆಡ್‌ಗಳು ಮಾನವ ಕೈಗಳ ರೀತಿಯ ಚರ್ಮವನ್ನು ಹೊಂದಿವೆ. ಈ ಸಣ್ಣ ಉಪಾಂಗಗಳನ್ನು ಏಡಿಗಳು, ನಳ್ಳಿಗಳು, ಸೀಗಡಿಗಳು ಹೊಂದಿವೆ. ಇವು ಸೀಗಡಿಗಳಿಗೆ ಆಹಾರವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತವೆ. ಅಟ್ಲಾಂಟಿಕ್ ಪ್ರೇತ ಏಡಿಗಳು ಕಣ್ಣುಗಳಿಂದ ಮರಳು ಮತ್ತು ಇತರ ವಸ್ತುಗಳನ್ನು ತೆಗೆದು ಹಾಕುವ ವಿಂಡ್‌ಶೀಲ್ಡ್ ವೈಪರ್-ತರಹದ ಸಾಮರ್ಥ್ಯಗಳನ್ನು ಹೊಂದಿದ್ದಾರೆ, ಈ ಏಡಿಗಳು ನಿಯಮಿತವಾಗಿ ಮರಳಿನಲ್ಲಿ ಹಲವಾರು ಅಡಿ ಆಳದ ಹೊಂಡವನ್ನು ಕೊರೆಯುತ್ತವೆ ಎಂದು ಸಮುದ್ರ ತಜ್ಞರು ತಿಳಿಸುತ್ತಾರೆ.

ತನ್ನ ಕಣ್ಣುಗಳಿಂದ ಮರಳನ್ನು ಒರೆಸುವ ಏಡಿಯ ವಿಡಿಯೋ ವೈರಲ್ 
ಏಡಿಯೊಂದು ತನ್ನ ಕಣ್ಣುಗಳಿಂದ ಮರಳನ್ನು ಒರೆಸುವ ವಿಡಿಯೋವನ್ನು ಆನ್‌ಲೈನ್‌ನಲ್ಲಿ 3 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಕ್ಲಿಪ್ ನೆಟಿಜನ್‌ಗಳನ್ನು ಮಂತ್ರಮುಗ್ಧಗೊಳಿಸಿದೆ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್  ವಿಡಿಯೋದಲ್ಲಿ ಇರುವುದೇನು?
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯ ತೊಡೆಯ ಮೇಲೆ ಸಣ್ಣ ಹರ್ಮಿಟ್ ಏಡಿ ಕುಳಿತಿರುವುದನ್ನು ಕಾಣಬಹುದು. ಅದು ಪೂರ್ತಿ ಮರಳಿನಿಂದ ಆವೃತವಾಗಿತ್ತು ಮತ್ತು ಅದರ ಕಣ್ಣುಗಳಲ್ಲಿಯೂ ಮರಳಿತ್ತು. ಅದೆಲ್ಲದರ ಮೇಲೆ, ಬುದ್ಧಿವಂತ ಏಡಿ ತನ್ನ ಸಣ್ಣ ಉಗುರುಗಳಿಂದ ವೈಪರ್ ತರಹದ ಚಲನೆಯಲ್ಲಿ ಅದನ್ನು ಬೇಗನೆ ಒರೆಸಿಕೊಳ್ಳುತ್ತದೆ. ಇದು ಅತಿ ಮುದ್ದಾದ ಮತ್ತು ಎಲ್ಲರನ್ನು ಬೆರಗುಗೊಳಿಸುವ ಮಂತ್ರಮುಗ್ಧ ವಿಡಿಯೋ ಆಗಿದೆ. ಈ ವೈರಲ್‌ ವಿಡಿಯೋಕ್ಕೆ "ಏಡಿ ತನ್ನ ಕಣ್ಣುಗಳನ್ನು ಒರೆಸುತ್ತಿದೆ" ಎಂದು ಪೋಸ್ಟ್‌ನ ಶೀರ್ಷಿಕೆಯು ಇನ್ನಷ್ಟು ಚೆಂದವಾಗಿ ಕಾಣುತ್ತಿದೆ.ಇದನ್ನೂ ಓದಿ:  Snake Village: ಹಾವಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳೋ ಹಳ್ಳಿ! ಇವರಿಗೆ ಹಾವಿನ ಭಯವೇ ಇಲ್ಲ

ಈ ಏಡಿಯ ತನ್ನ ಕಣ್ಣುಗಳನ್ನು ಒರೆಸಿಕೊಳ್ಳುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿ ಅಲ್ಲ. ಇದು ಸುಮಾರು ಮೂರು ತಿಂಗಳ ಹಿಂದೆ ಇಮ್‌ಗುರ್‌ನಿಂದ ರೆಡ್ಡಿಟ್‌ಗೆ ಹಂಚಿಕೊಂಡಾಗ ಮತ್ತು 108,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಈ ಕ್ಲಿಪ್ ಟಿಕ್‌ಟಾಕ್ ಮತ್ತು ಟ್ವಿಟರ್‌ನಲ್ಲಿಯೂ ಕಾಣಿಸಿಕೊಂಡಿದೆ.
Published by:Ashwini Prabhu
First published: