Mystery Machine Van: ನಿಮಗೂ ಸ್ಕೂಬಿ -ಡೂ ಮಿಸ್ಟರಿ ವ್ಯಾನ್‍ನಲ್ಲಿ ಉಳಿಯಬೇಕೆ? ಇಲ್ಲಿದೆ ಅವಕಾಶ

ಒಂದು ವೇಳೆ ನೀವು ಕೂಡ ಸ್ಕೂಬಿ -ಡೂನ ಅಭಿಮಾನಿ ಆಗಿದ್ದಲ್ಲಿ, 2002ರ ಸ್ಕೂಬಿ -ಡೂ ಆ್ಯನಿಮೇಟೆಡ್ ಚಲನಚಿತ್ರದ ಮಿಸ್ಟರಿ ವ್ಯಾನ್‍ನಲ್ಲಿ ಸಮಯ ಕಳೆಯಬಹುದು. ಹೌದು, ಏರ್‍ಬಿಎನ್‍ಬಿ ಸಂಸ್ಥೆಯು ಈ ಅವಕಾಶವನ್ನು ಕಲ್ಪಿಸುತ್ತಿದೆ.

 ಸ್ಕೂಬಿ -ಡೂ ಮಿಸ್ಟರಿ ವ್ಯಾನ್‍

ಸ್ಕೂಬಿ -ಡೂ ಮಿಸ್ಟರಿ ವ್ಯಾನ್‍

  • Share this:
ಮಕ್ಕಳ (Children) ಅಚ್ಚುಮೆಚ್ಚಿನ ಕಾರ್ಟೂನ್ (Cartoon) ಸ್ಕೂಬಿ -ಡೂ (Scooby-Doo), ಬಹಳಷ್ಟು ಮಂದಿ ವಯಸ್ಕರಿಗೂ ಇಷ್ಟ. ಅಂತವರಲ್ಲಿ ಕೆಲವರು ಈಗಲೂ ಸ್ಕೂಬಿ - ಡೂ ವೀಕ್ಷಿಸುವ ಹವ್ಯಾಸ ಇಟ್ಟುಕೊಂಡಿದ್ದರೆ, ಇನ್ನು ಕೆಲವರು ಅದರ ಹೆಸರು ಹೇಳಿದೊಡನೆ ತಮ್ಮ ಬಾಲ್ಯದ ದಿನಗಳನ್ನು (Childhood Days) ನೆನಪಿಸಿಕೊಳ್ಳುವುದುಂಟು. ಅದರಲ್ಲೂ ಸ್ಕೂಬಿ ಮತ್ತು ಶ್ಯಾಗಿ (Shaggy) ಪಾತ್ರಗಳಂತೂ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿವೆ. ಒಂದು ವೇಳೆ ನೀವು ಕೂಡ ಸ್ಕೂಬಿ -ಡೂನ ಅಭಿಮಾನಿ ಆಗಿದ್ದಲ್ಲಿ, 2002ರ ಸ್ಕೂಬಿ -ಡೂ ಆ್ಯನಿಮೇಟೆಡ್ ಚಲನಚಿತ್ರದ (Movie) ಮಿಸ್ಟರಿ ವ್ಯಾನ್‍ನಲ್ಲಿ (Mystery Van) ಸಮಯ ಕಳೆಯಬಹುದು. ಹೌದು, ಏರ್‍ಬಿಎನ್‍ಬಿ (Airbnb) ಸಂಸ್ಥೆಯು ಈ ಅವಕಾಶವನ್ನು ಕಲ್ಪಿಸುತ್ತಿದೆ.

20ನೇ ವರ್ಷದ ಆಚರಣೆಯ ನೆನಪಿಗೆ ಈ ಅವಕಾಶ
ಸ್ಕೂಬಿ ಡೂ ಅಭಿಮಾನಿಗಳು, ಮಿಸ್ಟರಿ ವ್ಯಾನ್‍ನಲ್ಲಿ ಮೂರು ಒನ್ ನೈಟ್ ಸ್ಟೇಯ ಅನುಭವ ಪಡೆಯಬಹುದು. ಈ ವ್ಯಾನ್‍ಗೆ ನಿಮ್ಮನ್ನು ಸ್ವತಃ ಶ್ಯಾಗಿಯೇ ಸ್ವಾಗತಿಸುತ್ತಾನೆ ( ಸ್ಕೂಬಿ ಡೂ ನಲ್ಲಿ ಶ್ಯಾಗಿ ಪಾತ್ರ ನಿರ್ವಹಿಸಿರುವ ಮ್ಯಾಥ್ಯು ಲಿಲ್ಲಾರ್ಡ್) ಎಂಬುವುದು ಮತ್ತೊಂದು ವಿಶೇಷ. ಸ್ಕೂಬಿ ಡೂ ನ 20ನೇ ವರ್ಷದ ಆಚರಣೆಯ ನೆನಪಿಗೆ ಏರ್‍ಬಿಎನ್‍ಬಿ ಈ ಮಿಸ್ಟರಿ ವ್ಯಾನ್ ಅನ್ನು ಬಾಡಿಗೆ ನೀಡುತ್ತಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕೆಲವೇ ಕೆಲವು ಸ್ಕೂಬಿ ಡೂ ಅಭಿಮಾನಿಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಜೊತೆಗೆ ಸಿನಿಮಾದ ವಿಶೇಷ ಪ್ರದರ್ಶನ ಕೂಡ ಇರುತ್ತದೆ. ಏರ್‍ಬಿಎನ್‍ಬಿ ಟ್ವಿಟ್ಟರ್‍ನಲ್ಲಿ ಈ ಕುರಿತು ಮಾಹಿತಿ ನೀಡಿದೆ.

ಸ್ಕೂಬಿ - ಡೂ ವಾಹನದಲ್ಲಿ ಏನೆಲ್ಲಾ ಇದೆ?
ಸ್ಕೂಬಿ ಡೂ ಮಿಸ್ಟರಿ ಮೆಶಿನ್ ಎಂಬ ಹೆಸರಷ್ಟೇ ಇದೆ, ಆದರೆ ನೀವು ಸುಮ್ಮನೆ ಯಾವುದೊ ವಾಹನದ ಒಳಗೆ ತಂಗುತ್ತಿದ್ದೀರಿ ಎಂದು ಭಾವಿಸಬೇಡಿ. ಈ ವ್ಯಾನ್‍ನ ಒಳಗೆ ವಾಸ ನಿಮಗೆ ಖಂಡಿತಾವಾಗಿಯೂ ನಿರಾಸೆ ಉಂಟು ಮಾಡುವುದಿಲ್ಲ. ಏಕೆಂದರೆ ವ್ಯಾನ್‍ನ ಒಳಗೆ ನಿಮಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಯಾವೆಲ್ಲ ಸೌಲಭ್ಯಗಳು ಅಂತೀರಾ? ವ್ಯಾನ್‍ನ ಒಳಗೆ ಸಾಕಷ್ಟು ಸ್ಥಳಾವಕಾಶವಿದೆ, ಜೊತೆಗೆ ಕ್ಯಾಂಪರ್ ಶೈಲಿಯ ಬೆಡ್‍ರೂಮ್ ಕೂಡ ಇದೆ. ಇನ್ನು ತಿನ್ನಲಿಕ್ಕಂತೂ ಏನೂ ಕೊರತೆ ಇರುವುದಿಲ್ಲ.

ಇದನ್ನೂ ಓದಿ: Viral Video: ಶಾಲಾ ಸಮಾರಂಭದಲ್ಲಿ ಮಗನಿಗೆ ಸರ್ಪ್ರೈಸ್ ಕೊಟ್ಟ ತಂದೆ; ಇವರಿಬ್ಬರ ಬಾಂಧವ್ಯಕ್ಕೆ ಭಾವುಕರಾದ ನೆಟ್ಟಿಗರು

ಶ್ಯಾಗಿ ಮತ್ತು ಸ್ಕೂಬಿಯ ಮೆಚ್ಚಿನ ಆಹಾರಗಳಾದ ಹಾಟ್‍ಡಾಗ್ಸ್ ಮತ್ತು ಬರ್ಗರ್‍ಗಳು, ಪಾಪ್‍ಕಾರ್ನ್ , ಮೂವಿ ಕ್ಯಾಂಡಿ ಮತ್ತು ಹಲವಾರು ರೀತಿಯ ಸ್ಕೂಬಿ ತಿಂಡಿಗಳನ್ನು ನೀವು ಮೆಲ್ಲಬಹುದು. ನೀವು ಸ್ಕೂಬಿ ಡೂ ಮಿಸ್ಟರಿ ಮೆಶಿನ್ ಒಳಗೆ ಪ್ರವೇಶಿಸಿದಾಗ ಲಿಲ್ಲಾರ್ಡ್ ವರ್ಚುವಲ್ ಶುಭಾಶಯ ಕೋರುತ್ತಾರೆ ಮತ್ತು ನಿಮಗೆ ಬಹಳಷ್ಟು ಮಿಸ್ಟರಿ ಗೇಮ್‍ಗಳನ್ನು ಆಡುವ ಅವಕಾಶ ಸಿಗುತ್ತದೆ.

ಜೂನ್ 24 ರಿಂದ 26 ರ ವರೆಗೆ ಆಫರ್ ಲಭ್ಯ
ವರದಿ ಒಂದರ ಪ್ರಕಾರ , “2002 ರ ಲೈವ್ ಆ್ಯಕ್ಷನ್ ರೂಪಾಂತರದ ನಂತರದಿಂದ ನಾನು ಶ್ಯಾಗಿ ಪಾತ್ರವನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ ಮತ್ತು ಅವನು ಅಂದಿನಿಂದ ನನ್ನ ಒಂದು ಭಾಗವಾಗಿದ್ದಾನೆ. ಏರ್‍ಬಿಎನ್‍ಬಿಯ ಹೋಸ್ಟ್ ಆಗಿ, ಮಿಸ್ಟರಿ ಇಂಕ್ ಜಗತ್ತಿಗೆ ಅತಿಥಿಗಳನ್ನು ಸ್ವಾಗತಿಸಲು ಮತ್ತು ಅವರು ಎಂದೆಂದೂ ಮರೆಯಲಾಗದ ಬೇಸಿಗೆ ರಜೆಯ ಅನುಭವವನ್ನು ನೀಡಲು ಅತ್ಯಂತ ಕಾತರದಿಂದ ಕಾಯುತ್ತಿದ್ದೇನೆ. ಮೋನ್‍ಸ್ಟರ್‍ಗಳನ್ನು ಸೇರಿಸಲಾಗಿಲ್ಲ! “ ಎಂದು ಮ್ಯಾಥ್ಯು ಲಿಲ್ಲಾರ್ಡ್ ಹೇಳಿದ್ದಾರೆ.



ಮಿಸ್ಟರಿ ಮೆಶಿನ್ ಮೂರು ವೈಯುಕ್ತಿಕ ಒಂದು ರಾತ್ರಿಯ ವಾಸಕ್ಕೆ ಜೂನ್ 24 ರಿಂದ 26 ರ ವರೆಗೆ ಲಭ್ಯವಿದೆ. ಅದರಲ್ಲಿ ತಂಗಲು ನೀವು, ತೆರಿಗೆ ಮತ್ತು ಇತರ ಶುಲ್ಕಗಳನ್ನು ಹೊರತು ಪಡಿಸಿ, 20 ಡಾಲರ್ (ಸುಮಾರು 1,564 ರೂ. ) ಶುಲ್ಕ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ:  Viral Video: ಹೆಂಡತಿಯರು ಕೊಟ್ಟ ಗಿಫ್ಟ್​ಗೆ ಗಂಡಂದಿರು ಫಿದಾ! ಸೂಪರ್ ಆಗಿತ್ತು ಸರ್ಪೈಸ್

2002 ರಲ್ಲಿ ತೆರೆ ಕಂಡ ಸ್ಕೂಬಿ ಡೂ ಲೈವ್ ಆ್ಯಕ್ಷನ್ ಚಲನಚಿತ್ರದಲ್ಲಿನ ಮಿಸ್ಟರಿ ಮೆಶಿನ್ , ಯುನೈಟೆಡ್ ಕಿಂಗ್‍ಡಮ್‍ನಲ್ಲಿ ವಾಕ್ಸ್‍ಹಾಲ್‍ನಿಂದ ತಯಾರಿಸಲ್ಪಟ್ಟ 1972 ಬೆಡ್‍ಫೋರ್ಡ್ ಸಿಎಫ್ ಆಗಿದೆ. ಏರ್‍ಬಿಎನ್‍ಬಿ ಸಂಸ್ಥೆಯು ತಿಳಿಸಿರುವ ಪ್ರಕಾರ, ಮಿಸ್ಟರಿ ಮೆಶಿನ್‍ನಲ್ಲಿ ರಾತ್ರಿಯಿಡಿ ತಂಗುವ ಅವಕಾಶ ಈ ಮೊದಲು ಸಾರ್ವಜನಿಕರಿಗೆ ಯಾವತ್ತೂ ಲಭ್ಯವಾಗಿರಲಿಲ್ಲ. ವ್ಯಾನ್‍ನಲ್ಲಿ ಸಂಪೂರ್ಣವಾಗಿ ಸ್ಕೂಬಿಡೂ ಚಲನಚಿತ್ರದ ಉಲ್ಲೇಖಗಳನ್ನು ಕಾಣಬಹುದು.
Published by:Ashwini Prabhu
First published: