ಮಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಬಂಗಲೆ, 12 ಸ್ಟಾಫ್​ ನೇಮಿಸಿದ ಭಾರತೀಯ ಕೋಟ್ಯಾಧಿಪತಿ


Updated:September 12, 2018, 4:50 PM IST
ಮಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಬಂಗಲೆ, 12 ಸ್ಟಾಫ್​ ನೇಮಿಸಿದ ಭಾರತೀಯ ಕೋಟ್ಯಾಧಿಪತಿ

Updated: September 12, 2018, 4:50 PM IST
ನ್ಯೂಸ್​ 18 ಕನ್ನಡ

ಬ್ರಿಟನ್​ನಲ್ಲಿ ವಾಸವಿರುವ ಭಾರತೀಯ ಮೂಲದ ಕೋಟ್ಯಾಧಿಪತಿಯೊಬ್ಬರ ಮಗಳನ್ನು ವಿಶ್ವದ 'ಶ್ರೀಮಂತ' ವಿದ್ಯಾರ್ಥಿನಿ ಎನ್ನಲಾಗುತ್ತಿದೆ. ಇನ್ನು ಸ್ಕಾಟ್​ಲ್ಯಾಂಡ್​ನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸುತ್ತಿರುವ ಈಕೆಯ ಸಹಾಯಕ್ಕೆಂದು ಕುಟುಂಬವು 12 ಪ್ರತ್ಯೇಕ ಸ್ಟಾಫ್​ಗಳನ್ನು ನೇಮಿಸಿದೆ. 'ದ ಸನ್​' ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ವಯ ಭಾರತೀಯ ಮೂಲಕ ಕೋಟ್ಯಾಧಿಪತಿಯ ಮಗಳು ಸ್ಕಾಟ್​ಲ್ಯಾಂಡ್​ನ ಪೂರ್ವ ಭಾಗದಲ್ಲಿರುವ ಯುನಿವರ್ಸಿಟಿ ಆಫ್​ ಸೇಂಟ್​ ಆ್ಯಂಡ್ರೂಸ್​ನ ಮೊದಲ ವರ್ಷದ ವಿದ್ಯಾರ್ಥಿನಿ ನ್ನಲಾಗಿದೆ.

ಆಕೆಯ ಸಹಾಯಕ್ಕಾಗಿ ಓರ್ವ ಹೌಸ್​ ಮ್ಯಾನೇಜರ್​, ಮೂವರು ಸಹಾಯಕರು, ಓರ್ವ ಮಾಲಿ, ಓರ್ವ ಮನೆ ಸಹಾಯಯಕಿ ಹಾಗೂ ಓರ್ವ ಅಡುಗೆ ತಯಾರಕರಿದ್ದಾರೆ. ಇವರನ್ನು ಹೊರತುಪಡಿಸಿ ಮೂವರು ಅನ್ಯ ಸಹಾಯಕರು, ಓರ್ವ ವೈಯುಕ್ತಿಕ ಅಡುಗೆ ತಯಾರಕ ಹಾಗೂ ಡ್ರೈವರ್​ ಕೂಡಾ ಇದ್ದಾರೆ. ಇವರೆಲ್ಲರನ್ನೂ ಮಗಳಿಗೆಂದೇ ನಿರ್ಮಿಸಿರುವ ಐಷಾರಾಮಿ ಬಂಗಲೆಯಲ್ಲಿ ನೇಮಿಸಲಾಗಿದೆ. ಸ್ಕಾಟ್​ಲ್ಯಾಂಡ್​ನ ವಿಶ್ವವಿದ್ಯಾನಿಲಯದಲ್ಲಿ 4 ವರ್ಷ ವ್ಯಾಸಂಗ ನಡೆಸುವ ತಮ್ಮ ಮಗಳು ಸಮಯದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಸಾಮಾನ್ಯ ಹಾಸ್ಟೆಲ್​ನಲ್ಲಿರಬಾರದೆಂದು ಇವರನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

ಕೆಲ ತಿಂಗಳ ಹಿಂದೆ ಇದಕ್ಕೆಂದೇ ಜಾಹೀರಾತೊಂಣದನ್ನು ಪ್ರಕಟಿಸಲಾಗಿತ್ತು. ಜಾಹೀರಾತಿನಲ್ಲಿ ಮನೆಯಲ್ಲಿ ಕೆಲಸ ಮಾಡುವ ಲವಲವಿಕೆಯಿಂದ ಕೂಡಿದ ಮನೆ ಕೆಲಸವನ್ನು ನೋಡಿಕೊಂಡು, ಎಲ್ಲರಿಗೂ ಕೆಲಸವನ್ನು ತಿಳಿಸಿಕೊಡುವ ಮನೆ ಸಹಾಯಕಿ ಬೇಕು ಎಂದು ತಿಳಿಸಲಾಗಿತ್ತು. ಭಾರತದ 'ಸಿಲ್ವರ್​ ಸ್ವರ್ಣ್​ ಏಜೆನ್ಸಿ'ಯಲ್ಲಿ ಈ ಜಾಹೀರಾತು ಪ್ರಕಟವಾಗಿತ್ತು. ಅಲ್ಲದೇ ಸಿಬ್ಬಂದಿಗೆ ವಾರ್ಷಿಕ ವೇತನ 28 ಲಕ್ಷ ನೀಡುವುದಾಗಿಯೂ ತಿಳಿಸಿದ್ದರು.
First published:September 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ