• Home
  • »
  • News
  • »
  • trend
  • »
  • Cheat In Exams: ಪರೀಕ್ಷೆಯಲ್ಲಿ ಪಾಸಾಗಲು ಹೀಗೂ ಕಾಪಿ ಹೊಡಿತಾರಾ!

Cheat In Exams: ಪರೀಕ್ಷೆಯಲ್ಲಿ ಪಾಸಾಗಲು ಹೀಗೂ ಕಾಪಿ ಹೊಡಿತಾರಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಪಿ ಮಾಡಿ ಬರೆಯುವುದು ತಪ್ಪು ಅಂತ ಗೊತ್ತಿದ್ದರೂ ಸಹ ಆ ಸಮಯಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಫೇಲಾಗದೆ ಇದ್ದರೆ ಸಾಕಪ್ಪಾ ಅನ್ನೋ ಹಾಗೆ ಆಗಿರುತ್ತದೆ. ಹಾಗೆಯೇ ಕಾನೂನನ್ನು ಅಧ್ಯಯನ ಮಾಡುತ್ತಿರುವ ಸ್ಪೇನ್ ನ ವಿದ್ಯಾರ್ಥಿಯೊಬ್ಬ ತನ್ನ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯಬೇಕೆಂದು ಎಂತಹ ಐಡಿಯಾ ಮಾಡಿದ್ದಾನೆ ನೀವೇ ನೋಡಿ.

ಮುಂದೆ ಓದಿ ...
  • Share this:

ನಾವು ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ನಮ್ಮ ಸ್ನೇಹಿತರು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಗೊತ್ತಾಗದೆ ಕಾಪಿ ಮಾಡಲು ಏನೆಲ್ಲಾ ಹರಸಾಹಸ ಮಾಡುತ್ತಿದ್ದರು ಅಂತ ಒಮ್ಮೆ ನೆನಪಿಸಿಕೊಂಡರೆ ನಮಗೆ ಈಗಲೂ ನಗು ಬರುತ್ತದೆ. ‘ಪರೀಕ್ಷೆಯ ದಿನಾಂಕ ಹತ್ತಿರ ಬಂತು, ಏನೂ ಓದಿಲ್ಲ.. ಹೇಗಪ್ಪಾ ಪರೀಕ್ಷೆಯನ್ನು ಪಾಸು ಮಾಡೋದು’ ಅಂತ ನಮಗೆಲ್ಲಾ ಒಮ್ಮೆಯಾದರೂ ಶಾಲೆಯ ದಿನಗಳಲ್ಲಿ ಅನ್ನಿಸಿರುತ್ತದೆ. ಶಾಲೆ ಶುರುವಾದಾಗಿನಿಂದ ಹಿಡಿದು ಶಾಲೆಯಲ್ಲಿ ವಾರ್ಷಿಕ ಪರೀಕ್ಷೆ ಬರುವ ತನಕ ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ, ಊರೆಲ್ಲಾ ಸುತ್ತಾಡಿಕೊಂಡು ಇದ್ದವರಿಗೆ ಪರೀಕ್ಷೆಯ ದಿನಾಂಕ ಹತ್ತಿರ ಬಂತೆಂದರೆ ಎಲ್ಲಿಲ್ಲದ ದೇವರುಗಳು ನೆನಪಿಗೆ ಬರುತ್ತಿದ್ದರು.


ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕೈ ಮೇಲೆ ಪೆನ್ ನಿಂದ ಕೆಲವು ಮುಖ್ಯವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದುಕೊಂಡು ಕೈ ಉತ್ತರ ಪತ್ರಿಕೆಗೆ ಅಡ್ಡವಾಗಿರಿಸಿಕೊಂಡು ಯಾರಿಗೂ ಕಾಣದಂತೆ ಕಾಪಿ ಹೊಡೆದಿರುವುದು ನಮಗೆಲ್ಲಾ ಗೊತ್ತೇ ಇರುತ್ತದೆ. ಹೀಗೆ ಅನೇಕರು ಅನೇಕ ಉಪಾಯಗಳನ್ನು ಮಾಡಿಕೊಂಡು ಕಾಪಿ ಹೊಡೆಯುತ್ತಿದ್ದರು.


ಕಾಪಿ ಮಾಡಿ ಬರೆಯುವುದು ತಪ್ಪು ಅಂತ ಗೊತ್ತಿದ್ದರೂ ಸಹ ಆ ಸಮಯಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಫೇಲಾಗದೆ ಇದ್ದರೆ ಸಾಕಪ್ಪಾ ಅನ್ನೋ ಹಾಗೆ ಆಗಿರುತ್ತದೆ.


ಪರೀಕ್ಷೆಯಲ್ಲಿ ಕಾಪಿ ಮಾಡಲು ಸ್ಪೇನ್ ವಿದ್ಯಾರ್ಥಿ ಮಾಡಿದ ಉಪಾಯವೇನು?
ಕಾನೂನನ್ನು ಅಧ್ಯಯನ ಮಾಡುತ್ತಿರುವ ಸ್ಪೇನ್ ನ ವಿದ್ಯಾರ್ಥಿಯೊಬ್ಬ ತನ್ನ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯಬೇಕೆಂದು ಎಂತಹ ಐಡಿಯಾ ಮಾಡಿದ್ದಾನೆ ನೀವೇ ನೋಡಿ.


ಇದನ್ನೂ ಓದಿ: Kamal Kishor Mandal: ಅಂದು ಜವಾನ, ಇಂದು ಕಾಲೇಜ್ ಸಹಾಯಕ ಪ್ರಾಧ್ಯಾಪಕ! ಇವರ ಕಥೆ ಎಲ್ಲರಿಗೂ ಸ್ಫೂರ್ತಿ


ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಲು ವಿದ್ಯಾರ್ಥಿಗೆ ಗಮನಾರ್ಹ ಪ್ರಮಾಣದ ಅಭ್ಯಾಸ ಮತ್ತು ಪ್ರಯತ್ನದ ಅಗತ್ಯವಿರುತ್ತದೆ. ಆದರೆ ಈ ವಿದ್ಯಾರ್ಥಿ ತನ್ನ ಇಡೀ ವರ್ಷ ಮಜಾ ಮಾಡಿ ತನ್ನ ಪರೀಕ್ಷೆಯ ಸಮಯದಲ್ಲಿ ಮೋಸ ಮಾಡಿ ಪರೀಕ್ಷೆಯನ್ನು ಪಾಸ್ ಮಾಡಲು ತನ್ನ ಬಳಿ ಇರುವಂತಹ 11 ಪೆನ್ನುಗಳ ಮೇಲೆ ಚಿಕ್ಕ ಚಿಕ್ಕ ಉತ್ತರಗಳನ್ನು ಬರೆದುಕೊಂಡಿದ್ದಾನೆ.
ಈ ಪೆನ್ನುಗಳ ಫೋಟೋಗಳು ಇತ್ತೀಚೆಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆದ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿದ್ದು, ಈಗ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.


ಸಿಕ್ಕಿಹಾಕಿಕೊಂಡ ವಿದ್ಯಾರ್ಥಿ.. ಮುಂದೇನಾಯ್ತು ನೋಡಿ
ಈ ವಿದ್ಯಾರ್ಥಿ ನೀಲಿ ಬಣ್ಣದ ಪೆನ್ನುಗಳ ಮೇಲೆ ಸಣ್ಣ ಸಣ್ಣ ಅಕ್ಷರಗಳಿಂದ ಉತ್ತರಗಳನ್ನು ಬರೆದುಕೊಂಡಿದ್ದನು. ಇಷ್ಟು ಉಪಾಯ ಮಾಡಿದರೂ ಸಹ ಆ ವಿದ್ಯಾರ್ಥಿ ಶಿಕ್ಷಕರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಮತ್ತು ಆ ಪೆನ್ನುಗಳನ್ನು ವಶಪಡಿಸಿಕೊಳ್ಳಲಾಯಿತು.


ಆ 11 ಪೆನ್ನುಗಳ ಫೋಟೋಗಳನ್ನು ಯೋಲಾಂಡಾ ಡಿ ಲೂಚಿ ಎಂಬ ಪ್ರೊಫೆಸರ್ ಕಳೆದ ವಾರ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಪೆನ್ನುಗಳು ಮೇಲ್ನೋಟಕ್ಕೆ ಸಾಮಾನ್ಯವೆಂದು ತೋರಿದರೂ, ತುಂಬಾ ಹತ್ತಿರದಿಂದ ನೋಡಿದರೆ ಅದರ ಮೇಲೆ ಚಿಕ್ಕದಾಗಿ ಬರೆದ ಪಠ್ಯವನ್ನು ನಾವು ಗಮನಿಸಬಹುದು.


"ನನ್ನ ಕಚೇರಿಯನ್ನು ಸ್ವಚ್ಛ ಮಾಡುತ್ತಿರುವಾಗ, ಕೆಲವು ವರ್ಷಗಳ ಹಿಂದೆ ನಾವು ಒಬ್ಬ ವಿದ್ಯಾರ್ಥಿಯಿಂದ ವಶಪಡಿಸಿಕೊಂಡ ಈ ಪೆನ್ನುಗಳನ್ನು ನಾನು ನೋಡಿದೆ” ಎಂದು ಹೇಳಿದರು. “ಪೆನ್ನುಗಳ ಮೇಲೆ ಕ್ರಿಮಿನಲ್ ಕಾರ್ಯವಿಧಾನದ ವಿಷಯ.. ಎಂತಹ ಕಲೆ" ಎಂದು ಪೋಸ್ಟ್ ಹಂಚಿಕೊಳ್ಳುವಾಗ ಲೂಚಿ ಬರೆದಿದ್ದಾರೆ.


ಈ ಪೋಸ್ಟ್ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ..
ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದಲೂ ಇದುವರೆಗೆ 3.8 ಲಕ್ಷ ಲೈಕ್ ಗಳು ಮತ್ತು 24,000 ಕ್ಕೂ ಹೆಚ್ಚು ಬಾರಿ ಈ ಟ್ವೀಟ್ ಅನ್ನು ಮರು ಹಂಚಿಕೊಂಡಿದ್ದಾರೆ ಅಂತ ಹೇಳಬಹುದು. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ನೀಡಿದ್ದಾರೆ. "ಈ ವಿದ್ಯಾರ್ಥಿಯು ಇಷ್ಟು ಪ್ರಯತ್ನವನ್ನು ಮಾಡುವ ಬದಲು ಕೇವಲ ಅಧ್ಯಯನ ಮಾಡಿದರೆ ಆಗುತ್ತಿತ್ತು” ಅಂತ ಬಳಕೆದಾರರೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ:  Viral Video: ತಂದೆ ಮಗನ್ನ ಒಂದು ಕ್ಷಣ ಬೆಚ್ಚಿ ಬೀಳಿಸಿತ್ತು ಈ ದೈತ್ಯ ತಿಮಿಂಗಲ! ವೀಡಿಯೋ ನೋಡಿದ್ರೆ ನಿಮಗೂ ಭಯವಾಗುತ್ತೆ


ಸ್ಥಳೀಯ ಮಾಧ್ಯಮದ ಒಂದು ವರದಿಯ ಪ್ರಕಾರ, ಇದನ್ನು ಮಾಡಿದ ವಿದ್ಯಾರ್ಥಿಯನ್ನು ಗೊಂಜೊ ಎಂದು ಗುರುತಿಸಲಾಗಿದೆ.

Published by:Ashwini Prabhu
First published: