• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Experiment: ಇದೇ ಮೊದಲ ಬಾರಿ 2 ಗಂಡು ಇಲಿಗಳ ಜೀವಕೋಶಗಳಿಂದ ಮರಿ ಸೃಷ್ಟಿಸಿದ ವಿಜ್ಞಾನಿಗಳು; ಮಾನವನ ಮೇಲೂ ಈ ಪ್ರಯೋಗ?

Experiment: ಇದೇ ಮೊದಲ ಬಾರಿ 2 ಗಂಡು ಇಲಿಗಳ ಜೀವಕೋಶಗಳಿಂದ ಮರಿ ಸೃಷ್ಟಿಸಿದ ವಿಜ್ಞಾನಿಗಳು; ಮಾನವನ ಮೇಲೂ ಈ ಪ್ರಯೋಗ?

ಇಲಿ ಮರಿಗಳು

ಇಲಿ ಮರಿಗಳು

ವಿಜ್ಞಾನಿಗಳು ಗಂಡು ಇಲಿಯ ಸ್ಟೆಮ್ ಸೆಲ್‌ಗಳನ್ನು ಹೆಣ್ಣು ಜೀವಕೋಶಗಳಾಗಿ ಪರಿವರ್ತಿಸುವ ಮೂಲಕ ಎರಡು ಗಂಡು ಇಲಿಗಳಿಂದ ಮರಿ ಇಲಿಗಳು ಜನ್ಮತಾಳುವಂತೆ ಮಾಡಿದ್ದಾರೆ.

  • Share this:
  • published by :

ವಿಜ್ಞಾನ (Science) ಮುಂದುವರಿದಂತೆ ಅನೇಕ ಪವಾಡಗಳು ವಿಶ್ವದಲ್ಲಿ ನಡೆಯುತ್ತಲೇ ಇರುತ್ತವೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ನಾವು ಸೇವಿಸುವ ಆಹಾರ, ಕುಡಿಯುವ ನೀರು, ತೊಡುವ ಬಟ್ಟೆ ಇನ್ನೇಕೆ ಆಲೋಚಿಸುವ ಯೋಚನೆಯಲ್ಲಿ ಕೂಡ ವಿಜ್ಞಾನದ ಪ್ರಭಾವ ಇದ್ದೇ ಇದೆ ಎಂದೇ ಹೇಳಬಹುದು. ಇಂತಹುದೇ ಒಂದು ವಿಚಿತ್ರ ಪವಾಡವನ್ನು ವಿಜ್ಞಾನಿಗಳು (Scientist) ನಡೆಸಿದ್ದಾರೆ ಎಂದರೆ ನೀವು ನಂಬಲೇಬೇಕು. ಅದು ಯಾವ ಪವಾಡ ಎಂದರೆ ಎರಡು ಗಂಡು ಇಲಿಗಳ ಜೀವಕೋಶಗಳಿಂದ ಮರಿ ಇಲಿಗಳು ಜನಿಸುವಂತೆ ಮಾಡಿದ್ದಾರೆ. ಗಂಡು ಇಲಿಯ ಸ್ಟೆಮ್ ಸೆಲ್‌ಗಳನ್ನು ಸ್ತ್ರೀ ಜೀವಕೋಶಗಳಾಗಿ ಪರಿವರ್ತಿಸುವುದು. ವಿಜ್ಞಾನಿಗಳು ಗಂಡು ಇಲಿಯ ಸ್ಟೆಮ್ ಸೆಲ್‌ಗಳನ್ನು ಹೆಣ್ಣು ಜೀವಕೋಶಗಳಾಗಿ ಪರಿವರ್ತಿಸುವ ಮೂಲಕ ಎರಡು ಗಂಡು ಇಲಿಗಳಿಂದ ಮರಿ ಇಲಿಗಳು ಜನ್ಮತಾಳುವಂತೆ (Birth) ಮಾಡಿದ್ದಾರೆ.


ಇನ್ನು ಜನರ ಮೇಲೂ ಇದೇ ರೀತಿಯ ವಿಜ್ಞಾನ ಪವಾಡವನ್ನು ನಡೆಸಬಹುದೇ ಎಂಬುದಕ್ಕೆ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಏಕೆಂದರೆ ಪ್ರಯೋಗದ ಸಮಯದಲ್ಲಿ ಕೆಲವು ಇಲಿಗಳು ಮಾತ್ರವೇ ಜೀವಂತವಾಗಿ ಹುಟ್ಟಿವೆ ಹಾಗಾಗಿ ಈ ಪ್ರಯೋಗವನ್ನು ಮಾನವನ ಮೇಲೆ ಮಾಡುವುದು ಎಷ್ಟು ಪ್ರಯೋಜನಕಾರಿಯಾಗಲಿದೆ ಎಂಬುದು ತಿಳಿದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


ಪ್ರಯೋಗವನ್ನು ವಿಜ್ಞಾನಿಗಳು ಹೇಗೆ ನಡೆಸಿದ್ದಾರೆ?


ಮೊದಲಿಗೆ ಗಂಡು ಇಲಿಗಳ ಬಾಲದ ಚರ್ಮದ ಕೋಶಗಳನ್ನು ಸ್ಟೆಮ್ ಸೆಲ್‌ಗಳಾಗಿ ಪರಿವರ್ತಿಸಿದರು, ತದನಂತರ ಇದಕ್ಕೆ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡುವ ಮೂಲಕ ಸೆಲ್‌ಗಳನ್ನು ಸ್ತ್ರೀ ಜೀವಕೋಶಗಳಾಗಿ ಪರಿವರ್ತಿಸಿದ್ದಾರೆ.


ಇಲಿ ಮರಿಗಳು


ಮೊಟ್ಟೆಯ ಕೋಶಗಳನ್ನು ಉತ್ಪಾದಿಸಿ ಆ ಮೊಟ್ಟೆಗಳನ್ನು ಫಲವತ್ತಾಗಿಸಿ ಭ್ರೂಣಗಳನ್ನು ಹೆಣ್ಣು ಇಲಿಗಳಿಗೆ ಅಳವಡಿಸಿದ್ದಾರೆ. 630 ಭ್ರೂಣಗಳಲ್ಲಿ 7 ಮಾತ್ರವೇ ಜೀವಂತ ಇಲಿಮರಿಗಳಾಗಿ ಜನ್ಮತಾಳಿದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


ಮನುಷ್ಯರ ಮೇಲೆ ಈ ಪ್ರಯೋಗ ನಡೆಸಬಹುದೇ?


ಈ ಮರಿಗಳು ಸಾಮಾನ್ಯ ಸ್ಥಿತಿಯಲ್ಲಿದ್ದು ಇತರ ಇಲಿಗಳಂತೆಯೇ ಬೆಳೆಯುತ್ತಿವೆ ಎಂದು ಕ್ಯುಶು ವಿಶ್ವವಿದ್ಯಾಲಯ ಮತ್ತು ಜಪಾನ್‌ನ ಒಸಾಕಾ ವಿಶ್ವವಿದ್ಯಾಲಯದ ಸಂಶೋಧನಾ ನಾಯಕ ಕಟ್ಸುಹಿಕೊ ಹಯಾಶಿ ತಿಳಿಸಿದ್ದಾರೆ.


ಇದನ್ನೂ ಓದಿ: ಬ್ಯಾಚುಲರ್ ಬಾಡಿಗೆದಾರರಿಗೆ ಓನರ್​ಗಳ ವಿಚಿತ್ರ ರೂಲ್ಸ್​, 10 ಗಂಟೆಯ ನಂತರ ಯಾರೂ ಬರುವ ಹಾಗಿಲ್ವಂತೆ


ಈ ಪ್ರಯೋಗವು ಇನ್ನಷ್ಟು ಯಶಸ್ಸನ್ನು ಸಾಧಿಸಿದರೆ ಸಂತಾನೋತ್ಪತ್ತಿ ಹಾಗೂ ಫಲವತ್ತತೆ ಸಂಶೋಧನೆಗೆ ಹೊಸ ಒತ್ತಾಸೆಯಾಗಿ ಬಳಕೆಯಾಗಲಿದೆ ಅಂತೆಯೇ ಹೊಸ ವಿಧಾನಕ್ಕೆ ಅನುವು ಮಾಡಿಕೊಡಲಿದೆ ಎಂದು ಇನ್ನೊಬ್ಬ ವಿಜ್ಞಾನಿ ಜೊನಾಥನ್ ಬೇಯರ್ಲ್ ಅಭಿಪ್ರಾಯ ತಿಳಿಸಿದ್ದಾರೆ. ಅಳಿವಿನಂಚಿನಲ್ಲಿರುವ ಸಸ್ತನಿಗಳನ್ನು ಒಂದೇ ಪುರುಷ ಪ್ರಾಣಿಗಳಿಂದ ಸಂತಾನೋತ್ಪತ್ತಿ ಮಾಡಿಸಲು ಈ ಪ್ರಯೋಗವನ್ನು ಬಳಸಬಹುದು ಎಂದು ತಿಳಿಸಿದ್ದಾರೆ.


ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ


ಇದು ಯಶಸ್ವಿ ಪ್ರಯೋಗ ಎಂಬುದಾಗಿ ಉಲ್ಲೇಖಗೊಳ್ಳಲು ಇನ್ನಷ್ಟು ಸಂಶೋಧನೆಗಳು ಅಗತ್ಯವಾಗಿದ್ದು, ಕೆಲವೊಂದು ಎಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಬಾಡಿಗೆ ತಾಯಿ ಇಲಿಗಳಲ್ಲಿ ಇರಿಸಲಾದ ಭ್ರೂಣಗಳ ಒಂದು ಸಣ್ಣ ಭಾಗ ಮಾತ್ರ ಏಕೆ ಉಳಿದುಕೊಂಡಿದೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ ಎಂದು ಜೊನಾಥನ್ ತಿಳಿಸಿದ್ದಾರೆ. ಮಾನವರಲ್ಲಿ ಈ ರೀತಿಯ ಪ್ರಯೋಗ ಎಷ್ಟು ಯಶಸ್ವಿಯಾಗಲಿದೆ ಎಂಬುದಕ್ಕೆ ಇನ್ನಷ್ಟು ಪುರಾವೆಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಜೊನಾಥನ್ ತಿಳಿಸಿದ್ದಾರೆ.


ಸಿಂಥೆಟಿಕ್ ಭ್ರೂಣಗಳ ಸೃಷ್ಟಿ


ಪ್ರಯೋಗಾಲಯದಲ್ಲಿ ಇಲಿ ಭ್ರೂಣಗಳನ್ನು ರಚಿಸಲು ಹೊಸ ವಿಧಾನಗಳನ್ನು ಪರೀಕ್ಷಿಸಲು ಸಂಶೋಧನೆಯು ಸಹಕಾರಿಯಾಗಿದೆ. ಕಳೆದ ಬೇಸಿಗೆಯಲ್ಲಿ, ಕ್ಯಾಲಿಫೋರ್ನಿಯಾ ಮತ್ತು ಇಸ್ರೇಲ್‌ನ ವಿಜ್ಞಾನಿಗಳು ತಂದೆಯ ವೀರ್ಯ ಅಥವಾ ತಾಯಿಯ ಮೊಟ್ಟೆ ಅಥವಾ ಗರ್ಭವಿಲ್ಲದೆ ಸ್ಟೆಮ್ ಸೆಲ್‌ಗಳಿಂದ "ಸಿಂಥೆಟಿಕ್" ಭ್ರೂಣಗಳನ್ನು ರಚಿಸಿದ್ದರು.


ಇದನ್ನೂ ಓದಿ: 3ನೇ ಬಾರಿ ಮದುವೆ ಆಗುತ್ತಿದ್ದ ಗಂಡನ ಚಳಿ ಬಿಡಿಸಿದ ಪತ್ನಿ, ಮದುವೆ ಮನೆಯಲ್ಲಿ ಹೈ-ವೋಲ್ಟೇಜ್ ಡ್ರಾಮಾ


ಈ ಭ್ರೂಣಗಳು ಇತರ ಭ್ರೂಣಗಳಂತೆಯೇ ಅದೇ ರಚನೆಗಳನ್ನು ಒಳಗೊಂಡಿತ್ತು ಎಂದು ವರದಿಯಾಗಿದೆ. ಮಾನವ ಭ್ರೂಣಗಳನ್ನುಂಟು ಮಾಡಲು ಈ ಸಾಧನೆಯು ಅಂತಿಮ ಅಡಿಪಾಯವನ್ನು ಹಾಕಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮೊಟ್ಟೆಗಳನ್ನು ತಯಾರಿಸಲು ಸ್ಟೆಮ್ ಸೆಲ್‌ಗಳನ್ನು ಬಳಸುವ ಮೊದಲು ರೂಪಾಂತರಗಳು ಮತ್ತು ದೋಷಗಳ ಬಗ್ಗೆ ವಿಜ್ಞಾನಿಗಳು ಗಮನಹರಿಸಬೇಕು ಎಂದು ವಿಜ್ಞಾನಿ ಲೈರ್ಡ್ ಕರೆ ನೀಡಿದ್ದಾರೆ.

First published: