• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಭಯಗೊಂಡ ನಾಯಿಯನ್ನು ಪಶುವೈದ್ಯರು ಹೇಗೆ ಸಂತೈಸಿದರು ನೋಡಿ! ವಿಡಿಯೋ ಫುಲ್​ ವೈರಲ್

Viral Video: ಭಯಗೊಂಡ ನಾಯಿಯನ್ನು ಪಶುವೈದ್ಯರು ಹೇಗೆ ಸಂತೈಸಿದರು ನೋಡಿ! ವಿಡಿಯೋ ಫುಲ್​ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಯಗೊಂಡ ನಾಯಿಯನ್ನು ಪಶುವೈದ್ಯರು ಯಾವ ರೀತಿ ಸಮಾಧಾನ ಮಾಡಿದ್ದಾರೆಂದು ಇಲ್ಲಿದೆ ನೋಡಿ.

  • Share this:

ಸಾಮಾನ್ಯವಾಗಿ ನಾವು ನಮ್ಮ ಮಕ್ಕಳನ್ನು (Childrens) ಅನಾರೋಗ್ಯವಿದೆ ಅಂತ ವೈದ್ಯರ ಬಳಿಗೆ ಕರೆದುಕೊಂಡು ಹೋದಾಗ, ಮಕ್ಕಳಿಗೆ ವೈದ್ಯರು ಇಂಜೆಕ್ಷನ್ ಕೊಟ್ಟು ಬಿಡುತ್ತಾರೆ ಅನ್ನೋ ಭಯ ಇರುತ್ತದೆ ಮತ್ತು ವೈದ್ಯರು ‘ಏನಾಗಿದೆ ಮಗು ನಿನಗೆ ಅಂತ ಸುಮ್ಮನೆ ವಿಚಾರಿಸಲು ಬಂದರೂ ಸಹ ಮಕ್ಕಳು ಜೋರಾಗಿ ಅಳಲು ಪ್ರಾರಂಭಿಸುತ್ತವೆ. ಆಗ ಆ ವೈದ್ಯರು ಮಕ್ಕಳಿಗೆ ಮೊದಲು ಮುದ್ದಾಗಿ ಮಾತನಾಡಿಸುತ್ತಾ ಹತ್ತಿರ ಬಂದು ಅವುಗಳ ಜೊತೆಗೆ ಒಂದು ಆರಾಮದಾಯಕವಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ. ಆನಂತರವಷ್ಟೆ ಆ ಮಗುವಿಗೆ ಚಿಕಿತ್ಸೆ ನೀಡುತ್ತಾರೆ. ಇದರ ಬಗ್ಗೆ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಪ್ರಾಣಿ (Animal) ಆಗಲಿ, ಮನುಷ್ಯ (Human) ಆಗಲಿ ಎಲ್ಲರಿಗೂ ಭಾವನೆಗಳು ಇರುತ್ತವೆ ಮತ್ತು ಅನೇಕ ಸಂದರ್ಭಗಳಲ್ಲಿ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.


ಇಲ್ಲಿ ಒಂದು ಘಟನೆ ನಡೆದಿದೆ, ಇದರಲ್ಲಿ ಹೇಗೆ ಒಂದು ನಾಯಿ ಪಶುವೈದ್ಯರ ಬಳಿಗೆ ಬಂದಾಗ ಭಯಭೀತವಾಗಿರುವುದನ್ನು ನಾವು ನೋಡಬಹುದು. ಆದರೆ ನಂತರ ಆ ವೈದ್ಯ ಆ ನಾಯಿಯನ್ನು ಹೇಗೆ ಆರಾಮದಾಯಕವಾಗಿರಿಸಿದರು ಅನ್ನೋದೆ ಈ ವಿಡಿಯೋದ ವಿಶೇಷತೆ.


ಭಯಭೀತವಾದ ನಾಯಿಯನ್ನು ಹೇಗೆ ಶಾಂತಗೊಳಿಸಿದ್ದಾರೆ ನೋಡಿ ಈ ಡಾಕ್ಟ್ರು


ಈ ವಿಡಿಯೋ ಉತ್ತಮ ಪಶು ವೈದ್ಯರು ಹೇಗೆ ಪ್ರಾಣಿಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅವುಗಳಿಗೆ ಸರಾಗವಾಗಿ ಚಿಕಿತ್ಸೆ ನೀಡುತ್ತಾರೆ ಅಂತ ತೋರಿಸುತ್ತದೆ. ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದ ಆರಂಭದಲ್ಲಿ ವೈದ್ಯರು ಭಯಭೀತ ನಾಯಿಯ ಬಳಿ ಹೋಗುವುದನ್ನು ನಾವು ನೋಡಬಹುದು. ಆ ನಾಯಿ ವೈದ್ಯರನ್ನು ನೋಡಿ ಸ್ವಲ್ಪ ನಡುಗುತ್ತಿತ್ತು ಮತ್ತು ಆತಂಕಗೊಂಡಂತೆ ಕಾಣುತ್ತಿತ್ತು.


ಇದನ್ನೂ ಓದಿ: ವಿಶ್ವದ ಅರ್ಧದಷ್ಟು ದೊಡ್ಡ ಸರೋವರಗಳು, ಜಲಾಶಯಗಳು ನಾಶವಾಗುತ್ತಿವೆ!


ಆದರೆ ವೈದ್ಯರು ತುಂಬಾನೇ ಮೃದುವಾಗಿ ಅದರ ಜೊತೆ ನಡೆದುಕೊಂಡರು ಮತ್ತು ಅದನ್ನು ಆರಾಮದಾಯಕವಾಗಿಸಿದರು. ನಂತರ ವೈದ್ಯರು ಈ ನಾಯಿಯನ್ನು ತಬ್ಬಿಕೊಂಡು ಅದಕ್ಕೆ ಚಿಕಿತ್ಸೆಯನ್ನು ಮುಂದುವರಿಸುತ್ತಾರೆ. ವೈದ್ಯರು ಅದನ್ನು ತಬ್ಬಿಕೊಳ್ಳುತ್ತಿದ್ದಂತೆ ನಾಯಿ ನಿಧಾನವಾಗಿ ಆರಾಮದಾಯಕವಾಗುತ್ತದೆ. ನಾಯಿ ನಂತರ ವ್ಯಕ್ತಿಯ ತೊಡೆಯ ಮೇಲೆ ಕುಳಿತು ಪ್ರೀತಿಯನ್ನು ಪಡೆಯುವುದರೊಂದಿಗೆ ಈ ವಿಡಿಯೋ ಕೊನೆಗೊಳ್ಳುತ್ತದೆ.


ಸಾಂದರ್ಭಿಕ ಚಿತ್ರ


ಈ ಹೃದಯಸ್ಪರ್ಶಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ


"ಈ ಬಡ ನಾಯಿಮರಿ ಎಷ್ಟು ಭಯಭೀತವಾಗಿದೆ ಎಂಬುದು ಹೃದಯ ವಿದ್ರಾವಕವಾಗಿದೆ. ಆದರೆ ವೈದ್ಯರು ಅದನ್ನು ನಿಭಾಯಿಸಿದ ರೀತಿ ತುಂಬಾನೇ ಚೆನ್ನಾಗಿದೆ" ಎಂದು ಈ ವಿಡಿಯೋ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋ ಈಗಾಗಲೇ 9.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಟನ್ ಗಟ್ಟಲೆ ಪ್ರತಿಕ್ರಿಯೆಗಳನ್ನು ಪಡೆದಿದೆ. ನೆಟ್ಟಿಗರು ಈ ವೈದ್ಯರ ತಾಳ್ಮೆಯನ್ನು ತುಂಬಾನೇ ಶ್ಲಾಘಿಸಿದರು ಮತ್ತು ಅವರು ಎಂತಹ ಉತ್ತಮ ಕೆಲಸ ಮಾಡಿದರು ಎಂದು ಕಾಮೆಂಟ್ ಮಾಡಿದರು.




ಈ ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು “ಅಂತಿಮವಾಗಿ ನಾಯಿಗೆ ಚಿಕಿತ್ಸೆ ನೀಡಿದ ಸ್ಮಾರ್ಟ್ ಪಶುವೈದ್ಯರು” ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ವಿಡಿಯೋ ನೋಡಿ “ಇದು ನಂಬಲಾಗದಷ್ಟು ಅದ್ಭುತವಾಗಿದೆ ... ನಾನು ನನ್ನ ಪ್ರಾಣಿಗಳನ್ನು ಸಹ ಹೀಗೆ ತುಂಬಾನೇ ಪ್ರೀತಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.


ಮೂರನೇ ಬಳಕೆದಾರರು “ನನ್ನ ನಾಯಿಗೆ 13 ವರ್ಷ ಆಯ್ತು, ಸುಮಾರು 5 ವರ್ಷಗಳ ಹಿಂದೆ ನಾನು ಎಲ್ಲೋ ಓದಿದೆ, ನಿಮ್ಮ ತೂಕವನ್ನು ಅವುಗಳ ಮೇಲೆ ಹಾಕುವುದು ಅವುಗಳಿಗೆ ಪ್ರೀತಿ ತೋರಿಸಿದಂತೆ ಅಂತೆ. ಆದ್ದರಿಂದ ನಾನು ನನ್ನ ನಾಯಿಯ ಮೇಲೆ ಒರಗಲು ಪ್ರಾರಂಭಿಸಿದೆ. ಈಗ ಪ್ರತಿದಿನ ನನ್ನ ನಾಯಿ ಮಂಚದ ಮೇಲೆ ನಾನು ಮಲಗಿದ್ದಾಗ ನನ್ನ ಬಳಿ ಬಂದು ಮಲಗುತ್ತದೆ. ಅದು ನನಗೆ ತುಂಬಾನೇ ಪ್ರೀತಿ ತೋರಿಸುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.

top videos
    First published: