ಆಗಾಗ ಕಾಡುವ ಆರೋಗ್ಯ (Health) ಸಮಸ್ಯೆಗಳಿಂದಾಗಿ (Problem) ಜನರು ತಮ್ಮನ್ನು ತಾವು ಫಿಟ್ (Fit) ಆಗಿರಿಸಿಕೊಳ್ಳುವತ್ತ ಆದ್ಯತೆ ನೀಡುತ್ತಿದ್ದಾರೆ. ಅನಾರೋಗ್ಯಕರ ಡಯೆಟ್ಗೆ (Diet) ವಿದಾಯ ಹೇಳಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಭಾಗ್ಯ ಎಂಬುದು ಬಹುದೊಡ್ಡ ಸಂಪತ್ತು ಎಂಬುದನ್ನು ಜನರು ಮನವರಿಕೆ ಮಾಡಿಕೊಂಡಿದ್ದಾರೆ. ಇಲ್ಲಿ 80ರ ಅಜ್ಜಿ ಮ್ಯಾರಥಾನ್ನಲ್ಲಿ ಪಾಲ್ಗೊಂಡಿರುವ ವಿಚಾರ ಸಖತ್ ಸುದ್ದಿಯಾಗಿದೆ. ಬನ್ನಿ ಈ ಅಜ್ಜಿ ಬಗ್ಗೆ ತಿಳಿದುಕೊಳ್ಳೋಣ
ಸಾಮಾಜಿಕ ತಾಣಗಳಲ್ಲಿ ಸ್ಫೂರ್ತಿದಾಯಕ ಫಿಟ್ನೆಸ್ ವಿಡಿಯೋಗಳು
ಹಾಗಾಗಿಯೇ ಸಾಮಾಜಿಕ ತಾಣಗಳಲ್ಲಿ ಹಲವಾರು ಫಿಟ್ನೆಸ್ ಸಂಬಂಧಿತ ವಿಡಿಯೋಗಳು ಸುದ್ದಿಗಳನ್ನು ಹೆಚ್ಚಾಗಿ ನೋಡುತ್ತಿರುತ್ತೇವೆ ಹಾಗೂ ವರ್ಕೌಟ್ ಮಾಡಬೇಕು ಅಂತೆಯೇ ತೂಕ ನಷ್ಟವನ್ನು ಮಾಡಬೇಕು ಎನ್ನುವವರಿಗೆ ಇದು ಹೆಚ್ಚಿನ ಸ್ಫೂರ್ತಿಯನ್ನು ನೀಡುತ್ತಿರುತ್ತದೆ.
80 ರ ಹರೆಯದ ವೃದ್ಧೆ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದಾರೆ
ಇದೀಗ ಇಂತಹುದೇ ಒಂದು ಪ್ರೇರಣೆಗೆ 80 ರ ಹರೆಯದ ವೃದ್ಧೆಯೊಬ್ಬರು ಕಾರಣರಾಗಿದ್ದಾರೆ. ಮ್ಯಾರಥಾನ್ನಲ್ಲಿ ಈ ವೃದ್ಧೆ ಭಾಗವಹಿಸಿದ್ದು ಸೀರೆ ಹಾಗೂ ಶೂಗಳನ್ನು ಧರಿಸಿಕೊಂಡು ಕೈಯಲ್ಲಿ ರಾಷ್ಟ್ರಧ್ಜವನ್ನು ಹಿಡಿದುಕೊಂಡು ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದಾರೆ ಹಾಗೂ ಈ ವಿಡಿಯೋ ಇದೀಗ ವೈರಲ್ ಆಗಿದೆ.
ಸಾಧಿಸಿದರೆ ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ವೃದ್ಧೆ ಪ್ರೇರಕ ಶಕ್ತಿಯಾಗಿದ್ದಾರೆ ಅಂತೆಯೇ ವಯಸ್ಸು ಎಂಬುದು ಬರೀ ಸಂಖ್ಯೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಅಜ್ಜಿಯ ವಿಡಿಯೋ ಶೇರ್ ಮಾಡಿದ ಮರಿಮೊಮ್ಮಗಳು
ವೃದ್ಧೆಯ ಮರಿಮೊಮ್ಮಗಳು ಡಿಂಪಲ್ ಮೆಹ್ತಾ ಫರ್ನಾಂಡಿಸ್ ತಮ್ಮ (ತಾಯಿಯ ಅಜ್ಜಿ) ನಾನಿಯ ವಿಡಿಯೋವನ್ನು ಸೆರೆಹಿಡಿದಿದ್ದು ನಂತರ ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೀರೆಯುಟ್ಟು, ಕೈಯಲ್ಲಿ ಧ್ವಜ ಹಿಡಿದು ಮ್ಯಾರಥಾನ್ನಲ್ಲಿ ಅಜ್ಜಿ ಭಾಗವಹಿಸಿದ್ದಾರೆ
80 ರ ಹರೆಯದ ಭಾರ್ತಿಯವರು ಸೀರೆಯುಟ್ಟು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಸ್ನೀಕರ್ ಧರಿಸಿ ಮುಂಬೈಯ ರಸ್ತೆಯಲ್ಲಿ 4.2 ಕಿಮೀ ಓಡಿದ್ದು ಹರೆಯದ ಯುವಕ ಯುವತಿಯರನ್ನು ನಾಚಿಸಿದ್ದಾರೆ.
ಇದೇನೂ ಕಷ್ಟವೇ ಅಲ್ಲ ಎಂಬಂತೆ ಮ್ಯಾರಥಾನ್ನಲ್ಲಿ ಸುಲಲಿತವಾಗಿ ಭಾರ್ತಿ ಓಡಿದ್ದಾರೆ ಹಾಗೂ 51 ನಿಮಿಷಗಳಲ್ಲಿ ತಮ್ಮ ಓಟವನ್ನು ಭಾರ್ತಿ ಕೊನೆಗೊಳಿಸಿದ್ದಾರೆ.
ಐದನೇ ಬಾರಿ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದಾರೆ
ಮುಂಬೈಯ TATA ಮ್ಯಾರಥಾನ್ನಲ್ಲಿ ಭಾಗವಹಿಸಿರುವ ನನ್ನ 80 ರ ಹರೆಯದ ನಾನಿಯ ಇಚ್ಛೆ ಹಾಗೂ ಮನೋಬಲದಿಂದ ನಾನು ಪ್ರೇರಿತಳಾಗಿರುವೆ ಎಂಬ ಶೀರ್ಷಿಕೆ ಇರುವ ಚಿಕ್ಕ ವಿಡಿಯೋವನ್ನು ಡಿಂಪಲ್ ಹಂಚಿಕೊಂಡಿದ್ದಾರೆ.
ಡಿಂಪಲ್ ತಮ್ಮ ಅಜ್ಜಿಯ ಸಂದರ್ಶನವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದು ಭಾರ್ತಿಯವರ ಕಠಿಣ ಅಭ್ಯಾಸ ಹಾಗೂ ಮನೋಬಲಕ್ಕೆ ನಾವು ವಂದಿಸಲೇಬೇಕು. ಭಾರ್ತಿಯವರು ಪ್ರತಿದಿನ ಮ್ಯಾರಥಾನ್ ಅಭ್ಯಾಸ ನಡೆಸುತ್ತಿದ್ದು ಇದು ಐದನೇ ಬಾರಿ ಪಾಲ್ಗೊಂಡಿರುವುದಾಗಿದೆ ಎಂದು ತಿಳಿಸಿದ್ದಾರೆ.
View this post on Instagram
ತಾವು ಭಾರತೀಯರಾಗಿರುವುದಕ್ಕೆ ಹೆಮ್ಮೆ ಇದೆ ಎಂದು ತಿಳಿಸಿರುವ ಭಾರ್ತಿ, ನನ್ನ ರಾಷ್ಟ್ರೀಯ ಗುರುತಿನ ಬಗ್ಗೆ ಜನರು ತಿಳಿದುಕೊಳ್ಳಬೇಕು ಎಂಬುದೇ ನನ್ನ ಬಯಕೆಯಾಗಿದೆ ಹಾಗಾಗಿಯೇ ನಾನು ಕೈಯಲ್ಲಿ ಧ್ವಜ ಹಿಡಿದುಕೊಂಡು ಓಡಿರುವೆ ಎಂದು ತಿಳಿಸಿದ್ದಾರೆ.
ಇಂದಿನ ದಿನಗಳಲ್ಲಿ ಆರೋಗ್ಯ ಎಂಬುದು ಸಂಪತ್ತಾಗಿರಬೇಕು ಎಂದು ಹೇಳಿರುವ ಭಾರ್ತಿಯವರು ಉತ್ತಮ ಆರೋಗ್ಯಕ್ಕಾಗಿ ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮ್ಯಾರಥಾನ್ಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಬಳಕೆದಾರರು ಮಾಡಿರುವ ಕಾಮೆಂಟ್ಗಳೇನು?
ಈ ವಿಡಿಯೋಗೆ ಧನಾತ್ಮಕ ಕಾಮೆಂಟ್ಗಳನ್ನೇ ಬಳಕೆದಾರರು ನೀಡಿದ್ದು, ನಿಮ್ಮ ಇಚ್ಛಾಶಕ್ತಿ ನಮಗೆಲ್ಲಾ ಪ್ರೇರಣೆ ಎಂದೇ ಹೆಚ್ಚಿನವರು ಸಂದೇಶ ವ್ಯಕ್ತಪಡಿಸಿದ್ದಾರೆ.
80 ರ ಹರೆಯದಲ್ಲೂ ನಾನಿ ಸೀರೆಯುಟ್ಟುಕೊಂಡು ಸ್ನೀಕರ್ ಧರಿಸಿ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಮ್ಯಾರಥಾನ್ನಲ್ಲಿ ಭಾಗವಹಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಹಾಗೂ ಸ್ಫೂರ್ತಿದಾಯಕವಾಗಿದೆ ಎಂದು ಹೆಚ್ಚಿನ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ನಾನಿ ನಿಮಗೆ ಅಭಿನಂದನೆಗಳು. ಹೀಗೆಯೇ ಮುಂದುವರಿಯುತ್ತಿರಿ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು ನೀವು ಯುವ ಪೀಳಿಗೆಗೆ ಸ್ಫೂರ್ತಿ ಎಂದು ಕಾಮೆಂಟ್ ಮಾಡಿದ್ದಾರೆ.
ನಿಜಕ್ಕೂ ಈ ನಾನಿ ಹೃದಯವಂತರು ಹಾಗೂ ಇವರ ಮನೋಬಲ ನಮಗೆಲ್ಲಾ ಪ್ರೇರಣೆ ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ