• Home
  • »
  • News
  • »
  • trend
  • »
  • New Discover: ಭೂಮಿಯೊಳಗಿನ ರಹಸ್ಯ ಸಾಗರ ಪತ್ತೆ; ಏನು ಹೇಳುತ್ತಾರೆ ವಿಜ್ಞಾನಿಗಳು?

New Discover: ಭೂಮಿಯೊಳಗಿನ ರಹಸ್ಯ ಸಾಗರ ಪತ್ತೆ; ಏನು ಹೇಳುತ್ತಾರೆ ವಿಜ್ಞಾನಿಗಳು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪತ್ತೆ ಹಚ್ಚಲಾಗಿರುವ ಆ ರಹಸ್ಯ ಸಾಗರವು ಭೂಮಿಯ ಎಲ್ಲ ಸಾಗರಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಹೊಂದಿದ್ದು ಭೂಮಿಯ ಅಪ್ಪರ್ ಹಾಗೂ ಲೋವರ್ ಮ್ಯಾಂಟಲ್ ಪ್ರತ್ಯೇಕಿಸಲ್ಪಡುವ ಬಳಿಯ ಟ್ರಾನ್ಸಿಷನ್ ವಲಯದಲ್ಲಿ ಸ್ಥಿತವಿದೆ

  • Share this:

ಅಂತಾರಾಷ್ಟ್ರೀಯ ಅಧ್ಯಯನವೊಂದರ ಪ್ರಕಾರ, ವಿಜ್ಞಾನಿಗಳು ಇದೀಗ ಭೂಮಿಯಲ್ಲಿರುವ (Earth) ಎಲ್ಲ ಸಾಗರಗಳಿಗಿಂತಲೂ (Ocean) ಹೆಚ್ಚಿನ ಗಾತ್ರದ ನೀರನ್ನು ಹೊಂದಿರುವಂತಹ ಇನ್ನೊಂದು ದೊಡ್ಡ "ರಹಸ್ಯ ಸಾಗರ" (secrets Ocean) ಉಪಸ್ಥಿತವಿರುವುದನ್ನು ಪತ್ತೆ ಹಚ್ಚಿದ್ದಾರೆನ್ನಲಾಗಿದೆ. ಭೂಮಿಯ ಕೋರ್ ಎಂದು ಕರೆಯಲಾಗುವ ಪ್ರದೇಶದಲ್ಲಿ ನೀರಿನ ಈ ದೊಡ್ಡ ಆಗರವಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆನ್ನಲಾಗಿದೆ.  ವಿಶೇಷವೆಂದರೆ, ಹೀಗೆ ಪತ್ತೆ ಹಚ್ಚಲಾಗಿರುವ ಆ ರಹಸ್ಯ ಸಾಗರವು ಭೂಮಿಯ ಎಲ್ಲ ಸಾಗರಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಹೊಂದಿದ್ದು ಭೂಮಿಯ ಅಪ್ಪರ್ ಹಾಗೂ ಲೋವರ್ ಮ್ಯಾಂಟಲ್ ಪ್ರತ್ಯೇಕಿಸಲ್ಪಡುವ ಬಳಿಯ ಟ್ರಾನ್ಸಿಷನ್ ವಲಯದಲ್ಲಿ ಸ್ಥಿತವಿದೆ ಎನ್ನಲಾಗಿದೆ.


ಹೇಗಿದೆ ಇದರ ರಚನೆ


ಪ್ರಚಲಿತದಲ್ಲಿರುವ ಸಿದ್ಧಾಂತದ ಪ್ರಕಾರ, ಚಪ್ಪಡಿಗಳು ಸಾಗರದ ನೀರಿನೊಂದಿಗೆ ಜೊತೆಗೂಡಿ ಟ್ರಾನ್ಸಿಷನ್ ವಲಯದತ್ತ ಚಲಿಸುತ್ತವೆ. ಅಂದರೆ, ನಮ್ಮ ಭೂಮಿಯ ಮೇಲ್ಮೈನಲ್ಲಿರುವ ನೀರಿನ ಚಕ್ರವು ಭೂಮಿಯ ಆಂತರಿಕತೆಯೊಂದಿಗೆ ಸಂಬಂಧ ಹೊಂದಿದೆ ಎಂದಾಗುತ್ತದೆ.


ಈ ಬಗ್ಗೆ ಫ್ರ್ಯಾಂಕ್ ಫರ್ಟಿನ ಗೋಯ್ತ್ ವಿವಿಯ ಜಿಯೋಸೈನ್ಸ್ ವಿಭಾಗದ ಪ್ರೊಫೆಸರ್ ಆಗಿರುವ ಫ್ರ್ಯಾಂಕ್ ಬ್ರೆಂಕರ್ ಅವರು ವಿವರಿಸುವಂತೆ ನೀರಿನೊಂದಿಗೆ ಚಲಿಸುವ ಈ ಚಪ್ಪಡಿಗಳು ಭೂಮಿಯ ಮ್ಯಾಂಟಲ್ ನಲ್ಲಿರುವ ಕಲ್ಲಿನ ರಚನೆಗಳ ಚಲನೆಗೆ ಹೆಚ್ಚಿನ ತಡೆಯೊಡ್ಡುತ್ತವೆ. ಹಾಗಾಗಿ ಮ್ಯಾಂಟಲ್ ನಲ್ಲಿ ಅತ್ಯಂತ ಬಿಸಿಯಾಗಿರುವ ಕಲ್ಲಿನ ಖಂಬಗಳು ಎಲ್ಲಿಯೂ ಮಿಸುಕಾಡದೆ ಇದ್ದಲ್ಲಿಯೇ ಇರುವುದನ್ನು ಗಮನಿಸಬಹುದಾಗಿದೆ.


ಯುರೋಪ್​ ಖಂಡದ ಕೆಳಗಿದೆ ಚಪ್ಪಡಿಗಳ ಭಂಡಾರ


ಅಲ್ಲದೆ, ಈ ಚಪ್ಪಡಿಗಳು ಸ್ವತಃ ಟ್ರಾನ್ಸಿಷನ್ ವಲಯದಿಂದಲೂ ಮುಂದೆ ಚಲಿಸಲು ಅಸಮರ್ಥವಾಗಿದ್ದು ಯುರೋಪ್ ಖಂಡದ ಕೆಳ ಭಾಗದಲ್ಲಿ ಇಂತಹ ಚಪ್ಪಡಿಗಳ ದೊಡ್ಡ ಭಂಡಾರವೇ ಇರುವುದಾಗಿ ಬ್ರೆಂಕರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ಇದನ್ನು ಓದಿ: ಅಕ್ಟೋಬರ್‌ ನಲ್ಲಿ ಭಾರೀ ಮಳೆ ಸಾಧ್ಯತೆ! ಭತ್ತ-ಗೋಧಿ ಇಳುವರಿ ಮೇಲೆ ಪರಿಣಾಮ


ಇಲ್ಲಿಯವರೆಗೂ ಟ್ರಾನ್ಸಿಷನ್ ವಲಯದಲ್ಲಿ ರಚನೆಗಳು ಹೀಗೇಕಿವೆ. ಇಲ್ಲಿ ಏನಾದರೂ ಅಡೆತಡೆ ಇದೆಯೇ ಅಥವಾ ಯಾವ ದ್ರವರೂಪದ ವಸ್ತು ಏನಾದರೂ ಇದೆಯೇ ಎಂಬುದು ಗೊತ್ತಾಗಿರಲಿಲ್ಲ. ಪ್ರೊಫೆಸರ್ ಬ್ರೆಂಕರ್ ಹೇಳುವಂತೆ ಈ ಚಪ್ಪಡಿಗಳು ಸಮುದ್ರದಾಳದ ಕೆಸರು ಗುಂಪುಗಳನ್ನು ತನ್ನೊಡನೆ ಸಾಗಿಸಿಕೊಂಡು ಹೋಗುತ್ತದೆ ಹಾಗೂ ಈ ಕೆಸರುಗಡ್ಡೆಗಳು ತನ್ನಲ್ಲಿ ನೀರು ಹಾಗೂ ಅಪಾರವಾದ ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ.


ನೀರಿ ಪ್ರಮಾಣದ ಬಗ್ಗೆ ನಿಖರತೆ ಕಷ್ಟ


ಹಾಗಾಗಿ ಈ ಟ್ರಾನ್ಸಿಷನ್ ವಲಯದಲ್ಲಿ ಹೀಗೆ ಬರುವ ಈ ರಚನೆಗಳು ತಮ್ಮಲ್ಲಿ ಎಷ್ಟು ನೀರನ್ನು ಹಾಗೂ ಇಂಗಾಲವನ್ನು ಹೊಂದಿವೆ ಎಂಬುದನ್ನು ನಿಖರವಾಗಿ ಹೇಳುವುದು ಬಲು ಕಷ್ಟಕರವಾಗಿದೆ. ಅಲ್ಲದೆ, ಇವುಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ ಅಂತ ತಿಳಿದಿದ್ದರೂ ನಿಖರವಾಗಿ ಎಷ್ಟು ಎಂದು ಹೇಳುವುದು ಕಷ್ಟಕರವಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.


ಇದನ್ನು ಓದಿ: ಬ್ರಿಟನ್ ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಜಗತ್ತಿಗೆ ಒಂದು ಎಚ್ಚರಿಕೆಯ ಗಂಟೆ ಇದ್ದಂತೆ


ಇನ್ನು, ಟ್ರಾನ್ಸಿಷನ್ ವಲಯವು ಅಪಾರ ಪ್ರಮಾಣದ ಖನಿಜ ರಚನೆಗಳಾದ ವಾಡ್ಸ್ ಲೈಟ್ ಹಾಗೂ ರಿಂಗ್ ವುಡೈಟ್ ಗಳನ್ನು ಹೊಂದಿದ್ದು ಅವು ಅಪಾರ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇದರ ಪ್ರಮಾಣ ಎಷ್ಟಿದೆ ಎಂದರೆ ಲೆಕ್ಕಾಚಾರ ಹಾಕಿದರೆ ಭೂಮಿಯ ಮೇಲ್ಮೈನಲ್ಲಿರುವ ಎಲ್ಲ ಸಾಗರಗಳ ನೀರಿನ ಒಟ್ಟು ಆರು ಪಟ್ಟು ನೀರನ್ನು ಈ ಟ್ರಾನ್ಸಿಷನ್ ವಲಯ ನಿರಾಯಾಸವಾಗಿ ಹೀರಿಕೊಳ್ಳಬಹುದಾಗಿದೆ.


ನೀರಲ್ಲ, ಆದರೆ ನೀರಿಲ್ಲ ಎನ್ನಲ್ಲೂ ಸಾಧ್ಯವಿಲ್ಲ


ಈಗಾಗಲೇ ಬ್ರೆಂಕರ್ ಅವರು ಆಫ್ರಿಕಾದ ಬೊತ್ಸ್ ವಾನಾದಲ್ಲಿ ಉತ್ಖನದ ಮೂಲಕ ತೆಗೆಯಲಾದ ಅತಿ ಅಪರೂಪದ ವಜ್ರದ ಮೇಲೆ ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಹೆಚ್ಚಿನ ಅಂಶಗಳು ರಿಂಗ್ ವುಡೈಟ್ ಖನಿಜಗಳನ್ನು ಹೊಂದಿದ್ದು ಈ ವಜ್ರವು ಭೂಮಿಯ ಮೇಲ್ಮೈನಿಂದ ಸುಮಾರು 660 ಕಿ.ಮೀ ಆಳದಲ್ಲಿ ಟ್ರಾನ್ಸಿಷನ್ ಹಾಗೂ ಲೋವಲ್ ಮ್ಯಾಂಟಲ್ ಇರುವ ಪ್ರದೇಶದಲ್ಲಿ ಸೃಷ್ಟಿಯಾಗಿತ್ತು.


ಈ ಎಲ್ಲ ಅಧ್ಯಯನಗಳನ್ನು ಗಮನಿಸಿದಾಗ ಜೂಲ್ ವರ್ನ್ ಅವರ "ಭೂಮಿಯೊಳಗಿರುವ ಸಾಗರ" ಎಂಬ ಪರಿಕಲ್ಪನೆಗೆ ನಮ್ಮನ್ನು ಇನ್ನಷ್ಟು ಹತ್ತಿರ ಒಯ್ಯುತ್ತದೆ ಎಂದು ಬ್ರೆಂಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಲ್ಲದೆ, ಅಲ್ಲಿರುವುದು ಭೌತಿಕವಾಗಿ ನೀರೂ ಅಲ್ಲ ಆದರೆ ನೀರಿಲ್ಲ ಎಂದು ಹೇಳಲೂ ಸಾಧ್ಯವಿಲ್ಲ.

Published by:Seema R
First published: