Viral Video: ಓಡಿ ಬಂದು ನೀರಿನೊಳಗೆ ನುಸುಳುತ್ತಿರುವ ಆಮೆಯನ್ನೇ ಬೇಟೆಯಾಡಿದ ಹುಲಿ!

ಹುಲಿ

ಹುಲಿ

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋದಲ್ಲಿ ಹುಲಿ ತನ್ನ ಎಲ್ಲಾ ಶಕ್ತಿಯನ್ನು ಹಾಕಿ ನೀರಿನಲ್ಲಿರುವ ಆಮೆ ಸ್ವಲ್ಪ ಮಟ್ಟಿಗೆ ದಡಕ್ಕೆ ಬಂದಾಗ ವೇಗವಾಗಿ ಓಡಿ ಹೋಗಿ ತನ್ನ ಚೂಪಾದ ಹಲ್ಲುಗಳಲ್ಲಿ ಕಚ್ಚಿ ಹಿಡಿದುಕೊಂಡು, ಎಳೆದುಕೊಂಡು ನೀರಿನಿಂದ ಹೊರಕ್ಕೆ ತಂದಿರುವುದನ್ನು ನೋಡಬಹುದು.

ಮುಂದೆ ಓದಿ ...
  • Share this:

ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನಮಗೆ ಇತ್ತೀಚೆಗೆ ಸ್ವಲ್ಪ ಹೆಚ್ಚು ವನ್ಯಜೀವಿಗಳ ವಿಡಿಯೋಗಳು ನೋಡಲು ಸಿಗುತ್ತಿವೆ ಎನ್ನಬಹುದು. ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಯಾವಾಗಲೂ ತುಂಬಾನೇ ಜಾಗರೂಕರಾಗಿರುತ್ತವೆ, ಏಕೆಂದರೆ ಕಾಡಿನ ಯಾವ ಮೂಲೆಯಿಂದ ಹುಲಿ ಅಥವಾ ಸಿಂಹ ಬಂದು ತಮ್ಮನ್ನು ಬೇಟೆಯಾಡುತ್ತದೆಯೋ ಅಂತ ಮೈಯೆಲ್ಲಾ ಕಣ್ಣಾಗಿರಿಸಿಕೊಂಡಿರುತ್ತವೆ. ಈ ಹಿಂದೆ ಸಹ ನಾವು ಹುಲಿ (Tiger), ಸಿಂಹ ಮತ್ತು ಚಿರತೆಯಂತಹ ಪ್ರಾಣಿಗಳು ಅಮಾಯಕ ಪ್ರಾಣಿಗಳನ್ನು (Animals) ತುಂಬಾನೇ ಕ್ರೂರವಾಗಿ, ಹೊಂಚು ಹಾಕಿ ಬೇಟೆಯಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ.


ಎಲ್ಲೋ ಒಂದು ಕೆರೆಯ ಬಳಿ ನೀರು ಕುಡಿಯುತ್ತಿರುವ ಜಿಂಕೆಗಳನ್ನು ಮತ್ತು ಚಿಕ್ಕ ಪುಟ್ಟ ಪ್ರಾಣಿಗಳನ್ನು ಹಿಂದೆಯಿಂದ ಮೆಲ್ಲಗೆ ಹೋಗಿ, ಗಬಕ್ಕನೆ ಅವುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಬೇಟೆಯಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ.


ಹೀಗೆ ಪ್ರಾಣಿಗಳನ್ನು ಬೇಟೆಯಾಡಲು ಹುಲಿ ಮತ್ತು ಸಿಂಹಗಳು ಎಷ್ಟೋ ಸಮಯದವರೆಗೆ ಒಂದೆಡೆ ಕಾದು ಕುಳಿತುಕೊಂಡಿರುತ್ತವೆ ಮತ್ತು ಬೇಟೆಯಾಡಲಿರುವ ಪ್ರಾಣಿಯ ಚಲನವಲನಗಳ ಮೇಲೆ ಪೂರ್ತಿಯಾದ ಗಮನವನ್ನು ಇಟ್ಟಿರುತ್ತವೆ. ಇನ್ನೇನು ಆ ಬೇಟೆ ತನ್ನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನೋವಾಗ ಈ ಪ್ರಾಣಿಗಳು ಬೇಟೆಯಾಡುತ್ತವೆ.


ಈ ವಿಡಿಯೋದಲ್ಲಿ ಹುಲಿ ಹೇಗೆ ಆಮೆಯನ್ನು ಬೇಟೆಯಾಡಿದೆ


ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋದಲ್ಲಿ ಹುಲಿ ತನ್ನ ಎಲ್ಲಾ ಶಕ್ತಿಯನ್ನು ಹಾಕಿ ನೀರಿನಲ್ಲಿರುವ ಆಮೆ ಸ್ವಲ್ಪ ಮಟ್ಟಿಗೆ ದಡಕ್ಕೆ ಬಂದಾಗ ವೇಗವಾಗಿ ಓಡಿ ಹೋಗಿ ತನ್ನ ಚೂಪಾದ ಹಲ್ಲುಗಳಲ್ಲಿ ಕಚ್ಚಿ ಹಿಡಿದುಕೊಂಡು, ಎಳೆದುಕೊಂಡು ನೀರಿನಿಂದ ಹೊರಕ್ಕೆ ತಂದಿರುವುದನ್ನು ನೋಡಬಹುದು.


ಇದನ್ನೂ ಓದಿ: 1 ಗಂಟೆಯಲ್ಲಿ ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ನೋಡಬಹುದು! ಯಾವುದು ಗೊತ್ತಾ ಈ ದೇಶ?


ಚಿಕ್ಕ ಅಮಾಯಕ ಆಮೆ ಮೇಲೆ ಹುಲಿಯೊಂದು ಹೇಗೆ ಕ್ರೂರವಾಗಿ ದಾಳಿ ಮಾಡಿದೆ ನೀವೇ ನೋಡಿ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಈ ವಿಡಿಯೋವನ್ನು ವೃತ್ತಿಪರ ಛಾಯಾಗ್ರಾಹಕರು ರೆಕಾರ್ಡ್ ಮಾಡಿದ್ದಾರೆ ಮತ್ತು ಹುಲಿ ಈ ಸರೀಸೃಪವನ್ನು ಬೇಟೆಯಾಡಿದ ರೀತಿ ನಿಮ್ಮನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ತುಂಬಾನೇ ಅಪರೂಪದ ದೃಶ್ಯ ಎಂದು ಕರೆಯುತ್ತಿರುವುದರಿಂದ ಈ ಪೋಸ್ಟ್ ಅಂತರ್ಜಾಲದಲ್ಲಿ ಸಾಕಷ್ಟು ಗಮನ ಸೆಳೆದಿದೆ.


ಹುಲಿ


ಈ ಹುಲಿಯ ಬೇಟೆಯನ್ನು ರೆಕಾರ್ಡ್ ಮಾಡಿದ್ದು ವನ್ಯಜೀವಿ ಛಾಯಾಗ್ರಾಹಕ ಜಯಂತ್ ಅಂತೆ


ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕರಾದ ಜಯಂತ್ ಶರ್ಮಾ ಅವರು ಆ್ಯರೋಹೆಡ್ ಎಂಬ ಹುಲಿ ತನ್ನ ಬೇಟೆಯನ್ನು ಬೇಟೆಯಾಡುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಪರಭಕ್ಷಕವು ಸರೋವರದಲ್ಲಿರುವ ಆಮೆಯನ್ನು ಮೊದಲಿಗೆ ಗುರುತಿಸುವುದನ್ನು ಈ ತುಣುಕು ಬಹಿರಂಗಪಡಿಸಿದೆ.


ಸರೀಸೃಪವು ಈಜುವ ಮೂಲಕ ತನ್ನನ್ನು ರಕ್ಷಿಸಿಕೊಳ್ಳಲು ತ್ವರಿತವಾಗಿ ಪ್ರಯತ್ನಿಸುತ್ತದೆ, ಆದರೆ ಹುಲಿ ಮಾತ್ರ ಹಾಗೆ ಆಮೆ ಹಿಂದಕ್ಕೆ ಸರಿದು ನೀರಿನೊಳಗೆ ಹೋಗುವ ಅವಕಾಶವನ್ನು ಪಡೆಯುವ ಮೊದಲು ಅದನ್ನು ಹಿಡಿಯಲು ವೇಗವಾಗಿ ನೀರಿಗೆ ಓಡುತ್ತದೆ.
ಅದು ಆಮೆಯ ಕಾಲನ್ನು ಬಾಯಲ್ಲಿ ಹಿಡಿದುಕೊಂಡು ಅದನ್ನು ನೀರಿನಿಂದ ಹೊರಕ್ಕೆ ಎತ್ತಿಕೊಂಡು ಬರುವುದನ್ನು ಈ ವೀಡಿಯೋದಲ್ಲಿ ನಾವು ನೋಡಬಹುದು. ಈ ಹುಲಿಯ ಪ್ರತಿಯೊಂದು ಚಲನೆಯನ್ನು ಅದ್ಭುತವಾಗಿ ಸೆರೆಹಿಡಿಯುವ ಬೇಟೆಯ ಸ್ಟಿಲ್ ಫೋಟೋಗಳೊಂದಿಗೆ ಈ ವೀಡಿಯೋ ಕೊನೆಗೊಳ್ಳುತ್ತದೆ.


ಈಗ ವೈರಲ್ ಆಗಿರುವ ಈ ಕ್ಲಿಪ್ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಿಂದ ಬಂದಿದೆ. ಇದು ಈಗಾಗಲೇ ಇನ್‌ಸ್ಟಾಗ್ರಾಮ್ ನಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಜಯಂತ್ ಶರ್ಮಾ "ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಇಂದು ಮಧ್ಯಾಹ್ನ ಆ್ಯರೋಹೆಡ್" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಏನಂದ್ರು?


ಆರೋಹೆಡ್ ಸರೋವರದಲ್ಲಿರುವ ಮೊಸಳೆಯನ್ನು ಬೇಟೆಯಾಡುತ್ತಿದೆ ಎಂದು ಅನೇಕ ಬಳಕೆದಾರರು ಮೊದಲು ಭಾವಿಸಿದ್ದರು. ಕೆಲವರು ಈ ವಿಡಿಯೋ ಕ್ಲಿಪ್ ನ ಬಗ್ಗೆ ಸಂಪೂರ್ಣವಾಗಿ ವಿಸ್ಮಯಗೊಂಡರು ಮತ್ತು ಛಾಯಾಗ್ರಾಹಕನ ಪ್ರಯತ್ನಗಳನ್ನು ಶ್ಲಾಘಿಸಿದರು. ಕೆಲವರು ಪರಭಕ್ಷಕದ ಆರೋಗ್ಯದ ಬಗ್ಗೆಯೂ ಕಾಳಜಿ ತೋರಿಸಿದರು.


ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು "ಎಂತಹ ಮನಮೋಹಕವಾದ ಕ್ಲಿಪ್ ಇದು" ಅಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬ ವ್ಯಕ್ತಿಯು ತಮಾಷೆಯಾಗಿ ಪ್ರತಿಕ್ರಿಯಿಸಿ "ಏನನ್ನ ಬೇಟೆಯಾಡಿದೆ? ಆಮೆನಾ ಅದು? ಹುಲಿ ಏಕೆ ಅಷ್ಟೊಂದು ಓಡಬೇಕಾಯಿತು? ಅದು ಮೊಸಳೆಗಳನ್ನು ಬೇಟೆಯಾಡುತ್ತಿದೆ ಎಂದು ನಾನು ಭಾವಿಸಿದೆ" ಅಂತ ಕಾಮೆಂಟ್ ಮಾಡಿದ್ದಾರೆ.

top videos
    First published: