ಇತ್ತೀಚಿನ ದಿನಗಳಲ್ಲಿ ಇನ್ನೊಬ್ಬರನ್ನು ಮೋಸ ಮಾಡಿ (Fraud Case) ಹಣ ಲಪಟಾಯಿಸುವ ದಂಧೆ ಹೆಚ್ಚಾಗಿಯೇ ನಡೆಯುತ್ತಿದೆ ಎಂದೇ ಹೇಳಬಹುದು. ಸ್ಮಾರ್ಟ್ಫೋನ್ಗಳಲ್ಲಿನ (Smart Phone) ವೈಯಕ್ತಿಕ ಮಾಹಿತಿ ಕದಿಯುವುದು, ಲ್ಯಾಪ್ಟಾಪ್ಗಳಲ್ಲಿ (Laptop) ಮಾಹಿತಿ ಹ್ಯಾಕ್ ಮಾಡುವುದು ನಂತರ ಹಣಕ್ಕಾಗಿ ಪೀಡಿಸುವುದು, ಬ್ಲಾಕ್ಮೇಲ್ ತಂತ್ರಗಳು ಹೀಗೆ ಖದೀಮರು ಸೆರೆಗೆ ಸಿಗದಂತೆ ಲೀಲಾಜಾಲವಾಗಿ ಹಣ ಲಪಟಾಯಿಸುತ್ತಿದ್ದಾರೆ. ಈ ಜಾಲ ಇದೀಗ ಮೋಟಾರ್ ಕ್ಷೇತ್ರಗಳಿಗೂ (Motor Company ) ಕಾಲಿಟ್ಟಿದ್ದು ದೊಡ್ಡ ದೊಡ್ಡ ಕಾರು ಬ್ರ್ಯಾಂಡ್ಗಳ (Best Branded Car) ಮಾಲೀಕರನ್ನೇ ಗುರಿಯಾಗಿರಿಸಿಕೊಂಡಿದೆ ಇದರ ಬಗ್ಗೆ ಇನ್ನಷ್ಟು ಮಾಹಿತಿ ಹೇಳುತ್ತೇವೆ ನೋಡಿ.
ಬ್ರ್ಯಾಂಡ್ ಕಾರುಗಳನ್ನೇ ಗುರಿಯಾಗಿಸಿರುವ ಹ್ಯಾಕರ್ಗಳು
ಮರ್ಸಿಡಿಸ್, ಫೆರಾರಿ ಹೀಗೆ ಇನ್ನಿತರ ಉನ್ನತ ಲಕ್ಸುರಿ ಕಾರುಗಳಲ್ಲಿ ಪ್ರಮುಖ ಭದ್ರತಾ ವೈಫಲ್ಯಗಳು ವರದಿಯಾಗಿದ್ದು ಖದೀಮರು ಕಾರಿನ ಮಾಲೀಕರ ವೈಯಕ್ತಿಕ ಗುರುತಿಸುವಿಕೆ ಮಾಹಿತಿಯನ್ನು ಲಪಟಾಯಿಸುವುದು ಮಾತ್ರವಲ್ಲದೆ ಅವರ ವಾಹನಗಳನ್ನು ಟ್ರ್ಯಾಕ್ ಮಾಡುವುದು, ಕಾರನ್ನು ಸ್ಟಾರ್ಟ್ ಮಾಡುವುದು, ಅನ್ಲಾಕ್ ಮಾಡುವುದು ಮೊದಲಾದ ಪ್ರಕರಣಗಳನ್ನು ವರದಿ ಮಾಡಿದೆ.
ಯಾವೆಲ್ಲಾ ಕಾರುಗಳಲ್ಲಿ ನ್ಯೂನತೆ ಪತ್ತೆಯಾಗಿದೆ?
ಈ ವೈಫಲ್ಯಗಳಿಗೆ ಸರಿಸುಮಾರು ಎರಡು ಡಜನ್ಗಳಿಗಿಂತ ಹೆಚ್ಚಿನ ಬ್ರ್ಯಾಂಡೆಡ್ ಕಾರುಗಳು ಗುರಿಯಾಗಿದ್ದು, ಬಿಎಮ್ಡಬ್ಲ್ಯೂ, ರಾಲ್ ರಾಯ್ಸ್, ಮರ್ಸಿಡಿಸ್-ಬೆಂಜ್, ಫೆರಾರಿ, ಪೋರ್ಶೆ, ಜಾಗ್ವಾರ್, ಲ್ಯಾಂಡ್ ರೋವರ್, ಫೋರ್ಡ್, ಕಿಯಾ, ಹೋಂಡಾ, ಇನ್ಫಿನಿಟ್, ನಿಸಾನ್, ಅಕುರಾ, ಹ್ಯುಂಡಯ್, ಟೊಯೋಟೊ ಹಾಗೂ ಜೆನಿಸಸ್ ಮೊದಲಾದ ಕಾರುಗಳು ವೈಫಲ್ಯಗಳಿಗೆ ಗುರಿಯಾಗಿವೆ.
ಕಾರು ತಯಾರಕ ಸಂಸ್ಥೆಗಳು ಮಾತ್ರವಲ್ಲದೆ ಟೆಕ್ನಾಲಜಿ ಸಂಸ್ಥೆಗಳಾದ ಸ್ಪೈರನ್ ಹಾಗೂ ರಿವಿವರ್ ಮೇಲೂ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಈ ಹಿಂದೆ ಕನೆಕ್ಟೆಡ್ (ವೈರ್ಲೆಸ್ ನೆಟ್ವರ್ಕ್ಗಳ ಮೂಲಕ ಹತ್ತಿರದ ಸಾಧನಗಳಿಗೆ ಸಂಪರ್ಕಿಸುವ ಸಾಮರ್ಥ್ಯ) ಕಾರುಗಳಲ್ಲಿ ಭದ್ರತಾ ನ್ಯೂನತೆಗಳನ್ನು ಕಂಡುಹಿಡಿದಿದ್ದ ಸೈಬರ್ ಸೆಕ್ಯುರಿಟಿ ಸಂಶೋಧಕ ಸ್ಯಾಮ್ ಕರಿ ಅತ್ಯುನ್ನತ ಬ್ರ್ಯಾಂಡ್ಗಳ ಕಾರಿನಲ್ಲಿ ಇದೇ ಬಗೆಯ ದೋಷಗಳನ್ನು ಪತ್ತೆಹಚ್ಚಿದ್ದಾರೆ.
ಡಿಸೆಂಬರ್ 2022 ರ ಆರಂಭದಲ್ಲಿಯೇ ಸ್ಯಾಮ್ SiriusXM ಕನೆಕ್ಟೆಡ್ (ವೈರ್ಲೆಸ್ ನೆಟ್ವರ್ಕ್ಗಳ ಮೂಲಕ ಹತ್ತಿರದ ಸಾಧನಗಳಿಗೆ ಸಂಪರ್ಕಿಸುವ ಸಾಮರ್ಥ್ಯ) ವಾಹನ ಸೇವೆಗಳಲ್ಲಿ ನ್ಯೂನತೆಗಳನ್ನು ಪತ್ತೆಹಚ್ಚಿದ್ದರು.
ಬೇರೆ ಬೇರೆ ಕಾರುಗಳಲ್ಲಿ ವಿಭಿನ್ನ ನ್ಯೂನತೆಗಳು
ಆದರೆ ಈ ಪ್ರಕರಣದಲ್ಲಿ ಸ್ಯಾಮ್ ತಿಳಿಸಿರುವಂತೆ ಬೇರೆ ಬೇರೆ ಕಾರು ತಯಾರಕರು ಬೇರೆ ಬೇರೆ ದೋಷಗಳನ್ನು ಕಾರುಗಳಲ್ಲಿ ಪತ್ತೆ ಹಚ್ಚಿದ್ದಾರೆ. ಬಿಎಮ್ಡಬ್ಲ್ಯೂ ಹಾಗೂ ಮರ್ಸಿಡಿಸ್-ಬೆಂಜ್ ಸಿಂಗಲ್ ಸೈನ್ ಆನ್ನಲ್ಲಿ (SSO) ನ್ಯೂನತೆಗಳನ್ನು ಕಂಡುಕೊಂಡಿದ್ದು ಇದರಿಂದ ಹ್ಯಾಕರ್ಗಳು ಖಾಸಗಿ ಮಾಹಿತಿಗಳನ್ನು ಲಪಟಾಯಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಸಿಂಗಲ್ ಸೈನ್ ಆನ್ ಬಳಕೆದಾರರಿಗೆ ಒಂದೇ ರುಜುವಾತುಗಳನ್ನು ಬಳಸಿಕೊಂಡು ಬಹು ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದನ್ನೇ ದಾಳವನ್ನಾಗಿ ವಂಚಕರು ಬಳಸಿಕೊಂಡಿದ್ದಾರೆ ಎಂದು ಸ್ಯಾಮ್ ತಿಳಿಸಿದ್ದಾರೆ.
ಬಿಎಮ್ಡಬ್ಲ್ಯೂ ಕಾರಿನಲ್ಲಿ ಹ್ಯಾಕರ್ಗಳಿಗೆ ಡೀಲರ್ ಪೋರ್ಟಲ್ಗಳು, ವಿಐಎನ್ ಸಂಖ್ಯೆಗಳು, ಸೇಲ್ಸ್ ಡಾಕ್ಯುಮೆಂಟ್ಸ್ ಹೀಗೆ ಸೂಕ್ಷ್ಮ ಮಾಲೀಕ ವಿವರಗಳು ದೊರೆತಿದೆ. ಇನ್ನು ಕೆಲವು ಕಾರುಗಳ ಖಾಸಗಿ ಗುರುತಿಸುವಿಕೆ ಸಂಖ್ಯೆ ಹ್ಯಾಕರ್ಗಳಿಗೆ ದೊರೆತಿದೆ.
ನ್ಯೂನತೆ ಪರಿಹರಿಸಿರುವ ಸಂಸ್ಥೆಗಳು
ಫೆರಾರಿ ಕಾರಿನಲ್ಲಿ ಕಂಡುಬಂದ ದೋಷ ನಿಜಕ್ಕೂ ಆಘಾತಕಾರಿಯಾಗಿದ್ದು, ಕಾರಿನ ಗ್ರಾಹಕರ ಖಾತೆಯನ್ನು ಅಳಿಸುವ, ಮಾರ್ಪಡಿಸುವ, ಪ್ರವೇಶಿಸಲು ವಂಚಕರಿಗೆ ಅನುವು ಮಾಡಿಕೊಟ್ಟಿದೆ. ಪೋರ್ಶೇ ಕಾರಿನ ಲೊಕೇಶನ್ ಅನ್ನು ನಿಖರವಾಗಿ ಪತ್ತೆಹಚ್ಚಲು ಹಾಗೂ ವಾಹನಕ್ಕೆ ಆದೇಶಗಳನ್ನು ಕಳುಹಿಸಲು ಹ್ಯಾಕರ್ಗಳಿಗೆ ದಾರಿಯಾಗಿದೆ. ಈ ಕುರಿತು ಮಾಲೀಕರಿಗೆ ಮಾಹಿತಿ ನೀಡಲಾಗಿದ್ದು ಪ್ರಸ್ತುತ ನ್ಯೂನತೆಗಳನ್ನು ಪರಿಹರಿಸಲಾಗಿದೆ ಎಂಬ ಸುದ್ದಿ ದೊರೆತಿದೆ.
ಜಿಪಿಎಸ್ ಟ್ರ್ಯಾಕರ್ ಬಳಸಿ ಕೃತ್ಯ ನಡೆಸಲಾಗಿದೆ
ಜಿಪಿಎಸ್ ವೆಹಿಕಲ್ ಟ್ರ್ಯಾಕಿಂಗ್ ಪ್ರೊವೈಡರ್ Spireon, 15 ಅನ್ನು ದಶಲಕ್ಷಕ್ಕೂ ಹೆಚ್ಚು ವಾಹನಗಳಲ್ಲಿ ಉದ್ದೇಶಪೂರ್ವಕವಾಗಿ ಬಳಸಿರುವುದು ಕಂಡುಬಂದಿದ್ದು ಕಾರಿನಲ್ಲಿ ಕಂಡುಬಂದ ದೋಷಗಳಿಗೆ ಪ್ರಮುಖ ಅಂಶ ಎಂದೆನಿಸಿದೆ. ಹ್ಯಾಕರ್ಗಳಿಗೆ ಕಾರುಗಳನ್ನು ಅನ್ಲಾಕ್ ಮಾಡಲು, ಆದೇಶಗಳನ್ನು ಕಳುಹಿಸಲು ಈ ಜಿಪಿಎಸ್ ಟ್ರ್ಯಾಕರ್ ಕಾರಣವಾಗಿದೆ ಎಂಬುದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ