HOME » NEWS » Trend » SCIENTISTS DISCOVER HONEYBEES CAN SOLVE MATHS PROBLEMS IN GROUNDBREAKING RESEARCH STG MAK

ನಮ್ಮಂತೆ ಜೇನುನೊಣಗಳು ಕೂಡ ಗಣಿತದ ಸಮಸ್ಯೆ ಬಗೆಹರಿಸುವುದನ್ನು ಸಂಶೋಧಿಸಿದ ವಿಜ್ಞಾನಿಗಳು..!

ಈ ಪ್ರಯೋಗದ ವೇಳೆ ಕೆಲವು ಜೇನುನೊಣಗಳು ಪ್ರದರ್ಶಿತವಾದ ಅತ್ಯಂತ ಹೆಚ್ಚು ಸಂಖ್ಯಾಕೃತಿಗಳ ಪೈಕಿ ಸಕ್ಕರೆಯ ಪುಟ್ಟ ಕಣವನ್ನು ಪತ್ತೆಹಚ್ಚುವುದನ್ನು ಕಲಿತರೆ, ಇನ್ನು ಕೆಲವು ಅತ್ಯಂತ ಕಡಿಮೆ ಸಂಖ್ಯಾಕೃತಿಗಳ ಪೈಕಿ ಸಕ್ಕರೆಯ ಪುಟ್ಟ ಕಣವನ್ನು ಪತ್ತೆ ಹಚ್ಚಲು ಕಲಿತವು.

Trending Desk
Updated:June 13, 2021, 8:54 PM IST
ನಮ್ಮಂತೆ ಜೇನುನೊಣಗಳು ಕೂಡ ಗಣಿತದ ಸಮಸ್ಯೆ ಬಗೆಹರಿಸುವುದನ್ನು ಸಂಶೋಧಿಸಿದ ವಿಜ್ಞಾನಿಗಳು..!
ಜೇನು ನೊಣ
  • Share this:

ಮನುಷ್ಯರು ಮಾತ್ರವಲ್ಲ, ಜೇನುನೊಣಗಳು ಕೂಡ ಗಣಿತದ ಸಮಸ್ಯೆಗಳನ್ನು ಬಿಡಿಸಬಲ್ಲವು. ಆದ್ದರಿಂದ ಗಣಿತದ ಕೆಲಸಕ್ಕೆ ಭಾರಿ ಮೆದುಳು ಬೇಕಾಗಿಲ್ಲ ಎನ್ನುವುದನ್ನು ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ.ಸಾಮಾನ್ಯವಾಗಿ ಕೀಟಗಳ ಮೆದುಳಿನ ಗಾತ್ರ ಎಳ್ಳು ಕಾಳಿನಷ್ಟು ದೊಡ್ಡದಿರುತ್ತದೆ. ಆದರೆ ಜೇನುನೊಣಗಳು ಅದರ ಮೆದುಳಿನ ಗಾತ್ರಕ್ಕೆ ಹೋಲಿಸಿದರೆ ತುಂಬ ಜಾಣತನದಿಂದ ಕೂಡಿದೆ. ಗಣಿತದ ಸರಳ ಸಮಸ್ಯೆಗಳನ್ನು ಬಿಡಿಸಬಲ್ಲ ಶಕ್ತಿ ಪ್ರದರ್ಶಿಸುವ ಮೂಲಕ ಝೇಂಕಾರ ಮಾಡುತ್ತಾ ನಮ್ಮ ನಡುವೆ ಓಡಾಡುವ ಈ ಪುಟ್ಟ ಜೀವಿಯು ಮೆದುಳಿನ ಗಾತ್ರಕ್ಕೂ ಬುದ್ಧಿವಂತಿಕೆಗೂ ಸಂಬಂಧವಿಲ್ಲ ಎನ್ನುವುದನ್ನು ನಿರೂಪಿಸಿದೆ.


ಸಂಖ್ಯೆಗಳ ಬದಲು ನಿರಂತರಾದ ಸಂಖ್ಯಾತ್ಮಕವಲ್ಲದ ಸುಳಿವುಗಳನ್ನು ಆಧರಿಸಿ ಗಣಿತದ ಕೆಲವು ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದನ್ನು ಶೆಫೀಲ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಜೇನುನೊಣಗಳಿಗೆ ಗಣಿತದ ಸಮಸ್ಯೆಯನ್ನು ಬಿಡಿಸಲು ಸಂ‍ಖ್ಯೆಗಳ ಜರೂರತ್ತಿಲ್ಲ ಎನ್ನುವುದು ವಿಶೇಷ. ಹೀಗಾಗಿ ಜೇನುನೊಣಗಳು ಚುರುಕಾದ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸಿ ಬಳಸುವುದನ್ನು ಕಂಡು ಅವರು ದಂಗಾಗಿದ್ದಾರೆ.



ಪ್ಲಕಾರ್ಡ್‌ಗಳ ತಂತ್ರದಲ್ಲಿ ಜೇನುನೊಣಗಳ ಸಾಮರ್ಥ್ಯ ಪತ್ತೆ:


ವಿನೀತವಾದ ಜೇನುನೊಣಗಳು ಹಾಗೂ ಅವುಗಳ ಪುಟ್ಟ ತಲೆಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬಲ್ಲ ಸಾಮರ್ಥ್ಯ ಇರುವುದನ್ನು ಪತ್ತೆ ಮಾಡಲು ಪ್ಲಕಾರ್ಡ್ಗಳನ್ನು ವಿಜ್ಞಾನಿಗಳು ಬಳಸಿದ್ದರು. ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಎಣಿಕೆಯ ಶಕ್ತಿ ಪತ್ತೆಗೆ ಸಂಬಂಧಿಸಿದಂತೆ ಬಳಸುವ ತಂತ್ರವನ್ನೇ ಇಲ್ಲಿಯೂ ಉಪಯೋಗಿಸಲಾಗಿತ್ತು. ಈ ತಂತ್ರದಲ್ಲಿ, ನೀಡಲಾದ ಪ್ಲಕಾರ್ಡ್ಗಳ ಪೈಕಿ ಒಂದರ ಹಿಂದೆ ಸಕ್ಕರೆಯ ಲೇಪವನ್ನು ಹಚ್ಚಲಾಗುತ್ತದೆ. ಪ್ರತಿಯೊಂದು ಪ್ಲಕಾರ್ಡ್ ಕೂಡ ವಿಭಿನ್ನ ಸಂಖ್ಯಾಕೃತಿಯನ್ನು ಪ್ರದರ್ಶಿಸುತ್ತವೆ. ವಿಭಿನ್ನ ಸಂಖ್ಯಾಕೃತಿಗಳನ್ನು ಪ್ರದರ್ಶಿಸುವ ಪ್ಲಕಾರ್ಡ್ಗಳನ್ನು ಗುರುತಿಸುವಂತೆ ಪ್ರತಿಯೊಂದು ಜೇನುನೊಣಕ್ಕೂ ತರಬೇತಿ ನೀಡಲಾಗುತ್ತದೆ.


ಇದನ್ನೂ ಓದಿ: Video Viral: ಭಾರೀ ಮಳೆಗೆ ಮುಂಬೈನಲ್ಲಿ ಆವಾಂತರ; ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರು ಹೊಂಡದ ಪಾಲು!

ಈ ಪ್ರಯೋಗದ ವೇಳೆ ಕೆಲವು ಜೇನುನೊಣಗಳು ಪ್ರದರ್ಶಿತವಾದ ಅತ್ಯಂತ ಹೆಚ್ಚು ಸಂಖ್ಯಾಕೃತಿಗಳ ಪೈಕಿ ಸಕ್ಕರೆಯ ಪುಟ್ಟ ಕಣವನ್ನು ಪತ್ತೆಹಚ್ಚುವುದನ್ನು ಕಲಿತರೆ, ಇನ್ನು ಕೆಲವು ಅತ್ಯಂತ ಕಡಿಮೆ ಸಂಖ್ಯಾಕೃತಿಗಳ ಪೈಕಿ ಸಕ್ಕರೆಯ ಪುಟ್ಟ ಕಣವನ್ನು ಪತ್ತೆ ಹಚ್ಚಲು ಕಲಿತವು. ಒಂದು ಸಲ ಈ ನಿಯಮವನ್ನು ಕಲಿತ ಜೇನುನೊಣಗಳು ಮುಂದೆ, ಅದ್ಭುತವೆಂಬಂತೆ, ಹಲವು ಪ್ಲಕಾರ್ಡ್ಗಳ ಪೈಕಿ ಸಕ್ಕರೆಯ ಪುಟ್ಟ ಕಣಕ್ಕಾಗಿ ಅತ್ಯಂತ ದೊಡ್ಡ ಸಂಖ್ಯೆ ಅಥವಾ ಅತ್ಯಂತ ಚಿಕ್ಕ ಸಂಖ್ಯೆಯನ್ನು ಅತ್ಯಂತ ಕ್ಷಿಪ್ರವಾಗಿ ಪತ್ತೆಹಚ್ಚಲು ಆರಂಭಿಸಿದವು.


ಇದನ್ನೂ ಓದಿ: Sanchari Vijay Accident: ಅಪಘಾತದಿಂದ ನಟ ಸಂಚಾರಿ ವಿಜಯ್​ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ
ಪ್ರಾಣಿಗಳು ಕೂಡ ಜಾಣತನದಿಂದ ಕೆಲಸ ಮಾಡುತ್ತವೆ:

ಈ ಸಂಶೋಧನೆಯ ಬರಹವನ್ನು ಮಂಡಿಸಿದ ಶಫೀಲ್ಡ್ ವಿಶ್ವವಿದ್ಯಾಲಯದ ಡಾ.ಹಡಿ ಮಾಬೊಡಿ ಅವರು ಪ್ರಾಣಿಗಳ ಜಾಣತನವನ್ನು ಪ್ರಶಂಸಿಸಿದ್ದಾರೆ. “ನಾವು ನಡೆಸಿದ ಸಂಶೋಧನೆಯ ಫಲಿತಾಂಶವು ಪ್ರಾಣಿಗಳು ಕೂಡ ಅಸಾಧಾರಣ ಬುದ್ಧಿಮತ್ತೆಯನ್ನು ಹೊಂದಿರುತ್ತವೆ ಮತ್ತು ತಮ್ಮದೇ ವಿಧಾನದಲ್ಲಿ ದಕ್ಷವಾಗಿ ಹಾಗೂ ಅಷ್ಟೇ ಅನಿರೀಕ್ಷಿತವಾಗಿ ನೀಡಲಾದ ಸಮಸ್ಯೆಯನ್ನು ಪರಿಹರಿಸುತ್ತದೆ ಎನ್ನುವುದನ್ನು ತೋರಿಸುತ್ತದೆ. ಭವಿಷ್ಯದಲ್ಲಿ ಪ್ರಾಣಿಗಳನ್ನುಆಧರಿಸಿ ಕೆಲವು ನಿರ್ದಿಷ್ಟ ಕಾರ್ಯ ಮಾಡುವ ಜಾಣ ಯಂತ್ರಗಳ ವಿನ್ಯಾಸಕ್ಕಾಗಿ ಬಳಸುವ ಕೃತಕ ಬುದ್ಧಿಮತ್ತೆಗಳಿಗೆ ಈ ಸಂಶೋಧನೆಗಳು ಬಹಳಷ್ಟು ಸಹಕಾರಿಯಾಗಲಿವೆ ” ಎಂದು ಹೇಳಿದ್ದಾರೆ.



Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: June 13, 2021, 8:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories