Penguins: ತಾನು ನಿಂತ ನೆಲವೇ ಬಿರುಕು ಬಿಟ್ಟರೂ ಜಗ್ಗಲಿಲ್ಲ ಈ ಪುಟಾಣಿ ಪೆಂಗ್ವಿನ್, ಏನೇನ್ ಸರ್ಕಸ್ ಮಾಡಿದೆ ನೋಡಿ Viral Video

Penguin Video: ಏಕಾಂಗಿಯಾದ ಪೆಂಗ್ವಿನ್ ಕಂಡು ಇತರ ಸಹಚರ ಪೆಂಗ್ವಿನ್ಗಳು ಗಾಬರಿಯಾಗುತ್ತವೆ.. ಆದ್ರೆ ಬಿರುಕುಬಿಟ್ಟ ಹಿಮದ ಮೇಲೆ ನಿಂತಿದ್ದ ಪೆಂಗ್ವಿನ್ ದೃತಿಗೆಡದೆ ಧೈರ್ಯವಾಗಿ ಅದನ್ನು ದಾಟಿ ತನ್ನ ಗುಂಪನ್ನು ಓಡಿ ಸೇರಿಕೊಂಡಿದೆ

ಪೆಂಗ್ವಿನ್

ಪೆಂಗ್ವಿನ್

  • Share this:
ಹವಾಮಾನ ಬದಲಾವಣೆ (Weather Change), ತಾಪಮಾನ ಏರಿಕೆ (Global warming), ಅಂಟಾರ್ಕಿಕಾದಲ್ಲಿ (Antarctica) ಐಸ್‌ (Ice) ಹೆಚ್ಚಿನ ಪ್ರಮಾಣದಲ್ಲಿ ಕರಗುತ್ತಿದೆ ಎಂಬುದರ ಬಗ್ಗೆ ಇತ್ತೀಚಿನ ಕೆಲ ವರ್ಷಗಳಲ್ಲಿ ನಾನಾ ಚರ್ಚೆಗಳು ನಡೆಯುತ್ತಿದೆ. ಗೂಗಲ್‌ (Google) ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ, ವೆಬ್‌ಸೈಟ್‌ಗಳಲ್ಲಿ (Website) ಹುಡುಕಿದರೆ ಈ ಕುರಿತು ಸಾಕಷ್ಟು ಫೋಟೋಗಳು, ವಿಡಿಯೋಗಳು ಸಿಗುತ್ತವೆ. ಇದರಿಂದ ಮಾನವ ಕುಲಕ್ಕೆ, ಪ್ರಾಣಿಗಳಿಗೆ ಆಗುತ್ತಿರುವ ಅವಾಂತರಗಳು ಒಂದೊಂದಲ್ಲ. ಇಲ್ಲಿಯೂ ಸಹ ಕರಗಿದ ಐಸ್‌ನಿಂದ ಪ್ರಾಣಾಪಾಯಕ್ಕೆ ಸಿಲುಕಿದ ಪೆಂಗ್ವಿನ್‌ವೊಂದರ (Penguins) ವಿಡಿಯೋವೊಂದನ್ನು ನೋಡಬಹುದು. ಅದರ ಬಗ್ಗೆ ವಿವರ ಇಲ್ಲಿದೆ ನೋಡಿ..

ಬದುಕು ಅನಿಶ್ಚಿತ ಎಂಬ ಮಾತುಗಳನ್ನು ನಾವು ಆಗಾಗ ಕೇಳಿರುತ್ತೇವೆ.. ಯಾವ ಸಮಯದಲ್ಲಿ ಯಾವ ಅಪಾಯ ಬಂದು ಹೊಗುತ್ತದೆಯೆಂದು ಹೇಳಲಾಗುವುದಿಲ್ಲ.. ಆದರೆ ಬರುವ ಅಪಾಯವನ್ನು ಮೆಟ್ಟಿ ನಿಂತರೆ ಮುಂದೆ ಸುಖಜೀವನ ಕಾದಿದೆ ಎಂಬುದು ಹಲವಾರು ಘಟನೆಗಳಿಂದ ಸಾಬೀತಾಗಿದೆ.. ಅಲ್ಲದೇ ಅಪಾಯ ಎದುರಾದಾಗ ಅದನ್ನು ಉಪಾಯದಿಂದ ಎದುರಿಸಿ ಪಾರಾದರೆ ಎಂತಹ ದುರ್ಘಟನೆಯನ್ನು ಸಹಿಸಿಕೊಳ್ಳುವ ಶಕ್ತಿ ನಮಗೆ ಲಭಿಸುತ್ತದೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಹಲವಾರು ವಿಡಿಯೋಗಳು ನಮ್ಮ ಮುಂದೆ ಇವೆ.. ಅದೇ ರೀತಿ ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಪೆಂಗ್ವಿನ್ ವಿಡಿಯೋ ಸಹ ಸೇರ್ಪಡೆಯಾಗಿದೆ..

ಇದನ್ನೂ ಓದಿ: ತಲೆ ಕೂದಲಿನ ಮೇಲೆ ಅದೇನು ಪ್ರೀತಿ.. 30 ವರ್ಷದಿಂದ ಕೂದಲೇ ಕತ್ತರಿಸಿಲ್ಲವಂತೆ ಈಕೆ

ಹಿಮ ಬಂಡೆ ಬಿರುಕು ಬಿಟ್ಟರು ಧೃತಿಗೆಡದ ಪೆಂಗ್ವಿನ್

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಐಎಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಪೆಂಗ್ವಿನ್ ಗಳ ಗುಂಪು ಹೆಪ್ಪುಗಟ್ಟಿದ ನೀರಿನ ಮೇಲೆ ಚಲನೆ ಮಾಡುತ್ತಿರುತ್ತದೆ. ಈ ವೇಳೆ ಇದ್ದಕ್ಕಿದ್ದಂತೆ ಅವಘಡವೊಂದು ಸಂಭವಿಸಿದೆ.

ಈ ಅವಘಡದಿಂದ ಧೃತಿಗೆಡದೆ ಪೆಂಗ್ವಿನ್ ದಿಟ್ಟತನದಿಂದ ಪಾರಾಗಿ ಹೊರಬಂದಿದೆ.. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಪೆಂಗ್ವಿನ್ ದಿಟ್ಟತನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ..?

ಹೆಪ್ಪುಗಟ್ಟಿದ ಸಾಗರದ ಮೇಲೆ ಪೆಂಗ್ವಿನ್ ಗಳ ಗುಂಪೊಂದು ನಡೆದುಕೊಂಡು ಹೋಗುತ್ತಿರುತ್ತದೆ. ಈ ವೇಳೆ ಇದ್ದಕ್ಕಿದ್ದಂತೆ ದೊಡ್ಡ ಬಿರುಕು ಉಂಟಾಗಿ ಪೆಂಗ್ವಿನ್ ಒಂದು ಏಕಾಂಗಿಯಾಗಿ ಸಿಲುಕಿಕೊಂಡು ತನ್ನ ಗುಂಪಿನಿಂದ ದೂರವಾಗುತ್ತದೆ.

ಇದೇ ವೇಳೆ ಏಕಾಂಗಿಯಾದ ಪೆಂಗ್ವಿನ್ ಕಂಡು ಇತರ ಸಹಚರ ಪೆಂಗ್ವಿನ್ಗಳು ಗಾಬರಿಯಾಗುತ್ತವೆ.. ಆದ್ರೆ ಬಿರುಕುಬಿಟ್ಟ ಹಿಮದ ಮೇಲೆ ನಿಂತಿದ್ದ ಪೆಂಗ್ವಿನ್ ದೃತಿಗೆಡದೆ ಧೈರ್ಯವಾಗಿ ಅದನ್ನು ದಾಟಿ ತನ್ನ ಗುಂಪನ್ನು ಓಡಿ ಸೇರಿಕೊಂಡಿದೆ.. ಬಳಿಕ ಪೆಂಗ್ವಿನ್ ಗಳ ಗುಂಪು ಅಪಾಯದಿಂದ ಪಾರಾಗಿ ಬಂದ ಇನ್ನೊಂದು ಪೆಂಗ್ವಿನ್ ಸುರಕ್ಷಿತವಾಗಿದೆಯಾ ಎಂದು ಪರೀಕ್ಷೆ ಮಾಡಿವೆ.

ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅನೇಕ ಜನರಿಗೆ ಜೀವನದ ಪಾಠವನ್ನು ಹೇಳುತ್ತಿದೆ.ಇದನ್ನೂ ಓದಿ: ಕಳ್ಳತನ ಆದ್ರೂ ತಲೆಕಡೆಸಿಕೊಳ್ಳದೆ 'Pokémon Go' ಆಟದಲ್ಲಿ ಮುಳುಗಿದ ಪೊಲೀಸರು

ಸಮುದ್ರದ ಮಧ್ಯೆ ಅಪಾಯದಲ್ಲಿ ಸಿಲುಕಿದರೂ ಸಹ ನಮ್ಮಲ್ಲಿ ಧೈರ್ಯದ ಮನೋಭಾವನೆ ಇದ್ದರೆ ಸುಲಭವಾಗಿ ಈಜಿ ದಡ ಸೇರಬಹುದು ಎಂಬ ಮಾತನ್ನು, ದೊಡ್ಡ ಬಿರುಕು ಬಿಟ್ಟ ಹಿಮದ ಮೇಲೆ ನಿಂತು ಸರಾಗವಾಗಿ ದಾಟಿ ಓಡೋಡಿ ತನ್ನ ಗುಂಪಿಗೆ ಸೇರಿಕೊಂಡ ಪೆಂಗ್ವಿನ್ ಸಾಬೀತು ಮಾಡಿದ್ದು ಅನೇಕರಿಗೆ ಸ್ಫೂರ್ತಿ ತುಂಬಿದೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋಗೆ ಮೆಚ್ಚುಗೆ ಸೂಚಿಸಿರುವ ನೆಟ್ಟಿಗರು ಆಶಾವಾದ ಮತ್ತು ಕಠಿಣ ಪರಿಶ್ರಮ ಏನು ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ ಯಾಗಿದೆ ಎಂದು ಹೇಳುತ್ತಿದ್ದಾರೆ.  ಐಎಎಸ್‌ ಅಧಿಕಾರಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ನಂತರ, ಈ ವಿಡಿಯೋ ಕ್ಲಿಪ್ 1.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಸುಮಾರು 15,000 ಲೈಕ್‌ಗಳನ್ನು ಗಳಿಸಿದೆ.
Published by:ranjumbkgowda1 ranjumbkgowda1
First published: