• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Snailfish: ಜಪಾನ್‌ ಸಮುದ್ರದಾಳದಲ್ಲಿ ಕಾಣಿಸಿತು ಸ್ನೈಲ್​​ ಫಿಶ್! 8 ಸಾವಿರ ಮೀಟರ್‌ ಆಳಕ್ಕೆ ಹೋಗಿ ವಿಡಿಯೋ ಸೆರೆ ಹಿಡಿದ ವಿಜ್ಞಾನಿಗಳು

Snailfish: ಜಪಾನ್‌ ಸಮುದ್ರದಾಳದಲ್ಲಿ ಕಾಣಿಸಿತು ಸ್ನೈಲ್​​ ಫಿಶ್! 8 ಸಾವಿರ ಮೀಟರ್‌ ಆಳಕ್ಕೆ ಹೋಗಿ ವಿಡಿಯೋ ಸೆರೆ ಹಿಡಿದ ವಿಜ್ಞಾನಿಗಳು

ಸ್ನೈಲ್​ಫಿಶ್​

ಸ್ನೈಲ್​ಫಿಶ್​

ಪೆಸಿಫಿಕ್ ಮಹಾಸಾಗರದ ಆಳದಲ್ಲಿ ಅತ್ಯಂತ ಅಪರೂಪದ ಮೀನುಗಳ ಸಂಕುಲವನ್ನೇ ಸಾಗರದ ವಿಜ್ಞಾನಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅತ್ಯಂತ ಅಪರೂಪದ ಮೀನುಗಳ ಸಂಕುಲವಾಗಿರುವ ಸ್ನೈಲ್ ಫಿಶ್‌ಗಳ ಸಂಗ್ರಹವೇ ವಿಜ್ಞಾನಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 • Share this:

ಪೆಸಿಫಿಕ್ ಮಹಾಸಾಗರದ (Pacific Ocean) ಆಳದಲ್ಲಿ ಅತ್ಯಂತ ಅಪರೂಪದ ಮೀನುಗಳ ಸಂಕುಲವನ್ನೇ ಸಾಗರದ ವಿಜ್ಞಾನಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅತ್ಯಂತ ಅಪರೂಪದ ಮೀನುಗಳ ಸಂಕುಲವಾಗಿರುವ ಸ್ನೈಲ್ ಫಿಶ್‌ಗಳ (Snailfish) ಸಂಗ್ರಹವೇ ವಿಜ್ಞಾನಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ. ಅತ್ಯಂತ ಆಧುನಿಕ ಕ್ಯಾಮೆರಾಗಳನ್ನು ಬಳಸಿಕೊಂಡು ಸಾಗರೋತ್ತರ ವಿಜ್ಞಾನಿಗಳು (Scientist) ಆಳವಾದ ಸಮುದ್ರದಲ್ಲಿ ಮೀನುಗಳನ್ನು (Sea Fish) ಪತ್ತೆಹಚ್ಚಿದ್ದಾರೆ.


27,349 ಅಡಿ ಆಳದಲ್ಲಿ ಸೆರೆಹಿಡಿಯಲಾದ ದೃಶ್ಯಗಳು


ಕಡಿಮೆ ಬೆಳಕನ್ನು ಬಳಸುವ ಅಟೋನೋಮಸ್ ಉಪಕರಣವನ್ನು ಬಳಸಿಕೊಂಡು ಆಳವಾದ ಸಮುದ್ರದ ಕೆಳಭಾಗದಲ್ಲಿ 27,349 ಅಡಿ (8,336 ಮೀಟರ್) ಆಳದಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.


ಸೂಡೊಲಿಪ್ಯಾರಿಸ್ ಕುಲದ ಬಸವನ ಮೀನು ಎಂಬುದಾಗಿ ಈ ಮೀನುಗಳ ಸಮೂಹವನ್ನು ಗುರುತಿಸಲಾಗಿದ್ದು ಈ ಮೀನು ದೊಡ್ಡ ಮೊಟ್ಟೆಯ ಗಾತ್ರವನ್ನು ಹೋಲುತ್ತದೆ ಎಂದು ಔಟ್‌ಲೆಟ್ ವರದಿ ಮಾಡಿದೆ.


ಇದನ್ನೂ ಓದಿ: ಆಕಾಶದಲ್ಲಿ ಕಂಡು ಬಂತು ಕೆಂಪು ಬಣ್ಣದ ಸರ್ಕಲ್! ಇದು ಕೌತುಕವೋ, ಆತಂಕವೋ?

 ಪಶ್ಚಿಮ ಆಸ್ಟ್ರೇಲಿಯಾ ಮತ್ತು ಟೋಕಿಯೋ ವಿಶ್ವವಿದ್ಯಾನಿಲಯದ ಸಾಗರ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಪಾನ್‌ನ ಆಳವಾದ ಕಂದಕಗಳಲ್ಲಿ ಸಮುದ್ರ ರೋಬೋಟ್‌ಗಳು ಕಳೆದ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಿಸಿದ ಬಸವನ ಮೀನುಗಳ (ಸ್ನೈಲ್ ಫಿಶ್) ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.

ಅತ್ಯಂತ ಆಳವಾದ ವಲಯದಲ್ಲಿ ಮೀನುಗಳ ಪತ್ತೆ


ಆಳವಾದ ಬಸವನ ಮೀನುಗಳ ಚಿತ್ರೀಕರಣದ ಜೊತೆಗೆ, ವಿಜ್ಞಾನಿಗಳು ಭೌತಿಕವಾಗಿ 8,022 ಮೀಟರ್‌ನಲ್ಲಿ ಇತರ ಎರಡು ಮಾದರಿಗಳ ಮೀನುಗಳನ್ನು ಸೆರೆಹಿಡಿದಿದ್ದು ಅತ್ಯಂತ ಆಳವಾದ ವಲಯದಲ್ಲಿ ಮೀನುಗಳನ್ನು ಸೆರೆಹಿಡಿದಿದ್ದಾರೆ ಎಂಬ ದಾಖಲೆಯನ್ನು ಸಾಧಿಸಿದ್ದಾರೆ.


ಹಿಂದೆ, 2008 ರಲ್ಲಿ 7,703 ಮೀಟರ್‌ಗಳಷ್ಟು ಆಳವಾದಲ್ಲಿ ಕಂಡುಬರುವ ಬಸವನ ಮೀನುಗಳನ್ನು ಗುರುತಿಸಲಾಗಿತ್ತು. ಆದರೆ ವಿಜ್ಞಾನಿಗಳು 8,000 ಮೀಟರ್‌ಗಿಂತ ಕಡಿಮೆ ಆಳದ ಮೀನುಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ.


ಸ್ನೈಲ್​ಫಿಶ್​


ಇಲ್ಲಿ ಕಂಡುಬರುವ ಮಹತ್ವದ ಸಂಗತಿ ಎಂದರೆ ನಿರ್ದಿಷ್ಟ ರೀತಿಯ ಮೀನುಗಳು ಸಮುದ್ರದಲ್ಲಿ ಎಷ್ಟು ದೂರಕ್ಕೆ ಇಳಿಯುತ್ತವೆ ಎಷ್ಟು ಆಳದಲ್ಲಿ ವಾಸಿಸುತ್ತವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಸಮುದ್ರ ಜೀವಶಾಸ್ತ್ರಜ್ಞ ಅಲನ್ ಜೇಮಿಸನ್ ತಿಳಿಸಿದ್ದಾರೆ. ಅಲನ್ ಅವರು ಮೀನನ್ನು ಪತ್ತೆಹಚ್ಚುವ ತಂಡದಲ್ಲಿ ಪ್ರಮುಖ ನೇತೃತ್ವ ವಹಿಸಿದ್ದ ವ್ಯಕ್ತಿ ಎನಿಸಿದ್ದಾರೆ.


10 ವರ್ಷಗಳಿಗಿಂತಲೂ ಅಧಿಕ ಕಾಲ ಚಿತ್ರೀಕರಣದಲ್ಲಿ ತೊಡಗಿರುವ ವಿಜ್ಞಾನಿಗಳು


ವಿಶ್ವದ ಆಳವಾದ ಮೀನುಗಳ ಅಧ್ಯಯನದ ಸಲುವಾಗಿ 10 ವರ್ಷಗಳಿಗಿಂತಲೂ ಅಧಿಕ ಕಾಲ ವಿಜ್ಞಾನಿಗಳು ಜಪಾನ್‌ನ ಆಳವಾದ ಸಾಗರ ಭಾಗಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ.


ಬಸವನ ಮೀನುಗಳು ಲಿಪರಿಡೆ ಕುಟುಂಬದ ಸದಸ್ಯರಾಗಿದ್ದು ಹೆಚ್ಚಿನ ಬಸವನ (ಸ್ನೈಲ್ ಫಿಶ್) ಆಳವಾದ ನೀರಿನಲ್ಲಿ ವಾಸಿಸುತ್ತಿದ್ದರೆ ಇನ್ನು ಕೆಲವು ಇನ್ನೂ ಆಳವಾದ ಸಾಗರಗಳ ತಳದಲ್ಲಿ ಬದುಕುಳಿಯುತ್ತವೆ ಎಂಬುದಕ್ಕೆ ಈ ದೃಶ್ಯಾವಳಿಗಳು ಪುರಾವೆಯಾಗಿದೆ ಎಂದು ಅಲನ್ ತಿಳಿಸಿದ್ದಾರೆ.


ಕಳೆದ ವರ್ಷ ಎರಡು ತಿಂಗಳ ಸಮೀಕ್ಷೆಯ ಸಮಯದಲ್ಲಿ, ಮೂರು ಲ್ಯಾಂಡರ್‌ಗಳು ಅಂತೆಯೇ ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳನ್ನು ಅಳವಡಿಸಲಾದ ಸಮುದ್ರ ರೊಬೋಟ್‌ಗಳ ಸಹಾಯದಿಂದ ಜಪಾನ್, ಇಜು-ಒಗಸವಾರ ಹಾಗೂ ರ್ಯುಕ್ಯು ಜಲಾನಯನ ಪ್ರದೇಶಗಳಲ್ಲಿ ಸಾಗರೋತ್ತರ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಇಜು-ಒಗಸವಾರದಲ್ಲಿ ಇತರ ಜಲಚರಗಳೊಂದಿಗೆ ಶಾಂತವಾಗಿ ಈಜುತ್ತಿದ್ದ ಸ್ನೈಲ್ ಫಿಶ್ ಅಥವಾ ಬಸವನ ಮೀನುಗಳು ಪತ್ತೆಯಾಗಿವೆ.


ಇತರ ಪರಭಕ್ಷಕಗಳಿಂದ ಸ್ವಯಂ ರಕ್ಷಣೆ


ಕಿರಿಯ ಸ್ನೈಲ್ ಫಿಶ್‌ಗಳು ಸಾಗರ ತಳದಲ್ಲಿರುವ ಇತರ ಪರಭಕ್ಷಕಗಳು ಹಾಗೂ ಜಲಚರಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಾಧ್ಯವಾದಷ್ಟು ಆಳದಲ್ಲಿ ಈಜುತ್ತಿರುತ್ತವೆ ಎಂದು ಅಲೆನ್ ತಿಳಿಸಿದ್ದಾರೆ. ಅದೇ ಜಲಾನಯನದಲ್ಲಿ 7,500 ಮತ್ತು 8,200 ಮೀಟರ್‌ಗಳ ನಡುವಿನ ಮತ್ತೊಂದು ದೃಶ್ಯಾವಳಿಯು ಮೀನು ಮತ್ತು ಇತರ ಜಲಚರಗಳ ವಸಾಹತು ಪ್ರದೇಶವನ್ನು ತೋರಿಸಿದೆ.‘


top videos  ಸೆರೆಹಿಡಿಯಲಾದ ಎರಡು ಬಸವನ ಮೀನುಗಳ ಚಿತ್ರಗಳನ್ನು ಸ್ಯೂಡೋಲಿಪಾರಿಸ್ ಬೆಲ್ಯಾವಿ ಎಂದು ಗುರುತಿಸಲಾಗಿದ್ದು, ಆಳವಾದ ಪರಿಸರದಲ್ಲಿ ಬದುಕುಳಿಯಲು ಸಹಕಾರಿಯಾಗಿರುವ ವಿಶಿಷ್ಟ ಅಪರೂಪದ ನೋಟವನ್ನು ಈ ಚಿತ್ರಣ ಒದಗಿಸಿದೆ. ಈ ಮೀನುಗಳು ಚಿಕ್ಕ ಕಣ್ಣು, ಅರೆಪಾರದರ್ಶಕ ದೇಹವನ್ನು ಹೊಂದಿದ್ದು ಮೀನುಗಳಿಗೆ ತೇಲಲು ಸಹಾಯ ಮಾಡುತ್ತದೆ ಅಂತೆಯೇ ಅವುಗಳ ಅನುಕೂಲಕ್ಕೆ ತಕ್ಕಂತೆ ಈಜು ರೆಕ್ಕೆಗಳನ್ನು ಬಳಸಿಕೊಳ್ಳುತ್ತವೆ ಎಂಬುದಾಗಿ ಇನ್ನೊಬ್ಬ ವಿಜ್ಞಾನಿ ಜೇಮಿಸನ್ ತಿಳಿಸಿದ್ದಾರೆ.

  First published: