HOME » NEWS » Trend » SCIENTISTS DISCOVER NEW KIND OF GREEN AURORAS FROM A 19 YEAR OLD VIDEO STG MAK

19 ವರ್ಷದ ಹಳೆಯ ವಿಡಿಯೋದಲ್ಲಿ ಹೊಸ ಹಸಿರು ಅರೋರಾವನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು

ಈ ಧ್ರುವ ಬೆಳಕಿನ ಹೊಸ ವೈಶಿಷ್ಟ್ಯವು ಎಲ್ಲರನ್ನೂ ಬೆರಗುಗೊಳಿಸಿದೆ.  ಮಸುಕಾಗಿದ್ದು, ಕೆಲವೇ ಸೆಕೆಂಡ್ಸ್‌ಗಳ ಅಂತರದಲ್ಲಿ ಕೆಲವೊಮ್ಮೆ ಹೊಳೆಯುವ ಮತ್ತು ಇದ್ದಕ್ಕಿದ್ದಂತೆ ಕತ್ತಲಾವರಿಸುವ ಪ್ರಕ್ರಿಯೆಗೆ ಒಳಪಡುತ್ತದೆ.

news18-kannada
Updated:May 12, 2021, 2:32 PM IST
19 ವರ್ಷದ ಹಳೆಯ ವಿಡಿಯೋದಲ್ಲಿ ಹೊಸ ಹಸಿರು ಅರೋರಾವನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು
ಧೃವ ಪ್ರದೇಶದಲ್ಲಿನ ಬೆಳಕಿನ ಚಿತ್ತಾರ.
  • Share this:
ಮಾರ್ಚ್ 15, 2002 ರಂದು, ಕ್ಯಾಲ್ಗರಿ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಡೇವಿಡ್ ನುಡ್ಸೆನ್ ತನ್ನ ತಂಡದೊಂದೊಗೆ ಉತ್ತರ ಕೆನಡಾದ ಚರ್ಚಿಲ್‌ನಲ್ಲಿ ರಾತ್ರಿ ಆಕಾಶದಲ್ಲಿ ಧ್ರುವ ಬೆಳಕು ಕಾಣಲು ಕಾತುರರಾಗಿದ್ದರು. ಅಂದು ಆಕಾಶ ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ  ಅಲ್ಲಿ ಹಸಿರು ಅರೋರಾದ ಬೆಳಕು ಭೌತವಿಜ್ಞಾನಿಗಳ ದೃಷ್ಟಿಗೆ ಬೀಳಲಿಲ್ಲ. ಆದರೂ ಉತ್ತರ ಧ್ರುವದ ಹಸಿರು ಬೆಳಕನ್ನು ಸೆರೆ ಹಿಡಿಯಲು ವಿಡಿಯೋ ಕ್ಯಾಮರಾವನ್ನು ಚಾಲನೆಯಲ್ಲಿಟ್ಟಿದ್ದರು.  ಆದರೆ ನುಡ್ಸೆನ್ ಮತ್ತು ಅವರ ಸಹೋದ್ಯೋಗಿಗಳು ಆ ಬೆಳಕನ್ನು ಕಾಣಲು ಸಾಧ್ಯವಾಗಲೇ ಇಲ್ಲ.

ಧ್ರುವ ಬೆಳಕಿನ ಅಚ್ಚರಿ!19 ವರ್ಷಗಳ ನಂತರ, ಅಯೋವಾ ವಿಶ್ವವಿದ್ಯಾಲಯದ ನೇತೃತ್ವದ ವಿಜ್ಞಾನಿಗಳು ಈ ವಿಡಿಯೋ ಮತ್ತು ನುಡ್ಸೆನ್ ಅವರು ಬರೆದಿಟ್ಟಿದ್ದ ಟಿಪ್ಪಣಿಯನ್ನು ವಿಶ್ಲೇಷಿಸುವ ಮೂಲಕ ಹೊಸ ರೀತಿಯ ಅರೋರಾ ಬೆಳಕನ್ನು ಕಂಡುಹಿಡಿದಿದ್ದಾರೆ. ಭೌತವಿಜ್ಞಾನಿಗಳು ಇದನ್ನು ‘ಡಿಫ್ಯೂಸಲ್ ಅರೋರಾ ಎರೇಸರ್ಸ್’ ಅಂದರೆ ಕಾಣಿಸಿ ಮರೆಯಾಗುವ ಧ್ರುವದ ಬೆಳಕು ಎಂದು ಕರೆದಿದ್ದಾರೆ.

ಈ ಧ್ರುವ ಬೆಳಕಿನ ಹೊಸ ವೈಶಿಷ್ಟ್ಯವು ಎಲ್ಲರನ್ನೂ ಬೆರಗುಗೊಳಿಸಿದೆ.  ಮಸುಕಾಗಿದ್ದು, ಕೆಲವೇ ಸೆಕೆಂಡ್ಸ್‌ಗಳ ಅಂತರದಲ್ಲಿ ಕೆಲವೊಮ್ಮೆ ಹೊಳೆಯುವ ಮತ್ತು ಇದ್ದಕ್ಕಿದ್ದಂತೆ ಕತ್ತಲಾವರಿಸುವ ಪ್ರಕ್ರಿಯೆಗೆ ಒಳಪಡುತ್ತದೆ. ಈ ವಿದ್ಯಮಾನವನ್ನು ಇಲ್ಲಿಯವರೆಗೆ ವೈಜ್ಞಾನಿಕ ಸಂಶೋಧನೆಯಲ್ಲಿ ದಾಖಲು ಮಾಡಿಲ್ಲ. 22 ಎರೇಸರ್‌ಗಳು ಪತ್ತೆ!ಈ ಹಿನ್ನೆಲೆಯಲ್ಲಿ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ರಿಲೆ ಟ್ರಾಯರ್ ಅವರು ಕಂಪ್ಯೂಟರ್ ಪ್ರೋಗ್ರಾಂ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಹೀಗೆ ಕಾಣಿಸುವುದು ಮತ್ತು ಮರೆಯಾಗುವುದು ಮಾಡುವ ಈ ಬೆಳಕಿನ ಬಗ್ಗೆ ವಿಶ್ಲೇಷಣೆಗೆ ಮುಂದಾಗಿದ್ದಾರೆ. 2 ಗಂಟೆಗಳ ಈ ರೆಕಾರ್ಡಿಂಗ್‌ನಲ್ಲಿ ಒಟ್ಟು 22 ಎರೇಸರ್‌ಗಳನ್ನು ಈ ಪ್ರೋಗ್ರಾಂ ಪತ್ತೆ ಹಚ್ಚಿದೆ. ಅಲ್ಲದೇ ಈ ಅಧ್ಯಯನದ ಸಹ ಲೇಖಕರು ಮತ್ತು ಅಯೋವಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಖಗೋಳ ವಿಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಆಲಿಸನ್ ಜೇನೆಸ್ ಅವರು ಇದು ಅಪರೂಪವಾಗಿ ಕಾಣಿಸಿಕೊಳ್ಳುವ ಸಾಮಾನ್ಯ ವಿದ್ಯಮಾನ ಎಂದು ಅಭಿಪ್ರಾಯ ಪಡುತ್ತಾರೆ.

'ನಾವು ಇಂತಹ ಅಪರೂಪದ ಪ್ರಕ್ರಿಯೆಯನ್ನು ಇನ್ನೂ ಗಮನಿಸಿಲ್ಲ. ಏಕೆಂದರೆ ಈ ರೀತಿಯಾದ ಒಂದು ಬೆಳವಣಿಗೆ ನಡೆಯುತ್ತಿದೆ ಎನ್ನುವುದು ಇಲ್ಲಿಯವರೆಗೆ ನಮಗೆ ಗೊತ್ತೇ ಇಲ್ಲ' ಎಂದು ಅವರು ಹೇಳಿದರು. ಸೂರ್ಯನಿಗೂ ಅರೋರಾಗೂ ನಂಟುಅರೋರಾಗಳು ಆಕಾಶದಲ್ಲಿ ನರ್ತಿಸುವಂತೆ ರಾತ್ರಿಯ ಹೊತ್ತು ಕಂಗೊಳಿಸುವ ಹಸಿರು ಬೆಳಕು. ಇದು ಕೇವಲ ಧ್ರುವ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇದೊಂದು ಹೊಳೆಯುವ ಮಾಂತ್ರಿಕ ಹಾವಿನಂತಹ ರಚನೆಯನ್ನು ಹೊಂದಿದೆ. ಇದು ಸೂರ್ಯನಿಂದ ಶಕ್ತಿವರ್ಧಿತವಾಗಿ ಬರುವ ಸೌರ ಮಾರುತದ ಕಣಗಳಾಗಿವೆ.

ಇದನ್ನೂ ಓದಿ: 1 ಲಕ್ಷ ಮನೆಗಳಿಗೆ ಸೌರ ವಿದ್ಯುತ್ ಪೂರೈಸುತ್ತಿವೆ ಆಸ್ಟ್ರೇಲಿಯಾ ವಿಮಾನ ನಿಲ್ದಾಣಗಳು; ಸಂಶೋಧನೆಯಿಂದ ಬಹಿರಂಗ

ಇವು ಭೂಮಿಯ ಆಯಸ್ಕಾಂತೀಯ ಹೊದಿಕೆಯೊಂದಿಗೆ ನಡೆಸುವ ಸಂವಹನದ ರೂಪವಾಗಿದೆ. ಜಪಾನ್ ಪುರಾಣದಲ್ಲಿದೆ ಅರೋರಾ ಉಲ್ಲೇಖಯುಗ ಯುಗಗಳಿಂದಲೂ ಈ ಧ್ರವ ಬೆಳಕುಗಳು ಅನೇಕ ನಂಬಿಕೆ, ಪುರಾಣ ಮತ್ತು ಅತಿ ಮಾನುಷ ಶಕ್ತಿ ಇಂತಹ ಆಲೋಚನೆಗಳ ಉದ್ಭವಕ್ಕೆ ಕಾರಣವಾಗಿದೆ. ಜಪಾನಿನ ಪುರಾಣವು ಈ ಸುಂದರವಾದ ದೀಪಗಳನ್ನು ಸ್ವರ್ಗದಿಂದ ಬರುವ ಸಂದೇಶವಾಹಕರು ಎಂದು ಪರಿಗಣಿಸಿದೆ. ಫೆಬ್ರವರಿ 18, 2021 ರಂದು ಜೆಜಿಆರ್ ಸ್ಪೇಸ್ ಫಿಸಿಕ್ಸ್ ಜರ್ನಲ್‌ನಲ್ಲಿ ದಿ ಡಿಫ್ಯೂಸ್ ಅರೋರಲ್ ಎರೇಸರ್ ಎಂಬ ಹೆಸರಿನಲ್ಲಿ ಇತ್ತೀಚಿನ ಸಂಶೋಧನೆಯನ್ನು ಪ್ರಕಟಿಸಲಾಗಿದೆ.
Youtube Video

ಹಸಿರು ಅರೋರಾ ಬಗ್ಗೆ ಶಬ್ಧಕೋಶ ಏನು ಹೇಳುತ್ತದೆ?ಉತ್ತರ ಅಥವಾ ದಕ್ಷಿಣ ಕಾಂತೀಯ ಧ್ರುವದ ಬಳಿ ಮೇಲಿನ ವಾತಾವರಣದಲ್ಲಿನ ಪರಮಾಣುಗಳೊಂದಿಗೆ ಸೂರ್ಯನಿಂದ ಶಕ್ತಿ ತುಂಬಿದ ಕಣಗಳ ಪರಸ್ಪರ ಕ್ರಿಯೆಯಿಂದ ಉಂಟಾಗುವ ಬೆಳಕಾಗಿದೆ. ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಇದನ್ನು ಕ್ರಮವಾಗಿ ಅರೋರಾ ಬೋರಿಯಾಲಿಸ್ ಅಥವಾ ನಾರ್ದರ್ನ್ ಲೈಟ್ಸ್ ಮತ್ತು ಅರೋರಾ ಆಸ್ಟ್ರಾಲಿಸ್ ಅಥವಾ ಸದರ್ನ್ ಲೈಟ್ಸ್ ಎಂದು ಕರೆಯಲಾಗುತ್ತದೆ ಎಂದು ಶಬ್ದಕೋಶದಲ್ಲಿ ಉಲ್ಲೇಖಿಸಲಾಗಿದೆ.
Published by: MAshok Kumar
First published: May 12, 2021, 2:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories