Viral Video: ಅಯ್ಯೋ! ಕಾರನ್ನು ಹೇಗೆ ತುಳಿದುಕೊಂಡು ಹೋಗ್ತಿದೆ ನೋಡಿ ಈ ಆನೆ, ಇಲ್ಲಿದೆ ವೈರಲ್ ವಿಡಿಯೋ

ಕಾಡು ಆನೆಯೊಂದು ರಸ್ತೆಯ ಮಧ್ಯದಲ್ಲಿ ಬಂದು ನಿಂತ ಒಂದು ಕಾರಿನ ಮೇಲೆ ತನ್ನ ಇಡೀ ದೇಹದ ಭಾರ ಹಾಕಿ, ನಂತರ ತನ್ನ ದೈತ್ಯವಾದ ಕಾಲುಗಳಿಂದ ಅದನ್ನು ಭಯಾನಕವಾಗಿ ಜಖಂ ಮಾಡಿದೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕಾರನ್ನು ತುಳಿದುಕೊಂಡು ಹೋದ ಆನೆ

ಕಾರನ್ನು ತುಳಿದುಕೊಂಡು ಹೋದ ಆನೆ

  • Share this:
ಈ ವರ್ಷ ಆನೆಗಳ (Elephant) ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದಷ್ಟು, ಬೇರೆ ಯಾವ ಪ್ರಾಣಿಗಳ ವಿಡಿಯೋಗಳು ಅಷ್ಟೊಂದು ಹರಿದಾಡಿಲ್ಲ. ಹೌದು.. ಕೆಲವೊಮ್ಮೆ ಆನೆಗಳ ತುಂಟಾಟ ತೋರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ ಆದರೆ ಇನ್ನೂ ಕೆಲವು ಸಂದರ್ಭಗಳಲ್ಲಿ ಆನೆಗಳ ಕೋಪತಾಪಗಳ ವಿಡಿಯೋ ಸಹ ನಮಗೆ ನೋಡಲು ಸಿಕ್ಕಿದೆ. ಒಮ್ಮೆ ಮಾವುತನ ಜೊತೆಯಲ್ಲಿ ಒಂದು ಹಾಸಿಗೆಯ ಮೇಲೆ ಮಲಗಲು (Sleep) ಮುದ್ದಾಗಿ ಜಗಳವಾಡಿದರೆ, ಇನ್ನೊಂದು ಕಡೆಯಲ್ಲಿ ಫೋಟೋ ಕ್ಲಿಕ್ಕಿಸಲು ಬಂದ ಯುವತಿಯ ಮೊಬೈಲ್ ಅನ್ನು (Mobile) ಕಸಿದುಕೊಳ್ಳಲು ಪ್ರಯತ್ನಿಸಿ ಆ ಮೊಬೈಲ್ ಫೋನ್ ಅನ್ನು ಕೆಳಕ್ಕೆ ಬಿಳಿಸಿದ್ದು, ಮಾವುತ ಸ್ನಾನ ಮಾಡಿಸುವಾಗ ಆನೆಯೊಂದು ತನ್ನ ತಲೆಯ ಮೇಲೆ ಎದ್ದು ನಿಂತು ಹಿಂದಿನ ಕಾಲುಗಳನ್ನು ಎತ್ತಿ ತೋರಿಸಿದ ವಿಡಿಯೋಗಳನ್ನು ನಾವು ನೋಡಿದ್ದೆವು.

ಕಾರನ್ನು ತುಳಿದುಕೊಂಡು ಹೋದ ಆನೆ 
ಈಗ ಇಲ್ಲಿ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಈ 53 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ಕಾಡು ಆನೆಯೊಂದು ರಸ್ತೆಯ ಮಧ್ಯದಲ್ಲಿ ಬಂದು ನಿಂತ ಒಂದು ಕಾರಿನ ಮೇಲೆ ತನ್ನ ಇಡೀ ದೇಹದ ಭಾರ ಹಾಕಿ, ನಂತರ ತನ್ನ ದೈತ್ಯವಾದ ಕಾಲುಗಳಿಂದ ಅದನ್ನು ಭಯಾನಕವಾಗಿ ಜಖಂ ಮಾಡಿದೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಮಂಗಳವಾರ ಟ್ವಿಟ್ಟರ್ ನಲ್ಲಿ ಬ್ಯೂಟೆಂಗೆಬಿಡೆನ್ ಹಂಚಿಕೊಂಡಿದ್ದಾರೆ ಮತ್ತು ಇದು ಈಗಾಗಲೇ 2.4 ಮಿಲಿಯನ್ ವೀಕ್ಷಣೆಗಳನ್ನು ಮತ್ತು 48,000 ಕ್ಕೂ ಹೆಚ್ಚು ಲೈಕ್ ಗಳನ್ನು ಸಂಗ್ರಹಿಸಿದೆ.

ವಿಡಿಯೋದಲ್ಲಿರುವುದೇನು?
"ನೀವು ಒಂದು ಆನೆಯಾಗಿದ್ದು, ನಿಮಗೆ ಮೈಯಲ್ಲಾ ತುರಿಕೆ ಬಂದಾಗ ನೀವು ಏನು ಮಾಡುತ್ತೀರಿ" ಎಂದು ಈ ವಿಡಿಯೋ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಕ್ಲಿಪ್ ನ ಆರಂಭದಲ್ಲಿ ಒಂದು ಕಾಡು ಆನೆ ಕಾಡಿನ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಹೊರ ಬರುತ್ತಿರುವುದನ್ನು ನಾವು ನೋಡಬಹುದು. ಕೆಲವು ಸೆಕೆಂಡುಗಳ ನಂತರ, ದೈತ್ಯ ಸಲಗವು ತನ್ನ ದೇಹವನ್ನು ಮತ್ತು ಹಿಂಬದಿಯ ಕಾಲುಗಳಿಂದ ಆ ಕಾರಿಗೆ ಉಜ್ಜಿಕೊಳ್ಳುವುದನ್ನು ನೋಡಬಹುದು.ಇದನ್ನೂ ಓದಿ: Rooster Owner: ಪೊಲೀಸರಿಗೆ ಹುಂಜದ ಓನರ್ ಪತ್ತೆಹಚ್ಚುವ ತಲೆಬಿಸಿ! ಏನಿದು ವಿಚಿತ್ರ ಕೇಸ್?

ಮೊದಲಿಗೆ, ಅದು ಒಂದು ಕಾಲಿನಿಂದ ಕಾರಿನ ಟೈರ್ ಮೇಲೆ ಹತ್ತಲು ಪ್ರಯತ್ನಿಸುತ್ತದೆ. ಅದರ ನಂತರ, ಅವನು ನಾಲ್ಕು ಚಕ್ರದ ವಾಹನದ ಬಾನೆಟ್ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ. ಟಸ್ಕರ್ ಕಾರಿನ ಮೇಲೆ ಹತ್ತುತ್ತದೆ ಮತ್ತು ವಾಹನದ ಮುಂಭಾಗ ಮತ್ತು ಸೈಡ್ ವ್ಯೂ ಮಿರರ್ ಅನ್ನು ಮುರಿಯುತ್ತಾ ಅದು ಕೆಳಕ್ಕೆ ಇಳಿಯುತ್ತದೆ. ದೈತ್ಯ ಆನೆಯಿಂದ ಕಾರಿಗೆ ಉಂಟಾದ ವಿನಾಶವನ್ನು ವಿಡಿಯೋದ ಕೊನೆಯಲ್ಲಿ ನಾವು ನೋಡಬಹುದು.

ಈ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ 
ಈ ಕ್ಲಿಪ್ ಹಂಚಿಕೊಂಡಾಗಿನಿಂದಲೂ, ಈ ಕ್ಲಿಪ್ ಅನ್ನು ಇಂಟರ್ನೆಟ್ ನಲ್ಲಿ ನೋಡಿದ ಜನರು ಬೇರೆ ಬೇರೆ ರೀತಿಯ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ತಮಾಷೆಯಾಗಿ "ನಾನು ಇದನ್ನು ವಿಮಾ ಕಂಪನಿಗೆ ಹೇಗೆ ವಿವರಿಸುವುದು ಅಂತ ಕಲ್ಪಿಸಿಕೊಳ್ಳುತ್ತಿದ್ದೇನೆ" ಎಂದು ಕಾಮೆಂಟ್ ಮಾಡಿದರು. ಇನ್ನೊಬ್ಬ ಬಳಕೆದಾರರು "ಇಂತಹ ಸಮಯದಲ್ಲಿ ನಾನು ಅಲ್ಲಿದ್ದರೆ ನಾನು ತುಂಬಾ ಭಯಭೀತನಾಗುತ್ತಿದ್ದೆ" ಎಂದು ಕಾಮೆಂಟ್ ಮಾಡಿದರೆ, ಮೂರನೆಯ ಬಳಕೆದಾರರು "ಆನೆಯು ಈ ಕಾರನ್ನು ಒಳ್ಳೆ ಟಾಯ್ಲೆಟ್ ಪೇಪರ್ ಆಗಿ ಬಳಸಿದೆ" ಎಂದು ಹೇಳಿದ್ದಾರೆ. ಆದರೆ ಈ ಘಟನೆ ನಡೆದ ಸ್ಥಳ ಯಾವುದು ಅಂತ ಮಾತ್ರ ಇನ್ನೂ ತಿಳಿದು ಬಂದಿಲ್ಲ.

ಇದನ್ನೂ ಓದಿ: Dog Teeth: ಅಬ್ಬಬ್ಬಾ! ನಾಯಿಯ ಹಲ್ಲು ಕ್ಲೀನ್ ಮಾಡಿಸಲು 5 ಲಕ್ಷ ಪಾವತಿಸಿದ್ರು!

ಏತನ್ಮಧ್ಯೆ, ಆನೆಗಳು ಆಸ್ಪತ್ರೆಯೊಳಗೆ ಅಡ್ಡಾಡುತ್ತಿರುವ ಮತ್ತೊಂದು ವಿಡಿಯೋ ಈ ಹಿಂದೆ ಆನ್ಲೈನ್ ನಲ್ಲಿ ಕಾಣಿಸಿಕೊಂಡಿತು. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಂತಾ ನಂದಾ ಅವರು ಬಿನ್ನಗುರಿ ಸೇನಾ ಶಿಬಿರದ ಆಸ್ಪತ್ರೆಯೊಳಗೆ ಎರಡು ಕಾಡು ಆನೆಗಳು ಸಾಹಸ ಮಾಡುತ್ತಿರುವ ಕ್ಲೋಸ್-ಅಪ್ ಶಾಟ್ ಅನ್ನು ಟ್ವೀಟ್ ಮಾಡಿದ್ದರು. ಬಿಜೆಪಿ ಉಪಾಧ್ಯಕ್ಷ ದಿಲೀಪ್ ಘೋಷ್ ಅವರ ಕಚೇರಿ ಯಲ್ಲಿ ಒಂದು ಸಲಗವು ಬಾಗಿಲಿನ ಮೂಲಕ ಬಂದು ತನ್ನ ದೊಡ್ಡ ದೇಹವನ್ನು ಮೊಗಸಾಲೆಗೆ ಹಿಸುಕುತ್ತಿರುವ ವೀಡಿಯೋವನ್ನು ಸಹ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
Published by:Ashwini Prabhu
First published: