• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಫೋಟೋಗೆ ಹೇಗೆಲ್ಲಾ ಪೋಸ್ ಕೊಟ್ಟಿದ್ದಾರೆ ನೋಡಿ ಈ ವೃದ್ಧ ದಂಪತಿ; ಈ ಮುಗ್ಧ ವಿಡಿಯೋ ನೀವೇ ನೋಡಿ

Viral Video: ಫೋಟೋಗೆ ಹೇಗೆಲ್ಲಾ ಪೋಸ್ ಕೊಟ್ಟಿದ್ದಾರೆ ನೋಡಿ ಈ ವೃದ್ಧ ದಂಪತಿ; ಈ ಮುಗ್ಧ ವಿಡಿಯೋ ನೀವೇ ನೋಡಿ

ವೈರಲ್ ಆಗಿರುವ ವೃದ್ಧ ದಂಪತಿಗಳು

ವೈರಲ್ ಆಗಿರುವ ವೃದ್ಧ ದಂಪತಿಗಳು

ಈ ಹಿಂದೆ ಇಬ್ಬರು ವೃದ್ಧ ದಂಪತಿ ಮೆಟ್ರೋದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೆಣಗಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಅವರ ಆ ಪ್ರಯತ್ನಗಳು ಮತ್ತು ವಿಡಿಯೊದಲ್ಲಿನ ಮುದ್ದುತನವು ಅಂತರ್ಜಾಲದಲ್ಲಿ ಅನೇಕರ ಹೃದಯಗಳನ್ನು ಗೆದ್ದಿತ್ತು. ಈಗ ಸಹ ಅಂತಹದೇ ಇನ್ನೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೋಡುಗರ ಹೃದಯಕ್ಕೆ ಖುಷಿ ಕೊಟ್ಟಿದೆ ನೋಡಿ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

    ವಯಸ್ಸಾದ ದಂಪತಿಗಳ ಬಗ್ಗೆ ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅನೇಕ ವಿಡಿಯೋಗಳಿರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದಾಗ ನಮಗೆ ‘ಇದಪ್ಪಾ ದಾಂಪತ್ಯ ಎಂದರೆ, ಇದ್ದರೆ ಈ ಅಜ್ಜ-ಅಜ್ಜಿ ತರಹ ಇರಬೇಕು’ ಅಂತ ಯುವ ಜೋಡಿಗಳಿಗೆ ಅನ್ನಿಸಿರುತ್ತದೆ. ಈ ವೃದ್ದ ಜೋಡಿಗಳ (Old Couple) ಜೊತೆಗೆ ಕುಳಿತು ಮಾತನಾಡುವುದು ಮತ್ತು ಅವರ ಬದುಕಿದ ಜೀವನದ ಪಾಠಗಳನ್ನು ಅವರಿಂದ ಕಲಿಯುವುದು ನಿಜಕ್ಕೂ ನಮಗೆಲ್ಲಾ ಸಹಾಯ ಮಾಡುತ್ತದೆ ಅಂತ ಹೇಳಬಹುದು. ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ವೃದ್ದ ಜೋಡಿಗಳ ಉತ್ಸಾಹ ಮತ್ತು ಪ್ರೀತಿಯನ್ನು ತೋರಿಸುವ ಅನೇಕ ವಿಡಿಯೋಗಳನ್ನು (Viral Video) ನಾವು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುತ್ತೇವೆ.


    ಈ ಹಿಂದೆ ಇಬ್ಬರು ವೃದ್ಧ ದಂಪತಿಗಳು ಮೆಟ್ರೋದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೆಣಗಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಅವರ ಆ ಪ್ರಯತ್ನಗಳು ಮತ್ತು ವಿಡಿಯೋದಲ್ಲಿನ ಮುದ್ದುತನವು ಅಂತರ್ಜಾಲದಲ್ಲಿ ಅನೇಕರ ಹೃದಯಗಳನ್ನು ಗೆದ್ದಿತ್ತು. ಈಗ ಸಹ ಅಂತಹದೇ ಇನ್ನೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೋಡುಗರ ಹೃದಯಕ್ಕೆ ಖುಷಿ ಕೊಟ್ಟಿದೆ ನೋಡಿ.


    ನೋಡುಗರಿಗೆ ಖುಷಿ ಕೊಟ್ಟ ವೀಡಿಯೋದಲ್ಲಿ ಏನಿದೆ ನೋಡಿ


    ಛಾಯಾಗ್ರಾಹಕರೊಬ್ಬರು ಕ್ಯಾಮೆರಾಗೆ ಪೋಸ್ ನೀಡುವಂತೆ ವೃದ್ದ ದಂಪತಿಗಳನ್ನು ಕೇಳಿದಾಗ, ವಯಸ್ಸಾದ ದಂಪತಿಗಳ ಉತ್ಸಾಹವನ್ನು ನೀವು ನೋಡಿದರೆ ‘ವಾವ್’ ಅಂತ ಅನ್ನದೆ ಇರಲಾರಿರಿ. ನೆಟ್ಟಿಗರು ಅವರ ಮುದ್ದುತನವನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ.


    ಇದನ್ನೂ ಓದಿ: ಲುಡೋ ಗೇಮ್‌ ಆಡ್ತಾ ಹುಟ್ಟಿಕೊಂಡೇ ಬಿಡ್ತು ಪ್ರೀತಿ, ಪ್ರಿಯಕರನನ್ನು ಮದುವೆಯಾಗಲು ಭಾರತಕ್ಕೆ ಬಂದ ಪಾಕ್‌ ಹುಡುಗಿ!


    ಛಾಯಾಗ್ರಾಹಕ ಸುತೇಜ್ ಸಿಂಗ್ ಪನ್ನು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಅವರು ಮಂಚದ ಮೇಲೆ ಕುಳಿತು ಚಹಾ ಕುಡಿಯುತ್ತಿರುವ ದಂಪತಿಗಳ ಹತ್ತಿರ ಹೋಗಿ ಚಹಾ ಕುಡಿಯುವಾಗ ನೀವು ನಿಜವಾಗಿಯೂ ಸುಂದರವಾಗಿ ಕಾಣುತ್ತೀರಿ ಅಂತ ಪನ್ನು ಅವರು ದಂಪತಿಗಳಿಗೆ ಹೇಳುತ್ತಾರೆ. ಆಗ ವೃದ್ದ ದಂಪತಿಗಳು ನಗಲು ಪ್ರಾರಂಭಿಸುತ್ತಾರೆ ಮತ್ತು ಛಾಯಾಗ್ರಾಹಕನನ್ನು ಚಹಾ ಕುಡಿಯಲು ಆಹ್ವಾನಿಸುತ್ತಾರೆ. ನಂತರ ಅವರು ಅವರ ಫೋಟೋವನ್ನು ಕ್ಲಿಕ್ ಮಾಡಬಹುದೇ ಎಂದು ಕೇಳುತ್ತಾರೆ.


    ವೈರಲ್ ಆಗಿರುವ ವೃದ್ಧ ದಂಪತಿಗಳು


    ವೃದ್ದ ದಂಪತಿ ಅದಕ್ಕೆ ಒಪ್ಪುತ್ತಾರೆ ಮತ್ತು ಪನ್ನು ಅವರು ಕೆಲವು ಸುಂದರವಾದ ಫೋಟೋಗಳನ್ನು ತೆಗೆಯುತ್ತಾರೆ. ಸ್ವಲ್ಪ ಸಮಯದ ನಂತರ ಪನ್ನು ಆ ದಂಪತಿಗಳ ಒಂದು ಫೋಟೋವನ್ನು ಮುದ್ರಿಸಿ ತಂದು ಅವರಿಗೆ ಕೊಟ್ಟಾಗ, ಅದನ್ನು ನೋಡಿ ದಂಪತಿಗಳು ತುಂಬಾನೇ ಖುಷಿ ಪಡುತ್ತಾರೆ. ನಂತರ ಪನ್ನು ಅವರಲ್ಲಿ ಎದ್ದು ನಿಂತಿರುವ ಫೋಟೋವನ್ನು ತೆಗೆದುಕೊಳ್ಳಬಹುದೇ ಅಂತ ಕೇಳುತ್ತಾರೆ. ಆದ ನಂತರ ವಯಸ್ಸಾದ ವ್ಯಕ್ತಿ ತನ್ನ ಮೀಸೆಯನ್ನು ತಿರುವುತ್ತಾ ಮತ್ತು ವೃದ್ದೆ ತನ್ನ ದುಪಟ್ಟಾವನ್ನು ಸರಿ ಮಾಡಿಕೊಳ್ಳುತ್ತಾ ಕ್ಯಾಮೆರಾಗೆ ಪೋಸ್ ನೀಡುತ್ತಾರೆ.


    ಫೋಟೋಗಳಲ್ಲಿ ವೃದ್ದ ದಂಪತಿಗಳ ಉತ್ಸಾಹ ಮತ್ತು ಪ್ರೀತಿ ಎದ್ದು ಕಾಣುತ್ತಿತ್ತು


    ಆನಂತರ ಆ ಫೋಟೋಗಳಲ್ಲಿ ಆ ವೃದ್ದ ದಂಪತಿ ಉತ್ಸಾಹ ಮತ್ತು ಪರಸ್ಪರರ ಬಗ್ಗೆ ಇರುವ ಕಾಳಜಿ ಮತ್ತು ಪ್ರೀತಿ ಎದ್ದು ಕಾಣುತ್ತಿತ್ತು ಅಂತ ಹೇಳಬಹುದು. ಈ ವಿಡಿಯೋವನ್ನು ಪನ್ನು ಅವರು ಶೇರ್ ಮಾಡಿದಾಗಿನಿಂದ, ಇದಕ್ಕೆ 9 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಮತ್ತು 6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.









    View this post on Instagram






    A post shared by Sutej Singh Pannu (@sute





    ವಿಡಿಯೋ ನೋಡಿ ‘ವಾವ್’ ಎಂದ ನೆಟ್ಟಿಗರು


    ಈ ವಿಡಿಯೋವನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು "ವಿಡಿಯೋ ನನ್ನ ದಿನವನ್ನು ಸಂತೋಷಮಯವಾಗಿಸಿದೆ" ಎಂದು ಹೇಳಿದ್ದಾರೆ. "ಛಾಯಾಚಿತ್ರವನ್ನು ಹಿಡಿದಿರುವ ರೀತಿ ತುಂಬಾನೇ ಚೆನ್ನಾಗಿದೆ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.


    "ಎಂತಹ ಮುದ್ದಾದ ವಿಡಿಯೋ ಇದು" ಎಂದು ಮೂರನೆಯ ವ್ಯಕ್ತಿ ಕಮೆಂಟ್ ಮಾಡಿದ್ದಾರೆ. "ಇದು ತುಂಬಾ ಅಮೂಲ್ಯವಾಗಿದೆ" ಎಂದು ನಾಲ್ಕನೇಯ ವ್ಯಕ್ತಿ ಪ್ರತಿಕ್ರಿಯಿಸಿದ್ದಾರೆ. ರ್‍ಯಾಪರ್ ಬಾದ್ ಶಾ ಮತ್ತು ಕ್ರಿಕೆಟಿಗ ಮನ್ ದೀಪ್ ಸಿಂಗ್ ಸೇರಿದಂತೆ ಅನೇಕರು ಪೋಸ್ಟ್ ಗೆ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು