• Home
  • »
  • News
  • »
  • trend
  • »
  • Trending Story: ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿರುವುದರ ಹಿಂದಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು! ಏನು ಹೇಳಿದ್ದಾರೆ ನೋಡಿ

Trending Story: ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿರುವುದರ ಹಿಂದಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು! ಏನು ಹೇಳಿದ್ದಾರೆ ನೋಡಿ

ವೃತ್ತಾಕಾರದಲ್ಲಿ ಸುತ್ತುತ್ತಿರುವ ಕುರಿಗಳು

ವೃತ್ತಾಕಾರದಲ್ಲಿ ಸುತ್ತುತ್ತಿರುವ ಕುರಿಗಳು

ವಿಲಕ್ಷಣ ನಡವಳಿಕೆಯನ್ನು ವಿವರಿಸುತ್ತಾ, ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ನಲ್ಲಿರುವ ಹಾರ್ಟ್‌ಪುರಿ ವಿಶ್ವವಿದ್ಯಾಲಯದ ಕೃಷಿ ವಿಭಾಗದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಮ್ಯಾಟ್ ಬೆಲ್ ಕೆಲವೊಂದು ಮಾಹಿತಿಯನ್ನು ತಿಳಿಸಿದ್ದು ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.

  • Share this:

ಚೀನಾದಲ್ಲಿ ಸತತ 12 ದಿನಗಳ (12 Days) ಕಾಲ ಕುರಿಗಳ ದೊಡ್ಡ ಹಿಂಡು ವೃತ್ತದಲ್ಲಿ ನಡೆದಾಡುವ ವಿಲಕ್ಷಣ ದೃಶ್ಯಾವಳಿಯ (Seen) ಹಿಂದಿನ ರಹಸ್ಯವನ್ನು ವಿಜ್ಞಾನಿಯೊಬ್ಬರು ಪರಿಹರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ತಿಂಗಳ ಆರಂಭದಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ (Video) ಜಗತ್ತಿನಾದ್ಯಂತ ಜನರನ್ನು ದಿಗ್ಭ್ರಮೆಗೊಳಿಸಿತ್ತು. ಈ ತುಣುಕನ್ನು ಚೀನಾದ ಸರ್ಕಾರಿ ಔಟ್‌ಲೆಟ್ ಪೀಪಲ್ಸ್ ಡೈಲಿ ಪೋಸ್ಟ್ ಮಾಡಿತ್ತು. ಚೀನಾದಲ್ಲಿರುವ ಫಾರ್ಮ್‌ನಲ್ಲಿ ಕುರಿಗಳ ಹಿಂಡು 12 ದಿನಗಳ ಕಾಲ ಸತತವಾಗಿ ವೃತ್ತಾಕಾರವಾಗಿ ಸುತ್ತುತ್ತಿರುವ ದೃಶ್ಯದ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ (Internet) ಅನೇಕ ಸಂದೇಹಗಳನ್ನು (Doubts) ಉಂಟುಮಾಡಿತ್ತು.


ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದ ಕುರಿಗಳ ವಿಡಿಯೋ
ಇಂಟರ್ನೆಟ್ ಬಳಕೆದಾರರು ಕುರಿಗಳ ಈ ಪರಿವರ್ತನೆಯನ್ನು ಮೂಢನಂಬಿಕೆಗಳಿಗೆ ಹೋಲಿಸಿದ್ದರು ಹಾಗೂ ಇದೊಂದು ವಿಚಿತ್ರವಾದ ಘಟನೆ ಎಂಬುದಾಗಿ ಉಲ್ಲೇಖಿಸಿದ್ದರು. ಸಂಪೂರ್ಣ ವಿಶ್ವವೇ ಕೊನೆಯಾಗಲಿದೆ ಎಂಬ ಭೀತಿಯನ್ನು ಪಸರಿಸಿದ್ದರು. ಅದಾಗ್ಯೂ ಈ ರಹಸ್ಯವನ್ನು ಬೇಧಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಇದಕ್ಕೆ ಏನು ಕಾರಣ ಎಂಬುದನ್ನು ಕಂಡುಹಿಡಿದಿದ್ದಾರೆ.


ಇನ್ನರ್ ಮಂಗೋಲಿಯಾದಲ್ಲಿರುವ ಫಾರ್ಮ್‌ನಲ್ಲಿ ಪರಿಪೂರ್ಣ ವೃತ್ತದಲ್ಲಿ ಡಜನ್‌ಗಟ್ಟಲೆ ಕುರಿಗಳು ಪ್ರದಕ್ಷಿಣಾಕಾರವಾಗಿ ನಡೆದಾಡುವ ವಿಡಿಯೋವೊಂದು ಪೋಸ್ಟ್ ಆಗಿತ್ತು. ಹೆಚ್ಚಿನ ಪ್ರಾಣಿಗಳು ಅದೇ ನಡವಳಿಕೆಯಲ್ಲಿ ತೊಡಗಿರುವುದು ಕಂಡುಬಂದಿತ್ತು.


ಕುರಿಗಳ ವೃತ್ತಾಕಾರದ ಚಲನೆಗೆ ಕಾರಣವೇನಾಗಿತ್ತು?
ಈ ವಿಲಕ್ಷಣ ನಡವಳಿಕೆಯನ್ನು ವಿವರಿಸುತ್ತಾ, ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ನಲ್ಲಿರುವ ಹಾರ್ಟ್‌ಪುರಿ ವಿಶ್ವವಿದ್ಯಾಲಯದ ಕೃಷಿ ವಿಭಾಗದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಮ್ಯಾಟ್ ಬೆಲ್ ಕೆಲವೊಂದು ಮಾಹಿತಿಯನ್ನು ತಿಳಿಸಿದ್ದು ಕುರಿಗಳು ದೀರ್ಘಕಾಲದವರೆಗೆ ದೊಡ್ಡಿಯಲ್ಲಿದ್ದಂತೆ ಕಂಡುಬರುತ್ತಿದೆ ಹಾಗೂ ಇದು ಸ್ಟೀರಿಯೊಟೈಪಿಕ್ ನಡವಳಿಕೆಗೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ಖಿನ್ನತೆಗೆ ಒಳಗಾಗಿದ್ದ ಕುರಿಗಳು ಒಂದು ರೀತಿಯ ನಿರಾಶಾ ಭಾವನೆಗೆ ಒಳಗಾಗಿದ್ದವು ಎಂಬುದನ್ನು ಮ್ಯಾಟ್ ತಿಳಿಸಿದ್ದಾರೆ.


ಇದನ್ನೂ ಓದಿ: 12 ದಿನಗಳಿಂದ ವೃತ್ತಾಕಾರದಲ್ಲಿ ಚಲಿಸುತ್ತಿರುವ ಕುರಿಗಳು! ಏನಾಗಿದೆ ಈ ಪ್ರಾಣಿಗಳಿಗೆ?


ಈ ಕಾರಣದಿಂದಲೇ ಕುರಿಗಳ ಹಿಂಡು ಸೀಮಿತವಾದ ಕಾರಣವನ್ನು ಅನುಸರಿಸಿ ಪದೇ ಪದೇ ಸುತ್ತುವುದು ಕಂಡುಬಂದಿದೆ ಎಂದು ಹೇಳಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ. ತಾವು ಎಲ್ಲಿಗೆ ಹೋಗುತ್ತಿದ್ದೇವೆ? ಏನು ಮಾಡುತ್ತಿದ್ದೇವೆ ಎಂಬುದು ತಿಳಿಯದೆಯೇ ಇನ್ನೊಂದು ಕುರಿಯನ್ನು ಅನುಸರಿಸುತ್ತಿವೆ ಎಂದು ಮ್ಯಾಟ್ ತಿಳಿಸಿದ್ದಾರೆ.


ಇದು ಒಳ್ಳೆಯದಲ್ಲ ಹಾಗೂ ಉತ್ತಮ ಬೆಳವಣಿಗೆಯಲ್ಲ ಎಂದು ಮ್ಯಾಟ್ ಹೇಳಿದ್ದಾರೆ. ಹೀಗೆ ಸುತ್ತಿದ ನಂತರ ಇತರ ಕುರಿಗಳು ಪ್ರಾಣಿಗಳ ಹಿಂಡಿನಲ್ಲಿ ಸೇರುತ್ತವೆ ಮತ್ತು ಅವುಗಳ ಪ್ರಾಣಿ ಸ್ನೇಹಿತ ವರ್ಗವನ್ನು ಸೇರಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.


ಕುರಿಗಳ ಮನಸ್ಥಿತಿಯ ಪ್ರದರ್ಶನ
ಕುರಿಗಳು ಪ್ರಾಣಿಗಳ ಹಿಂಡಿನ ಮನಸ್ಥಿತಿಯನ್ನು ಪ್ರದರ್ಶಿಸುತ್ತವೆ, ಅಂದರೆ ಅವು ಹಿಂಡಿನೊಂದಿಗೆ ಚಲಿಸುತ್ತವೆ, ಪರಭಕ್ಷಕಗಳಿಂದ ಪ್ರತ್ಯೇಕ ಪ್ರಾಣಿಯನ್ನು ರಕ್ಷಿಸುತ್ತವೆ. ಆದರೆ ಪೀಪಲ್ಸ್ ಡೈಲಿ ವರದಿ ಪ್ರಕಾರ ಚೀನಾದಲ್ಲಿ ಕುರಿಗಳು ನವೆಂಬರ್ 4 ರಿಂದ ವೃತ್ತಾಕಾರದಲ್ಲಿ ಚಲಿಸುತ್ತಿದ್ದವು. ಅವುಗಳು ಏನಾದರೂ ತಿನ್ನಲು ಅಥವಾ ಕುಡಿಯಲು ತಮ್ಮ ಚಲನೆಯನ್ನು ನಿಲ್ಲಿಸಿವೆಯೇ ಅಥವಾ ಇನ್ನೂ ಚಲಿಸುತ್ತಲೇ ಇವೆಯೇ ಎಂದು ತಿಳಿಯಲು ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವರದಿ ಮಾಡಿದೆ.


ತನ್ನಷ್ಟಕ್ಕೆ ಕುರಿಗಳಿಗೆ ಏನು ಸಂಭವಿಸಿತು?
ಇಂಗ್ಲೆಂಡ್ ಮೂಲದ ಮೆಟ್ರೋದ ಮಿಯೋ ಹೆಸರಿನ ಫಾರ್ಮ್‌ನ ಮಾಲೀಕರು ಸ್ಥಳೀಯ ಸುದ್ದಿವಾಹಿನಿಗಳಿಗೆ ಕುರಿಗಳ ಈ ವರ್ತನೆಯನ್ನು ತಿಳಿಸಿದ್ದು, ಕೆಲವು ಕುರಿಗಳು ಒಮ್ಮೆ ಮಾತ್ರ ವರ್ತನೆಯನ್ನು ಪ್ರದರ್ಶಿಸುತ್ತಿದ್ದವು, ಆದರೆ ಕ್ರಮೇಣ ಇಡೀ ಹಿಂಡು ವೃತ್ತದಲ್ಲಿ ತಿರುಗಲು ಪ್ರಾರಂಭಿಸಿತು ಎಂಬುದಾಗಿ ತಿಳಿಸಿದ್ದಾರೆ. ಮಿಯಾವೋ ತಮ್ಮ ಒಡೆತನದಲ್ಲಿರುವ ಕುರಿಗಳನ್ನು 34 ದೊಡ್ಡಿಗಳಲ್ಲಿ ಇರಿಸಿದ್ದರು ಆದರೆ ಒಂದು ದೊಡ್ಡಿಯಲ್ಲಿದ್ದ ಒಂದು ಕುರಿ ಹಿಂಡು ಮಾತ್ರ ವಿಚಿತ್ರವಾಗಿ ವರ್ತಿಸುತ್ತಿದೆ ಎಂದು ತಿಳಿಸಿದ್ದಾರೆ.

First published: