Science: 2100ರ ವೇಳೆಗೆ ಮನುಷ್ಯರು 180 ವರ್ಷಗಳ ಕಾಲ ಬದುಕುತ್ತಾರಂತೆ..!

ಜನರು ಹೆಚ್ಚು ಬದುಕಿದಂತೆ ಅವರನ್ನು ಕಾಡುವ ವಯಸ್ಸಿಗೆ ಸಂಬಂಧಿಸಿದ ಹಲವಾರು ಕಾಯಿಲೆಗಳಿರುವುದರಿಂದ ಹೆಚ್ಚಿನ ವೈದ್ಯಕೀಯ ಶುಲ್ಕಗಳನ್ನು ಭರಿಸಬೇಕಾಗುತ್ತದೆ

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು 60 ವರ್ಷಗಳ ಕಾಲ ಸಂಪಾದಿಸಿದ ನಂತರ ನಿವೃತ್ತ ಜೀವನ (Retirement Life) ಆನಂದಿಸಲು ಬಯಸುತ್ತಾನೆ. ಆದರೆ ಇದೀಗ ವಿಜ್ಞಾನಿಗಳು (Scientists) ಉಲ್ಲೇಖಿಸಿರುವಂತೆ ಒಬ್ಬ ವ್ಯಕ್ತಿಯು 180 ವರ್ಷಗಳ ಕಾಲ ಬದುಕುವ ಸಮಯ ದೂರವಿಲ್ಲ ಎಂದು ಹೇಳುತ್ತಿದ್ದಾರೆ. ಕೆನಡಾದ HEC ಮಾಂಟ್ರಿಯಲ್‌ನ ವಿಜ್ಞಾನಿಗಳು ಈ ಶತಮಾನದ ಅಂತ್ಯದ ವೇಳೆಗೆ, ಮಾನವರು (Humans) 180 ವರ್ಷಗಳವರೆಗೆ (180-Year Period) ಬದುಕಬಹುದು ಎಂಬುದನ್ನು ಸೂಚಿಸುತ್ತಾರೆ.ಸಹಾಯಕ ಉಪನ್ಯಾಸಕ ಲಿಯೋ ಬೆಲ್ಜಿಲ್ ಹೇಳಿರುವಂತೆ ಹೆಚ್ಚು ಕಾಲ ಜೀವಿಸಿದ ವ್ಯಕ್ತಿಯ ದಾಖಲೆಯನ್ನು 2100ರ ವೇಳೆಗೆ ಯಾರಾದರೂ ಮುರಿಯಬಹುದು ಎಂಬುದಾಗಿ ತಿಳಿಸಿದ್ದಾರೆ. ಪ್ರಸ್ತುತ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆಯು ಫ್ರೆಂಚ್ ಮಹಿಳೆ (French woman) ಜೀನ್ ಕ್ಯಾಲ್ಮೆಟ್ ಹೆಸರಿನಲ್ಲಿದೆ. ಆಕೆ 1997ರಲ್ಲಿ ಮರಣ ಹೊಂದಿದ್ದು ಅವರಿಗೆ 122 ವರ್ಷ ವಯಸ್ಸಾಗಿತ್ತು.

ಜೀವಿತಾವಧಿ ಹೆಚ್ಚಾದಂತೆ ವೈದ್ಯಕೀಯ ಶುಲ್ಕದಲ್ಲಿ ಹೆಚ್ಚಳ:
ಲಿಯೋ ದೀರ್ಘಕಾಲ ಬದುಕುವುದರಿಂದ ಉಂಟಾಗುವ ಅಪಾಯಗಳ ಕುರಿತು ಕೆಲವೊಂದು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಕೆಲವೊಂದು ಅಂಕಿ ಅಂಶಗಳು ಮಾನವ ಜೀವನಕ್ಕೆ ಹೆಚ್ಚಿನ ಮಿತಿಯಿದೆ ಎಂದು ಸೂಚಿಸುವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಜೀವನ ಮಿತಿಗೆ ಹೆಚ್ಚಿನ ಜನರು ಸವಾಲು ಹಾಕುತ್ತಿದ್ದು ಇದು ಸಮಾಜದ ಸಂಕೀರ್ಣತೆ ಹೆಚ್ಚಿಸುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಗಂಡ ಆಕೆಯ ಕೈಕತ್ತರಿಸಿದ, ರಷ್ಯಾ ಇದಕ್ಕೆ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ: ಏನಿದು ಪ್ರಕರಣ?

ಅಲ್ಲದೆ ಜನರು ಹೆಚ್ಚು ಬದುಕಿದಂತೆ ಅವರನ್ನು ಕಾಡುವ ವಯಸ್ಸಿಗೆ ಸಂಬಂಧಿಸಿದ ಹಲವಾರು ಕಾಯಿಲೆಗಳಿರುವುದರಿಂದ ಹೆಚ್ಚಿನ ವೈದ್ಯಕೀಯ ಶುಲ್ಕಗಳನ್ನು ಭರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಕಾಳಜಿ, ಪಿಂಚಣಿ ಹಾಗೂ ಇತರ ಭದ್ರತಾ ಕಾರ್ಯಕ್ರಮಗಳ ಮೇಲೂ ಇದು ದುಷ್ಪರಿಣಾಮ ಬೀರಲಿದ್ದು ಹೆಚ್ಚಿನವರು ತೆರಿಗೆದಾರರ ಹಣವನ್ನು ಆಶ್ರಯಿಸಿರುವುದೇ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಇತರ ಖರ್ಚುಗಳನ್ನೂ ಭರಿಸಬೇಕಾಗುತ್ತದೆ:
ಜೀವಿತಾವಧಿ ಹೆಚ್ಚಾದಂತೆ ವೈದ್ಯಕೀಯ ಶುಲ್ಕಗಳೂ ಹೆಚ್ಚುವರಿಯಾಗುತ್ತದೆ ಎಂಬುದಾಗಿ ಪ್ರೊಫೆಸರ್ ಎಲೀನ್ ಕ್ರಿಮ್ಮಿನ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಗರಿಕರ ಮೊಣಕಾಲುಗಳು, ಸೊಂಟಗಳು, ಕಾರ್ನಿಯಾಗಳು, ಹೃದಯ ಕವಾಟಗಳ ಬದಲಾಯಿಸುವಿಕೆಗೆ ಹೆಚ್ಚಿನ ಖರ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಹಳೆಯ ಕಾರೊಂದು ಕಟ್ಟಕಡೆಯದಾಗಿ ಮರಣಿಸುವಂತೆ ಎಂಬುದಾಗಿ ಎಲೀನ್ ಈ ಅಂಶವನ್ನು ವಿವರಿಸಿದ್ದಾರೆ.

ಅಂದರೆ ನಿಮಗೆ ದುರಸ್ತಿ ಖರ್ಚು ಇದ್ದರೂ ಅಂತಿಮವಾಗಿ ಇದು ವಿನಾಶ ಹೊಂದುತ್ತದೆ ಎಂಬುದಾಗಿದೆ. ಇನ್ನು ಸಾಂಕ್ರಾಮಿಕವು ಆರಂಭವಾದಾಗಿನಿಂದ ಅಮೆರಿಕದಲ್ಲಿ ಸರಾಸರಿ ಜೀವಿತಾವಧಿಯಲ್ಲಿ 2 ವರ್ಷಗಳ ಕುಸಿತ ಕಂಡುಬರುತ್ತಿದೆ. ಇದು ಜೀವಿತಾವಧಿಯಲ್ಲಿ ಕಂಡುಬಂದಿರುವ ಕಳವಳಕಾರಿಯಾಗಿರುವ ಅಂಶವಾಗಿದೆ ಎಂದು ಎಲೀನ್ ತಿಳಿಸಿದ್ದಾರೆ.

ಇಲ್ಲಿಯವರೆಗೆ ಯಾರೂ 122 ವರ್ಷಕ್ಕಿಂತ ಹೆಚ್ಚು ಬದುಕಿಲ್ಲ:
ಕನಿಷ್ಟ ಪಕ್ಷ 110 ವರ್ಷಗಳವರೆಗೆ ದೀರ್ಘಕಾಲ ಬದುಕುವ ಜನರನ್ನು ಅಂತಾರಾಷ್ಟ್ರೀಯ ಡೇಟಾ ಬೇಸ್ ಟ್ರ್ಯಾಕ್ ಮಾಡಿದೆ. ಅಂಕಿ ಅಂಶದ ಪ್ರಕಾರ ಸಾಮಾನ್ಯವಾಗಿ 50ನೇ ವರ್ಷದಿಂದಲೇ ಮರಣ ಹೊಂದುವ ಅಪಾಯ ಹೆಚ್ಚುತ್ತದೆ, ಆದರೆ ಇದು 80ರ ಹರೆಯದಲ್ಲಿ ಕಡಿಮೆಯಾಗುತ್ತದೆ ಹಾಗೂ 110 ವರ್ಷಗಳವರೆಗೆ ಸ್ಥಿರವಾಗಿರುತ್ತದೆ ಎಂದಾಗಿದೆ.

ಇದನ್ನೂ ಓದಿ: Human Face Goat: ಮಾನವನ ಮುಖ ಹೋಲುವ ಮೇಕೆ ಮರಿ ಜನನ: Video ಇಲ್ಲಿದೆ

ವ್ಯಕ್ತಿಯು 110 ವರ್ಷಗಳಿಗೆ ತಲುಪಿದಾಗ ಆತನ ಮರಣ ಹೊಂದುವ ಪ್ರಮಾಣ ಮುಂದಿನ ವರ್ಷಕ್ಕೆ 50% ಹೆಚ್ಚಾಗುತ್ತದೆ. ವಿಜ್ಞಾನಿಗಳು ತಿಳಿಸಿರುವಂತೆ ಕನಿಷ್ಟ ಪಕ್ಷ 130 ವರ್ಷಗಳವರೆಗೆ ಮಾನವರು ಬದಕುವ ಸಮಯ ತುಂಬಾ ದೂರದಲ್ಲಿಲ್ಲ. ಇದು ಮುಂದಿನ 80 ವರ್ಷಗಳಲ್ಲಿ ನಡೆಯಲಿದೆ ಎಂದು ಕೆನಡಾದ ವಿಜ್ಞಾನಿಗಳು ಉಲ್ಲೇಖಿಸಿದ್ದಾರೆ. ಅವರು ಹೇಳಿರುವಂತೆ 2100ರಲ್ಲಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯ ದಾಖಲೆಯನ್ನು ಯಾರಾದರೂ ಮೀರಿಸುತ್ತಾರೆ ಎಂದಾಗಿದೆ.
Published by:vanithasanjevani vanithasanjevani
First published: