• Home
  • »
  • News
  • »
  • trend
  • »
  • Viral Video: ಈ ನಾಯಿ ಬೈಕ್ ಸವಾರಿಯನ್ನು ಹೇಗೆ ಆನಂದಿಸುತ್ತಿದೆ ನೋಡಿ! ನೆಟ್ಟಿಗರು ಫುಲ್ ಖುಷ್

Viral Video: ಈ ನಾಯಿ ಬೈಕ್ ಸವಾರಿಯನ್ನು ಹೇಗೆ ಆನಂದಿಸುತ್ತಿದೆ ನೋಡಿ! ನೆಟ್ಟಿಗರು ಫುಲ್ ಖುಷ್

ಸಾಕು ನಾಯಿಯ ಜಾಲಿ ರೈಡ್

ಸಾಕು ನಾಯಿಯ ಜಾಲಿ ರೈಡ್

ಮನುಷ್ಯರಂತೆ, ಈ ಸಾಕು ಪ್ರಾಣಿಗಳಿಗೂ ಸಹ ತನ್ನ ಮನೆಯ ಒಡೆಯನ ಜೊತೆಯಲ್ಲಿ ಮನೆಯಿಂದ ಹೊರಗೆ ಹೋಗಿ ಸುತ್ತಾಡಿ ಬರುವುದು ಎಂದರೆ ತುಂಬಾನೇ ಇಷ್ಟ. ಅದರಲ್ಲೂ ತನ್ನ ಮನೆಯ ಒಡೆಯನ ಜೊತೆ ಬೈಕ್ ಮೇಲೆ ಹಿಂದೆ ಕುಳಿತುಕೊಂಡು ಸವಾರಿ ಹೋಗುವುದೆಂದರೆ ತುಂಬಾನೇ ಪ್ರೀತಿ

  • Share this:

ಸಾಮಾನ್ಯವಾಗಿ ಯಾರಿಗಾದರೂ ತಮ್ಮ ಎಲ್ಲಾ ಕೆಲಸಗಳನ್ನು ಒಂದು ಕ್ಷಣ ಬದಿಗಿಟ್ಟು ಮನೆಯಿಂದ ಹೊರಗೆ ಹೋಗಿ ಬೈಕ್ (Bike) ಮೇಲೆ ಕುಳಿತುಕೊಂಡು ತಂಪಾದ ವಾತಾವರಣದಲ್ಲಿ ಒಂದು ರೌಂಡ್ ಹೋಗಿ ಬರೋಣ ಅಂತ ಅನ್ನಿಸುತ್ತಿರುತ್ತದೆ. ಅದರಲ್ಲೂ ಕೆಲವೊಬ್ಬರಿಗೆ ಈ ಬೈಕ್ ಮೇಲೆ ಹಿಂದೆ ಕುಳಿತು, ತಮ್ಮ ವಿರುದ್ಧ ದಿಕ್ಕಿನಿಂದ ಬರುವ ಜೋರಾದ ತಂಪಾದ ಗಾಳಿಗೆ ತಮ್ಮ ಮುಖವನ್ನು (Face) ನೀಡಿ ಆ ಆಹ್ಲಾದಕರವಾದ ಗಾಳಿಯನ್ನು ಅನುಭವಿಸುವುದು ಎಂದರೆ ತುಂಬಾನೇ ಅಚ್ಚುಮೆಚ್ಚು. ನಾವು ಸಾಮಾಜಿಕ ಮಾಧ್ಯಮದಲ್ಲಿ (Social Media)  ಕೆಲವು ತಿಂಗಳುಗಳ ಹಿಂದೆ ಒಂದು ಮುದ್ದಾದ ಗಿಣಿಯೊಂದು ತನ್ನ ಮನೆಯ ಒಡೆಯನ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಹಿಂದೆ ಇರುವ ಕಿಟಕಿಯ ಫೆನ್ಸ್ ಮೇಲೆ ಕೂತು ಜೋರಾಗಿ ಬರುತ್ತಿರುವ ಗಾಳಿಯನ್ನು ಆನಂದಿಸಿರುವ ವೈರಲ್ ವಿಡಿಯೋವನ್ನು ನೋಡಿದ್ದೆವು.


ಸಾಕು ನಾಯಿಯ ಜಾಲಿ ರೈಡ್ 
ಹೌದು..ಮನುಷ್ಯರಂತೆ, ಈ ಸಾಕು ಪ್ರಾಣಿಗಳಿಗೂ ಸಹ ತನ್ನ ಮನೆಯ ಒಡೆಯನ ಜೊತೆಯಲ್ಲಿ ಮನೆಯಿಂದ ಹೊರಗೆ ಹೋಗಿ ಸುತ್ತಾಡಿ ಬರುವುದು ಎಂದರೆ ತುಂಬಾನೇ ಇಷ್ಟ. ಅದರಲ್ಲೂ ತನ್ನ ಮನೆಯ ಒಡೆಯನ ಜೊತೆ ಬೈಕ್ ಮೇಲೆ ಹಿಂದೆ ಕುಳಿತುಕೊಂಡು ಸವಾರಿ ಹೋಗುವುದೆಂದರೆ ತುಂಬಾನೇ ಪ್ರೀತಿ.


ಈ ಸಾಕು ಪ್ರಾಣಿಗಳಲ್ಲಿ ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಅಂತ ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ಹೊಸದಾಗಿ ವೈರಲ್ ಆದ ಒಂದು ವಿಡಿಯೋದಲ್ಲಿ ಒಂದು ಸಾಕು ನಾಯಿಯು ತನ್ನ ಒಡೆಯನೊಂದಿಗೆ ಬೈಕ್ ಸವಾರಿ ಮಾಡುವುದನ್ನು ನೀವು ನೋಡಬಹುದು.


ವಿಡಿಯೋ ಕ್ಲಿಪ್ ನಲ್ಲಿ ಏನಿದೆ ಗೊತ್ತೇ?
ಕಾರಿನ ಒಳಗಿನಿಂದ ರೆಕಾರ್ಡ್ ಮಾಡಲಾದ ಕ್ಲಿಪ್ ವೊಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಕಾಯುತ್ತಿರುವ ಒಬ್ಬ ಬೈಕ್ ಸವಾರನನ್ನು ತೋರಿಸುತ್ತಾ ಶುರುವಾಗುತ್ತದೆ. ಹೆಲ್ಮೆಟ್ ಧರಿಸಿರುವ ವ್ಯಕ್ತಿಯು ಕ್ಯಾಮೆರಾವನ್ನು ನೋಡುತ್ತಾನೆ. ಆದರೆ ಆ ಕಾರಿನಲ್ಲಿದ್ದ ಗಂಡಸರು ಅವನ ಹಿಂದೆ ಬೈಕ್ ಮೇಲೆ ಕುಳಿತ ಆ ನಾಯಿಯನ್ನು ನೋಡಲು ಉತ್ಸುಕರಾಗಿರುತ್ತಾರೆ, ನಾಯಿಯು ಮೊದಲು ಬೇರೆ ಕಡೆ ಮುಖ ಮಾಡಿರುತ್ತದೆ. ಇವರು ಕರೆದಂತೆ ಅದು ತಕ್ಷಣವೇ ಈ ಕಡೆ ತಿರುಗಿ ನೋಡುತ್ತದೆ. ಆ ಸ್ಟೈಲಿಶ್ ನಾಯಿಯನ್ನು ನೋಡಿ ಒಂದು ಕ್ಷಣ ಕಾರಿನಲ್ಲಿದ್ದವರು ಜೋರಾಗಿ ನಗುವುದನ್ನು ಈ ವಿಡಿಯೋದಲ್ಲಿ ನಾವು ಕೇಳಬಹುದು.


ಇದನ್ನೂ ಓದಿ: Viral Video: ಅಮ್ಮನ ಜೊತೆ ಸಿಂಹದ ಮರಿಯ ಕಣ್ಣಾಮುಚ್ಚಾಲೆ! ನೋಡಿ ಕ್ಯೂಟ್‌ ವಿಡಿಯೋ


ಬೈಕ್ ಹಿಂದೆ ಕುಳಿತು, ಅದರ ಪಂಜಗಳನ್ನು ವ್ಯಕ್ತಿಯ ಭುಜಗಳ ಮೇಲೆ ಇರಿಸಿಕೊಂಡು, ನಾಯಿಯು ತುಂಬಾನೇ ಕೂಲ್ ಆಗಿ ಕಾಣುತ್ತಿತ್ತು ಎಂದು ತೋರುತ್ತದೆ. ಆ ನಾಯಿ ಕರೀನಾ ಕಡೆಗೆ ಮುಖ ತಿರುಗಿಸಿ ನೋಡಿದಾಗ, ಅದು ಸ್ಟೈಲಿಶ್ ಗ್ಲಾಸ್ ಸಹ ಹಾಕಿಕೊಂಡಿರುವುದನ್ನು ನೋಡಿ ಕಾರಿನಲ್ಲಿದ್ದವರು ಒಂದು ಕ್ಷಣ ಖುಷಿಯಿಂದ ನಕ್ಕರು.


ವೈರಲ್ ವಿಡಿಯೋ ಅನೇಕರಿಗೆ ತಮ್ಮ ನಾಯಿಗಳನ್ನು ನೆನಪಿಸಿದೆ..
ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದುವರೆಗೆ 11 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಮತ್ತು 3 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಈ ವಿಡಿಯೋ ಪೋಸ್ಟ್ ಗೆ ನೆಟ್ಟಿಗರು ಕಾಮೆಂಟ್ ಹಾಕದೇ ಇರಲು ಸಾಧ್ಯವಾಗುತ್ತಿಲ್ಲ ಅಂತ ಹೇಳಲಾಗುತ್ತಿದೆ, ಅಷ್ಟರ ಮಟ್ಟಿಗೆ ವಿಡಿಯೋ ಜನರನ್ನು ಖುಷಿ ಪಡಿಸಿದೆ.


ಮುದ್ದಾದ ಹಳದಿ ಹುಡಿಯನ್ನು ತೋರಿಸುತ್ತಾ, ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಓ ದೇವರೇ.. ನಾಯಿ ಹೂಡಿ ಧರಿಸಿದೆ" ಎಂದು ಕಾಮೆಂಟ್ ಹಾಕಿದರೆ, ಇನ್ನೊಬ್ಬ ಬಳಕೆದಾರರು ವೀಡಿಯೋ ನೋಡಿ "1974 ರಲ್ಲಿ ನನ್ನ ನಾಯಿ, ಅದಕ್ಕೆ ಬ್ಯಾಕ್ಪ್ಯಾಕ್ ಅಗತ್ಯವಿರಲಿಲ್ಲ. ಅತ್ಯುತ್ತಮ ಸಹ ಪ್ರಯಾಣಿಕ ಅದು ನನಗೆ. 19 ವರ್ಷ ವಯಸ್ಸಿನವರೆಗೆ ಬದುಕಿತ್ತು" ಎಂದು ಬಳಕೆದಾರರೊಬ್ಬರು ತಮ್ಮ ನಾಯಿಯ ಬಗ್ಗೆ ನೆನಪಿಸಿಕೊಳ್ಳುತ್ತಾ ಬರೆದಿದ್ದಾರೆ. ಅವರು ಮತ್ತು ಅವರ ನಾಯಿ ಬೈಕ್ ಮೇಲೆ ಕುಳಿತು ಸವಾರಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:  Viral Video: ಹಾವಿಗೆ ಮುತ್ತಿಡಲು ಹೋದವನಿಗೆ ಏನಾಯ್ತು? ನೀವೇ ನೋಡಿ


ಮಹಿಳೆಯೊಬ್ಬರು ಕಾರಿನಲ್ಲಿ ಕುಳಿತಿರುವ ನಾಯಿಗೆ ಹೈ-ಫೈವ್ ನೀಡುವ ಮುದ್ದಾದ ವಿಡಿಯೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. "ನನ್ನ ನಾಯಿ ಸವಾರಿ ಮಾಡುವುದು ಹೀಗೆ" ಎಂದು ಬಳಕೆದಾರರೊಬ್ಬರು ಕಪ್ಪು ಜಾಕೆಟ್ ಧರಿಸಿದ ನಾಯಿಯ ಫೋಟೋದೊಂದಿಗೆ ಬರೆದಿದ್ದಾರೆ.

Published by:Ashwini Prabhu
First published: