• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Mount Everest: ರಾತ್ರಿ ಹೊತ್ತು ಭಯಾನಕ ಶಬ್ಧ ಮಾಡೋ ಮೌಂಟ್‌ ಎವರೆಸ್ಟ್‌, ಇದಕ್ಕೆ ಕಾರಣವನ್ನು ಕಂಡುಹಿಡಿದಿರುವ ವಿಜ್ಞಾನಿಗಳ ತಂಡ

Mount Everest: ರಾತ್ರಿ ಹೊತ್ತು ಭಯಾನಕ ಶಬ್ಧ ಮಾಡೋ ಮೌಂಟ್‌ ಎವರೆಸ್ಟ್‌, ಇದಕ್ಕೆ ಕಾರಣವನ್ನು ಕಂಡುಹಿಡಿದಿರುವ ವಿಜ್ಞಾನಿಗಳ ತಂಡ

ಮೌಂಟ್​ ಎವರೆಸ್ಟ್​

ಮೌಂಟ್​ ಎವರೆಸ್ಟ್​

ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಬಗ್ಗೆ ನೀವು ಸಾವಿರಾರು ಕಲ್ಪನಾಧಾರಿತ ಕಥೆ ಅಥವಾ ನಿಜವಾದ ಕಥೆಗಳನ್ನು ಸಹ ಕೇಳಿರಬಹುದು.

  • Share this:

ಪ್ರಕೃತಿ ಬಗ್ಗೆ ನಮಗೆ ತಿಳಿಯದ ಅದೆಷ್ಟೋ ಸಂಗತಿಗಳು ಇಂದಿಗೂ ಇವೆ. ಮುಂದೆಯೂ ಇರುತ್ತವೆ. ಪ್ರಕೃತಿಯೇ ಹಾಗೆ ತನ್ನ ಒಡಲಾಳದಲ್ಲಿ ಅದೆಷ್ಟೋ ರಹಸ್ಯಗಳನ್ನು ಇಂದಿಗೂ ಯಾರಿಗೂ ತಿಳಿಯದ ಹಾಗೆ ಇಟ್ಟುಕೊಂಡಿದೆ. ಪ್ರಕೃತಿ ಮುಂದೆ ಮನುಷ್ಯ ಒಂದು ಕೀಟಕ್ಕೆ ಸಮ ಎಂದೇ ಹೇಳಬಹುದು. ಇವತ್ತು ನಾವು ಅಂತಹದೇ ಒಂದು ಪ್ರಕೃತಿ ರಹಸ್ಯದ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಏನಪ್ಪ ಇವರು ರಹಸ್ಯ (Secret) ಅಂತಿದಾರೆ ಅಂತ ಅನ್ಕೊಬೇಡಿ. ನಮಗೆ ಗೊತ್ತಿಲ್ಲದೇ ಇರೋ ವಿಷ್ಯಾ ರಹಸ್ಯನೇ ಅಲ್ವಾ? ಅದರಲ್ಲೂ ಪ್ರಕೃತಿ ಬಗ್ಗೆ ತಿಳಿದುಕೊಂಡಷ್ಟು ಮತ್ತಷ್ಟು ತಿಳಿಯಬೇಕೆಂಬ ಕುತೂಹಲ (Wondering) ಎಲ್ಲರಲ್ಲೂ ಸಹಜ.  ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಬಗ್ಗೆ ನೀವು ಸಾವಿರಾರು ಕಲ್ಪನಾಧಾರಿತ ಕಥೆ ಅಥವಾ ನಿಜವಾದ ಕಥೆಗಳನ್ನು ಸಹ ಕೇಳಿರಬಹುದು. ಆದರೆ ಹಿಮದಿಂದ ಯಾವಾಗಲೂ ಆವೃತಗೊಂಡಿರುವ ಈ ಶಿಖರಗಳು ರಾತ್ರಿಯಲ್ಲಿ(Night) ಭಯಾನಕ ಶಬ್ದಗಳನ್ನು ಮಾಡುತ್ತವೆ ಎಂಬುದರ ಬಗ್ಗೆ ನಿಮಗೇನಾದರೂ ತಿಳಿದಿದ್ಯಾ? ಇಲ್ಲ ಅಲ್ವಾ. ಬನ್ನಿ ಇಂದಿನ ಮೋಸ್ಟ್‌ ಇಂಟ್ರೆಸ್ಟಿಂಗ್‌ ನೇಚರ್‌ ಸಿಕ್ರೆಟ್‌ ಬಗ್ಗೆ ರೀವಿಲ್‌ ಮಾಡೋ ಸಮಯ ಬಂದೇ ಬಿಡ್ತು.


ಭಯಾನಕ ಶಬ್ಧ ಮಾಡೋ ಮೌಂಟ್‌ ಎವರೆಸ್ಟ್‌


ಮೌಂಟ್‌ ಎವರೆಸ್ಟ್‌ ಇರುವ ಸ್ಥಳದಿಂದ ನೂರಾರು ಕಿಲೋಮೀಟರ್ ದೂರದವರೆಗೆ ಕೇಳಿಬರುವ ಶಬ್ದವು ತುಂಬಾ ಜೋರಾಗಿ ಮತ್ತು ಭಯಾನಕವಾಗಿರುತ್ತದೆ ಎಂದು ಹಲವು ವರದಿಗಳು ಹೇಳುತ್ತಿವೆ.


ಕೆಲವು ವರದಿಗಳ ಪ್ರಕಾರ, ಎವರೆಸ್ಟ್ ಶಿಖರಗಳನ್ನು 15 ಬಾರಿ ವಶಪಡಿಸಿಕೊಂಡಿರುವ ಡೇವ್ ಹಾನ್ ಎಂಬುವರು, ಮೌಂಟ್‌ ಎವರೆಸ್ಟ್‌ ಶಿಖರಗಳಿಂದ ರಾತ್ರಿಯಲ್ಲಿ ವಿಚಿತ್ರವಾದ ಶಬ್ದ ಕೇಳಿ ಬರುತ್ತದೆ ಎಂದು ಮೊದಲ ಬಾರಿಗೆ ಹೇಳಿದ್ದರು.


ಇದನ್ನೂ ಓದಿ: ಹುಲಿ-ಸಿಂಹ, ಹಾವಿಗಿಂತಲೂ ಭಯಾನಕವಾದ ಜೀವಿ ಈ ಭೂಮಿ ಮೇಲಿದ್ಯಂತೆ! ಎಚ್ಚರ


ನಾವು ವಿಶ್ರಾಂತಿ ಪಡೆಯುತ್ತಿರುವಾಗ ಕಣಿವೆಯ ಸುತ್ತಲೂ ಹಿಮದ ಬಂಡೆಗಳು ಬೀಳುತ್ತಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು. ಈ ಶಬ್ದವು ಎಷ್ಟು ಭಯಾನಕವಾಗಿರುತ್ತಿತ್ತು ಎಂದರೆ ನಮಗೆ ಅಲ್ಲಿ ಮಲಗಲು ಸಾಧ್ಯವೇ ಆಗ್ತಿರಲಿಲ್ಲ. ಎಂದು ಡೇವ್‌ ಹಾನ್‌ ಹೇಳಿದ್ದರು.


ಇದಕ್ಕೆ ಮೂಲ ಕಾರಣವೇನು ಎಂದು ಮೊದಲ ಬಾರಿಗೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅದರ ಬಗ್ಗೆ ನಿಮಗೆ ಗೊತ್ತಾದರೆ ನೀವು ಮತ್ತಷ್ಟು ಆಶ್ಚರ್ಯ ಪಡುತ್ತಿರಿ ಎಂಬುದಲ್ಲಿ ಯಾವುದೇ ಡೌಟ್‌ ಇಲ್ಲ.


ವರದಿಗಳು ಏನ್‌ ಹೇಳ್ತಿವೆ?


ವರದಿಗಳ ಪ್ರಕಾರ, “ಸೂರ್ಯನು ಹಿಮಾಲಯದ ಮೇಲೆ ಅಸ್ತಮಿಸಿದಾಗ, ತಾಪಮಾನದಲ್ಲಿ ತೀವ್ರ ಕುಸಿತ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರಿಂದಾಗಿ ಮೌಂಟ್ ಎವರೆಸ್ಟ್ ಸುತ್ತಲಿನ ಹಿಮನದಿಯಲ್ಲಿ ಕೋಲಾಹಲ ಉಂಟಾಗುತ್ತಿದೆ.


ಎತ್ತರದ ಹಿಮನದಿಗಳು ಒಡೆಯಲು ಪ್ರಾರಂಭಿಸುತ್ತವೆ. ಇದರಿಂದ ಅವುಗಳ ವಿಭಜನೆಯೇ ಭಯಾನಕ ಶಬ್ಧಕ್ಕೆ ನೇರ ಕಾರಣವಾಗಿದೆ. ಇದರಿಂದ ಗ್ಲೇಶಿಯರ್ ಐಸ್ ಒಡೆಯುತ್ತದೆ ಎಂದು ಸಂಶೋಧಕರು ಸಂಶೋಧನೆಯಲ್ಲಿ ಕಂಡುಹಿಡಿದ್ದಾರೆ. ಅದರ ಕ್ಷಿಪ್ರ ಕುಸಿತದಿಂದಾಗಿ, ಶಬ್ದವು ತುಂಬಾ ಜೋರಾಗಿ ಮತ್ತು ಭಯಾನಕವಾಗಿರುತ್ತದೆ. ಆದರೆ ಇದು ಎತ್ತರದ ಪ್ರದೇಶಗಳಲ್ಲಿ ಮಾತ್ರ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಇದರ ಕುರಿತು ವಿಜ್ಞಾನಿಗಳ ತಂಡವೇನು ಹೇಳ್ತಿದೆ?


ಗ್ಲೇಶಿಯಾಲಜಿಸ್ಟ್ ಎವ್ಗೆನಿ ಪೊಡೊಲ್ಸ್ಕಿ ನೇತೃತ್ವದ ವಿಜ್ಞಾನಿಗಳ ತಂಡವು “2018 ರಲ್ಲಿ ಹಿಮನದಿಯ ಭೂಕಂಪನ ಚಟುವಟಿಕೆಯನ್ನು ಅಧ್ಯಯನ ಮಾಡಿದೆ. ಅಧ್ಯಯನ ಮಾಡುವ ಮೂರು ವಾರಗಳ ಕಾಲ, ನಮ್ಮ ಗುಂಪು ಈ ಹಿಮಾಲಯ ಪ್ರದೇಶದಲ್ಲಿಯೇ ತಂಗಿದ್ದವು. ಅಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವು. ಅಲ್ಲಿಂದ ಬರುವ ಧ್ವನಿಗಳನ್ನು ರೆಕಾರ್ಡ್ ಮಾಡುತ್ತಿದ್ದೆವು. ಪ್ರತಿ ಧ್ವನಿಯ ಬಗ್ಗೆ ಪ್ರತ್ಯೇಕವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆವು” ಎಂದಿದ್ದಾರೆ.


“ಅಲ್ಲಿಂದ ಮರಳಿದ ನಂತರ ಆ ಶಬ್ದಗಳು ಒಂದಕ್ಕೊಂದು ತಾಳೆಯಾಗುತ್ತಿದ್ದು, ತಾಪಮಾನದಲ್ಲಿ ಕ್ಷಿಪ್ರ ಕುಸಿತದಿಂದಾಗಿ ಈ ಭಯಾನಕ ಶಬ್ಧವು ಸಂಭವಿಸುತ್ತದೆ ಎಂಬುದು ಭೂಕಂಪನದ ದತ್ತಾಂಶಗಳ ಪರಿಶೀಲನೆಯಿಂದ ಸ್ಪಷ್ಟವಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಭೂಮಿಯು ನಿರಂತರವಾಗಿ ಬೆಚ್ಚಗಾಗುತ್ತಿದೆ ಮತ್ತು ಅದರ ಪರಿಣಾಮವು ಇಲ್ಲಿಯೂ ಕಂಡುಬಂದಿದೆ” ಎಂದು ತಂಡ ಹೇಳಿದೆ.


ಜಪಾನ್‌ನ ಹೊಕ್ಕೈಡೊ ವಿಶ್ವವಿದ್ಯಾಲಯದ ಆರ್ಕ್ಟಿಕ್ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಪೊಡೊಲ್ಸ್ಕಿ, “ಇದು ಅದ್ಭುತ ಅನುಭವವಾಗಿದೆ ಏಕೆಂದರೆ ನಾವು ಅಧ್ಯಯನದ ಸಂದರ್ಭದಲ್ಲಿ ಸುಮಾರು 29,000 ಅಡಿ ಎತ್ತರದಲ್ಲಿದ್ದೆವು.


ಇದನ್ನೂ ಓದಿ: Love ಮಾಡೋಕೆ ಈ ವಯಸ್ಸು ಪರ್ಫೆಕ್ಟ್​ ಅಂತೆ! ಇಲ್ಲದಿದ್ದಲ್ಲಿ ಬ್ರೇಕಪ್​ ಪಕ್ಕಾ


ನಾವು ಎವರೆಸ್ಟ್ ಶಿಖರಗಳಲ್ಲಿ ವಾಸಿಸುತ್ತಿದ್ದೆವು ಮತ್ತು ಅಲ್ಲಿಯೇ ಆಹಾರವನ್ನು ಸೇವಿಸುತ್ತಿದ್ದೇವು. ಅಲ್ಲಿ ತಾಪಮಾನವು ಸುಮಾರು -15 ಡಿಗ್ರಿ ಸೆಲ್ಸಿಯಸ್ ಅಥವಾ 5 ಫರಾನ್‌ಹೈಟ್‌ಗೆ ಇಳಿದ ತಕ್ಷಣ, ರಾತ್ರಿಯಲ್ಲಿ, ಶಿಖರಗಳಿಂದ ದೊಡ್ಡ ಶಬ್ದಗಳು ಕೇಳಿಬರುತ್ತಿದ್ದವು” ಎಂದು ತಮ್ಮ ಅನುಭವವನ್ನು ಶೇರ್‌ ಮಾಡಿಕೊಂಡಿದ್ದಾರೆ.


“ನಾವು ಹಿಮನದಿ ಸ್ಫೋಟಗೊಳ್ಳುತ್ತಿರುವುದನ್ನು ನೋಡಿದ್ದೇವೆ. ಅದರಲ್ಲಿ ಅನೇಕ ಬಿರುಕುಗಳಿದ್ದವು. ಹಿಮನದಿಯ ಒಳಗಿನ ಆಳವಾದ ಕಂಪನಗಳನ್ನು ಅಳೆಯಲು, ನಾವು ಮಂಜುಗಡ್ಡೆಯ ಮೇಲೆ ಸಂವೇದಕಗಳನ್ನು ಇರಿಸಿದ್ದೇವು ಮತ್ತು ಪ್ರತಿ ಕ್ಷಣವೂ ಮಾಹಿತಿಯನ್ನು ಪಡೆಯುತ್ತಿದ್ದೆವು“ಎಂದು ಹೇಳಿದ್ದಾರೆ.




ಜಾಗತಿಕ ತಾಪಮಾನದಿಂದ ಹಿಮಾಲಯದಲ್ಲಿನ ಹಿಮವು ನಿರಂತರವಾಗಿ ಕರಗುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಲಕ್ಷಾಂತರ ಜನರ ಜೀವದ ಮೇಲೆ ಪರಿಣಾಮ ಬೀರುವುದಲ್ಲದೇ, ದಕ್ಷಿಣ ಏಷ್ಯಾದ ದೇಶಗಳ ಆರ್ಥಿಕತೆಯನ್ನು ಅಪಾಯಕ್ಕೆ ತಳ್ಳುತ್ತದೆ. ಈ ಪ್ರದೇಶದಲ್ಲಿನ ವಿಶಾಲವಾದ ಮಂಜುಗಡ್ಡೆಗಳು ಕಳೆದ ನಾಲ್ಕು ದಶಕಗಳಿಗೆ ಹೋಲಿಕೆ ಮಾಡಿದರೆ 7 ಶತಮಾನಗಳಿಗಿಂತ 10 ಪಟ್ಟು ವೇಗವಾಗಿ ಕರಗಿವೆ” ಎಂದಿದ್ದಾರೆ.

First published: