VIDEO: ಮಹಿಳಾ ವಿಜ್ಞಾನಿಯನ್ನು ಬಲಿ ಪಡೆದ ದೈತ್ಯ ಮೊಸಳೆ

2016 ರಲ್ಲಿ ರಷ್ಯಾದ ಪ್ರವಾಸಿಗನೊಬ್ಬ ಇಂಡೋನೇಷ್ಯಾ ಮೊಸಳೆಗೆ ಬಲಿಯಾಗಿದ್ದನು. ಈ ಮೂಲಕ ವಿಶ್ವದಾದ್ಯಂತ ಇಂಡೋನೇಷ್ಯಾ ಮೊಸಳೆಗಳ ಭೀಕರತೆ ಭಾರೀ ಸುದ್ದಿಯಾಗಿತ್ತು.

zahir | news18
Updated:January 16, 2019, 9:04 PM IST
VIDEO: ಮಹಿಳಾ ವಿಜ್ಞಾನಿಯನ್ನು ಬಲಿ ಪಡೆದ ದೈತ್ಯ ಮೊಸಳೆ
@Vice
zahir | news18
Updated: January 16, 2019, 9:04 PM IST
ಸಂಶೋಧನಾ ಕೇಂದ್ರದಲ್ಲಿ ಮಹಿಳಾ ವಿಜ್ಞಾನಿಯೊಬ್ಬರು ಮೊಸಳೆಗೆ ಬಲಿಯಾದ ಭೀಕರ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಸುಲಾವೇಸಿ ಎಂಬ ದ್ವೀಪದಲ್ಲಿ ಈ ಘಟನೆ ನಡೆದಿದ್ದು, ಮೊಸಳೆಗೆ ಆಹಾರವಾದ ವಿಜ್ಞಾನಿಯನ್ನು ಡೈಸಿ ಟುವೊ ಎಂದು ಗುರುತಿಸಲಾಗಿದೆ.

44 ರ ಹರೆಯದ ಡೈಸಿ ಪ್ರಯೋಗಲಾಯದಲ್ಲಿ ಮೇರಿ ಎಂಬ ಮೊಸಳೆಯನ್ನು ಸಂಶೋಧನೆಗಾಗಿ ಸಾಕಿದ್ದರು ಎನ್ನಲಾಗಿದೆ. ಈ ಮೊಸಳೆಯು 8 ಅಡಿ ಎತ್ತರದ ಗೋಡೆಯನ್ನು ಹಾರಿದ ಡೈಸಿಯ ಮೇಲೆ ಒಮ್ಮೆಲೆ ಎರಗಿದೆ. ಅಷ್ಟೇ ಅಲ್ಲದೆ ದೇಹದ ಅರ್ಧಭಾಗವನ್ನು ತಿಂದು ಹಾಕಿದೆ. ಈ ಭಯಾನಕ ದೃಶ್ಯವನ್ನು ನೋಡಿದ ಸಹೋದ್ಯೋಗಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಆಗಮಿಸುವ ವೇಳೆಗೆ ಡೈಸಿಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಇದನ್ನೂ ಓದಿ: VIDEO: ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಧೋನಿಯ ವೀಡಿಯೊ ವೈರಲ್

ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ 14 ಅಡಿ ಉದ್ದದ ಈ ದೈತ್ಯ ಮೊಸಳೆಯನ್ನು ಸೆರೆ ಹಿಡಿಯಲಾಗಿದೆ. ಇಂಡೋನೇಷ್ಯಾದ ಮೊಸಳೆಗಳು ದೈತ್ಯಾಕಾರವನ್ನು ಹೊಂದಿದ್ದು, ಇವುಗಳಿಗೆ ನಿಯಮಿತವಾಗಿ ಮನುಷ್ಯರು ಬಲಿಯಾಗುತ್ತಾರೆ. 2016 ರಲ್ಲಿ ರಷ್ಯಾದ ಪ್ರವಾಸಿಗನೊಬ್ಬ ಇಂಡೋನೇಷ್ಯಾ ಮೊಸಳೆಗೆ ಬಲಿಯಾಗಿದ್ದನು. ಈ ಮೂಲಕ ವಿಶ್ವದಾದ್ಯಂತ ಇಂಡೋನೇಷ್ಯಾ ಮೊಸಳೆಗಳ ಭೀಕರತೆ ಸುದ್ದಿಯಾಗಿತ್ತು.

ಇದನ್ನೂ ಓದಿ: ಅಪ್ಪಿ ತಪ್ಪಿಯೂ ಊಟದ ಬಳಿಕ ಈ ತಪ್ಪುಗಳನ್ನು ಮಾಡದಿರಿ

ಸೆರೆ ಹಿಡಿಯಲಾದ ಮೊಸಳೆಯ ವೀಡಿಯೊ:



 

First published:January 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...