73 ವರ್ಷಗಳ ನಂತರ Library ಪುಸ್ತಕ ಹಿಂತಿರುಗಿಸಿದಾಗ, ದಂಡ ಎಷ್ಟು ಲಕ್ಷ ರೂ. ಆಗಿತ್ತು ಗೊತ್ತೇ?

73 ವರ್ಷದ ನಂತರ ಬಂದ ಪುಸ್ತಕವನ್ನು ಗ್ರಂಥಪಾಲಕರು ಸ್ವೀಕರಿಸಲು ಗಲಿವಿಲಿಗೊಂಡಿದ್ದರು ಎಂದು ಡನ್‌ಫರ್ಮ್‌ಲೈನ್ ಕಾರ್ನೆಗೀ ಲೈಬ್ರರಿ ಮತ್ತು ಗ್ಯಾಲರೀಸ್‌ನ ಸಾಂಸ್ಕೃತಿಕ ಸೇವಾ ಸಹಾಯಕ ಡೊನ್ನಾ ದೇವರ್ ಹೇಳಿದ್ದಾರೆ, "ನಾನು ಪಾರ್ಸೆಲ್ ಅನ್ನು ತೆರೆದಾಗ ನಗು ಬಂತು. ನನಗೆ ನಂಬಲಾಗಲಿಲ್ಲ.

 ಗ್ರಂಥಾಲಯದಿಂದ ಎರವಲು ಪಡೆದಿದ್ದ ಪುಸ್ತಕ

ಗ್ರಂಥಾಲಯದಿಂದ ಎರವಲು ಪಡೆದಿದ್ದ ಪುಸ್ತಕ

 • Share this:
  ಸುಮಾರು 73 ವರ್ಷಗಳ ಹಿಂದೆ ಗ್ರಂಥಾಲಯದಿಂದ ಎರವಲು ಪಡೆದಿದ್ದ ಪುಸ್ತಕವೊಂದನ್ನು ಅಂತಿಮವಾಗಿ ಸ್ಕಾಟ್ಲೆಂಡ್‌ನ ಫೈಫ್‌ನಲ್ಲಿರುವ ಡನ್‌ಫರ್ಮ್‌ಲೈನ್‌ನ ಸೆಂಟ್ರಲ್ ಲೈಬ್ರರಿಗೆ(Scotland Library ) ಹಿಂತಿರುಗಿಸಿರುವುದು ಭಾರಿ ಸುದ್ದಿಯಾಗಿದೆ. ಏಳು ದಶಕಗಳ ನಂತರ ಪುಸ್ತಕವನ್ನು ಸ್ವೀಕರಿಸಿದ ಗ್ರಂಥಪಾಲಕರು ಆಶ್ಚರ್ಯಚಕಿತರಾಗಿದ್ದಾರೆ. ಪುಸ್ತಕವನ್ನು ಕ್ರೋಮಾರ್ಟಿ ಪಟ್ಟಣದಿಂದ (Cromarty town)ಮೇಲ್ ಮೂಲಕ ಕಳುಹಿಸಿದ್ದಾರೆ. ಆ ಪಾರ್ಸೆಲ್ ನಲ್ಲಿ ಪುಸ್ತಕದ ಜೊತೆಗೆ ಪತ್ರವೂ ಇತ್ತು. ಪತ್ರದಲ್ಲಿ, ಪುಸಕ್ತ (book)ಪಡೆದಿದ್ದ ಮಗಳು ತನ್ನ ದಿವಂಗತ ತಂದೆ 1948 ರಲ್ಲಿ ಥಾರ್ನ್ಟನ್, ಫೈಫ್ನಲ್ಲಿ ವಾಸಿಸುತ್ತಿದ್ದರು ಮತ್ತು ಅವರು 20 ವರ್ಷದವಳಿದ್ದಾಗ ಪುಸ್ತಕವನ್ನು ಎರವಲು ಪಡೆದಿದ್ದಾರೆ ಎಂದು ಬರೆದಿದ್ದಾರೆ.

  ಇದನ್ನು ಓದಿ: ಬೆಳಗಾವಿಯಲ್ಲಿಂದು ಐದು ಭಾಷೆಯ ಡಿಜಿಟಲ್ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಿರುವ ಸಿಎಂ

  ಸ್ಟೇಟ್ಲಿ ಟಿಂಬರ್' ಪುಸ್ತಕ
  ಆದಾಗ್ಯೂ, ತನ್ನ ತಂದೆ ಅದನ್ನು ಹಿಂದಿರುಗಿಸಲು ಮರೆತಿದ್ದಾರೋ ಅಥವಾ ಅದನ್ನು ಇರಿಸಿಕೊಳ್ಳಲು ನಿರ್ಧರಿಸಿದ್ದಾರೋ ಎಂಬುದು ತನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಪುಸ್ತಕವನ್ನು ನೋಡಿದ ನಂತರ ಪುಸ್ತಕದ ಸಂಚಿಕೆ ದಿನಾಂಕವನ್ನು ನೋಡಿ ಆಕರ್ಷಿತರಾದರು ಎಂದು ಉಲ್ಲೇಖಿಸಿದ್ದಾರೆ.
  ರೂಪರ್ಟ್ ಹ್ಯೂಸ್ ಅವರ 'ಸ್ಟೇಟ್ಲಿ ಟಿಂಬರ್' ಪುಸ್ತಕವನ್ನು (The book 'Stately Timber' by Rupert Hughes) 1948ರ ನವೆಂಬರ್ 6 ರಂದು ಡನ್‌ಫರ್ಮ್‌ಲೈನ್ ಕಾರ್ನೆಗೀ ಲೈಬ್ರರಿ ಮತ್ತು ಗ್ಯಾಲರೀಸ್‌ಗೆ ಹಿಂತಿರುಗಿಸಬೇಕಿತ್ತು ಎಂದು ಯುಕೆ ಸುದ್ದಿ ದಿನಪತ್ರಿಕೆಯೊಂದು ವರದಿ ಮಾಡಿದೆ.

  2,847 ಯುಕೆ ಪೌಂಡ್‌
  73 ವರ್ಷದ ನಂತರ ಬಂದ ಪುಸ್ತಕವನ್ನು ಗ್ರಂಥಪಾಲಕರು ಸ್ವೀಕರಿಸಲು ಗಲಿವಿಲಿಗೊಂಡಿದ್ದರು ಎಂದು ಡನ್‌ಫರ್ಮ್‌ಲೈನ್ ಕಾರ್ನೆಗೀ ಲೈಬ್ರರಿ ಮತ್ತು ಗ್ಯಾಲರೀಸ್‌ನ ಸಾಂಸ್ಕೃತಿಕ ಸೇವಾ ಸಹಾಯಕ ಡೊನ್ನಾ ದೇವರ್  ಹೇಳಿದ್ದಾರೆ, "ನಾನು ಪಾರ್ಸೆಲ್ ಅನ್ನು ತೆರೆದಾಗ  ನಗು ಬಂತು. ನನಗೆ ನಂಬಲಾಗಲಿಲ್ಲ." ಇದೇ ವೇಳೆ ಅವರು ಒಮ್ಮೆ 14 ವರ್ಷಗಳ ನಂತರ ಲೈಬ್ರರಿಯ ರೋಸಿತ್ ಶಾಖೆಗೆ ಪುಸ್ತಕವನ್ನು ಹಿಂದಿರುಗಿಸಿದರು ಎಂದು ಅವರು ನೆನಪಿಸಿಕೊಂಡರು. ಗ್ರಂಥಾಲಯದ ಸಿಬ್ಬಂದಿ ಹಿಂದಿರುಗಿದ ಪುಸ್ತಕದ ದಂಡದ ಶುಲ್ಕವನ್ನು ಲೆಕ್ಕ ಹಾಕಿದಾಗ ಅದು 2,847 ಯುಕೆ ಪೌಂಡ್‌ಗಳ (3 ಲಕ್ಷ ರೂ)ದೊಡ್ಡ ಮೊತ್ತಕ್ಕೆ ಬಂದಿತು ಎಂದು ಡೊನ್ನಾ ಉಲ್ಲೇಖಿಸಿದ್ದಾರೆ.

  ಪುಸ್ತಕ ಪ್ರದರ್ಶನಕ್ಕೆ
  ಆನ್‌ಫೈಫ್‌ನ ಸಾಂಸ್ಕೃತಿಕ ಪರಂಪರೆ ಮತ್ತು ಯೋಗಕ್ಷೇಮದ ಮುಖ್ಯಸ್ಥರಾದ ಕ್ರಿಸ್ಟಿನ್ ಮೆಕ್ಲೀನ್, ದೇಶದ ಗ್ರಂಥಾಲಯಗಳನ್ನು ಉತ್ತೇಜಿಸಲು ಸ್ಕಾಟ್‌ಲ್ಯಾಂಡ್‌ನಲ್ಲಿ ಹಿಂದಿರುಗಿದ ಪುಸ್ತಕವನ್ನು ಪ್ರದರ್ಶನಕ್ಕೆ ಇಡಲು ಯೋಜಿಸುತ್ತಿದ್ದೇವೆ ಎಂದು ಹೇಳಿದರು. ಇದಲ್ಲದೇ ಹಿಂದಿನ ನಿದರ್ಶನಗಳಲ್ಲಿ, 63 ವರ್ಷಗಳ ನಂತರ ನ್ಯೂಕ್ಯಾಸಲ್ ಗ್ರಂಥಾಲಯಕ್ಕೆ  ಪುಸ್ತಕವನ್ನು ಹಿಂತಿರುಗಿಸಲಾಗಿತ್ತು.

  ಇದನ್ನು ಓದಿ: Digital Library: ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷ ಮಂದಿ ನೊಂದಣಿ : ಸಚಿವ ಸುರೇಶ್ ಕುಮಾರ್

  ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ (Cambridge University)ಸಿಡ್ನಿ ಸಸೆಕ್ಸ್ ಕಾಲೇಜಿನ ಗ್ರಂಥಾಲಯ ಪುಸ್ತಕವನ್ನು  1668 ರಲ್ಲಿ ಎರವಲು ಪಡೆದು  288 ವರ್ಷಗಳ ನಂತರ ಹಿಂತಿರುಗಿಸಲಾಗಿತ್ತು. ಈ ಪುಸ್ತಕವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಗುರುತಿಸಿಕೊಂಡಿದೆ.

  ಗ್ರಂಥಾಲಯ ಕುರಿತು
  ಗ್ರಂಥಾಲಯಗಳು ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ. ಗ್ರಂಥಾಲಯಗಳ(Library) ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.

  ಪ್ರಾಚೀನ ಗ್ರಂಥಾಲಯಗಳು ಕೇವಲ ಹಸ್ತಪ್ರತಿ, ತಾಳೇಗರಿ, ಚರ್ಮಪಟ್ಟಿ ಮೊದಲಾದುವುಗಳ ಸಂಗ್ರಹಗಳಾಗಿದ್ದುವು. ಕಾಲಕ್ರಮೇಣ ಅವುಗಳೊಂದಿಗೆ ಮುದ್ರಿತ ಗ್ರಂಥಗಳು ಸೇರಿಕೊಂಡು ಅವುಗಳ ವ್ಯಾಪ್ತಿ ವಿಶಾಲವಾಯಿತು. ಭಾರತದಲ್ಲಿ ೧೯೧೧ರಲ್ಲಿ ಮೊಟ್ಟ ಮೊದಲು ಬರೋಡ ಪ್ರದೇಶದಲ್ಲಿ ಗ್ರಂಥಾಲಯವನ್ನು ಬರೋಡ ಮಹಾರಾಜರಾದ ಸಯ್ಯಾಜಿರಾವ್ ಗಾಯಕ್‍ವಾಡ್ ಆರಂಭಿಸಿದರು. ಜೊತೆಗೆ ಅವರು ಗ್ರಂಥಾಲಯ ಶಿಕ್ಷಣವನ್ನು ಆರಂಭಿಸಿ, ಇಲ್ಲಿನ ಗ್ರಂಥಾಲಯಕ್ಕೆ ಅಮೆರಿಕಾದ ಗ್ರಂಥಪಾಲಕರಾದ ಬೋರ್ಡೆನ್, ವಿಲಿಯಂ, ಅಲಾನ್ಸನ್ ಮತ್ತು ಡಿಕೆನ್ಸನ್ ಮೊಟ್ಟ ಮೊದಲು ಗ್ರಂಥಾಲಯ ವಿಜ್ಞಾನವನ್ನು ಬೋದಿಸುವ ಶಿಕ್ಷಕರಾಗಿ ಭಾರತಕ್ಕೆ ಬಂದು ಸೇವೆ ಸಲ್ಲಿಸಿದ್ದಾರೆ. ಏಕೆಂದರೆ ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಂಥಾಲಯಗಳ ಪಾತ್ರ ಬಹಳ ಪ್ರಮುಖವಾದುದು.
  Published by:vanithasanjevani vanithasanjevani
  First published: