HOME » NEWS » Trend » SCIENTISTS DISCOVER WORLDS FIRST PREGNANT MUMMY WHO WAS CARRYING 7 MONTH FOETUS DURING BURIAL STG LG

7 ತಿಂಗಳ ಭ್ರೂಣವನ್ನು ಹೊತ್ತಿದ್ದ ವಿಶ್ವದ ಮೊದಲ ಗರ್ಭಿಣಿ ಮಮ್ಮಿ ಪತ್ತೆ; ವಾರ್ಸಾ ವಿಜ್ಞಾನಿಗಳ ಅನ್ವೇಷಣೆ

ಮೊದಲ ಗರ್ಭಿಣಿ ಮಮ್ಮಿ ದೇಹ ಇದಾಗಿರುವ ಪ್ರಕರಣವಾಗಿದೆ. ಆದ್ದರಿಂದ ಪ್ರಾಚೀನ ಕಾಲದ ಗರ್ಭಧಾರಣೆಯ ಬಗ್ಗೆ ತಿಳಿದುಕೊಳ್ಳಲು ಸಂಶೋಧನೆಗೆ ಇದು ನೆರವಾಗಲಿದೆ. ಜೊತೆಗೆ ಮಾತೃತ್ವಕ್ಕೆ ಸಂಬಂಧಿಸಿದ ಆಗಿನ ಕಾಲಘಟ್ಟದ ಅನೇಕ ರಹಸ್ಯಗಳು ಮತ್ತು ಅಭ್ಯಾಸಗಳನ್ನು ಅಧ್ಯಯನ ಮಾಡಲು ಇದು ನೆರವಿಗೆ ಬರುತ್ತದೆ.

news18-kannada
Updated:May 4, 2021, 12:40 PM IST
7 ತಿಂಗಳ ಭ್ರೂಣವನ್ನು ಹೊತ್ತಿದ್ದ ವಿಶ್ವದ ಮೊದಲ ಗರ್ಭಿಣಿ ಮಮ್ಮಿ ಪತ್ತೆ; ವಾರ್ಸಾ ವಿಜ್ಞಾನಿಗಳ ಅನ್ವೇಷಣೆ
ಗರ್ಭಿಣಿ ಮಮ್ಮಿ
  • Share this:
ಈಜಿಪ್ಟ್‌ನ ಮಮ್ಮಿಗಳು ಮನುಕುಲದ ಬೆರಗು. ಪ್ರತಿ ಬಾರಿಯೂ ಹೊಸ ಮಮ್ಮಿಗಳು ಪತ್ತೆಯಾದಾಗ ಲಭ್ಯವಾಗುವ ಒಂದೊಂದು ಮಾಹಿತಿಯೂ ಇತಿಹಾಸದ ಬಗ್ಗೆ ರೋಚಕ ಅನುಭವ ಉಂಟು ಮಾಡುತ್ತದೆ. ಈಗ ಇದೇ ರೀತಿಯಾದ ಹೊಸ ಮಮ್ಮಿಯೊಂದರ ಅನ್ವೇಷಣೆ ಮಾಡಲಾಗಿದೆ. ಆದರೆ ಇದು ಅಂತಿಂಥ ಮಮ್ಮಿಯಲ್ಲ, 7 ತಿಂಗಳ ಭ್ರೂಣವನ್ನು ಹೊಟ್ಟೆಯಲ್ಲಿಟ್ಟುಕೊಂಡಿರುವ ವಿಶ್ವದ ಮೊದಲ ಗರ್ಭಿಣಿ ಮಮ್ಮಿ.

ವಾರ್ಸಾದ ನ್ಯಾಷನಲ್ ಮ್ಯೂಸಿಯಂನಲ್ಲಿರುವ ಕೆಲವು ಅಪರೂಪದ 2,000 ವರ್ಷಗಳ ಹಳೆಯ ಅವಶೇಷಗಳನ್ನು ಸ್ಕ್ಯಾನ್ ಮಾಡುವ ಕಾರ್ಯ ನಡೆದಿತ್ತು. ಆಗಲೇ ವಿಶ್ವದ ಮೊದಲ ಗರ್ಭಿಣಿ ಈಜಿಪ್ಟ್ ಮಮ್ಮಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೋಲಿಷ್ ವಿಜ್ಞಾನಿಗಳು ಗುರುವಾರ ಈ ಮಾಹಿತಿ ತಿಳಿಸಿದ್ದಾರೆ.

'ನನ್ನ ಪತಿ ಸ್ಟಾನಿಸ್ಲಾ ಈಜಿಪ್ಟಿನ ಪುರಾತತ್ವಶಾಸ್ತ್ರಜ್ಞರಾಗಿದ್ದಾರೆ. ನಾನು ಈ ಮಮ್ಮಿಯ ಎಕ್ಸರೇಯನ್ನು ಗಮನಿಸಿದಾಗ ಮಮ್ಮಿಯ ಹೊಟ್ಟೆಯಲ್ಲಿ ಭ್ರೂಣದ ಕಾಲನ್ನು ಗಮನಿಸಿದೆ' ಎಂದು ಮಾನವಶಾಸ್ತ್ರಜ್ಞರು ಮತ್ತು ಪುರಾತತ್ವಶಾಸ್ತ್ರಜ್ಞರು ಆದ ವಾರ್ಸಾ ವಿಶ್ವವಿದ್ಯಾಲಯದ ಮಾರ್ಜೆನಾ ಓಜರೆಕ್ ಸ್ಜಿಲ್ಕೆ ಪತ್ರಕರ್ತರಿಗೆ ತಿಳಿಸಿದರು.

ಇನ್ನು ಈ ಮಮ್ಮಿಯ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದ್ದು, ಸದ್ಯ ಈ ಮಮ್ಮಿ ಮತ್ತು ಭ್ರೂಣದ ಮೇಲೆ ಕೆಲಸ ಮಾಡುತ್ತಿರುವ ವಾರ್ಸಾ ವಿಜ್ಞಾನಿಗಳು ಈ ಮಮ್ಮಿ ಮಹಿಳೆಯೂ 20 ರಿಂದ 30 ವರ್ಷ ವಯಸ್ಸಿನವರಾಗಿದ್ದರು ಮತ್ತು 26-30 ವಾರಗಳ ಗರ್ಭಿಣಿಯಾಗಿದ್ದಾರೆಂದು ತಿಳಿಸಿದ್ದಾರೆ.

ಆದರೆ ಇಲ್ಲೊಂದು ಆಶ್ಚರ್ಯಕರ ಸಂಗತಿ ಇದ್ದು, ಮಮ್ಮಿ ಸಿದ್ಧ ಮಾಡುವ ಸಮಯದಲ್ಲಿ ಸತ್ತವರ ಹೊಟ್ಟೆಯಿಂದ ಮಗುವನ್ನು ಏಕೆ ಹೊರಗೆ ತೆಗೆಯಲಿಲ್ಲ ಎಂಬುದು ತಿಳಿದು ಬಂದಿಲ್ಲ. ಇದಕ್ಕೆ ಅಧ್ಯಯನದ ಅವಶ್ಯಕತೆ ಇದೆ ಎಂದು ಪೋಲಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ವೊಜ್ಸಿಕ್ ಎಜ್ಮಂಡ್ ಹೇಳಿದ್ದಾರೆ.

ಲಾಕ್​ಡೌನ್ ಮಾತ್ರ ನೆಚ್ಚಿಕೊಂಡಿದ್ದಾರೆ; ಇವರಿಗೆ ಸರ್ಕಾರ ನಡೆಸಲು ಬರಲ್ಲ: ಕಾಂಗ್ರೆಸ್ ಕಿಡಿ

ಈ ಎಲ್ಲಾ ಕಾರಣಗಳನ್ನು ವಿಶ್ಲೇಷಿಸಿದಾಗ ಈ ಮಮ್ಮಿ ನಿಜವಾಗಿಯೂ ವಿಶಿಷ್ಟವಾದ ಮಮ್ಮಿಯಾಗಿದೆ. ಆದರೆ ಈ ರೀತಿಯಾದ ಇನ್ಯಾವುದೇ ಪ್ರಕರಣಗಳು ಇಲ್ಲಿ ತನಕ ವರದಿಯಾಗಿಲ್ಲ. ಹಾಗೂ ಅದನ್ನು ನಾವು ಕೂಡ ಕಂಡಿಲ್ಲ. ಈ ನಿಟ್ಟಿನಲ್ಲಿ ಈ ಮಮ್ಮಿ ಮಾತ್ರವೇ ಭ್ರೂಣವನ್ನು ಹೊಂದಿರುವ ವಿಶ್ವದ ಏಕೈಕ ಮಮ್ಮಿ ಎನ್ನುವ ಮಾನ್ಯತೆ ಪಡೆದಿದೆ ಎಂದರು.ಈ ಗರ್ಭಿಣಿ ಮಮ್ಮಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಈ ಮಮ್ಮಿಯ ಗರ್ಭಧಾರಣೆಯನ್ನು ಮರೆ ಮಾಚುವ ಪ್ರಯತ್ನ ಇದಾಗಿರಬಹುದು. ಇಲ್ಲವೇ ಇದು ಮರಣಾ ನಂತರದ ಪುನರ್ಜನಕ್ಕೆ ಸಂಬಂಧಿಸಿದ ನಂಬಿಕೆಗಳನ್ನು ಹೊಂದಿರಬಹುದು. ಆ ನಿಟ್ಟಿನ ಆಚರಣೆಯೂ ಇದಾಗಿರಬಹುದು ಎಂದು ಓಜರೆಕ್ ಸ್ಜಿಲ್ಕೆ ಅವರು ಊಹಿಸುತ್ತಾರೆ.

ಸಾರ್ಕೊಫಾಗಸ್‌ನ ಚಿತ್ರಲಿಪಿಗಳ ವಿಶ್ಲೇಷಣೆಯ ಆಧಾರದ ಮೇಲೆ ಈ ಮಮ್ಮಿ ಮೂಲತಃ ಕ್ರಿ.ಪೂ. ಮೊದಲ ಶತಮಾನ ಮತ್ತು ಕ್ರಿ.ಶ. ಮೊದಲ ಶತಮಾನದ ನಡುವೆ ವಾಸಿಸುತ್ತಿದ್ದ ಪುರುಷ ಪಾದ್ರಿಯೆಂದು ಅಂದುಕೊಳ್ಳಲಾಗಿತ್ತು.

ಆದರೆ ವಿಜ್ಞಾನಿಗಳು ಈ ಮಮ್ಮಿ ಆ ಎಲ್ಲಾ ಕಾಲಘಟ್ಟಕ್ಕಿಂತಲೂ ಹಳೆಯದಾಗಿರಬಹುದು. ಅಲ್ಲದೇ ಸಾವಿನ ಕಾರಣಗಳನ್ನು ಸಹ ಹುಡುಕಲು ಸಾಕಷ್ಟು ಪರಿಶೀಲನೆ, ಪ್ರಯೋಗ ಮತ್ತು ಅಧ್ಯಯನವನ್ನು ಮಾಡುತ್ತಿದ್ದಾರೆ. ಇನ್ನು ಈ ಮಮ್ಮಿ ಸ್ಕ್ಯಾನ್ ಗಮನಿಸಿದಾಗ ಮಹಿಳೆಯ ಭುಜದ ಮೇಲೆ ಉದ್ದನೆಯ ಗುಂಗುರಿನ ಕೂದಲನ್ನು ಕಾಣಬಹುದಾಗಿದೆ ಎಂದು ಪೀರ್ ರಿವ್ಯೂಡ್ ಜರ್ನಲ್ ಆಫ್ ಆರ್ಕಿಯಲಾಜಿಕಲ್ ಸೈನ್ಸ್ ಇತ್ತೀಚಿನ ಸಂಚಿಕೆಯಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಿದೆ.

ಮೊದಲ ಗರ್ಭಿಣಿ ಮಮ್ಮಿ ದೇಹ ಇದಾಗಿರುವ ಪ್ರಕರಣವಾಗಿದೆ. ಆದ್ದರಿಂದ ಪ್ರಾಚೀನ ಕಾಲದ ಗರ್ಭಧಾರಣೆಯ ಬಗ್ಗೆ ತಿಳಿದುಕೊಳ್ಳಲು ಸಂಶೋಧನೆಗೆ ಇದು ನೆರವಾಗಲಿದೆ. ಜೊತೆಗೆ ಮಾತೃತ್ವಕ್ಕೆ ಸಂಬಂಧಿಸಿದ ಆಗಿನ ಕಾಲಘಟ್ಟದ ಅನೇಕ ರಹಸ್ಯಗಳು ಮತ್ತು ಅಭ್ಯಾಸಗಳನ್ನು ಅಧ್ಯಯನ ಮಾಡಲು ಇದು ನೆರವಿಗೆ ಬರುತ್ತದೆ.

ಜಿಇ ಒದಗಿಸಿದ ಉಪಕರಣಗಳನ್ನು ಬಳಸಿಕೊಂಡು ವೈದ್ಯಕೀಯ ವಿಶ್ಲೇಷಣಾ ಕಂಪನಿಯಾದ ಅಫಿಡಿಯಾ ಈ ಸ್ಕ್ಯಾನ್‌ಗಳನ್ನು ನಡೆಸಿದೆ. ಇನ್ನೂ ಈ ಮಮ್ಮಿಯನ್ನು 19 ನೇ ಶತಮಾನದಲ್ಲಿ ಪೋಲೆಂಡ್‌ಗೆ ತರಲಾಯಿತು. ಅಲ್ಲಿಂದ ಇದು ವಾರ್ಸಾ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ವಸ್ತಗಳ ಸಂಗ್ರಹದ ಭಾಗವಾಗಿ ಹೋಯಿತು. ಇದನ್ನು 1917 ರಿಂದ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ, ಅಲ್ಲಿ ಇದನ್ನು ಸಾರ್ಕೊಫಾಗಸ್(ಕಲ್ಲಿನ ಕಫಿನ್) ನಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ.
Published by: Latha CG
First published: May 4, 2021, 12:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories