HOME » NEWS » Trend » SCIENTISTS FOUND EXACTLY LIKE CHOCOLATE FROGS IN THE HARRY POTTER MOVIE SERIES STG HG

ನಿಜ ಜೀವನದ ಚಾಕೊಲೇಟ್‌ ಕಪ್ಪೆಗಳು ಪತ್ತೆ ಹಚ್ಚಿದ ವಿಜ್ಞಾನಿಗಳು: ಹ್ಯಾರಿ ಪಾಟರ್ ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ ನೋಡಿ!

ಆಸ್ಟ್ರೇಲಿಯಾದ ಮುಖ್ಯ ಭೂಭಾಗದ ಉತ್ತರದಲ್ಲಿರುವ ನ್ಯೂ ಗಿನಿಯಲ್ಲಿನ ಈ ಕಪ್ಪೆಗಳ ಆವಿಷ್ಕಾರದಿಂದ ಉತ್ತರ ಮತ್ತು ದಕ್ಷಿಣ ಭಾಗಗಳ ತಗ್ಗು ಪ್ರದೇಶಗಳು 2.6 ದಶಲಕ್ಷ ವರ್ಷಗಳ ಹಿಂದಿನವರೆಗೂ ಸಂಪರ್ಕ ಹೊಂದಿದ್ದವು ಎಂದು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

news18-kannada
Updated:June 1, 2021, 12:36 PM IST
ನಿಜ ಜೀವನದ ಚಾಕೊಲೇಟ್‌ ಕಪ್ಪೆಗಳು ಪತ್ತೆ ಹಚ್ಚಿದ  ವಿಜ್ಞಾನಿಗಳು: ಹ್ಯಾರಿ ಪಾಟರ್ ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ ನೋಡಿ!
chocolate frogs
  • Share this:

ಹ್ಯಾರಿ ಪಾಟರ್ ಚಲನಚಿತ್ರ ಸರಣಿಯಲ್ಲಿ ಬರುವ “ಚಾಕೊಲೇಟ್ ಕಪ್ಪೆಗಳು” ರೀತಿಯಲ್ಲಿ ಕಾಣುವ ಹೊಸ ಜಾತಿಯ ಕಪ್ಪೆಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಜನಪ್ರಿಯ ಫ್ಯಾಂಟಸಿ ಚಲನಚಿತ್ರದಲ್ಲಿ, ಚಾಕೊಲೇಟ್ ಕಪ್ಪೆಗಳು ಜನಪ್ರಿಯ ಮಾಂತ್ರಿಕ ಸಿಹಿಯಾಗಿದ್ದು, ಸಂಗ್ರಹಿಸಬಹುದಾದ ಕಾರ್ಡ್‌ಗಳೊಂದಿಗೆ ಬಂದವು. ಇದೇ ರೀತಿಯಲ್ಲಿ ಕುತೂಹಲಕಾರಿಯಾಗಿ, ವಿಜ್ಞಾನಿಗಳು ನ್ಯೂ ಗಿನಿಯಲ್ಲಿ ಈ ಹಿಂದೆ ಅಪರಿಚಿತ ಜಾತಿಯಾಗಿದ್ದ ಹೊಸ ಕಪ್ಪೆಯನ್ನು ಕಂಡುಕೊಂಡಾಗ, ಅದರ ಬಣ್ಣ ಮತ್ತು ಹೆಸರಿನ ಕಾರಣ ಅದಕ್ಕೆ ಚಾಕೊಲೇಟ್ ಕಪ್ಪೆ ಎಂದು ಕರೆಯಲು ಪ್ರಾರಂಭಿಸಿದರು. ಹೊಸದಾಗಿ ಪತ್ತೆಯಾದ ಈ ಜೀವಿಗಳು ಕಪ್ಪೆಗಳ ಕುಟುಂಬಕ್ಕೆ ಸೇರಿದ್ದು, ಇದು ಆಸ್ಟ್ರೇಲಿಯದ ಮುಖ್ಯಭೂಮಿಯಲ್ಲಿ ಬಹಳ ಸಾಮಾನ್ಯವಾಗಿದೆ. ಆಸ್ಟ್ರೇಲಿಯಾದ ಮುಖ್ಯ ಭೂಭಾಗದ ಉತ್ತರದಲ್ಲಿರುವ ನ್ಯೂ ಗಿನಿಯಲ್ಲಿನ ಈ ಕಪ್ಪೆಗಳ ಆವಿಷ್ಕಾರದಿಂದ ಉತ್ತರ ಮತ್ತು ದಕ್ಷಿಣ ಭಾಗಗಳ ತಗ್ಗು ಪ್ರದೇಶಗಳು 2.6 ದಶಲಕ್ಷ ವರ್ಷಗಳ ಹಿಂದಿನವರೆಗೂ ಸಂಪರ್ಕ ಹೊಂದಿದ್ದವು ಎಂದು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.


ಆಸ್ಟ್ರೇಲಿಯನ್ ಜರ್ನಲ್ ಆಫ್ ಜುವಾಲಜಿಯಲ್ಲಿ  ‌ಪ್ರಕಟವಾದ ಈ ಹೊಸ ಕಪ್ಪೆಯ ಪ್ರಭೇದಗಳನ್ನು ಲಿಟೋರಿಯಾ ಮಿರಾ ಎಂದು ಹೇಳಿದೆ. ಲಿಟೋರಿಯಾ ಮಿರಾ ಪದದ ಅರ್ಥ ಲ್ಯಾಟಿನ್ ಭಾಷೆಯಲ್ಲಿ ವಿಚಿತ್ರ ಅಥವಾ ಆಶ್ಚರ್ಯ ಎಂದು.

"ನ್ಯೂ ಗಿನಿಯ ತಗ್ಗು ಮಳೆಕಾಡುಗಳಲ್ಲಿ ವಾಸಿಸುತ್ತಿರುವ ಆಸ್ಟ್ರೇಲಿಯದ ಪ್ರಸಿದ್ಧ ಮತ್ತು ಸಾಮಾನ್ಯ ಹಸಿರು ಮರದ ಕಪ್ಪೆಯ ಕಡೆಗಣಿಸಿರುವ ಸಂಬಂಧಿಯನ್ನು ಪತ್ತೆ ಹಚ್ಚಿರುವುದು ಆಶ್ಚರ್ಯಕರವಾದ ಸಂಶೋಧನೆಯಾಗಿದೆ" ಎಂದು ಗ್ರಿಫಿತ್ ವಿಶ್ವವಿದ್ಯಾಲಯದ ಸುದ್ದಿ ಪ್ರಕಟಣೆಯಲ್ಲಿ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಪಾಲ್ ಆಲಿವರ್ ಹೇಳಿದ್ದಾರೆ. ಗ್ರಿಫಿತ್ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ಶಾಲೆಯಲ್ಲಿ ಆಲಿವರ್ ಪಾಠ ಮಾಡುತ್ತಾರೆ ಮತ್ತು ಕ್ವೀನ್ಸ್‌ಲ್ಯಾಂಡ್ ಮ್ಯೂಸಿಯಂನಲ್ಲಿ ಸಹ ಅವರು ಕೆಲಸ ಮಾಡುತ್ತಾರೆ.


ಆಲಿವರ್ ಬರೆದಿರುವ ಹಸಿರು ಮರದ ಕಪ್ಪೆ ಆಸ್ಟ್ರೇಲಿಯ ಮತ್ತು ನ್ಯೂ ಗಿನಿ ಪ್ರದೇಶಗಳಿಗೆ ಸ್ಥಳೋಯವಾಗಿದ್ದು, 4 ಇಂಚುಗಳಷ್ಟು ಗಾತ್ರವಿದೆ. ಡಂಪಿ ಮರದ ಕಪ್ಪೆ ಸುಂದರವಾದ ಹಸಿರು ಚರ್ಮದ ಬಣ್ಣಕ್ಕೆ ಹೆಸರುವಾಸಿಯಾಗಿದೆ ಮತ್ತು ಇದು ಎಕ್ಸೋಟಿಕ್‌ ಪೆಟ್‌ ಎಂದು ಪರಿಗಣಿಸಲ್ಪಟ್ಟಿದ್ದು, ಮಾನವರ ಸುತ್ತ ವಾಸಿಸಲು ಸಹ ಸೂಕ್ತವಾಗಿರುತ್ತದೆ.


ಆಸ್ಟ್ರೇಲಿಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಸಿರು ಮರದ ಕಪ್ಪೆ ಹಾಗೂ ಚಾಕೊಲೇಟ್ ಕಪ್ಪೆಯ ನಡುವಿನ ಹೋಲಿಕೆಗಳನ್ನು ಗಮನಿಸಿದರೆ ಎರಡೂ ಪ್ರದೇಶಗಳು ಲಕ್ಷಾಂತರ ವರ್ಷಗಳಿಂದ ಹಂಚಿಕೊಂಡ ಜೈವಿಕ ಸಂಪರ್ಕಗಳ ಬಗ್ಗೆ ಹೇಳುತ್ತವೆ. ಅರಾಫುರಾ ಸಮುದ್ರದಿಂದ ಬೇರ್ಪಟ್ಟ ನಂತರವೂ, ಅನೇಕ ಪ್ರಾಣಿ ಗುಂಪುಗಳನ್ನು ಭೂಪ್ರದೇಶಗಳು ಹಂಚಿಕೊಳ್ಳುತ್ತವೆ. ಈಗ, ನ್ಯೂಗಿನಿ ದಟ್ಟವಾದ ಮಳೆಕಾಡುಗಳಿಂದ ಆವೃತವಾಗಿದೆ, ಮತ್ತು ದೊಡ್ಡ ಹುಲ್ಲುಗಾವಲುಗಳು ಉತ್ತರ ಆಸ್ಟ್ರೇಲಿಯದಲ್ಲಿ ಪ್ರಾಬಲ್ಯ ಹೊಂದಿವೆ. ಆದರೂ, ನ್ಯೂಗಿನಿಯ ಜೀವವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳುವುದು ಆಸ್ಟ್ರೇಲಿಯಾದ ವಿಶಿಷ್ಟ ಪ್ರಾಣಿ ಜೀವನ, ಅದರ ಮೂಲ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನದ ಸಹ-ಲೇಖಕರೂ ಆಗಿರುವ ಸ್ಟೀವ್ ರಿಚರ್ಡ್ಸ್ ಅವರು ಅಭಿಪ್ರಾಯ ಪಟ್ಟಿದ್ದಾರೆ.


First published: June 1, 2021, 12:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories